ಭಾರತ ಸಾಂಸ್ಕೃತಿಕ ದೃಷ್ಟಿಯಿಂದ ಅಭಿವೃದ್ಧಿ ಹೊಂದಬೇಕು : ನಿರ್ದೇಶಕ ಪ್ರೊ.ಬಿ.ಎಸ್. ನಾವಿ
India should develop culturally: Director Prof. B.S. we are
ಬೆಳಗಾವಿ 21: ರಾಣಿ ಚನ್ನಮ್ಮ ವಿಶ್ವವಿದ್ಯಾಲಯ ಬೆಳಗಾವಿಯ ಪಂಡಿತ ದೀನದಯಾಳ ಉಪಾಧ್ಯಾಯ ಅಧ್ಯಯನ ಪೀಠ ಹಾಗೂ ಕೆ.ಎಲ್.ಇ. ಸಂಸ್ಥೆಯ ಲಿಂಗರಾಜ ಮಹಾವಿದ್ಯಾಲಯ ಬೆಳಗಾವಿ ಕನ್ನಡ ವಿಭಾಗ ಇವರ ಸಹಯೋಗದಲ್ಲಿ“ ಪಂಡಿತ ದೀನದಯಾಳ ಉಪಾಧ್ಯಾಯರ ಚಿಂತನೆಗಳು” ಎಂಬ ವಿಷಯದ ಕುರಿತು ಒಂದು ದಿನದ ರಾಜ್ಯ ಮಟ್ಟದ ವಿಚಾರ ಸಂಕಿರಣ ಹಮ್ಮಿಕೊಳ್ಳಲಾಗಿತ್ತು. ಈ ವಿಚಾರ ಸಂಕಿರಣದಲ್ಲಿ ಉದ್ಘಾಟಕರಾಗಿ ಆಗಮಿಸಿದ ಪ್ರೊ. ಬಿ. ಎಸ್. ನಾವಿ ನಿರ್ದೇಶಕರು ಪಂ. ದೀನದಯಾಳ ಉಪಾಧ್ಯಾಯ ಅಧ್ಯಯನ ಪೀಠ ಅವರು ಮಾತನಾಡಿ ನಮ್ಮ ದೇಶದ ಆರ್ಥಿಕ, ಸಾಂಸ್ಕೃತಿಕ ದೃಷ್ಟಿಯಿಂದ ಅಭಿವೃದ್ಧಿ ಹೊಂದಬೇಕು ಎಂಬುದು ಪಂಡಿತ ದೀನದಯಾಳ ಅವರ ಚಿಂತನೆಯಾಗಿತ್ತು, ಆ ನಿಟ್ಟಿನಲ್ಲಿ ಭಾರತದ ಸಂಸ್ಕೃತಿಯನ್ನು ಕಾಪಾಡಿಕೊಂಡು ಹೋಗಬೇಕಾದರೆ ನಮ್ಮ ಸಂಸ್ಕೃತಿಯನ್ನು ಉಳಿಸುವುದು ಅತ್ಯವಶ್ಯಕವಾಗಿದೆ ಎಂದರು. ಪಂ. ದೀನದಯಾಳ ಅವರ ಚಿಂತನೆಯನ್ನು ನೆನೆಯುತ್ತಾ ಅವರು ಬಾಲ್ಯ ಜೀವನದಿಂದಲೇ ಸಾಮಾಜಿಕ ಸಂಘಟನೆಗಳನ್ನು ಕೈಗೊಂಡಿದ್ದರು, ಮುಂದೆ ಅವರು ಮಾತನಾಡುತ್ತಾ ಅವರ ವಿಚಾರಗಳನ್ನು ವಿವಿಧ ಆಯಾಮಗಳಲ್ಲಿ ಇದ್ದುದನ್ನು ನೆನೆಸಿದರು ಸಮಗ್ರ ಮಾನವತವಾದ ಮಾನವನ ದೇಹ ಮನಸ್ಸು ಬುದ್ಧಿ ಮತ್ತು ಆತ್ಮ ಈ ನಾಲ್ಕು ಅಂಗಗಳನ್ನು ಯಾವ ರೀತಿ ಸಮಾಜದಲ್ಲಿ ತೊಡಗಿಸಿಕೊಳ್ಳಬೇಕು ಎಂಬುದನ್ನು ಚಿಂತಿಸಿದವರು. ಮನಸ್ಸನ್ನು ಹೇಗೆ ಹತೋಟಿಯಲ್ಲಿ ಇರಿಸಬೇಕು ಆತ್ಮವನ್ನು ಹೇಗೆ ಒಳ್ಳೆಯ ರೀತಿಯಲ್ಲಿ ತೊಡಗಿಸಿಕೊಳ್ಳಬೇಕು ಎಂಬುದು ದೀನದಯಾಳ ಅವರ ವಿಚಾರದಲ್ಲಿದ್ದವು ಎಂದರು.
