ಫೆ.01 ರಂದು ಗದಗ ಜಿಲ್ಲಾ ಚೆನ್ನದಾಸರ ಸಮಾಜ ನೂತನ ಸಂಘದ ಉದ್ಘಾಟನೆ

ಫೆ.01 ರಂದು ಗದಗ ಜಿಲ್ಲಾ ಚೆನ್ನದಾಸರ ಸಮಾಜ ನೂತನ ಸಂಘದ ಉದ್ಘಾಟನೆ Inauguration of the new association of Gadag District Chennadasara Samaj on Feb. 01

                   ಗದಗ 29: ಗದಗ ಜಿಲ್ಲಾ ಚೆನ್ನದಾಸರ ಸಮಾಜ  ನೂತನ ಸಂಘದ ಉದ್ಘಾಟನೆ ಸಮಾರಂಭ ಹಾಗೂ ಪಧಾದಿಕಾರಿಗಳ ಪದಗ್ರಹಣ ರಾಜ್ಯ ಮಟ್ಟದ ವದು-ವರರ ಸಮಾವೇಶ ಮತ್ತು ಗದಗ ಜಿಲ್ಲಾ ಚೆನ್ನದಾಸರ ಭವನ ನಿರ್ಮಿಸಲು ನಿವೇಶನ ಖರೀದಿಸಲು ದೇಣಿಗೆ ನೀಡಿದ ದಾನಿಗಳಿಗೆ ಸನ್ಮಾನ ಕಾರ್ಯಕ್ರಮವು ಫೆ.01ರ ಭಾನುವಾರ ಬೆಳಿಗ್ಗೆ 11 ಗಂಟೆಗೆ ನಗರದ ಡಾ.ಬಿ ಆರ್ ಅಂಬೇಡ್ಕರ್ ಭವನದಲ್ಲಿ ಏರಿ​‍್ಡಸಲಾಗಿದೆ ಎಂದು ಚೆನ್ನದಾಸರ ಸಮಾಜದ ಜಿಲ್ಲಾಧ್ಯಕ್ಷ ಮಂಜುನಾಥ ಹೆಬ್ಬಳ್ಳಿ ತಿಳಿಸಿದರು. ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು ನಮ್ಮ ಸಮಾಜದ ಭಾಂದವರು ಶುಭ- ಕಾರ್ಯ, ಸಭೆ ಸಮಾರಂಭಗಳಿಗೆ ನಗರದಲ್ಲಿ ಸಭಾಭವನದ ಅವಶ್ಯಕತೆ ಇದೆ ಜಿಲ್ಲೆಯ ಎಲ್ಲ ಚೆನ್ನದಾಸರ ಸಮಾಜದ ಹಿರಿಯರು ದೃಡಸಂಕಲ್ಪದಿಂದ ಹಾಗೂ ಬಹುದಿನದ ಅಪೇಕ್ಷೆಯಂತೆ ಗದಗನಲ್ಲಿ  ಜಿಲ್ಲಾ ಚೆನ್ನದಾಸರ ಭವನ ನಿರ್ಮಿಸಲು ತಿರ್ಮಾನಿಸಲಾಗಿದ್ದು,

                   ಗದಗ-ಬೆಟಗೇರಿ ವ್ಯಾಪ್ತಿಯಲ್ಲಿ ಬರುವ ನರಸಾಪೂರ ಗ್ರಾಮದ ಮಾರುತಿ ನಗರ ಸರ್ವೇ ನಂಬರ 151/12 ರಲ್ಲಿ ನಾಗರೀಕ ಸೌಲಭ್ಯ ಹೊಂದಿದ 4428 ಚದರ ಅಡಿ ಜಾಗೆ ಖರೀದಿಸಲು ತಿರ್ಮಾನಿಸಿದ್ದು, ಸಮಾಜದ ಮತ್ತು ಇತರೆ ಸಮಾಜದ ಮುಖಂಡರು, ಗಣ್ಯ ಮಾನ್ಯರು, ಉದ್ದಿಮೇದಾರರನ್ನು ವಿನಂತಿಸಿ, ತನು-ಮನ-ಧನ ದಿಂದ ಸಹಾಯ ಸಹಕಾರ ನೀಡಿ, ಗದಗ ಜಿಲ್ಲಾ ಚೆನ್ನದಾಸರ ಭವನದಲ್ಲಿ ತಮ್ಮ ಹೆಸರು ಮತ್ತು ಭಾವಚಿತ್ರದ ಸವಿನೆನಪು ಶಾಶ್ವತವಾಗಿ ಇರಬೇಕೆಂಬುದು ನಮ್ಮೆಲ್ಲರ ಆಶಯ. ಸಮುದಾಯ ಭವನಕ್ಕೆ  25001 ರೂಪಾಯಿ ದೇಣಿಗೆ ನೀಡಿದ ದಾನಿಗಳ ಅವರ ಕುಟುಂಬ ಸಮೇತದ ಫೋಟೊ ಭವನದಲ್ಲಿ ಹಾಕಲಾಗುವುದು.

