ಅಲ್ಪಸಂಖ್ಯಾತರ ಜಿಲ್ಲಾ ಘಟಕದ ಅಧ್ಯಕ್ಷರಾಗಿ ಇಮ್ತಿಯಾಜ್ ನೇಮಕ
ಹೊಸಪೇಟೆ 23: ಕರ್ನಾಟಕ ಭೀಮ್ ಸೇನ್ ಸಂಘಟನೆಯ ರಾಜ್ಯಾಧ್ಯಕ್ಷಾದ ಶಂಕರ್ ರಾಮಲಿಂಗಯ್ಯ, ರಾಜ್ಯ ಉಪಾಧ್ಯಕ್ಷರಾದ ಡಿ.ಕುಮಾರ್, ರಾಜ್ಯ ಸಂಘಟನಾ ಕಾರ್ಯದರ್ಶಿ ಮಂಜುನಾಥ, ಆದೇಶದ ಮೇರೆಗೆ ಮತ್ತು ಜಿಲ್ಲಾಧ್ಯಕ್ಷರಾದ ಸಿ.ಆರ್.ಭರತ್ ಕುಮಾರ್ ಇವರ ಅನುಮೋದನೆ ಮೇರೆಗೆ ನೇಮಕ ಮಾಡಲಾಯಿತು. ಇಂದಿನಿಂದ ವಿಜಯನಗರ ಜಿಲ್ಲಾ ಅಲ್ಪಸಂಖ್ಯಾತರ ಜಿಲ್ಲಾ ಘಟಕದ ಅಧ್ಯಕ್ಷರನ್ನಾಗಿ ಇಮ್ತಿಯಾಜ್.ಎಸ್ ಇವರನ್ನು ನೇಮಕ ಮಾಡಿ ಸಂಘಟನೆಯನ್ನು ಬಲಪಡಿಸುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸಬೇಕೆಂದು ಆದೇಶ ಪತ್ರವನ್ನು ನೀಡಲಾಯಿತು.