ಧನ ಸಹಾಯ ನೀಡಿ ಮಾನವೀಯತೆ ತೋರಿದ ಇಂಡಿ ಜನತೆ

ಲೋಕದರ್ಶಬ ವರದಿ

ತಾಳಿಕೋಟೆ 03:  ಪಟ್ಟಣದ ಪರಮಾನಂದ ಕಲ್ಲೂರ ಕುಟುಂಬವು ಮಗನ ಶಸ್ತ್ರ ಚಿಕೀತ್ಸೆಗೆ ಹಣ ಸಂಗ್ರಹಕ್ಕಾಗಿ ಅಲೇದಾಡುತ್ತಿರುವ ವಿಷಯವನ್ನು ಅರೀತ ಇಂಡಿ ಪಟ್ಟಣದ ಬ್ರೀಲಿಯಂಟ್ ಶಾಲೆಯ ಅಧ್ಯಕ್ಷ ಶೌಕತ್ ನಾಲಬಂದ್ ಅವರು ಇಂಡಿ ಪಟ್ಟಣದ ಜನರಿಂದ ಸಂಗ್ರಹಿಸಿದ ಹಾಗೂ ತಮ್ಮ ವೈಯಕ್ತಿಕವಾಗಿ ಗುಪ್ತ ಸಹಾಯವನ್ನು ಶನಿವಾರರಂದು ತಾಳಿಕೋಟೆ ಪಟ್ಟಣಕ್ಕೆ ಆಗಮಿಸಿ ಕಲ್ಲೂರ ಕುಟುಂಬಕ್ಕೆ ಸಹಾಯ ಹಸ್ತವನ್ನು ನೀಡಿದರು.

ತಾಲೂಕಾ ತಹಶೀಲ್ದಾರ ಎಸ್.ಎಚ್.ಅರಕೇರಿ ಅವರ ಸಮ್ಮುಖದಲ್ಲಿ ಕುಟುಂಭದವರಿಗೆ ಇಂಡಿ ಪಟ್ಟಣದ ಜನರಿಂದ ಸಂಗ್ರಹಿಸಿದ 26 ಸಾವಿರ ರೂ. ಒಳಗೊಂಡಂತೆ ತಮ್ಮ ವೈಯಕ್ತಿಕವಾಗಿ ಗುಪ್ತ ಸಹಾಯದನವನ್ನು ಸುದರ್ಶನ ತಂದೆ ಪರಮಾನಂದ ಕಲ್ಲೂರ ಅವರಿಗೆ ನೀಡಿದರು.

ಈ ಸಮಯದಲ್ಲಿ ಶೌಕತ್ ನಾಲಬಂದ ಅವರು ಮಾತನಾಡಿ ಪರಮಾನಂದ ಕಲ್ಲೂರ ದಂಪತಿಗಳು ತಮ್ಮ ಮಗನಿಗೆ ಲಿವರ್ ದೋಷ ಕುರಿತು ದಾನಿಗಳಬಳಿ ಅಲೇದಾಡುತ್ತಿರುವ ವಿಷಯವನ್ನು ಪತ್ರಿಕಾ ಮಾಧ್ಯಮದ ಮೂಲಕ ತಿಳಿದುಕೊಂಡೆವು ಇದು ಅಲ್ಲದೇ ತಾಳಿಕೋಟೆಯ ಕರವೇ ಕಾರ್ಯಕರ್ತರು ಬೀದಿ ಬೀದಿಯಲ್ಲಿ ಹಣ ಸಂಗ್ರಹಿಸಿ ಮಾನವೀಯತೆಯನ್ನು ತೋರಿರುವ ವಿಷಯ ಹೆಮ್ಮೆಯ ವಿಷಯವಾಗಿದೆ ಈ ಕುಟುಂಬಕ್ಕೆ ಇಂಡಿ ಪಟ್ಟಣದ ಜನರ ಆಸೆಯಂತೆ ಸಹಾಯ ಹಸ್ತ ಕಲ್ಪಿಸಬೇಕೆಂಬ ಉದ್ದೇಶದಿಂದ ಜನರಿಂದ ಸಹಾಯ ವನ್ನು ಸಂಗ್ರಹಿಸುವದರೊಂದಿಗೆ ಮತ್ತು ನನ್ನ ವೈಯಕ್ತಿಕವಾಗಿ ಗುಪ್ತ ಸಹಾಯವನ್ನು ನೀಡುತ್ತಿದ್ದೇನೆ ಕಲ್ಲೂರ ಕುಟುಂಬಕ್ಕೆ ಬಂದಿರುವ ಈ ಸವಾಲನ್ನು ಎದುರಿಸಲು ಇಂಡಿ ಪಟ್ಟಣದ ಜನರು ಎಲ್ಲ ರೀತಿಯಿಂದಲೂ ಸಹಾಯ ಸಹಕಾರವನ್ನು ನೀಡುತ್ತೇವೆಂದರು.

ಕರವೇ ಸಂಘಟನೆಯ ತಾಲೂಕಾ ಉಪಾಧ್ಯಕ್ಷ ಜೈಭೀಮ ಮುತ್ತಗಿ ಮಾತನಾಡಿ ಸುದರ್ಶನ್ನ ಶಸ್ತ್ರ ಚಿಕೀತ್ಸೆಯ ನೆರವಿಗಾಗಿ ಜಿಲ್ಲೆಯ ಇಂಡಿ ತಾಲೂಕಿನ ಜನರೂ ಸಹ ತಮ್ಮ ಕೈಲಾದ ಮಟ್ಟಿಗೆ ಸಹಾಯ ಹಸ್ತವನ್ನು ಕಲ್ಪಿಸಿರುವದು ಸಂತೋಷದ ಸಂಗತಿಯಾಗಿದೆ ಅಲ್ಲದೇ ಮಾನವೀಯ ಮೌಲ್ಯಗಳನ್ನು ಎತ್ತಿಹಿಡಿಯುವಂತಹ ಕಾರ್ಯವಾಗಿದೆ ಬ್ರೀಲಿಯಂಟ್ ಶಾಲೆಯ ಅಧ್ಯಕ್ಷರಾದ ಶೌಕತ್ ನಾಲಬಂದವರು ಸಂಗ್ರಹಿಸಿದ ಹಣದ ಜೊತೆಗೆ ತಮ್ಮ ವಯಕ್ತಿಕ ಗೌಪ್ಯ ಧನಸಹಾಯವನ್ನು ಮಾಡಿರುವದು ಅವರ ಕಾರ್ಯವನ್ನು ಶ್ಲಾಘೀಸುವಂತಹದ್ದಾಗಿದೆ ಎಂದರು.

ಈ ಸಮಯದಲ್ಲಿ ಕರವೇ ತಾಲೂಕಾ ಅಧ್ಯಕ್ಷ ನಿಸಾರ ಬೇಪಾರಿ, ಮೇರು ಬ್ಯಾಗವಾಟ, ನಬಿ ಲಾಹೋರಿ, ನಾಗರಾಜ ಪತ್ತಾರ, ರೀಯಾಜ ಬಡಗಣ, ರೇಣುಕಾ ಪರಮಾನಂದ ಕಲ್ಲೂರ, ಮಲ್ಲು ನಾಯ್ಕೋಡಿ, ಮೊದಲಾದವರು ಇದ್ದರು.