ಭಾರತ ರೈತ ಕೃಷಿ ಕಾರ್ಮಿಕರ ಸಂಘಟನೆ
Indian Farmers' Agricultural Workers' Organization
ಧಾರವಾಡ 30: ಉದ್ದು ಖರೀದಿ ಕೇಂದ್ರದಲ್ಲಿ ನೊಂದಾಯಿತ ಹಾಗೂ ಎಲ್ಲ ರೈತರ ಉದ್ದು ಖರೀದಿ ಮಾಡುವಂತೆ ಒತ್ತಾಯಿಸಿ ಕಳೆದ 10 ದಿನಗಳಿಂದ ನಡೆದ ಹೋರಾಟ- ಯಶಸ್ವಿ* ಧಾರವಾಡ ತಾಲೂಕಿನ ಉಪ್ಪಿನ ಬೆಟಗೇರಿಯಲ್ಲಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ 1500ಕ್ಕೂ ಹೆಚ್ಚು ರೈತರು ಉದ್ದು ಬೆಳೆಯನ್ನು ಸರ್ಕಾರಕ್ಕೆ ಮಾರಾಟ ಮಾಡಲು ನೋಂದಾವಣೆ ಮಾಡಿಸಿದ್ದಾರೆ. ಕೇಂದ್ರ ಸರ್ಕಾರದ ಬೆಂಬಲ ಬೆಲೆ ಯೋಜನೆ ಅಡಿ ಎಲ್ಲಾ ನಿಯಮಾವಳಿ ಪ್ರಕಾರ ಎಲ್ಲಾ ರೀತಿಯ ದಾಖಲೆಗಳೊಂದಿಗೆ ನೊಂದಣಿ ಮಾಡಿಸಿದ್ದಾರೆ.ಅದಕ್ಕೆ ಶುಲ್ಕವನ್ನು ಪಾವತಿ ಮಾಡಿದ್ದಾರೆ. ಇಷ್ಟಾಗಿಯೂ ಖರೀದಿ ಕೇಂದ್ರ ನೀಡಿದ ನಿಗದಿತ ದಿನಾಂಕದಂದು ರೈತರು ಟ್ರ್ಯಾಕ್ಟರ್ ನಲ್ಲಿ ತುಂಬಿಕೊಂಡು ಸರತಿ ಸಾಲಿನಲ್ಲಿ ನಿಂತಿದ್ದಾರೆ. ಸರ್ವರ್ ಸಮಸ್ಯೆ, ತಾಂತ್ರಿಕ ಸಮಸ್ಯೆಗಳ ನೆಪವೊಡ್ಡಿ ಖರೀದಿಯನ್ನು ಸ್ಥಗಿತಗೊಳಿಸಿ ನಿಮಗೆ ದೂರವಾಣಿ ಮೂಲಕ ಕರೆ ಮಾಡಿ ಖರೀದಿಯ ಸಮಯವನ್ನು ತಿಳಿಸಲಾಗುವುದು ಎಂದು ಹೇಳಿ ಇದುವರೆಗೂ ಖರೀದಿ ಮಾಡದಿರುವುದನ್ನು ಖಂಡಿಸಿ ಪ್ರಾಥಮಿಕ ಕೃಷಿ ಪತ್ತಿನ ಸಾಕಾರ ಸಂಘದ ಮುಂದೆ ಪ್ರತಿಭಟನೆ ಮಾಡಿ ತಹಶೀಲ್ದಾರ್ ಬಸವರಾಜ ಹೂಗಾರ ಅವರಿಗೆ ಮನವಿ ಸಲ್ಲಿಸಲಾಯಿತು.
ಮನವಿ ಸ್ವೀಕರಿಸಿ ಮಾತನಾಡಿದ ತಹಸಿಲ್ದಾರ್ ಬಸವರಾಜ ಹೂಗಾರ ಮಾತನಾಡಿ ಖರೀದಿ ಕೇಂದ್ರದಲ್ಲಿ ಸೂಟು ಮುರಿಯಬಾರದು, ಮೊದಲ ಬಂದ ರೈತರ ಉದ್ದನ್ನು ಮೊದಲು ಕರೆದು ಮಾಡಬೇಕು ಎಂದು ಹೇಳಿದರು, ಜನವರಿ 21ರವರೆಗೆ ಅವಧಿ ವಿಸ್ತರಣೆ ಮಾಡಿದ ಸರ್ಕಾರದ ಆದೇಶ ಪ್ರತಿಯನ್ನು ನೀಡಿದರು. ಪ್ರತಿಭಟನಾ ಸಭೆಯನ್ನು ಉದ್ದೇಶಿ ಜಿಲ್ಲಾಧ್ಯಕ್ಷರಾದ ದೀಪಾ ಧಾರವಾಡ ಮಾತನಾಡಿ ಈ ವರ್ಷ ಅತೀವೃಷ್ಟಿಯಿಂದಾಗಿ ಬೆಳೆಯುವ ಒಳ್ಳೆ ಇಳುವರಿ ಬಂದಿಲ್ಲ, ಆದರೂ ಕಷ್ಟಪಟ್ಟು ರೈತರು ಬೆಳೆದ ಬೆಳೆಯನ್ನು ಒಣಗಿಸಿ,ಸಾಣಿಸಿ, ಹಸ ಮಾಡಿ ಸಹಕಾರ ಸಂಘದ ಮುಂದೆ ತಂದು ನಿಲ್ಲಿಸಿದ್ದಾರೆ. ಇಲ್ಲಿ ನೋಡಿದರೆ ಖರೀದಿಯ ಅವಧಿಯೇ ಮುಕ್ತಾಯವಾಗಿದೆ ಎಂದು ರೈತರನ್ನು ನಿರಾಸೆಗೊಳಿಸಿ ಹಿಂದಿರುಗಿಸುತ್ತಿದ್ದಾರೆ. ಸಾಲ ಸೂಲ ಮಾಡಿ ಬೆಳೆದ ಬೆಳೆಯನ್ನು ದಲ್ಲಾಳಿಗಳು ಅಅತೀ ಕಡಿಮೆ ಬೆಲೆಗೆ ಕೇಳುವುದು ರೈತನ ಬದುಕನ್ನೇ ಅಣಕಿಸಿದಂತಿದೆ. ಸರ್ಕಾರ ತಾನೇ ಮಾಡಿದ ನಿಯಮಾವಳಿ ಪ್ರಕಾರ ನೋಂದಣಿ ಮಾಡಿಸಿದ ಎಲ್ಲಾ ರೈತರ ಉದ್ದನ್ನು ಕೂಡ ಖರೀದಿ ಮಾಡಬೇಕು.
