24*7 ಕುಡಿಯುವ ನೀರು ಯೋಜನೆ ಕಾರ್ಯರೂಪಕ್ಕೆ ಬರುವುದು ಯಕ್ಷಪ್ರಶ್ನೆಯಾಗಿದೆ ? ಸುಧಾಕರ ದೈವಜ್ಞ

Implementation of 24*7 drinking water scheme is a question? Sudhakara is divine

24*7 ಕುಡಿಯುವ ನೀರು ಯೋಜನೆ ಕಾರ್ಯರೂಪಕ್ಕೆ ಬರುವುದು ಯಕ್ಷಪ್ರಶ್ನೆಯಾಗಿದೆ ? ಸುಧಾಕರ ದೈವಜ್ಞ 

ಶಿಗ್ಗಾವಿ 15: ಪಟ್ಟಣದ ನಿವಾಸಿಗಳಿಗೆ ದಿನದ 24 ತಾಸು ಕುಡಿಯುವ ನೀರು ಒದಗಿಸುವ ಯೋಜನೆಯ ಕಾಮಗಾರಿ ನಿಗದಿತ ಅವಧಿಯೊಳಗೆ 24*7 ಕುಡಿಯುವ ನೀರು ಯೋಜನೆ ಕಾರ್ಯರೂಪಕ್ಕೆ ಬರುವುದು ಯಕ್ಷಪ್ರಶ್ನೆಯಾಗಿದೆ. 

      ಪಟ್ಟಣದ ಕುಡಿಯುವ ನೀರಿನ ಯೋಜನೆಗಾಗಿ  ಕಳೆದ 2 ವರ್ಷದ ಹಿಂದೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರ ಅವಧಿಯಲ್ಲಿ 46 ಕೋಟಿ ಅನುದಾನವನ್ನು ಬಿಡುಗಡೆ ಗೋಳಿಸಿದರು. ಅಂದೇ ಕೆಲವು ಪುರಸಭೆ ಸದಸ್ಯರು ತಕರಾರು ಮಾಡಿದ್ದರು. ಆದರೆ ಕಾಮಗಾರಿ ನಿಧಾನಗತಿಯಲ್ಲಿ ಸಾಗಿದ್ದು ಕಾಮಗಾರಿ ಪೂರ್ಣಗೊಳ್ಳುವ ಯಾವುದೇ ಭರವಸೆ ಕಾಣುತ್ತಿಲ್ಲ ಏಕೆಂದರೆ ಪಟ್ಟಣದ ವ್ಯಾಪ್ತಿಯಲ್ಲಿ ಇನ್ನೂ ಅನೇಕ ಕಡೆ ಕಾಮಗಾರಿಗೆ ಅಗೆದಿರುವ ರಸ್ತೆಗಳ ದುರಸ್ತಿಯ ನೀರೀಕ್ಷೆಯಲ್ಲಿವೆ. ಕೆಲವೆಡೆ ಪುಟಭಾತ ಅಗೆದು ಪೈಪಲೈನ ಅಳವಡಿಕೆ ಮಾಡಿದರೂ ಅಗೆದ ಗುಂಡಿಗಳನ್ನು ಸಮಪರ್ಕವಾಗಿ ಮುಚ್ಚುತ್ತಿಲ್ಲ ಅಲ್ಲದೇ ಕೆಲವು ಕಡೆ ಕಾಮಗಾರಿ ಮಾಡಲು ಸಾರ್ವಜನಿಕರು ಸ್ಪಂದಿಸುತ್ತಿಲ್ಲ ಒಟ್ಟಾರೆ ಈ ಯೋಜನೆ ನೆನೆಗುದಿಗೆ ಬಿದ್ದಿದೆ. 

     ಪ್ರತಿ ಕುಟುಂಬಕ್ಕೂ ನಳದ ಸಂಪರ್ಕ ಕಲ್ಪಿಸಿ ಮೀಟರ್ ಅಳವಡಿಕೆ ಮಾಡಿದರೆ ನೀರಿನ ಉಳಿತಾಯ ಹಾಗೂ ಪುರಸಭೆಗೆ ಆಧಾಯ ಬಂದು ಇತರ ಅಭಿವೃದ್ಧಿ ಕೆಲಸಗಳಿಗೆ ಅನುಕೂಲವಾಗುಬಹುದೆಂಬ ಉದ್ದೇಶ ಆದರೆ ಈ ಯೋಜನೆ ಪಟ್ಟಣದಲ್ಲಿ ಸಮರ​‍್ಕವಾಗಿ ಸಾಕಾರಗೊಳ್ಳಲು ಪುರಸಭೆ ಆಡಳಿತ ಮಂಡಳಿಯ ನಿಷ್ಕಾಳಜಿಯೋ ಅಥವಾ ಆರ್ಥಿಕ ತೊಂದರೆಯೋ ಅಥವಾ ಸಂಪನ್ಮೂಲಗಳ ಕೊರತೆಯೋ  ತಿಳಿಯದಾಗಿದೆ. 

