ರೋಟರಿಯಿಂದ ಕಾರವಾರ ಬಸ್ಸ್ ನಿಲ್ದಾಣದಲ್ಲಿ ಶುದ್ಧ ಕುಡಿಯುವ ನೀರಿನ ಘಟಕದ ಉದ್ಘಾಟನೆ

ಲೋಕದರ್ಶನ ವರದಿ

ಕಾರವಾರ : ಬಸ್ಸ್ ನಿಲ್ದಾಣದಲ್ಲಿ ಶುದ್ಧ ಕುಡಿಯುವ ನೀರಿನ ಘಟಕವನ್ನು ಉ.ಕ. ವಿಭಾಗ ಮಾಯುವ್ಯ ಕನರ್ಾಟಕ ರಸ್ತೆ ಸಾರಿಗೆ ನಿಗಮದ ಮುಖ್ಯಸ್ಥ   ಸಿದ್ದೇಶ್ವರ್ ಹೆಬ್ಬಳರವರ ಹಾಗೂ ರೋಟರಿ ಸಂಸ್ಥೆಯ ಉಪ ಪ್ರಾಂತಪಾಲ ರೋ.ವಿನಾಯಕ ಶಾನಬಾಗ ಬಾಳೇರಿ ಜಂಟಿಯಾಗಿ ಉದ್ಘಾಟಿಸಿದರು.   

ನಗರದ ಕೇಂದ್ರ ಬಸ್ಸ ನಿಲ್ದಾಣದಲ್ಲಿ ಶುದ್ಧ ಕುಡಿಯುವ ನೀರಿನ ಘಟಕವನ್ನು ಸ್ಥಾಪಿಸಿದರಿಂದ ದಿನನಿತ್ಯವು ಬಸ್ಸುಗಳಲ್ಲಿ ಸಂಚರಿಸುವ ಸಾವಿರಾರು ಜನರಿಗೆ, ವಿದ್ಯಾಥರ್ಿಗಳಿಗೆ, ಗ್ರಾಮೀಣ ಜನರಿಗೆ ಶುದ್ಧ ಕುಡಿಯುವ ನೀರು ದೊರೆಯಲಿದೆ ಎಂದು ವಿನಾಯಕ ಅವರು ಹೇಳಿದರು.  ಇದರ ಲಾಭವನ್ನು ಎಲ್ಲಾ ಸಾರ್ವಜನಿಕರು ಪಡೆಯಬೇಕು. ಶುದ್ಧ ನೀರಿನ ಘಟಕವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಬೇಕೆಂದರು.  

ಕಾರವಾರ ಡಿಪೊಟ್ ಮ್ಯಾನೇಜರ್ ತುಷಾರ ಎಚ್. ಸಿ., ರಾಜೇಶ ವೇಣರ್ೆಕರ್,ರೋಟರಿ ಕ್ಲಬ್ ಅಧ್ಯಕ್ಷರಾದ ರೋ. ಅನ್ಮೋಲ್ ರೇವಣಕರ್, ಸಮುದಾಯ ನಿದರ್ೇಶಕ ರೋ. ರಾಘವೇಂದ್ರ ಪ್ರಭು, ಎಲ್. ಎಸ್. ಫನರ್ಾಂಡಿಸ್ , ಕಾರ್ಯದಶರ್ಿ ರೋ. ಮೊಹನ್ ಎಲ್ ನಾಯ್ಕ್ ಹಾಗೂ  ರೋಟರಿ ಹಾಗೂ ಇನರ್ವೀಲ್ ಸದಸ್ಯರು ಹಾಜರಿದ್ದರು.