                   20001 ರೂಪಾಯಿ ದೇಣಿಗೆ ನೀಡಿದ ದಾನಿಗಳ ಅವರ ತಂದೆ-ತಾಯಿ ಸವಿನೆನಪಿಗಾಗಿ ಮತ್ತು ದಿವಂಗತರ ಸ್ಮರಣಾರ್ಥವಾಗಿ ಪೋಟೊ ಭವನದಲ್ಲಿ ಹಾಕಲಾಗುವುದು 5001 ರಿಂದ 15001 ರೂಪಾಯಿ ವರೆಗೆ ದೇಣಿಗೆ ನೀಡಿದ ದಾನಿಗಳ ಅವರ ಹೆಸರನ್ನು ಕಲ್ಲಿನಲ್ಲಿ ಬರೆಸಲಾಗುವುದು. ಇದೇ ವೇಳೆ ರಾಜ್ಯಮಟ್ಟದ ವಧು-ವರರ ಸಮಾವೇಶ ಹಮ್ಮಿಕೊಂಡಿದ್ದು, ಸಮಾಜದ ಅವಿವಾಹಿತ ಯುವಕ- ಯುವತಿಯರು ತಮ್ಮ ಹೆಸರನ್ನು ನೋಂದಾಯಿಸಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಇದರ ಸದುಪಯೋಗವನ್ನು ಪಡೆದುಕೊಂಡು ಕಾರ್ಯಕ್ರಮ ಯಶಸ್ವಿಗೊಳಿಸಬೇಕೆಂದು ವಿನಂತಿಸಿದರು. 

                   ವಧು-ವರರ ಸಮಾವೇಶದಲ್ಲಿ ಭಾಗವಹಿಸುವ ವಧು-ವರರು ಕಡ್ಡಾಯವಾಗಿ  ದಾಖಲಾತಿಗಳೊಂದಿಗೆ ಬರಬೇಕು (1) 1001 ರೂಪಾಯಿ ನೋಂದಣಿ  ಶುಲ್ಕ, 2) ವ್ಯಯಕ್ತಿಕ ವಿವರದ (ಬಯೋಡಟ) ಮತ್ತು ಆಧಾರ್ ಕಾರ್ಡ ಹಾಗೂ ಶಾಲಾ ದಾಖಲಾತಿ ಪತ್ರ. 3) ಇತ್ತೀಚಿನ ಭಾವಚಿತ್ರದ ಪಾಸ್‌- ಪೋಟ್ ಸೈಜ ಪೋಟೊ ತರಬೇಕು ಹೆಚ್ಚಿನ ಮಾಹಿತಿಗಾಗಿ ಹಾಗೂ ತಮ್ಮ ಹೆಸರನ್ನು ನೊಂದಾಯಿಸಿಕೊಳ್ಳಲು 7019663585 : ಶಶಿಕಾಂತ ಟಿ.ದಾಸರಿ 9449440063 :  ತುಕಾರಾಮ್ ಎಮ್‌.ದಂಡಗಿ, 8105863933 :  ಮೋಹನ್ ರತ್ನಾಕರ 8088608718: ಮಾರುತಿ ಎಚ್‌. ದಂಡಗಿದಾಸರ, 9741965852 :  ರವಿಂದ್ರ ಕಟ್ಟಿಮನಿ, 6364149492 : ಹನಮಂತಪ್ಪ ದಂಡಗಿದಾಸರ ರವರನ್ನ ಸಂಪರ್ಕಿಸುವಂತೆ ತಿಳಿಸಿದರು. ಪತ್ರಿಕಾ ಗೋಷ್ಠಿಯಲ್ಲಿ ಶಶಿಕಾಂತ ದಾಸರಿ, ಕೃಷ್ಣಾ ದಾಸರ, ಯಮನೂರ​‍್ಪ ದಂಡಗಿದಾಸರ, ಪ್ರಹ್ಲಾದ ದಾಸರ, ಪ್ರೇಮಾನಂದ ಕೊತಬಾಳ, ಮಹೇಶ ದಾಸರ, ಹನಮಂತಪ್ಪ ದಂಡಗಿದಾಸರ, ತುಕಾರಾಮ ದಂಡಗಿ, ಮಾರುತಿ ದಂಡಗಿದಾಸರ, ಭೀಮಣ್ಣ ಬೇವೂರ ಸೇರಿದಂತೆ ಇತರರಿದ್ದರು.