ಕೋಣೆನಾಲಾ, ಮಧ್ಯೆವಾಡಾದ ಮುಖ್ಯನಾಲಾಗೆ ಸ್ಲ್ಯಾಬ್ ಅಳವಡಿಸಿ: ಸಾರ್ವಜನಿಕರ ಆಗ್ರಹ

ಕೋಣೆನಾಲಾ, ಮಧ್ಯೆವಾಡಾದ ಮುಖ್ಯನಾಲಾಗೆ ಸ್ಲ್ಯಾಬ್ ಅಳವಡಿಸಿ: ಸಾರ್ವಜನಿಕರ ಆಗ್ರಹ

ಕಾರವಾರ : ನಗರದ ಹೃದಯಭಾಗದಲ್ಲಿರುವ ಕೋಣೆನಾಲಾ ಹಾಗೂ  ಕೋಡಿಬಾಗದ ಮಧ್ಯೆವಾಡಾದಲ್ಲಿ ಬಂದು ಸೇರುವ ಕಾತ್ಯಾಯನಿ ಮುಖ್ಯನಾಲಾದಲ್ಲಿ ಸಂಗ್ರಹವಾಗುವ ತ್ಯಾಜ್ಯದ ನೀರಿನಲ್ಲಿ ಉತ್ಪತ್ತಿಯಾಗುವ ಸೊಳ್ಳೆ ಕಡಿತದಿಂದ ನಾಲಾದ ಪಕ್ಕದ ನಿವಾಸಿಗಳು ಆರೋಗ್ಯ ಸಮಸ್ಯೆ ಎದುರಿಸುತ್ತಿದ್ದಾರೆ. ಕೋಣೆನಾಲಾದ ಪಕ್ಕದಲ್ಲೇ ಶಾಸಕರ ಮಾದರಿ ಶಾಲೆ, ಸಕರ್ಾರಿ ಪ್ರೌಢಶಾಲೆ, ಲೋಕಾಯುಕ್ತ ಕಚೇರಿ ಹಾಗೂ ಜಿಲ್ಲಾ ಆರೋಗ್ಯ ಮತ್ತು ಕುಟಂಬ ಕಲ್ಯಾಣ ಇಲಾಖೆಯ ಅಧಿಕಾರಿಗಳ ಕಚೇರಿಯಿದ್ದು, ಗಬ್ಬು ವಾಸನೆ ಕುಡಿಯುತ್ತಲೇ ಕೆಲಸ ಮಾಡಬೇಕಾದ ಅನಿವಾರ್ಯತೆ ಉಂಟಾಗಿದೆ. ಮಳೆಗಾಲ ಹೊರತು ಪಡಿಸಿದರೆ ಈ ಕೊಳಚೆ ನಾಲಾಗಳು ನಗರದ ನಿವಾಸಿಗಳ ಪಾಲಿಗೆ ನರಕ ಸಾದೃಶ್ಯವಾಗಿವೆ. ಕೋಣೆನಾಲಾ ಸ್ವಚ್ಚತೆಗೆ ಲಕ್ಷಾಂತರ ರೂ. ಮೀಸಲಾಗಿಡಲಾಗುತ್ತಿದೆ. ಆದರೆ ನಾಲಾದ ಸ್ವಚ್ಛತೆ ಮಾತ್ರ ನಡೆಯುವುದು ಮೇ ತಿಂಗಳಲ್ಲಿ ಹೂಳು ತೆಗೆಯುವಾಗ ಮಾತ್ರ. ಉಳಿದ ಅವಧಿಯಲ್ಲಿ ಕೊಳಚೆ ನಾಲಾ ಪಕ್ಕದ ಜನರು, ವಿದ್ಯಾಥರ್ಿಗಳು, ಅಧಿಕಾರಿಗಳು ಮಾತ್ರ ಹಿಂಸೆ ಅನುಭವಿಸುತ್ತಾರೆ. 

ಜನರ ಮೈ ಮೇಲೆ ಬೊಕ್ಕೆಗಳು ಎದ್ದು, ಮೈ ಕೆರತದಂತ ಕಾಯಿಲೆಗಳು ಸಾರ್ವಜನಿಕರನ್ನು ಕಾಡತೊಡಗಿವೆ. ಸೊಳ್ಳೆಕಾಟದಿಂದ ನಾನಾ ಕಾಯುಲೆಗಳ ಆಗರವಾಗುತ್ತಿದೆ ಕಾರವಾರ ಎಂದು ಜನ ಬೇಸರ ಪಡುತ್ತಿದ್ದಾರೆ. ಕೊಳಚೆ ನಾಲಾದ  ದುವರ್ಾಸನೆಯಿಂದ ಗಂಭೀರ ಆರೋಗ್ಯ ಸಮಸ್ಯೆಗಳು ಕಾಡತೊಡಗಿವೆ ಎಂದು ಸ್ಥಳೀಯರು ಆತಂಕ ಪಟ್ಟಿದ್ದಾರೆ. 

