‘ಅಧ್ಯಯನದಲ್ಲಿ ಏಕಾಗ್ರತೆ ಸಾಧಿಸುವುದು ಹೇಗೆ’ ಕಾರ್ಯಕ್ರಮದ ಉದ್ಘಾಟನೆ
Inauguration of the program 'How to Concentrate in Studies'
ಧಾರವಾಡ 28: ವಿದ್ಯಾರ್ಥಿಗಳು ಅಧ್ಯಯನದ ಸಂದರ್ಭದಲ್ಲಿ ಉತ್ಸಾಹದ ಬುಗ್ಗೆ ಆಗಿರಬೇಕು. ಈ ಉತ್ಸಾಹ ವಿದ್ಯಾರ್ಥಿಯನ್ನು ಜಯಶಾಲಿಯನ್ನಾಗಿ ಮಾಡುತ್ತದೆ ಎಂದು ಉಪ್ಪಿನ ಬೆಟಗೇರಿಯ ಎಸ್.ಜಿ.ವಿ. ಸಂಯುಕ್ತ ಪದವಿ ಪೂರ್ವಕಾಲೇಜಿನ ಪ್ರಾಚಾರ್ಯ ಕು.ಕವಿತಾ ದೇಸಾಯಿ ಅಭಿಪ್ರಾಯ ಪಟ್ಟರು.
ಅವರು ಧಾರವಾಡ ಕರ್ನಾಟಕ ವಿದ್ಯಾವರ್ಧಕ ಸಂಘದ ಶಿಕ್ಷಣ ಮಂಟಪವು, ಕರಡಿಗುಡ್ಡದ ಸರ್ಕಾರಿ ಪದವಿ ಪೂರ್ವಕಾಲೇಜಿನಲ್ಲಿ ಪಿಯುಸಿ ವಿದ್ಯಾರ್ಥಿಗಳಿಗಾಗಿ ಆಯೋಜಿಸಿದ್ದ ‘ಅಧ್ಯಯನದಲ್ಲಿ ಏಕಾಗ್ರತೆ ಸಾಧಿಸುವುದು ಹೇಗೆ’ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಪಿಯುಸಿ ವಿದ್ಯಾರ್ಥಿಗಳ ಜೀವನದ ಮಹತ್ವದತಿರುವು.ಇಂದಿನ ಸ್ಪರ್ಧಾತ್ಮಕ ಯುಗಕ್ಕೆ ತಕ್ಕಂತೆ ವಿದ್ಯಾರ್ಥಿಗಳು ಜ್ಞಾನ ಸಂಪಾದನೆ ಮಾಡಬೇಕು. ಓದುವಾಗ ಏಕಾಗ್ರತೆಯಿಂದ ಓದಬೇಕು.ಸತತ ಪ್ರಯತ್ನದಿಂದ ಜೀವನದಲ್ಲಿ ಎಂತಹ ಮಹತ್ಸಾಧನೆ ಯನ್ನಾದರೂ ಮಾಡಬಹುದು. ಸಮಯ ಹಾಳಾಗದಂತೆ ಸದ್ಬಳಕೆ ಮಾಡಿಕೊಂಡು ಓದಬೇಕು. ನಿರಂತರವಾಗಿ ಓದದೆ ಆರೋಗ್ಯದ ಬಗ್ಗೆ ಕಾಳಜಿಯನ್ನೂ ವಹಿಸಬೇಕು. ಪುನರಾವರ್ತನೆ ಮಾಡುವುದರಿಂದ ವಿಷಯದ ಗ್ರಹಿಕೆ ಚೆನ್ನಾಗಿ ಆಗುವುದೆಂದು ಹೇಳಿದರು.
