ತಾಂತ್ರಿಕ ಜಗತ್ತಿಗೆ ಭಾರತದ ಕೊಡುಗೆ ಅಪಾರ: ಬಾಹ್ಯಾಕಾಶ ವಿಜ್ಞಾನಿ ಡಾ.ಪ್ರಸಾದ್
ಲೋಕದರ್ಶನ ವರದಿ
ಹಾವೇರಿ, 30: ಜ್ಞಾನದ ವಿಭಿನ್ನ ಶಾಖೆಗಳನ್ನು ಹೊಂದಿದ ವಿಜ್ಞಾನವಿಂದು ತನ್ನದೇ ಆದ ಮಹತ್ತರ ಸ್ಥಾನವನ್ನು ಪಡೆದಿದ್ದು, ಜಾಗತಿಕ ಪ್ರಪಂಚಕ್ಕೆ ಭಾರತೀಯ ವಿಜ್ಞಾನಿಗಳ ಕೊಡುಗೆ ಅಪಾರವಾದುದು ಎಂದು ಇಸ್ರೋ ಹಿರಿಯ ವಿಜ್ಞಾನಿ ಡಾ|| ಡಿ. ಸಿ. ಪ್ರಸಾದ್ ಹೇಳಿದರು.
ನಗರದ ಪ್ರತಿಷ್ಠಿತ ಕೆ. ಎಲ್. ಇ. ಸಂಸ್ಥೆಯ ಗುದ್ಲೆಪ್ಪ ಹಳ್ಳಿಕೇರಿ ಮಹಾವಿದ್ಯಾಲಯದ ವಿಜ್ಞಾನ ಸಂಘ ಆಯೋಜಿಸಿದ್ದ "ಬಾಹ್ಯಕಾಶ ಮತ್ತು ಆಧುನಿಕ ತಂತ್ರಜ್ಞಾನ" ವಿಷಯ ಕುರಿತು ಉಪನ್ಯಾಸ ಕಾರ್ಯಕ್ರಮ ಜರುಗಿತು.
1986 ರ ಸುಮಾರಿಗೆ ಕೇವಲ 5 ಸೆಟಲೈಟ್ಗಳನ್ನು ಉಡಾವಣೆ ಮಾಡಿದ್ದ ನಾವುಗಳು ಇಂದು 44 ಕ್ಕೂ ಮಿಕ್ಕಿದ ವೈವಿಧ್ಯಮಯ ತಂತ್ರಜ್ಞಾನವುಳ್ಳ ಸೆಟ್ಟಲೈಟ್ಗಳನ್ನು ಬಾಹ್ಯಾಕಾಶಕ್ಕೆ ಉಡಾವಣೆಗೊಳಿಸಿ ತಂತ್ರಜ್ಞಾನ ಕ್ಷೇತ್ರದಲ್ಲಿ ಸಾಧನೆ ಗೈದಿದ್ದೇವೆ.
ಇದೆಲ್ಲದರ ಹಿಂದಿರುವ ಭಾರತೀಯ ವಿಜ್ಞಾನಿಗಳ ಕೌಶಲ್ಯ ಮತ್ತು ಯೋಚನಾಶಕ್ತಿ ಅದ್ಭುತವಾದದ್ದು. ಇಡೀ ವಿಶ್ವವೇ ಭಾರತದತ್ತ ತಿರುಗುವಂತಾಗಿದೆ. ವಿಶ್ವಕ್ಕೆ ಅನೇಕ ರೀತಿಯ ತಾಂತ್ರಿಕಾಂಶಗಳನ್ನು ವರ್ಷದಿಂದ ವರ್ಷಕ್ಕೆ ಕೊಡುತ್ತಿದ್ದೇವೆ.