ಇಲ್ಲಿನ ಸಮಸ್ಯೆ ಬಗ್ಗೆ ನಗರಸಭೆಗೆ ಹಲವಾರು ಬಾರಿ ದೂರು ನೀಡುತ್ತಲೇ ಬರಲಾಗಿದೆ. ಕೊಣೆನಾಲ ಹಾಗೂ ಕ್ಯಾತ್ಯಾಯಿನಿ ನಾಲಾಗಳೂ ಕ್ರಮವಾಗಿ  ವಾಡರ್್ ನಂ. 3, 4 , 5 ಹಾಗೂ  16 ರ ವ್ಯಾಪ್ತಿಲ್ಲಿವೆ. ಹೀಗಾಗಿ ವಾಡರ್್ ಸದಸ್ಯರಿಗೆ ಹಾಗೂ ಕಾರವಾರ-ಅಂಕೋಲಾ ಶಾಸಕರ ಗಮನಕ್ಕೂ ಸಮಸ್ಯೆಯನ್ನು  ತರಲಾಗಿದೆ. ಆದರೂ ಏನೂ ಪ್ರಯೋಜನವಾಗುತ್ತಿಲ್ಲ. ಮುಖ್ಯನಾಲಾದಲ್ಲಿನ ಹೂಳು ತೆಗೆದು ಸ್ವಚ್ಛಗೊಳಿಸಬೇಕು. ಅಲ್ಲದೇ ಈ ಮುಖ್ಯನಾಲಾ ಕಾಳಿ ನದಿ ಸೇರುವಲ್ಲಿ ಸಂಪೂರ್ಣವಾಗಿ ನಾಲಾದ ಎರಡೂ ಬದಿಗೆ ಅಂದಾಜು 100 ಮೀಟರ್ ಹಾಗೂ ಕೊಣೆನಾಲಕ್ಕೆ 1000 ಮೀಟರ್  ಉದ್ದ ತಡೆಗೋಡೆ ನಿಮರ್ಿಸಿ, ಕಾಂಕ್ರೀಟ್ ಮುಚ್ಚಳದಿಂದ ಮುಚ್ಚಬೇಕು. ಆ ಮೂಲಕ ಗಂಭೀರ ಆರೋಗ್ಯ ಸಮಸ್ಯೆಗಳು ಮರುಕಳಿಸದಂತೆ ನಿಗಾ ವಹಿಸಲು ಸ್ಥಳೀಯರು  ನಗರಸಭೆಗೆ ವಿನಂತಿಸುತ್ತಲೇ ಬಂದಿದ್ದಾರೆ. ಆದರೆ ನಗರಸಭೆ 100 ಕೋಟಿ ರೂ. ಅನುದಾನದ ದೂರದ ಕನಸು ಕಾಣುತ್ತಿದೆ. ಇರುವ ಅನುದಾನದಲ್ಲಿ ನಾಲಾವನ್ನು ಸ್ವಚ್ಛವಾಗಿಡುವ ಪ್ರಯತ್ನ ಮಾಡಿಲ್ಲ ಎಂಬುದು ಸ್ಥಳೀಯರ ಆರೋಪ. ಜನಪ್ರತಿನಿಧಿಗಳು ಚುನಾವಣೆ ಸಂದರ್ಭದಲ್ಲಷ್ಟೇ ಮತ ಕೇಳಲಿಕ್ಕಷ್ಟೇ ಮನೆ ಬಾಗಿಲಿಗೆ ಬರುತ್ತಾರೆ. ಆ ಬಳಿಕ ಈ ಕಡೆ ತಲೇ ಹಾಕುವುದೇ ಇಲ್ಲ . ಅಲ್ಲದೇ ನಗರಸಭೆಯ ಚುನಾವಣೆ ನಡೆದರೂ ಅಧ್ಯಕ್ಷ ಉಪಾಧ್ಯಕ್ಷ ಗಾದಿಯ ಮೀಸಲಾತಿ ವಿವಾದದಿಂದಾಗಿ ಜನಪ್ರತಿನಿಧಿಗಳಿಗೆ ಅಧಿಕಾರವೇ ಇಲ್ಲದಂತಾಗಿದೆ. 

ಅಪಾರ್ಟಮೆಂಟ್,ಹೋಟೆಲ್ ತ್ಯಾಜ್ಯ ಕೋಣೆನಾಲಕ್ಕೆ : 

ಅಪಾರ್ಟಮೆಂಟ್ನ ನೂರಾರು ಮನೆಗಳಿಂದ ಬಿಡಲಾಗುವ ತ್ಯಾಜ್ಯದ ನೀರು ಕಾತ್ಯಾಯನಿ ನಾಲಾದಿಂದ ಹರಿದು ಬಂದು ಕಾಳಿ ನದಿಗೆ ಸೇರುವ ಮುಂಚೆ ಸುಮಾರು 100 ಅಡಿ ದೂರದಲ್ಲಿಯೇ ನಿಂತು ಬಿಟ್ಟಿದೆ. ಇಲ್ಲಿ ಹೂಳು ತುಂಬಿ ಬ್ಲಾಕ್ ಆಗಿರುವುದರಿಂದ ಈ ಮಲೀನ ತ್ಯಾಜ್ಯದ ನೀರು ಮುಂದೆ ಹರಿಯುತ್ತಿಲ್ಲ. 

ನಾಲಾದ ಮೇಲ್ಭಾಗದಿಂದ ಹರಿದು ಬರುವ ಮಲೀನ ತ್ಯಾಜ್ಯದ ನೀರಿನ ಜೊತೆಗೆ ಪ್ಲಾಸ್ಟಿಕ್, ಬಟ್ಟೆಯ ವಸ್ತುಗಳು ಸೇರಿದಂತೆ, ನಿತ್ಯ ಮನೆ ಬಳಕೆಯ ನಿರುಪಯೋಗಿ ವಸ್ತುಗಳು ನಾಲಾದಲ್ಲಿ ಬಿದ್ದು  ಬ್ಲಾಕ್ ಆಗಿರುವ ಜಾಗದಲ್ಲಿ ಸೇರಿವೆ. ಕೊಳಚೆ  ಪ್ರಮಾಣದ ನೀರು ನದಿಗೆ ಸೇರುತ್ತಿದ್ದರೂ, ಉಳಿದ ನೀರು ಇಲ್ಲಿಯೇ ನಿಂತು ಸೊಳ್ಳೆಗಳ ಉತ್ಪತ್ತಿ ತಾಣವಾಗಿ ಬಿಟ್ಟಿದೆ. ಈ ನಾಲಾದ ಎರಡೂ ಬದಿಗೆ ಕಟ್ಟಲು ಬಾಕಿ ಇರುವ ಅಂದಾಜು 100 ಮೀ. ನಷ್ಟು ತಡೆಗೋಡೆ ನಿಮರ್ಿಸಿ, ಇಲ್ಲಿನ ಹೂಳು ತೆಗೆದರೆ, ನೀರು ಸರಾಗವಾಗಿ ಹರಿಯಲು ಅನುಕೂಲವಾಗುತ್ತದೆ. ಇದಲ್ಲದೇ ನಾಲಾದ ಮೇಲೆ ಕಾಂಕ್ರೀಟ್ ಮುಚ್ಚಳ ಹಾಕಿದರೆ, ಇಲ್ಲಿನ ಕೆಲ ಮನೆಗಳಿಗೆ ಇರುವ ಕಾಲು ದಾರಿ ಸಮಸ್ಯೆಯೂ ಬಗೆಹರಿಯುತ್ತದೆ. ಇದರೊಂದಿಗೆ ದುವರ್ಾಸನೆ ಹಾಗೂ ಸೊಳ್ಳೆಯ ಕಾಟದಿಂದ ಸ್ಥಳೀಯರಿಗೆ ಮುಕ್ತಿ ನೀಡಿದಂತಾಗುತ್ತದೆ. 

ಕೋಣೆನಾಲಾದ ಹೂಳೆತ್ತಿ ಕೊಳಚೆ ನೀರು ಸರಾಗಾವಾಗಿ ಹರಿಯಲು ವ್ಯವಸ್ಥೆ ಮಾಡಿದರೆ ಹಾಗೂ ಪ್ರತಿವಾರಕ್ಕೆ ಒಮ್ಮೆ ಕ್ರಿಮಿನಾಶಕ ಸಿಂಪಡಿಸಿದರೆ ಸೊಳ್ಳೆ ನಿಯಂತ್ರಿಸಬಹುದು ಎಂಬ ಮಾತು ಕೇಳಿಬಂದಿದೆ.