     ಈ ಯೋಜನೆಯ ಗುತ್ತಿಗೆದಾರ ಧಾರವಾಡದ ಸಂದೀಪ ಶೆಟ್ಟಿಯ ಮೇಲ್ವಿಚಾರಕ ಈ ಯೋಜನೆ ಪೂರ್ಣಗೊಳ್ಳಲು ಇನ್ನೂ 1 ರಿಂದ 2 ವರ್ಷ ಬೇಕಾಗುತ್ತದೆ ಎಂದು ಹೇಳುತ್ತಾರೆ ಆಗಾದರೆ ಮಳೆಗಾಲದಲ್ಲಿ ಅಗೆದ ರಸ್ತೆಯ ದುರಸ್ತಿ ಮಾಡುವರು ಯಾರು ಎಂಬ ಪ್ರಶ್ನೆ ಉದ್ಬವವಾಗಿದೆ. 

      ಪುರಸಭೆ ಕೆಲವು ಸದಸ್ಯರು ಹಾಗೂ ಪಟ್ಟಣದ ಕೆಲವು ಹಿರಿಯರು ಹೇಳುವ ಪ್ರಕಾರ ಪಟ್ಟಣದಲ್ಲಿ ಪ್ರತಿವರ್ಷ ಮಾರ್ಚ್‌ ಮತ್ತು ಎಪ್ರಿಲ್ ತಿಂಗಳಲ್ಲಿ ನೀರಿನ ಕೊರತೆ ಆಗುತ್ತದೆ.  ನಮ್ಮ ಪಟ್ಟಣದಲ್ಲಿ ನೀರಿನ ಶಾಸ್ವತ ಸಂಪನ್ಮೂಲ ಇಲ್ಲದೇ ಇರುವ ಕಾರಣ ಈ ಯೋಜನೆ ಯಶಸ್ವಿಯಾಗುವುದಿಲ್ಲ ? ಯಶಸ್ವಿಯಾಗಬೇಕಾದರೆ ನಾಗನೂರ ಕೆರೆಯನ್ನು ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ಹೂಳೆತ್ತಬೇಕು ಹಾಗೂ ಮಳೆಯಾದಾಗ ಮತ್ತು ಕೋಡಿ ಬಿದ್ದಾಗ ನೀರು ಈಗ ಶೇಖರಣೆ ಆದ ಎರಡು ಪಟ್ಟು ಕೆರೆ ಕಟ್ಟೆ ಹೊಡೆದು ಪೋಲಾಗುತ್ತದೆ ಆ ನೀರು ನೀರೀಕ್ಷಿತ ಪ್ರಮಾಣದಲ್ಲಿ  ಸಂಗ್ರಹಗೊಳ್ಳಬೇಕು ಅವಾಗ ಈ ಯೋಜನೆ ಯಶಸ್ವಿಯಾಗಬಹುದು ಎನ್ನುತ್ತಾರೆ ಸಾರ್ವಜನಿಕರು. 

ಭಾಕ್ಸ ಸುದ್ದಿ : ಈ ಯೋಜನೆ ಉಸ್ತುವಾರಿಯನ್ನು ನೀರು ಸರಬರಾಜು ಮಂಡಳಿಯವರು ಮಾಡುತ್ತಿದ್ದು. ಶೇ 70 ರಷ್ಟು ಪೈಪಲೈನ ಪ್ರಗತಿ ಕಂಡಿದೆ. ಮೀಟರ ಅಳವಡಿಕೆ ? ಹೆಚ್ಚು ನೀರು ಸಂಗ್ರಹ ಮಾಡಲು ಪಟ್ಟಣದಲ್ಲಿ 4 ನೀರು ಸಂಗ್ರಹ ಜಲಾಗಾರವಿದ್ದು, ಇನ್ನೂ 2 ಜಲಾಗಾರ ಪ್ರಗತಿಯಲ್ಲಿದೆ.