ಯಳವತ್ತಿ ಗ್ರಾಮದಲ್ಲಿ ಪಂ. ಪುಟ್ಟರಾಜ ಗವಾಯಿ 15ನೇ ಪುಣ್ಯಸ್ಮರಣೆ

ಯಳವತ್ತಿ ಗ್ರಾಮದಲ್ಲಿ ಪಂ. ಪುಟ್ಟರಾಜ ಗವಾಯಿ 15ನೇ ಪುಣ್ಯಸ್ಮರಣೆ In Yalavatti village Pt. Puttaraja Gawai 15th Commemoration

ಯಳವತ್ತಿ ಗ್ರಾಮದಲ್ಲಿ ಪಂ. ಪುಟ್ಟರಾಜ ಗವಾಯಿ 15ನೇ ಪುಣ್ಯಸ್ಮರಣೆ 

ಗದಗ 11: ಈ ನಾಡಿನೊಳಗೆ ಸಾವಿರಾರು ಅಂಧ ಅನಾಥ ಬಡಮಕ್ಕಳು ಬಿಕ್ಷಾ ಪಾತ್ರೆ ಬಿಟ್ಟುಅಕ್ಷಯ ಪಾತ್ರೆ ಹಿಡಿದುಕೊಂಡುಪ್ರಸಾದ ಸೇವಿಸುತ್ತಿದ್ದಾರೆ ಎಂದರೆ ಅದಕ್ಕೆ ಮುಖ್ಯ ಕಾರಣ ಸಂಗೀತದ ಅಕ್ಷಯ ಪಾತ್ರೆ ನೀಡಿದ ಪಂ. ಪುಟ್ಟರಾಜ ಕವಿ ಗವಾಯಿಗಳು ಎಂದು ನೀಲಗುಂದ ಗುದ್ನೇಶ್ವರ ಶ್ರೀಮಠದ ಪೂಜ್ಯಶ್ರೀ ಪ್ರಭುಲಿಂಗ ಮಹಾಸ್ವಾಮಿಗಳು  ಹೇಳಿದರು.  

ಅವರು ಯಳವತ್ತಿ ಗ್ರಾಮದಲ್ಲಿ ಗಾನಯೋಗಿ ಡಾ. ಪಂ. ಪುಟ್ಟರಾಜ ಸೇವಾ ಸಮಿತಿಗದಗ ಹಾಗೂ ಶ್ರೀಗುರು ಪುಟ್ಟರಾಜ  ಸಂಗೀತ ಶಿಕ್ಷಣ ಸಮಿತಿ ಯಳವತ್ತಿ ಇವರ ಸಹಯೋಗದಲ್ಲಿ   ಪರಮಪೂಜ್ಯ  ಪದ್ಮಭೂಷಣ ಡಾ ಪಂ. ಪುಟ್ಟರಾಜ ಕವಿ ಗವಾಯಿಗಳವರ 15 ನೇ ಪುಣ್ಯ ಸ್ಮರಣೋತ್ಸವದ ಅಂಗವಾಗಿ ಸೆ. 10 ರಿಂದ 14 ರ ವರೆಗೆ ಪ್ರತಿದಿನ ರಾತ್ರಿ 7 ರಿಂದ ಜರುಗುವ ಮಹಾತ್ಮರ ಬದುಕು-ಬೆಳಕು ಪ್ರವಚನ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿ, ಯಳವತ್ತಿ ಗ್ರಾಮದಲ್ಲಿ  ಪಂ. ಪುಟ್ಟರಾಜ ಶಿವಯೋಗಳ 15   ನೇ ಪುಣ್ಯಸ್ಮರಣೆ ಮಾಡುತ್ತಿರುವುದು ಸಂತೋಷ ತಂದಿದೆ. ಈ ನಾಡಿನಲ್ಲಿ ಸಂಗೀತ ಜೀವಂತ ಇದೆ ಎಂದರೆ ಅದರ  ಹಿಂದೆ  ಶ್ರೀಗುರು ಪಂಚಾಕ್ಷರಿ ಗವಾಯಿಗಳು, ಪುಟ್ಟರಾಜ ಗವಾಯಿಗಳು ತಮ್ಮ ಜೀವನ ಗಂಧದ ಕೋರಡಿನಂತೆ ಸವಿಸಿದ್ದಾರೆ. ಇಡೀಜೀವನ ಸಮಾಜಕ್ಕಾಗಿ ಸಮರೆ​‍್ಣ  ಮಾಡಿದಉಭಯ  ಗವಾಯಿಗಳು ಆಗಿದ್ದಾರೆ. ಅವರ ಸೇವಾ ಮಾಡಿಗುರುವಿನ ಋಣ ಬಾರ ತೀರಿಸುವ ಭಾಗ್ಯ ಯಳವತ್ತಿ ಗ್ರಾಮಸ್ಥರಿಗೆ ಒದಗಿ ಬಂದಿದೆ ಎಂದು ಹೇಳಿದರು. 

