ಹೈನೋದ್ಯಮ ಹಾಗೂ ಪಶುಸಂಗೋಪನೆಯಲ್ಲಿ ಉದ್ಯಮಶೀಲತೆ ತರಬೇತಿ ಕಾರ್ಯಕ್ರಮದ ಉದ್ಘಾಟನಾ ಸಮಾರಂಭ

ಹೈನೋದ್ಯಮ ಹಾಗೂ ಪಶುಸಂಗೋಪನೆಯಲ್ಲಿ ಉದ್ಯಮಶೀಲತೆ ತರಬೇತಿ ಕಾರ್ಯಕ್ರಮದ ಉದ್ಘಾಟನಾ ಸಮಾರಂಭ  Inaugural ceremony of Entrepreneurship Training Program in Animal Husbandry and Livestock

ಹೈನೋದ್ಯಮ ಹಾಗೂ ಪಶುಸಂಗೋಪನೆಯಲ್ಲಿ ಉದ್ಯಮಶೀಲತೆ ತರಬೇತಿ ಕಾರ್ಯಕ್ರಮದ ಉದ್ಘಾಟನಾ ಸಮಾರಂಭ  

ಗದಗ 05: ಐ.ಸಿ.ಎ.ಆರ್ ಹಿ ಕೆ.ಎಚ್‌.ಪಾಟೀಲ ಕೃಷಿ ವಿಜ್ಞಾನ ಕೇಂದ್ರ, ಹುಲಕೋಟಿ ಹಾಗೂ ಪಶು ಸಂಗೋಪನಾ ಶ್ರೇಷ್ಠತೆ ಕೇಂದ್ರ, ಬೆಂಗಳೂರು ಇವರ ಸಂಯುಕ್ತ ಆಶ್ರಯದಲ್ಲಿ ಹುಲಕೋಟಿಯ ಐ.ಸಿ.ಎ.ಆರ್ ಹಿ ಕೆ.ಎಚ್‌.ಪಾಟೀಲ ಕೃಷಿ ವಿಜ್ಞಾನ ಕೇಂದ್ರದಲ್ಲಿ ದಿನಾಂಕ 05-08-2025 ರಂದು ಮೂರು ದಿನಗಳ ಹೈನೋದ್ಯಮ ಹಾಗೂ ಪಶುಸಂಗೋಪನೆಯಲ್ಲಿ ಉದ್ಯಮಶೀಲತೆ ತರಬೇತಿ ಕಾರ್ಯಕ್ರಮದ ಉದ್ಘಾಟನಾ ಸಮಾರಂಭವನ್ನು ಹಮ್ಮಿಕೊಳ್ಳಲಾಯಿತು. ಗದಗ ಜಿಲ್ಲೆಯ ಪಶು ಪಾಲನೆ ಹಾಗೂ ಪಶು ವೈದ್ಯಕೀಯ ಸೇವಾ ಇಲಾಖೆಯ ಉಪ-ನಿದೇರ್ಶಕರಾದ ಡಾ. ಎಚ್‌.ಬಿ.ಹುಲಗಣ್ಣವರ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ರೈತರು ಕೃಷಿಯಲ್ಲಿ ವೈಜ್ಞಾನಿಕ ಪಶು ಸಂಗೋಪನೆ ಅಳವಡಿಸಿಕೊಂಡಾಗ ಹೆಚ್ಚಿನ ಆದಾಯ ಪಡೆಯಬಹುದು. ಈ ನಿಟ್ಟಿನಲ್ಲಿ ಪ್ರಸಕ್ತ ತರಬೇತಿ ಕಾರ್ಯಕ್ರಮ ರೈತರಿಗೆ ಅತ್ಯಂತ ಅನುಕೂಲಕರವಾಗಿದೆ ಎಂದು ಅವರು ಅಭಿಪ್ರಾಯ ಪಟ್ಟರು. ಪ್ರಸ್ತಾವಿಕವಾಗಿ ಮಾತನಾಡಿದ ಡಾ. ಎಸ್‌.