ಇದು ಶ್ರೇಷ್ಠಮಟ್ಟದ ಕೀತರ್ಿ ಪಡೆದಂತಾಗಿದೆ ಎಂದು ಹರುಷ ವ್ಯಕ್ತಪಡಿಸಿದರು. ವಿಜ್ಞಾನಿ ಡಾ|| ಎ.ಪಿ.ಜೆ. ಅಬ್ದುಲ್ ಕಲಾಂರವರು ಭಾರತ ದೇಶದ ತಂತ್ರಜ್ಞಾನ ಕ್ಷೇತ್ರದಲ್ಲಿ ಮಾಡಿದ ಕೃಷಿ ಮತ್ತು ಅವರ ವೈವಿಧ್ಯಮಯ ಬದುಕು ಇಂದಿನವರಿಗೆ ಆದರ್ಶವಾಗಿದೆ ಎಂದರು.
ಪ್ರಾಚಾರ್ಯ ಡಾ|| ಎಮ್. ಎಸ್. ಯರಗೊಪ್ಪ ಅಧ್ಯಕ್ಷತೆ ವಹಿಸಿದ್ದರು. ವಿಜ್ಞಾನ ವಿಭಾಗದ ಅಧ್ಯಾಪಕರು ಮತ್ತು ವಿದ್ಯಾಥರ್ಿಗಳು ಹಾಗೂ ಕಾಲೇಜು ಸಿಬ್ಬಂದಿ ಪಾಲ್ಗೊಂಡಿದ್ದರು. ಜ್ಯೋತಿ ಪಾಟೀಲ ಪ್ರಾಥರ್ಿಸಿದರು.ಡಾ|| ಎಸ್. ವಿ. ಮಡವಾಳೆ ಪರಿಚಯಿಸಿ, ಸ್ವಾಗತಿಸಿದರು. ಪ್ರಿಯಾ ರೊಡ್ಡನವರ ನಿರ್ವಹಿಸಿದರು. ಪ್ರೊ. ಡಿ. ಎ. ಕೊಲ್ಲಾಪುರೆ ವಂದಿಸಿದರು. ವಿಜ್ಞಾನ ಸಂಘದ ಕಾಯರ್ಾಧ್ಯಕ್ಷ ಪ್ರೊ. ಕೆ. ಎಚ್. ಬ್ಯಾಡಗಿ ಕಾರ್ಯಕ್ರಮ ಆಯೋಜಿಸಿದ್ದರು.
ಬೆಂಗಳೂರು ಕ್ವಾರಿ ಬಂಡೆ ಕುಸಿತ: ಬಿಹಾರದ ಏಳು ಕಾರ್ಮಿಕರು ಮೃತ
11 ವರ್ಷಗಳಲ್ಲಿ ಡಿಜಿಟಲ್ ಇಂಡಿಯಾ ಆಡಳಿತವನ್ನು ಪರಿವರ್ತಿಸಿ, ನಾಗರಿಕರನ್ನು ಸಬಲಗೊಳಿಸಿದೆ: ಪ್ರಧಾನಿ ಮೋದಿ
ಮುಂಬೈನ ಚೆಂಬೂರಿನಲ್ಲಿ ಶಾಲಾ ಬಸ್ ಮೇಲೆ ಮರ ಉರುಳಿ ಬಿದ್ದು ವಿದ್ಯಾರ್ಥಿ ಸಾವು; ನಾಲ್ವರಿಗೆ ಗಾಯ
ಹುಡುಗಿಯ ಮನೆ ದರೋಡೆ, ಅಂತರಜಾತಿ ಪ್ರೇಮಿಗಳು ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆ, ಮರ್ಯಾದಾ ಹತ್ಯೆಗಳ ಅನುಮಾನ
ಡಿಸಿಸಿ ಬ್ಯಾಂಕಿನ 10 ವರ್ಷ ಮೇಲ್ಪಟ್ಟ ನಿರ್ದೇಶಕರ ಅನರ್ಹತೆ: ಆರ್ಬಿಐ ನಿಯಮ ಜಾರಿಗೆ ನಬಾರ್ಡ್ ಒತ್ತಾಯ, ಸರ್ಕಾರಕ್ಕೆ ಎಚ್ಚರಿಕೆ
ಮಹಾ ಸಿಎಂ ಜೊತೆ ಎಮ್ ಇಎಸ್ ಉನ್ನತಾಧಿಕಾರ ಸಭೆ ರದ್ದು: ಝಾಪಾ ಮುಖಂಡರು ಬರಿಗೈಯಿಂದ ವಾಪಸ್ 