ಪ್ರವಚನ ಕಾರರಾದ  ಶರಣ ಶಿವಲಿಂಗಯ್ಯ ಶಾಸ್ತ್ರೀಗಳು  ಸಿದ್ದಾಪೂರ  ಅವರು ಮಾತನಾಡಿ, ಮಹಾತ್ಮರಂ ನೆನೆಯುವದೆ ಘನಮುಕ್ತಿ ಪದಂ ಶಿವಾಧವ  ಅಂದರೆ ಮಹಾತ್ಮರನ್ನು, ಶರಣರನ್ನು, ಸಂತರನ್ನು ಪ್ರತಿದಿನ ನೆನೆಯುವದೇ ಆದರೆ ನಮ್ಮ ಮನಸ್ಸಿನ ತಾಪ,ಕೋಪ, ಮಾಯಾ, ಒತ್ತಡ, ಮನಸ್ಸಿನ ಮಲೀನತೆ ದೂರವಾಗಿ ಮನಸ್ಸಿಗೆ  ಶಾಂತಿ, ನೆಮ್ಮದಿ ದೊರಕುವದು ಎಂದು ಹೇಳಿದ ಅವರು  ಯಳವತ್ತಿ ಗ್ರಾಮಸ್ಥರು ಪಂ. ಪುಟ್ಟರಾಜ ಕವಿ ಗವಾಯಿಗಳವರ ಬಗ್ಗೆ ಅಪಾರ ಭಕ್ತಿ, ಶೃದ್ದೆ,  ನಿಷ್ಟೆಹೊಂದಿ ಈ ಗ್ರಾಮದಲ್ಲಿ ಭಕ್ತಿ ಮಾರ್ಗದಲ್ಲಿ ಹೆಜ್ಜೆಯನ್ನು ಹಾಕುತ್ತಿದ್ದಾರೆ ಎಂದು ಹೇಳಿದರು.  

 ಈ ಸಂದರ್ಭದಲ್ಲಿ  ಯಳವತ್ತಿ ಗ್ರಾಮದ  ಹಿರೇಮಠದ   ಸಿದ್ದಲಿಂಗಯ್ಯ ಸ್ವಾಮಿಗಳು,  ಗ್ರಾಮ ಪಂಚಾಯತಿ ಮಾಜಿ ಉಪಾಧ್ಯಕ್ಷ ರಾಚನಗೌಡ್ರ ಅಜ್ಜನಗೌಡ್ರ, ಸಮಿತಿಯ ಸದಸ್ಯರಾದ ಹೇಮಣ್ಣ ಬೆಟಗೇರಿ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಈರಣ್ಣ ಹತ್ತಿಕಾಳ  ಅವರು ನಿರೂಪಿಸಿ, ವಂದಿಸಿದರು. ಸಂಗೀತ ಬಾಗೇಶ ರಾಣಾಪೂರ, ತಬಲಾ ಸಾಥ್ ಸಿದ್ದೇಶ ಕುಮಾರ ಲಿಂಗನ ಬಂಡಿ ಅವರು ನೀಡಿದರು.