ಸರ್ಕಾರಿ ವೈದ್ಯಕೀಯ ಕಾಲೇಜು ಸ್ಥಾಪನೆಗಾಗಿ ಅನಿರ್ಧಿಷ್ಟ ಧರಣಿ 28 ನೇ ದಿನಕ್ಕೆ
Indefinite sit-in for establishment of government medical college enters 28th day
ಸರ್ಕಾರಿ ವೈದ್ಯಕೀಯ ಕಾಲೇಜು ಸ್ಥಾಪನೆಗಾಗಿ ಅನಿರ್ಧಿಷ್ಟ ಧರಣಿ 28 ನೇ ದಿನಕ್ಕೆ
ವಿಜಯಪುರ 15: ಸರ್ಕಾರಿ ವೈದ್ಯಕೀಯ ಕಾಲೇಜು ಸ್ಥಾಪನೆಗಾಗಿ ನಡೆಯುತ್ತಿರುವ ಅನಿರ್ಧಿಷ್ಟ ಧರಣಿ 28 ನೇ ದಿನಕ್ಕೆ ಕಾಲಿಟ್ಟಿದೆ. ಈ ಧರಣಿ ಸತ್ಯಾಗ್ರಹಕ್ಕೆ ಆಗಮಸಿದ ನಿವೃತ್ತ ಅಧಿಕಾರಿಗಳಾದ ರಾಜೇಂದ್ರ ಪೋದ್ದಾರ ರವರು ಮಾತನಾಡುತ್ತಾ ಸರಕಾರಿ ವೈದ್ಯಕೀಯ ಕಾಲೇಜು ಆರಂಭಿಸುವಲ್ಲಿ ಖಾಸಗೀ ಸಹಭಾಗಿತ್ವವವನ್ನು ಸಂಪೂರ್ಣವಾಗಿ ವಿರೋಧಿಸುತ್ತೇನೆ. ಯಾರ ಹಿತಕ್ಕಾಗಿ ಪಿಪಿಪಿ ಮಾದರಿ ಎಂದು ಜನರಿಗೆ ತಿಳಿಸಬೇಕು ಹಾಗು ಖಾಸಗಿಯರಿಗೆ ಲಾಭ ಮಾಡುವ ಉದ್ದೇಶವನ್ನು ಈ ಮಾದರಿ ಹೊಂದಿದೆ ಎಂದು ಹೇಳಿದರು. ಪ್ರತಿಯೊಬ್ಬರು ಕಟ್ಟುವ ತೆರಿಗೆಯಿಂದ ಸರಕಾರ ನಡೆಸುತ್ರಿರುವವರು ಜನಸಾಮಾನ್ಯರ ಹಿತಾಸಕ್ತಿಯನ್ನು ಕಾಪಾಡುವಲ್ಲಿ ಗಮನಹರಿಸಬೇಕಾಗಿದೆ. ಸರಕಾರಿ ವೈದ್ಯಕೀಯ ಕಾಲೇಜು ಸ್ಥಾಪನೆ ಮಾಡುವುದು ದೇಶದ,ರಾಜ್ಯದ, ಜಿಲ್ಲೆಯ ಜನರ ಬೇಡಿಕೆಯಾಗಬೇಕಿದೆ. ಇದು ಕೇವಲ ಬಿಜಾಪುರದ ಸಮಸ್ಯೆಯಲ್ಲ ಇಡೀ ದೇಶದ ಸಮಸ್ಯೆಯಾಗಬೇಕು ಎಂದು ಹೇಳುತ್ತಾ ಖಾಸಗಿ ಸಹಬಾಗಿತ್ವ ಬಡವರ ಮೇಲೆ ಯಾವ ರೀತಿ ಪರಿಣಾಮ ಬೀರುತ್ತದೆ ಎಂಬುದನ್ನು ಜನರು ಮನಗಾಣಬೇಕು. ಇದಕ್ಕೆ ಜನಪ್ರತಿನಿಧಿಗಳು ಸ್ಪಂದಿಸಬೇಕು, ಎಲ್ಲಾ ವರ್ಗದವರು ಒಂದುಗೂಡಿ ಸರಕಾರಿ ವೈದ್ಯಕೀಯ ಕಾಲೇಜು ಆರಂಭಿಸಲು ಹೋರಾಟ ಬೆಳೆಸಬೇಕು ಎಂದು ಹೇಳಿದರು. ಸಮ ಸಮಾಜದ ನಿರ್ಮಾಣದ ಕನಸು ಈಡೇರಿಸಿಬೇಕಿದೆ, ಪ್ರತಿರೋಧವೆ ಸಮಾಜವನ್ನು ಉಳಿಸುವ ಪ್ರಬಲವಾದ ಅಸ್ತ್ರ ಅದಕ್ಕಾಗಿ ಎಲ್ಲರು ಒಗ್ಗಟ್ಟಿನಿಂದ ಹೋರಾಟ ಬೆಳೆಸಬೇಕಿದೆ ಎಂದು ಕರೆ ನೀಡಿದರು. ಎಸ್ ಎಮ್ ನೆರಿಬೆಂಚಿ ಅಧ್ಯಕ್ಷರು ಕರ್ನಾಟಕ ರಾಜ್ಯ ಐಟಿಐ ಅಸೋಸಿಯೇಷನ್ ರವರು ಮಾತನಾಡುತ್ತಾ ಜಯಪುರದಲ್ಲಿ ಸರ್ಕಾರಿ ವೈದ್ಯಕೀಯ ಕಾಲೇಜು ಸ್ಥಾಪನೆ ಮಾಡುವವರೆಗೆ ನಾವು ಹೋರಾಟದಶ ಜೊತೆ ಇರುತ್ತೇವೆ, ಯಾವುದೇ ಕಾರಣಕ್ಕೂ ಖಾಸಗೀಯವರಿಗೆ ಬಿಟ್ಟುಕೊಡಲು ಬಿಡುವುದಿಲ್ಲ, ನಮ್ಮ ಜಿಲ್ಲೆಯಲ್ಲಿ ವೈದ್ಯಕೀಯ ಕಾಲೇಜು ಮೊದಲೇ ಸ್ಥಾಪನೆಯಾಗಬೇಕಿತ್ತು. ಬಡವರ ಮಕ್ಕಳು ವೈದ್ಯಕೀಯ ಶುಲ್ಕ ಕಡಿಮೆ ಕೊಟ್ಟು ಓದಲು ಸರ್ಕಾರಿ ವೈದ್ಯಕೀಯ ಕಾಲೇಜು ನಮ್ಮ ಜಿಲ್ಲೆಗೆ ಅವಶ್ಯಕತೆ ಇದೆ. ಇದನ್ನು ಸರ್ಕಾರ ಜವಾಬ್ದಾರಿಯಿಂದ ಅದನ್ನು ನಿರ್ಮಾಣ ಮಾಡಿಕೊಡಬೇಕೆಂದು ಕರೆ ನೀಡಿದರು. ಹೋರಾಟ ಸಮಿತಿಯ ಸದಸ್ಯರುಗಳಾದ ಅರವಿಂದ ಕುಲಕರ್ಣಿ, ಭಿ ಭಗವಾನ್ ರೆಡ್ಡಿ, ಲಲಿತಾ ಬಿಜ್ಜರಗಿ, ವಿದ್ಯಾವತಿ ಅಂಕಲಗಿ, ಅಕ್ರಮ ಮಾಶ್ಯಾಳಕರ,ಮಲ್ಲಿಕಾರ್ಜುನ ಹೆಚ್ ಟಿ,ಸುರೇಶ ಬಿಜಾಪುರ, ಜಗದೇವ ಸೂರ್ಯವಂಶಿ,ಲಕ್ಷ್ಮಣ ಕಂಬಾಗಿ,ಗೀರೀಶ ಕಲಘಟಗಿ, ಭರತ್ ಕುಮಾರ ಹೆಚ್ ಟಿ, ಶ್ರೀನಾಥ್ ಪೂಜಾರಿ, ಸುರೇಶ್ ಜೀಬಿ,ದಸ್ತಗಿರಿ ಉಕ್ಕಲಿ, ಸಿದ್ರಾಮ ಹಳ್ಳೂರ, ಮಲ್ಲಿಕಾರ್ಜುನ ಬಟಗಿ, ಡಾ ಎಮ್ ಎಸ್ ಗುರಿಕಾರ, ನೀಲಾಂಬಿಕಾ ಬಿರಾದಾರ, ಗೀತಾ ಪಾಟೀಲ, ಗೀತಾ ಕಟ್ಟಿ, , ಶಿವಬಾಳಮ್ಮ ಕೊಂಡಗೂಳಿ, ಗೀತಾ ಹೆಚ್, ಮೀನಾಕ್ಷ ಸಿಂಗೆ, ಕಾಮಿನಿ, ಮುಂತಾದವರು ಭಗವಹಿಸಿದ್ದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 