ಹಾವೇರಿ0೮: ಮಾನವ ಬದುಕಿನ ಸರ್ವ ಸಮಸ್ಯೆಗಳಿಗೆ ಪರಿಹಾರ ವಚನ ಸಾಹಿತ್ಯದಲ್ಲಿದ್ದು, ಇಂಥ ವಚನ ಸಾಹಿತ್ಯ ಜಗತ್ತಿನ ಶ್ರೇಷ್ಠ ಸಾಹಿತ್ಯವಾಗಿದ್ದು, ಇದಕ್ಕೆ ನಾಂದಿ ಹಾಡಿದ ವಿಶ್ವ ಗುರು ಬಸವಣ್ಣ ಜಗತ್ತಿನ ಮೊಟ್ಟ ಮೊದಲ ಮಹಾನ ಮಾನವತಾದಿ ಆಗಿದ್ದಾರೆ ಎಂದುನಗರದ ಹುಕ್ಕೇರಿಮಠದ ಶಿವಾನುಭದಲ್ಲಿ ಹಮ್ಮಿಕೊಂಡಿದ್ದ ಜಗಜ್ಯೋತಿ ಬಸವೇಶ್ವರರ 886 ನೇ ಜಯಂತಿ ಮಹೋತ್ಸವದಲ್ಲಿ ಮಾತನಾಡಿದ ಹುಕ್ಕೇರಿಮಠದ ಸದಾಶಿವ ಶ್ರೀ ಹೇಳಿದರು.
12 ನೇ ಶತಮಾನದ ಬಸವಣ್ಣ ಆದಿಯಾಗಿ ಎಲ್ಲ ಶಿವಶರಣರು ತಮ್ಮ ಕಾಯಕದ ಅನುಭವವನ್ನು ಅನುಭಾವದ ಮಟ್ಟಕ್ಕೇರಿಸಿ ವಚನ ಸಾಹಿತ್ಯ ರಚಿಸಿದರು. ಜಾತಿ ವರ್ಣಗಳ ಕಟ್ಟಳೆಗಳ ಮೂಲಕ ಹಾಕಿದ್ದ ನಿಗೂಡ ದಿಗ್ಭಂಧನವನ್ನು ವಚನಗಳ ಮೂಲಕ ಕಿತ್ತೆಸಿದು, ಇಡೀ ಮಾನವ ಕುಲ ಒಂದಾಗಿ ಸಕಲ ಜೀವಾತ್ಮರಿಗೂ ಲೇಸೆಸುವ ಹಾಗೆ ಬದುಕಿಗೆ ಮುನ್ನುಡಿ ಹಾಕಿದ ಕೀತರ್ಿ ಅವರಿಗೆ ಸಲ್ಲುತ್ತದೆ ಎಂದು ಹೇಳಿದರು.
ಸಮಾರಂಭದ ಮುಖ್ಯ ಅತಿಥಿಯಾಗಿದ್ದ ಶಿಗ್ಗಾವಿಯ ಪ್ರಾಚಾರ್ಯ ನಾಗರಾಜ ದ್ಯಾಮನಕೊಪ್ಪ ಮಾತನಾಡಿ, ಜಡ್ಡುಗಟ್ಟಿದ ಸಮಾಜಕ್ಕೆ ಕಾಯಕವೇ ಕೈಲಾಸ ಎಂಬ ಸಂದೇಶದ ಮೂಲಕ ಚಲನಶೀಲತೆಯನ್ನು ತಂದು ಕೊಟ್ಟು, ಆಧುನಿಕ ಸಂವಿಧಾನದ ಬೀಜಸ್ವರೂಪವಾದ ಅನುಭವ ಮಂಟಪವನ್ನು ಸ್ಥಾಪಿಸಿ, ಚಳುವಳಿಯ, ಮಾನವ ಹಕ್ಕುಗಳ, ಪ್ರಜಾಪ್ರಭುತ್ವದ ಪರಿಕಲ್ಪನೆಯನ್ನು ಜಗತ್ತಿಗೆ ತೋರಿಸಿದವರು ಸಮಾಜವಾದಿ ಬಸವಣ್ಣನವರು ಎಂದು ಹೇಳಿದರು.