ದೀನದಯಾಳ ಉಪಾದ್ಯಾಯವರ ಚಿಂತನೆಯ ಕುರಿತಾದ ಎರಡು ವಿಚಾರಗೋಷ್ಠಿಗಳನ್ನು ಹಮ್ಮಿಕೊಳ್ಳಲಾಗಿತ್ತು. ದೀನದಯಾಳ ಉಪಾದ್ಯಾಯರವರ ಏಕಾತ್ಮಕ ಮಾನವತವಾದ ವಿಚಾರ ಗೋಷ್ಠಿಯ ಉಪನ್ಯಾಸಕರಾಗಿ ಆಗಮಿಸಿದ್ದ ಡಾ. ರೋಹಿಣಾಕ್ಷ ಶಿರ್ಲಾಲು ಮಾತನಾಡುತ್ತಾ ದೀನದಯಾಳ ಉಪಾದ್ಯಾಯ ಅವರು ಓರ್ವ ಚಿಂತಕ ವಿಚಾರವಾದಿ ಆಗಿದ್ದವರು. ದೀನದಯಾಳ ಉಪಾಧ್ಯಾಯರ ಚಿಂತನೆಗಳು ಭಾರತವಷ್ಟೇ ಅಲ್ಲ ವಿಶ್ವದಲ್ಲಿ ವಿಚಾರಣೆಗೆ ಎಡೆಮಾಡಿಕೊಡುವಷ್ಟು ಗಟ್ಟಿಯಾಗಿದ್ದವು. ಭಾರತೀಯ ಚಿಂತನೆಗಳು ಪಾಶ್ಚಿಮಾತ್ಯ ಚಿಂತನೆಗಳಿಗೆ ಹೋಲಿಸಿದರೆ ಅಖಂಡ ಮತ್ತು ಸಮಗ್ರವಾದವುಗಳಾಗಿದ್ದವು.
ಪಾಶ್ಚಿಮಾತ್ಯ ಚಿಂತನೆಯಲ್ಲಿ ವ್ಯಕ್ತಿ ಮತ್ತು ಸಮಾಜದ ನಡುವೆ ಒಂದು ಸಂಘರ್ಷ ಇರುವುದನ್ನು ಕಾಣಬಹುದು ಆದರೆ ಭಾರತೀಯ ಚಿಂತನೆಯಲ್ಲಿ ಈ ಸಮಾಜದ ಪ್ರತಿನಿಧಿ ವ್ಯಕ್ತಿ ಆಗಿದ್ದಾನೆ ಎಂದರು. ನಮ್ಮ ದೇಶದ ಬಹುತೇಕ ಮುಖ್ಯ ಸಮಸ್ಯೆಗಳಿಗೆ ಕಾರಣ ಏನೆಂಬುದನ್ನು ನಾವು ನಮ್ಮದೇ ಗೊತ್ತು ಗುರಿಗಳಿಗೆ, ವಿಚಾರಗಳಿಗೆ ಆಸ್ಪದ ನೀಡದಿರುವುದೇ ಮುಖ್ಯವಾಗಿದೆ ಎಂದರು. ಪ್ರತಿಯೊಬ್ಬ ವ್ಯಕ್ತಿಯೂ ದೇಶದ ದೊರೆ, ಪ್ರಭು ಆಗಬೇಕು ಎಂಬುದು ದೀನದಯಾಳ ಉಪಾಧ್ಯಾಯ ಅವರ ಚಿಂತನೆಯಾಗಿತ್ತು. ಮನುಷ್ಯ ಏನನ್ನಾದರೂ ಸಾಧಿಸಬೇಕಾದರೆ ಅವನಿಗೆ ಬೇಕಾಗಿರುವುದು ಅತ್ಯುನ್ನತ ಸಾಧನೆ ಎಂದರೆ ಶಾಂತಿ ಎಂಬುದನ್ನ ತಿಳಿಸಿದರು. ಪಂಡಿತ ದೀನದಯಾಳ ಅವರ ಅಂತ್ಯೋದಯ ಪರಿಕಲ್ಪನೆ ವಿಚಾರಗೋಷ್ಠಿ ಎರಡರ ಬಗ್ಗೆ ಮಾತನಾಡಿದ ಮತ್ತೋರ್ವ ಸಂಪನ್ಮೂಲ ವ್ಯಕ್ತಿಗಳಾದ ಶ್ರೀ. ಅನೂಪ ದೇಶಪಾಂಡೆ ಅವರು ದೀನದಯಾಳ ಉಪಾಧ್ಯಾಯರ ಅಂತ್ಯೋದಯ ಪರಿಕಲ್ಪನೆ ಬಗ್ಗೆ ಮಾತನಾಡುತ್ತಾ ಮತ್ತೊಬ್ಬರಿಗೆ ಕೊಟ್ಟು ನಾವು ಪಡೆದುಕೊಳ್ಳುವುದು ನಮ್ಮ ಪರಿಕಲ್ಪನೆ ಎಂಬ ದೀನದಯಾಳ ಉಪಾಧ್ಯಾಯ ಅವರ ಮಾತುಗಳನ್ನು ನೆನಪಿಸಿಕೊಂಡು ದೀನದಯಾಳ ಉಪಾಧ್ಯಾಯ ಅವರ ಅಂತ್ಯೋದಯದ ಅಂಶಗಳಾದ ದುಡಿದು ತಿನ್ನುವಂಥದ್ದು, ದುಡಿದು ಇನ್ನೊಬ್ಬರಿಗೆ ತಿನಿಸುವಂತದ್ದು, ಒಬ್ಬರಿಗೊಬ್ಬರು ಸಹಕಾರದಿಂದ ಬದುಕುವುದು ಎಂಬ ಮೂರು ಅಂಶಗಳ ಬಗ್ಗೆ ತಿಳಿಸಿದರು, ಅಂತ್ಯೋದಯ ಎಂದರೆ ಸಮಾಜದ ಕಟ್ಟಕಡೆ ವ್ಯಕ್ತಿಗೂ ಸಮಾಜದಲ್ಲಿನ ಎಲ್ಲಾ ಸೌಲಭ್ಯಗಳು ಮುಟ್ಟಬೇಕು ಎಂಬುದಾಗಿತ್ತು. ಕೇವಲ ರಾಜಕೀಯ ಪ್ರಜಾಪ್ರಭುತ್ವಕ್ಕೆ ಒತ್ತುಕೊಡದೆ ಆರ್ಥಿಕ ಲೋಕತಂತ್ರದ ಪ್ರಜಾಪ್ರಭುತ್ವಕ್ಕೂ ದೀನದಯಾಳ ಉಪಾಧ್ಯಾಯ ಅವರು ಒತ್ತು ನೀಡಿದರು.
ಈ ಕಾರ್ಯಕ್ರಮದ ಸಮಾರೋಪ ಸಮಾರಂಭದ ಮುಖ್ಯ ಅತಿಥಿಗಳಾಗಿ ಆಗಮಿಸಿದ ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಕನ್ನಡ ವಿಭಾಗದ ಸಹ ಪ್ರಾಧ್ಯಾಪಕರಾದ ಡಾ. ಗಜಾನನ ನಾಯ್ಕ ಅವರು ಮಾತನಾಡುತ್ತಾ ಇಂದಿನ ಆಧುನಿಕ ಯುಗವು ತಂತ್ರಜ್ಞಾನದ ಮೋಹಕ್ಕೆ ಒಳಗಾದ ಮಾನವ ಸಂಕುಲ ಮಾನವಿಯ ಮೌಲ್ಯಗಳನ್ನು ಕಳೆದುಕೊಳ್ಳುತ್ತಿದೆ ಎಂದು ವಿಷಾದ ವ್ಯಕ್ತಪಡಿಸಿದರು ಅಲ್ಲದೆ, ನಮ್ಮ ದೇಶದ ಸಂಸ್ಕೃತಿಗಳನ್ನ ಇಂತಹ ದಾರ್ಶನಿಕರ ಚಿಂತನೆಗಳ ಮೂಲಕ ಅಧ್ಯಯಿಸಿ ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕಾಗಿದೆ ಎಂದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಲಿಂಗರಾಜ ಮಹಾವಿದ್ಯಾಲಯದ ಪ್ರಾಚಾರ್ಯರಾದ ಡಾ. ಎಚ್. ಎಸ್. ಮೇಲಿನಮನಿ ಅವರು ಮಾತನಾಡುತ್ತಾ ದೀನದಯಾಳ ಉಪಾಧ್ಯಾಯ ಅವರ ತತ್ವಗಳು ಚಿಂತನೆಗಳು ಅವರ ಆದರ್ಶಗಳನ್ನ ಇಂದಿನ ಯುವಜನತೆ ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕೆಂದು ತಿಳಿಸಿದರು. ಕುಮಾರಿ. ರೋಹಿಣಿ ಹಣಬರಟ್ಟಿ ಅವರ ಪ್ರಾರ್ಥನೆಯೊಂದಿಗೆ ಪ್ರಾರಂಭವಾದ ಕಾರ್ಯಕ್ರಮದಲ್ಲಿ ಅಕ್ಷಯ ಪಾಟೀಲ ನಾಡಗೀತೆ ಹಾಡಿದರು. ಕನ್ನಡ ವಿಭಾಗದ ಮುಖ್ಯಸ್ಥರಾದ ಡಾ. ಎಚ್. ಎಮ್. ಚನ್ನಪ್ಪಗೋಳ ಸ್ವಾಗತಿಸಿ ಅತಿಥಿಗಳನ್ನು ಪರಿಚಯಿಸಿದರು. ಡಾ. ಶಿವಲಿಂಗಯ್ಯ ಗೋಠೆಯವರ ವಂದನಾರೆ್ಣಯೊಂದಿಗೆ ಮುಕ್ತಾಯವಾದ ಕಾರ್ಯಕ್ರಮವನ್ನು ಡಾ. ಪಾಂಡುರಂಗ ಗಾಣಿಗೇರ ಮತ್ತು ಮಲ್ಲಿಕಾರ್ಜುನ ಬಾಗೇವಾಡಿ ನಿರೂಪಿಸಿದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 