ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ

ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ Increased demand for the formation of Sankeshwar Taluk: Welfare Organization visits the District Co

ಬೆಳಗಾವಿ 28  : ತಾಲೂಕಾ ಕೇಂದ್ರ ಸ್ಥಾನದಿಂದ ಮರಚಿಕೆಯಾಗಿರುವ ಹಾಗೂ ಜಿಲ್ಲೆಯಲ್ಲಿ ಅತಿ ವೇಗವಾಗಿ ಬೆಳೆಯುತ್ತಿರುವ ಸಂಕೇಶ್ವರ ಪಟ್ಟಣವನ್ನು ತಾಲೂಕವನ್ನಾಗಿ ಮಾಡುವಂತೆ ಕೂಗು ಹೆಚ್ಚಾಗುತ್ತಿದ್ದು, ನೂತನ ಸಂಕೇಶ್ವರ ತಾಲೂಕ ರಚನೆ ಮತ್ತು ಭವಿಷ್ಯದಲ್ಲಿ, ಬೆಳಗಾವಿ ಜಿಲ್ಲೆಯನ್ನು ವಿಭಜಿಸಿದರೆ ಹುಕ್ಕೇರಿ, ಸಂಕೇಶ್ವರ ಪಟ್ಟಣ ಸೇರಿದಂತೆ ತಾಲೂಕಿನ ಗ್ರಾಮೀಣ ಭಾಗಗಳು ಬೆಳಗಾವಿ ಜಿಲ್ಲೆಯಲ್ಲಿ ಉಳಿಸಿಕೊಳ್ಳುವಂತೆ ಬೆಳಗಾವಿ ಜಿಲ್ಲಾಧಿಕಾರಿಗಳ ಮೂಲಕ ಸರಕಾರಕ್ಕೆ ಮನವಿ ಮಾಡಲಾಯಿತು. ಈ ಬಗ್ಗೆ ಇತ್ತಿಚೆಗೆ ದಿ. ಸಂಕೇಶ್ವರ ವೆಲ್ ಫರ್ ಅಸೊಶಿಯೇಶನ್ ಪದಾಧಿಕಾರಿಗಳು ಬೆಳಗಾವಿ ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಅವರನ್ನು ಭೇಟಿ ಮಾಡಿ ಈ ಕುರಿತು ಮನವಿಯೊಂದನ್ನು ಸಲ್ಲಿಸಿದ್ದಾರೆ.

ಜಿಲ್ಲೆಯ ಬೆಳಗಾವಿ ಉಪ ವಿಭಾಗದ ಹುಕ್ಕೇರಿ ತಾಲೂಕಿನಲ್ಲಿರುವ ಸಂಕೇಶ್ವರ ಪಟ್ಟಣವು ತಾಲೂಕು ಕೇಂದ್ರವಾದ ಹುಕ್ಕೆರಿಗಿಂತಲೂ ದೊಡ್ಡದು ಮತ್ತು ಪ್ರಮುಖ ವಾಣಿಜ್ಯ ಕೇಂದ್ರವಾಗಿದೆ. ಇಲ್ಲಿಯ ಉಪ ತಹಶೀಲ್ದಾರ ಕ್ಷೇತ್ರದಲ್ಲಿ ಬರುವ ಕಣಗಲಾ ಹಾಗೂ ಹೆಬ್ಬಾಳ ಜಿಲ್ಲಾ ಪಂಚಾಯತ ಕ್ಷೇತ್ರದಲ್ಲಿರುವ ಹಳ್ಳಿಗಳಿಗೆ ಹಾಗೂ ಹುಕ್ಕೇರಿ ತಾಲೂಕಿನ ಪಶ್ಚಿಮ ಭಾಗದ ಮಹಾರಾಷ್ಟ್ರ ಗಡಿಯಲ್ಲಿರುವ ದಡ್ಡಿ, ಹಾಗೂ ಹತ್ತರಗಿ ಜಿಲ್ಲಾ ಪಂಚಾಯತ ಕ್ಷೇತ್ರಗಳ ಹಳ್ಳಿಗಳಿಗೆ ಹುಕ್ಕೇರಿ ತಾಲೂಕ ಕೇಂದ್ರವು ತುಂಬಾ ದೂರವಾಗಿದೆ. ಒಂದು ವೇಳೆ ಸಂಕೇಶ್ವರ ತಾಲ್ಲೂಕು ಕೇಂದ್ರವಾದರೆ ಅಲ್ಲಿನ ಜನರಿಗೆ ಹೋಗಿ ಬರಲು ತುಂಬಾ ಅನಾನುಕೂಲ ಆಗುತ್ತದೆ,