ಬಾಲರಾಜ್, ಪಶು ಸಂಗೋಪನಾ ಅಧಿಕಾರಿ, ಪಶು ಸಂಗೋಪನಾ ಶ್ರೇಷ್ಠತೆ ಕೇಂದ್ರ, ಬೆಂಗಳೂರು ಇವರು ತಮ್ಮ ಕೇಂದ್ರದ ವತಿಯಿಂದ ಪಶು ಸಂಗೋಪನೆಯಲ್ಲಿ ಉದ್ಯೋಗಾವಕಾಶ ಕಲ್ಪಿಸಲು ಹಲವಾರು ತರಬೇತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದ್ದು, ಈ ತರಬೇತಿ ಕಾರ್ಯಕ್ರಮದ ಸದುಪಯೋಗ ಪಡೆದುಕೊಳ್ಳಬೇಕೆಂದು ರೈತರಿಗೆ ಕಿವಿ ಮಾತು ನೀಡಿದರು. ಹುಲಕೋಟಿ ಎಸ್‌.ಬಿ.ಐ.-ಎ.ಎಸ್‌.ಎಫ್‌-ಆರ್‌.ಸೆ.ಟಿಯ ನಿರ್ದೇಶಕರಾದ ಶ್ರೀ ಶಿವಕುಮಾರ ಎಸ್‌. ಇವರು ಮಾತನಾಡಿ ಪಶು ಸಂಗೋಪನೆ ಉದ್ಯಮವನ್ನು ಪ್ರಾರಂಭಿಸಲು ಬ್ಯಾಂಕುಗಳಿಂದ ಆರ್ಥಿಕ ನೆರವು ಹಾಗೂ ಸಾಲ ಸೌಲಭ್ಯಗಳಿದ್ದು ರೈತರು ಹಣಕಾಸಿನ ನೆರವು ಪಡೆದು ಹಂತ-ಹಂತವಾಗಿ ಪಶು ಸಂಗೋಪನೆ ಉದ್ಯಮವನ್ನು ಮುನ್ನಡೆಸಬೇಕು ಎಂದು ತಿಳಿಸಿದರು. ಅಧ್ಯಕ್ಷರ ಭಾಷಣ ಮಾಡಿದ ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥರಾದ ಡಾ. ಸುಧಾ ವ್ಹಿ. ಮಂಕಣಿ ಇವರು ಹೈನುಗಾರಿಕೆ ಹಾಗೂ ಪಶು ಸಂಗೋಪನೆ ಉಪಕಸಬುಗಳು ಹೆಚ್ಚು ಲಾಭದಾಯಕ ಉದ್ಯಮಗಳಾಗಿದ್ದು ಶಿಬಿರಾರ್ಥಿಗಳು ಈ ತರಬೇತಿಯಲ್ಲಿ ಸಕ್ರಿಯವಾಗಿ ಭಾಗವಹಿಸಿ ಹೈನು-ಉತ್ಪನ್ನಗಳ ಮೌಲ್ಯವರ್ಧನೆ ಕುರಿತು ಹೆಚ್ಚಿನ ಮಾಹಿತಿ ಪಡೆಯಬೇಕು ಎಂದು ಅಭಿಪ್ರಾಯಪಟ್ಟರು. ಡಾ. ಪ್ರವೀಣ ಎಸ್‌. ಕರಿಕಟ್ಟಿ ಇವರು ಸ್ವಾಗತಿಸಿದರು, ಡಾ.ವಿನಾಯಕ ನಿರಂಜನ ಇವರು ನಿರೂಪಿಸಿ ವಂದಿಸಿದರು. ತರಬೇತಿ ಕಾರ್ಯಕ್ರಮದಲ್ಲಿ 28 ರೈತರು, ರೈತ ಮಹಿಳೆಯರು ಹಾಗೂ ಯುವ-ರೈತರು ಭಾಗವಹಿಸಿದ್ದರು.