ಸ್ವತಂತ್ರ ಪದವಿ ಪೂರ್ವ ಕಾಲೇಜಿನ ವಾರ್ಷಿಕೋತ್ಸವ ಹಾಗೂ ಸಾರ್ಥಕ ಸಂಭ್ರಮ ಮತ್ತು ಪಾದಪೂಜೆ, 'ನಿಮ್ಮನ್ನು ಹೆತ್ತವರು' ಸಮಾರಂಭ

Independence Pre-Graduation College Anniversary and Celebration and Pada Puja, 'Niminnu Pariwanu' C

 ಸ್ವತಂತ್ರ ಪದವಿ ಪೂರ್ವ ಕಾಲೇಜಿನ ವಾರ್ಷಿಕೋತ್ಸವ ಹಾಗೂ ಸಾರ್ಥಕ ಸಂಭ್ರಮ ಮತ್ತು ಪಾದಪೂಜೆ, 'ನಿಮ್ಮನ್ನು ಹೆತ್ತವರು' ಸಮಾರಂಭ 

ಬೀಳಗಿ 11: ಸಹಕಾರಿ, ಶಿಕ್ಷಣ, ಕೈಗಾರಿಕೆ ಮುಂತಾದ ಕ್ಷೇತ್ರಗಳಲ್ಲಿ ಸಹಸ್ರಾರು ಜನರಿಗೆ ಉದ್ಯೋಗಾವಕಾಶ ನೀಡುವ ಮೂಲಕ ಸಮಾಜದ ಋಣ ತೀರಿಸುವ ಕೆಲಸ ಮಾಡುತ್ತಿದ್ದೆವೆ ಎಂದು ಎಸ್‌. ಆರ್‌. ಪಾಟೀಲ ಶಿಕ್ಷಣ ಪ್ರತಿಷ್ಠಾನದ ಸಂಸ್ಥಾಪಕ ಅಧ್ಯಕ್ಷ  ಎಸ್‌. ಆರ್‌. ಪಾಟೀಲ್ ಹೇಳಿದರು. 

  ತಾಲೂಕಿನ ಬಾಡಗಂಡಿ ಎಸ್‌. ಆರ್‌.ಪಾಟೀಲ ಶಿಕ್ಷಣ ಸಂಸ್ಥೆಯ ಬಾಪೂಜಿ ಅಂತರಾಷ್ಟ್ರೀಯ ಶಾಲೆ ಹಾಗೂ ಸ್ವತಂತ್ರ ಪದವಿ ಪೂರ್ವ ಕಾಲೇಜಿನ ವಾರ್ಷಿಕೋತ್ಸವ ಹಾಗೂ ಸಾರ್ಥಕ ಸಂಭ್ರಮ ಮತ್ತು ಪಾದಪೂಜೆ, 'ನಿಮ್ಮನ್ನು ಹೆತ್ತವರು' ಸಮಾರಂಭದ  ಅಧ್ಯಕ್ಷತೆ ವಹಿಸಿ ಮಾತನಾಡಿದರು. 

   ವಿದ್ಯೆ ಎಲ್ಲಾ ಸಂಪತ್ತಿಗಿಂತ ದೊಡ್ಡ ಸಂಪತ್ತಾಗಿದ್ದು, ಯಾರು ಕದಿಯಲು ಸಾಧ್ಯವಿಲ್ಲದ ಹಾಗೂ ಬಳಸಿದಷ್ಟು ಬಲವರ್ಧನೆಯಾಗುತ್ತದೆ. ಆದರೆ ಎಷ್ಟೇ ವಿದ್ಯೆಯನ್ನು ಗಳಿಸಿದರೂ ವಿದ್ಯಾರ್ಥಿಗಳು ವಿನಯತೆ, ಸಂಸ್ಕಾರವನ್ನು ಮೈಗೂಡಿಸಿಕೊಳ್ಳದಿದ್ದರೆ ಗೌರವ ಪಡೆಯಲು ಸಾಧ್ಯವಿಲ್ಲ. ಹಾಗಾಗಿ ವಿದ್ಯಾರ್ಥಿಗಳು ಸಂಸ್ಕಾರವಂತರಾಗಬೇಕು ಎಂದರು. 