ಆಧುನಿಕ ಯುಗದಲ್ಲಿ ಮಾನವೀಯ ಸಂಬಂಧಗಳ ಕೊಂಡಿ ಕಳುಚುತ್ತಿದ್ದು, ವರ್ಣಬೇಧ, ಲಿಂಗಬೇಧ, ವರ್ಗಬೇಧಗಳ ಸಂಕೋಲೆಯನ್ನು ತೆಗೆದು ಹಾಕಿ, ಸರ್ವ ಜನಾಂಗದ ಏಳ್ಗೆಯನ್ನು ಬಯಸಿ ವೈಚಾರಿಕತೆ ತಳಹದಿಯ ಮೇಲೆ ಮಾನವೀಯ ಮೌಲ್ಯಗಳ ಸಮಾಜ ನಿಮರ್ಾಣಕ್ಕೆ ಶ್ರಮಿಸಿದ ಬಸವಣ್ಣ ನಿಜವಾಗಿಯೂ ವಿಶ್ವಗುರುವಾಗಿದ್ದಾನೆ ಎಂದು ಹೇಳಿದರು.
ಸಮಾರಂಭವನ್ನು ಉದ್ಘಾಟಿಸಿದ ಜಿಲ್ಲಾ ಪಂಚಾಯತಿ ಉಪಕಾರ್ಯದಶರ್ಿ ಗೋವಿಂದಸ್ವಾಮಿ ಮಾತನಾಡಿದರ. ಇದೇ ಸಂದರ್ಭದಲ್ಲಿ ಆಕಾಶವಾಣಿ ಕಲಾವಿದೆ ಭಾರತೀ ಯಾವಗಲ್ಲ ವಚನ ಸಂಗೀತ ಪ್ರಸ್ತುತ ಪಡಿಸಿದರು. ಬಸವ ಜಯಂತಿ ಅಂಗವಾಗಿ ಏರ್ಪಡಿಸಿದ್ದ ವಚನ ಗಾಯನ ಸ್ಪಧರ್ೆಯಲ್ಲಿ ವಿಜೇತರಾದ ವಿಧ್ಯಾಥರ್ಿಗಳಿಗೆ ಬಹುಮಾನ ವಿತರಿಸಲಾಯಿತು.
ಸಮಾರಂಭದಲ್ಲಿ ಬಸವ ಜಯಂತಿ ಉತ್ಸವ ಸಮಿತಿ ಅಧ್ಯಕ್ಷ ಮಹಾಂತಪ್ಪ ಹಲಗಣ್ಣನವರ, ಕಾರ್ಯದಶರ್ಿ ರಾಜೇಂದ್ರಬಾಬು ಚೌಶೆಟ್ಟಿ, ಎಸ್.ಎಸ್ ಮುಷ್ಠಿ, ಉಳಿವೆಪ್ಪ ಪಂಪಣ್ಣನವರ, ಮುರುಗೆಪ್ಪ ಕಡೆಕೊಪ್ಪ, ಶಿವಬಸಪ್ಪ ಮುದ್ದಿ, ವಿಜಯಾ ಗೋವಿಂದಸ್ವಾಮಿ, ವಿ.ವಿ ಬನ್ನಿಮಟ್ಟಿ, ಎ.ಎಚ್. ಕೋಳಿವಾಡ, ಎಸ್.ಪಿ ಹಳೇಮನಿ, ಎಸ್.ವಿ ಹಿರೇಮಠ, ಶಿವಲಿಂಗಯ್ಯ ಮಠಪತಿ ಮತ್ತಿತರರು ಉಪಸ್ಥಿತರಿದ್ದರು.
ಆರಂಭದಲ್ಲಿ ಭಾರತೀ ಯಾವಗಲ್ಲ ಪ್ರಾಥರ್ಿಸಿದರು. ನಿವೃತ್ತ ಪ್ರಾಚಾರ್ಯ ಬಿ.ಬಸವರಾಜ ಸ್ವಾಗತಿಸಿದರು. ಮಲ್ಲಿಕಾಜರ್ುನ ಹಿಂಚಿಗೇರಿ ಕಾರ್ಯಕ್ರಮ ನಿರೂಪಿಸಿದರು. ಕೊನೆಯಲ್ಲಿ ಕೆ.ಆರ್. ನಾಶೀಪುರ ವಂದಿಸಿದರು.