ಈ ಎಲ್ಲ ಹಳ್ಳಿಗಳಿಗೆ ಸಂಕೇಶ್ವರ ಪಟ್ಟಣವು ಸೂಕ್ತ ಹಾಗೂ ಸಂಚಾರ ಅನುಕೂಲವಾಗಿರುತ್ತದೆ.ಅದರಂತೆಯೇ ಹಲವಾರು ತಾಲೂಕಾ ಮಟ್ಟದ ಸರ್ಕಾರಿ ಕಚೇರಿಗಳು ಸಂಕೇಶ್ವರ ನಗರದಲ್ಲಿ ಲಭ್ಯವಿರುತ್ತವೆ. ಹಾಗಾಗಿ  ಈ ಭಾಗದ ಜನರ ಬೇಡಿಕೆಗಳನ್ನು ಪೂರೈಸಲು ಸಂಕೇಶ್ವರ ನಗರವನ್ನು ತಾಲೂಕ ಕೇಂದ್ರವನ್ನಾಗಿ ಪರಿಗಣಿಸಬೇಕು ಹಾಗೂ ಗಡಿ ಭಾಗದ ಜನರ ಕುಂದು ಕೊರತೆಗಳನ್ನು ಪರಿಹರಿಸಿ ಅವರ ಅವಶ್ಯಕತೆಗಳನ್ನು ಈಡೇರಿಸಬೇಕು, ಹಾಗೆಯೇ ಭವಿಷ್ಯದಲ್ಲಿಯ ಬೆಳಗಾವಿ ಜಿಲ್ಲೆಯ ವಿಭಜನೆಗೆ ನಮ್ಮದು ಯಾವುದೇ ತಕರಾರು ಇರುವುದಿಲ್ಲ, ಹುಕ್ಕೇರಿ ತಾಲೂಕಿನ ಭೌಗೋಳಿಕ ಹಾಗೂ ಸಾಮಾಜಿಕ ಸಮರಸ್ಯವು ಬೆಳಗಾವಿ ನಗರಕ್ಕೆ ಅನುಕೂಲ ಇದೆ,

ಹಾಗಾಗಿ ಈ ತಾಲೂಕನ್ನು ಬೆಳಗಾವಿ ಜಿಲ್ಲೆಯಲ್ಲಿ ಇರಿಸುವುದು ಯೋಗ್ಯವಾಗಿದೆ. ಏಕೆಂದರೆ, ಬೆಳಗಾವಿ ಜಿಲ್ಲೆಯ ವಿಭಜನೆಯಾದ ನಂತರ ಹುಕ್ಕೇರಿ ತಾಲೂಕನ್ನು ಬೆಳಗಾವಿ ಜಿಲ್ಲೆಯಲ್ಲಿಯೇ ಯಥಾ ಸ್ಥಿತಿಯರಿರಬೇಕು ಎಂದು ಸಂಕೇಶ್ವರ ಪುರಸಭೆಯಲ್ಲಿ ಕಳೆದ 5 ವರ್ಷಗಳ ಹಿಂದೆ ಸರ್ವಾನುಮತದಿಂದ ಠರಾವು ಪಾಸು ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ ಗಳ ಮೂಲಕ ಸರಕಾರಕ್ಕೆ ಸಲ್ಲಿಸಲಾದ ಮನವಿಯಲ್ಲಿ ಉಲ್ಲೇಖಿಸಲಾಗಿದೆ. ಮನವಿ ನೀಡುವ ವೇಳೆ  ರಾಮಾಚಾರ್ ದೇಶಪಾಂಡೆ, ಶ್ರೀ ಕಮತಗಿ, ಸುಭಾಷ್ ಜಾಧವ್, ಸಿದ್ಧಾರ್ಥ್‌ ಮಿರಾಜಿ, ಮನೀಶಾ ಜಾಧವ್, ಮಾಲೋನ್ ಸತಾಶೇಜ್, ಸಂಪದಾ ಕೇಲುಸ್ಕರ್, ಆಂಟನ್ ರಾಡ್ರಿಕ್ಸ್‌, ಶ್ರೇಯಸ್ ಶಾ ಇವರು ಉಪಸ್ಥಿತರಿದ್ದರು.