ಕಳೆದ 10 ದಿನಗಳಿಂದ ಕೊರೆಯುವ ಚಳಿಯಲ್ಲಿ ನಡುಗುತ್ತ ಸುತ್ತಮುತ್ತ ಹಳ್ಳಿಯ ರೈತರು ಸಹಕಾರ ಸಂಘದ ಎದುರು ಬಿಡಾರ ಹೂಡಿದ್ದಾರೆ. ರೈತರ ಸುಗ್ಗಿ ಸಮಯದಲ್ಲಿ ಸಾಕಷ್ಟು ಕೆಲಸಗಳನ್ನು ಬಿಟ್ಟು ಬಡ ರೈತರನ್ನು ಈ ರೀತಿಯಲ್ಲಿ ಚಳಿಯಲ್ಲಿ ಕೂಡಿಸಿರುವುದು ಸರ್ಕಾರಗಳಿಗೆ ಶೋಭೆ ತರುವುದಿಲ್ಲ. ಮಾಧ್ಯಮಗಳಲ್ಲಿ ಸುದ್ದಿಯಾಗಿದ್ದರೂ, ಜಿಲ್ಲಾಡಳಿತದ ಗಮನಕ್ಕೆ ಬಂದಿದ್ದರೂ, ಯಾವುದೇ ರೀತಿಯ ಸ್ಪಂದನೆ ಇರುವುದಿಲ್ಲ. ಇದರಿಂದ ಉದ್ದು ಬೆಳೆದ ರೈತರು ಬೇಸತ್ತಿದ್ದಾರೆ, ಸರ್ಕಾರದ ನಿರ್ಲಕ್ಷ ಧೋರಣೆ ರೈತರನ್ನು ಬಡಿದೆಬ್ಬಿಸಿದೆ. ಉದ್ದು ಖರೀದಿಯಾಗುವವರೆಗೂ ಇಲ್ಲಿಂದ ಕದಲುವುದಿಲ್ಲ ಎಂಬ ತೀರ್ಮಾನಕ್ಕೆ ಬಂದಿದ್ದಾರೆ. ಕೂಡಲೇ ನೋಂದಾಯಿಸಿದ ಎಲ್ಲಾ ರೈತರ ಉದ್ದನ್ನು ಖರೀದಿ ಮಾಡಿ ಇಲ್ಲದಿದ್ದರೆ ಅನಿವಾರ್ಯವಾಗಿ ಉನ್ನತ ಹೋರಾಟಕ್ಕೆ ಸಜ್ಜಾಗ ಬೇಕಾಗುತ್ತದೆ. ಆದಕಾರಣ ಕೂಡಲೇ ಜಿಲ್ಲಾಡಳಿತವು ಎಚ್ಚೆತ್ತು ಸಮಸ್ಯೆಯನ್ನು ಬಗೆಹರಿಸಲು ಮುಂದಾಗಬೇಕೆಂದು ಒತ್ತಾಯಿಸಿದರು.ಪ್ರತಿಭಟನೆಯಲ್ಲಿ ಕಾರ್ಯದರ್ಶಿ ಶರಣು ಗೋನವಾರ, ರೈತ ಮುಖಂಡರಾದ ರುದ್ರ್ಪ ಕೆಂಪುರ, ಸಿದ್ದಲಿಂಗಪ್ಪ ಚಂದರಗಿ,ಮೈಲಾರಿ ಧಾರವಾಡ , ಬಾಬು ತುರುಮರಿ, ಬಸವರಾಜ್ ಈ ಹೋಗೆನವರ ಸುರೇಶ್ ಗೌಡ ಬೊಮ್ಮನಗೌಡ್ರು, ಬಸವರಾಜ್ ಮರೆದ, ಶ್ರೀಶೈಲ್ ಬಾಚಗುಂಡಿ, ಸುರೇಶ್ ಬುಡಕಟ್ಟಿ, ಸಚಿನ್ ಮುಂತಾದವರು ಇದ್ದರು. ಮುಂತಾದವರು ಇದ್ದರು. ಸುದ್ದಿ ಇವರಿಂದ ಗೋವಿಂದ ಕೃಷ್ಣಪ್ಪನವರ
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 