ಕ.ವಿ.ವ. ಸಂಘದ ಕಾರ್ಯಕಾರಿ ಸಮಿತಿ ಸದಸ್ಯ ವೀರಣ್ಣ ಒಡ್ಡೀನ ‘ಏಕಾಗ್ರತೆ ಅಧ್ಯಯನ’ ಕುರಿತು ಉಪನ್ಯಾಸ ನೀಡಿ, ವಿದ್ಯಾರ್ಥಿಗಳು ಅಧ್ಯಯನದ ಸಂದರ್ಭದಲ್ಲಿ ಶ್ರದ್ಧೆಯಿಂದ ಓದಬೇಕು, ಅದನ್ನೇ ಆತ್ಮವಿಶ್ವಾಸ ಎಂದು ಕರೆಯುತ್ತಾರೆ. ವಿನಾಕಾರಣ ಪರೀಕ್ಷೆಯ ಬಗ್ಗೆ ಭಯ ಪಡಬಾರದು. ಭಯ ನಿಮ್ಮ ಶಕ್ತಿ ಸಾಮರ್ಥ ಕುಗ್ಗಿಸುತ್ತದೆ. ಓದುವಾಗ ಮನಸ್ಸು ಶುಭ್ರವಾಗಿರಬೇಕು. ಯಾವುದೇ ಅಶ್ಲೀಲತೆಗಳು ಮನ ಪ್ರವೇಶಿಸದಂತೆ ಓದಬೇಕು. ಓದುವುದು ಹಾಗೂ ಬರೆಯುವುದರಿಂದ ಸ್ಮರಣ ಶಕ್ತಿ ಹೆಚ್ಚಾಗುತ್ತದೆ. ಪಠ್ಯಪುಸ್ತಕ ಹೊರತುಪಡಿಸಿ ಗೈಡ್ ಡೈಜೆಸ್ಟ್‌ಗಳ ಮೇಲೆ ಅವಲಂಬನೆಯಾಗಬಾರದು.ವಿದ್ಯಾರ್ಥಿಗಳು ಪರೀಕ್ಷಾ ಸಮಯದಲ್ಲಿಕರಿದ ಪದಾರ್ಥ, ಮಸಾಲೆ ತಿನ್ನುವುದನ್ನು ನಿಬಂರ್ಧಿಸಬೇಕು. ಹಾರ್ಡ್ ವರ್ಕ್ ಬದಲು ಸ್ಮಾರ್ಟವರ್ಕ್ ಮಾಡಬೇಕೆಂದರು.
ಅಧ್ಯಕ್ಷತೆ ವಹಿಸಿದ್ದ ಕರಡಿಗುಡ್ಡದ ಸರಕಾರಿ ಪದವಿ ಪೂರ್ವಕಾಲೇಜಿನ ಪ್ರಾಚಾರ್ಯ ಬಿ.ಆರ್. ಹಳ್ಳೂರ್ ಮಾತನಾಡಿ, ವಿದ್ಯಾರ್ಥಿಗಳಿಗೆ ಜ್ಞಾನವೇ ಸಂಪತ್ತು. ಅದೊಂದು ನಿಮಗೆ ದೊಡ್ಡ ಶಕ್ತಿ. ಸಮಯ ಪ್ರಜ್ಞೆಯೊಂದಿಗೆ ಅಧ್ಯಯನ ಮಾಡಬೇಕು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಪತ್ರಕರ್ತರಾದ ಸಿ.ವೈ.ಲಗಮಣ್ಣವರ ಮಾತನಾಡಿದರು. ರಮೇಶ ಓರನಕರ್, ಸೀತಾ ಸಾತಿಹಾಳ, ಸವಿತಾಕರೀಕಟ್ಟಿ, ರತ್ನಾಐರಸಂಗ ಸೇರಿದಂತೆ ಮುಂತಾದವರು ವೇದಿಕೆಯಲ್ಲಿದ್ದರು. ಪ್ರೊ. ಬಿ. ಹೆಚ್. ಕೋಟಿಗೌಡ್ರ ಸ್ವಾಗತಿಸಿದರು. ಪ್ರಕಾಶ ಸುಣಗಾರ ನಿರೂಪಿಸಿದರು. ಎಂ.ಜಿ ಸುಬೇದಾರ ವಂದಿಸಿದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 