  ಮುಖ್ಯ ಅತಿಥಿಯಾಗಿದ್ದ ಮಕ್ಕಳ ಸಾಹಿತಿ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಪ.ಗು ಸಿದ್ದಾಪುರ ಮಾತನಾಡಿ 'ಇಂದಿನ ಸಮಾಜದಲ್ಲಿ ಎಸ್ ಆರ್ ಪಾಟೀಲ್‌ರಂತಹ ವ್ಯಕ್ತಿಗಳು ಸಿಗುವುದು ಅಪರೂಪ. ಸಿರಿವಂತರಾದ ಬಳಿಕ ಸಮಾಜ ಮರೆಯುವರನ್ನೆ ಹೆಚ್ಚಾಗಿ ನೋಡುತ್ತೇವೆ. ಆದರೆ  ಪಾಟೀಲ್ ಅವರು ಅಕ್ಷರ ಬೀಜ ಬಿತ್ತುವುದರೊಂದಿಗೆ ಸಂಸ್ಕಾರಯುತ ಶಿಕ್ಷಣ ನೀಡುವುದಲ್ಲದೆ, ಜನರೊಂದಿಗೆ ಬೆರೆಯುವ ಮನೋಭಾವ ಮೆಚ್ಚುವಂಥದ್ದು' ಎಂದರು. 

  ಪ್ರಾಚಾರ್ಯ ಶಿವಭೂದ ಶೆಟ್ಟಿ ಮಾತನಾಡಿ ಅಕ್ಷರ ಕಲಿತವರು ಭ್ರಷ್ಟರಾಗಬಹುದು ಸಂಸ್ಕಾರ ಕಲಿತವರು ಎಂದು ಭ್ರಷ್ಟರಾಗುವುದಿಲ್ಲ ಹಾಗಾಗಿ ವಿದ್ಯಾರ್ಥಿಗಳು ಭವಿಷ್ಯದಲ್ಲಿ ಮಂತರಾಗದಿದ್ದರೂ ಪರವಾಗಿಲ್ಲ ಧೀಮಂತರಾಗಿ ಎಂದು ಸಲಹೆ ನೀಡಿದರು. 

  ಆಡಳಿತ ಮಂಡಳಿ  ಸದಸ್ಯೆ ಅನುಷಾ ಪಾಟೀಲ್, ಆಡಳಿತಾಧಿಕಾರಿ ಎಚ್ ಬಿ ಧರ್ಮಣ್ಣವರ, ವೈದ್ಯಕೀಯ ವ್ಯವಸ್ಥಾಪಕ ವಿಜಯಾನಂದ ಹಳ್ಳಿ, ಆಯುರ್ವೇದಿಕ್ ಕಾಲೇಜಿನ ಪ್ರಾಚಾರ್ಯ ಎ.ಎ.ಬಾಳಿಕಾಯಿ, ಅಶೋಕ ಸರ್ ಮತ್ತು ಸಿಬ್ಬಂದಿ ವರ್ಗದವರು ಹಾಗೂ ವಿದ್ಯಾರ್ಥಿಗಳು  ಇದ್ದರು.  

ನಂತರ ಪಾರಿತೋಷಕ ವಿತರಣೆ ಹಾಗೂ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನೆರವೇರಿದವು. 

ಸಂಭ್ರಮ ಮತ್ತು ಪಾದಪೂಜೆ ಸಮಾರಂಭವನ್ನು ಮಕ್ಕಳ ಸಾಹಿತಿ ಪ.ಗು ಸಿದ್ದಾಪುರ ಅವರಿಗೆ ಸನ್ಮಾನಿಸುತ್ತಿರುವುದು.