ಬೆಳಗಾವಿ, 9: ಇಂದಿನ ಬದಲಾಗುತ್ತಿರುವ ದಿನಮಾನಗಳಲ್ಲಿ ವಿದ್ಯಾಥರ್ಿಗಳಿಗೆ ಸೂಕ್ತ ಅವಕಾಶ ಸಿಕ್ಕರೆ ಇಡೀ ಜಗತ್ತಿನಲ್ಲಿ ದೊಡ್ಡ ಸಾಧನೆ ಮಾಡಬಹುದು ಎಂದು ಬೆಂಗಳೂರಿನ ಕ್ರಿಯೇಟಿವ ಆಕಾಡೆಮಿಯ ನಿರ್ದೇ ಶಕರಾದ ಡಾ.ಗುರುರಾಜ ಕರಜಗಿ ಅವರು ತಿಳಿಸಿದರು. ಇಲ್ಲಿನ ಗುಡಶೆಪರ್ಡ ಪದವಿ ಪೂರ್ವ ವಿಜ್ಞಾನ ಮಹಾವಿದ್ಯಾಲಯದ ಸಭಾ ಭವನದಲ್ಲಿ "ನಾಯ್ಕರ ಶಿಕ್ಷಣ ಸಂಸ್ಥೆಯ" ವತಿಯಿಂದ ರವಿವಾರ ದಿನಾಂಕ 09 ರಂದು ಹಮ್ಮಿಕೊಳ್ಳಲಾಗಿದ್ದ ಬೆಳಗಾವಿ ನಗರದ ಪಿಯುಸಿ ಪ್ರಥಮ ಮತ್ತು ದ್ವಿತೀಯ ವರ್ಷದ ವಿದ್ಯಾಥರ್ಿಗಳಿಗಾಗಿ "ಶೈಕ್ಷಣಿಕ ಯಶಸ್ಸಿನ ಗುರಿ" ಎಂಬ ಕಾಯರ್ಾಗಾರವನ್ನು ಉದ್ಘಾಟಿಸಿ ಮಾತನಾಡಿದರು.
ವಿದ್ಯಾಥರ್ಿಗಳು ಎರಡು ವರ್ಷ ಸತತ ಪ್ರಯತ್ನ ಮಾಡಿದರೆ ಅವರ ಮುಂದಿನ ಜೀವನ ಸಂತೋಷವಾಗಿರುತ್ತದೆ. ಈ ಎರಡು ವರ್ಷ ವಿದ್ಯಾರ್ಥಿ ಗಳು ಒಳ್ಳೆಯ ಯೋಜನೆಗಳನ್ನು ಹಾಕಿಕೊಂಡಿರಬೇಕು, ಅದಕ್ಕೆ ಶಿಕ್ಷಕರು ಮಾರ್ಗದರ್ಶಕರಾಗಿ ಸಲಹೆಯನ್ನು ನೀಡುತ್ತಾರೆ. ಆಗ ಅವರ ಜೀವನ ರೂಪಗೊಳ್ಳುತ್ತದೆ. ಹಣವು ಕೇವಲ ಸೌಲಭ್ಯವನ್ನು ಮಾತ್ರ ಒದಗಿಸುತ್ತದೆ ಆದರೆ ಯಶಸ್ಸನ್ನು ತಂದು ಕೊಡುವುದಿಲ್ಲ. ಯಶಸ್ಸು ಅವಕಾಶ ಅಲ್ಲ ಅದು ಒಂದು ಪ್ರಯತ್ನದ ಸಂಘಟನೆ. ವಿದ್ಯಾರ್ಥಿ ಗಳಲ್ಲಿ ಉತ್ತಮ ಸಂಸ್ಕಾರ ಹಾಗೂ ಉಜ್ವಲ ಭವಿಷ್ಯ ದೊರೆಯಲು ಉನ್ನತ ವಿಚಾರಧಾರೆಗಳನ್ನು ಮೈಗೂಡಿಸಿಕೋಳ್ಳಬೇಕೆಂದು ವಿದ್ಯಾಥರ್ಿಗಳಿಗೆ ಸಲಹೆ ನೀಡಿದರು.
ಕಾರ್ಯಕ್ರಮದ ಅದ್ಯಕ್ಷತೆ ವಹಿಸಿ ಮಾತನಾಡಿದ ರವೀಂದ್ರನಾಥ ಟ್ಯಾಗೋರ ಪದವಿ ಪೂರ್ವ ಮಹಾವಿದ್ಯಾಲಯ ಪ್ರಾಂಶುಪಾಲರಾದ ಡಾ. ಸಿ.ಎನ್. ನಾಯ್ಕರ ಮಾತನಾಡುತ್ತಾ ಇಂದಿನ ವಿದ್ಯಾಥರ್ಿಗಳು ತಂದೆ ತಾಯಿ ಹಾಗೂ ಶಿಕ್ಷಕರ ಮಾರ್ಗದರ್ಶದಲ್ಲಿ ನಡೆದರೆ ಉಜ್ವಲ ಭವಿಷ್ಯವನ್ನು ಕಾಣಬಹುದು. ಮಹಾವಿದ್ಯಾಲಯದಲ್ಲಿ ಅಭ್ಯಾಸದ ಜೊತೆಗೆ ಮಕ್ಕಳ ಅಭಿರುಚಿಗೆತಕ್ಕಂತೆ ಕ್ರೀಡೆ, ಸಾಂಸ್ಕ್ರತಿಕ ಸ್ಪದರ್ೆಗಳಿಗೆ ಹೆಚ್ಚಿನ ಮಹತ್ವವನ್ನು ನೀಡಲಾಗಿದೆ. ಶಿಕ್ಷಕ, ಪಾಲಕ,ವಿದ್ಯಾಥರ್ಿಗಳು ಮೂವರು ಸೇರಿ ಅಹನರ್ಸಿ ಶ್ರಮಿಸಿದಾಗ ಮಾತ್ರ ಅತ್ಯುತ್ತಮ ಫಲಿತಾಂಶ ಹೊರಬರುತ್ತದೆ. ಆ ನಿಟ್ಟಿನಲ್ಲಿ ನಮ್ಮ ಮಹಾವಿದ್ಯಾಲಯಗಳಲ್ಲಿ ಸಿಗುವ ಉನ್ನತ ಗುಣಮಟ್ಟದ ಶಿಕ್ಷಣ ಪಡೆದು ತಮ್ಮ ಭವಿಷ್ಯವನ್ನು ರೂಪಿಸಿಕೊಳ್ಳಲು ಕರೆ ನೀಡಿದರು.
ವೇದಿಕೆಯ ಮೇಲೆ ನಾಯ್ಕರ ಶಿಕ್ಷಣ ಸಂಸ್ಥೆಯ ಅದ್ಯಕ್ಷರಾದ ಶ್ವೇತಾ ಸಿ.ನಾಯ್ಕರ ಹಾಗೂ ಗುಡಶೆಪರ್ಡ ಪದವಿ ಪೂರ್ವ ವಿಜ್ಞಾನ ಮಹಾವಿದ್ಯಾಲಯದ ಪ್ರಾಂಶುಪಾಲ ಎಮ್.ಐ. ಮುಲ್ತಾನಿ ಉಪಸ್ಥಿತರಿದ್ದರು.
ಪ್ರಾರಂಭದಲ್ಲಿ ಎಮ್.ಐ. ಮುಲ್ತಾನಿ ಸ್ವಾಗತಿಸಿದರು, ಸುಧಾ ಅಂಗಡಿ ಅತಿಥಿಗಳನ್ನು ಪರಿಚಯಿಸಿದರು, ದೀಪಾ ಕಾರ್ಯಕ್ರಮ ನಿರೂಪಿಸಿದರು.