ಸರಿಯಾಗಿಯೋಗ ಮಾಡಿದ್ದರೆ ಯಾವುದೇ ರೋಗವಿಲ್ಲಾ- ವಚನಾನಂದ ಶ್ರೀಗಳು
If you do yoga properly, there will be no disease - Vachanananda Sri
ಸರಿಯಾಗಿಯೋಗ ಮಾಡಿದ್ದರೆ ಯಾವುದೇ ರೋಗವಿಲ್ಲಾ- ವಚನಾನಂದ ಶ್ರೀಗಳು
ಗದಗ 05 : ಪ್ರತಿ ನಿತ್ಯ ಯೋಗವನ್ನು ಮಾಡುವುದರಿಂದ ಯಾವುದೇ ರೋಗ ರುಜಿನಗಳು ಬರುವದನ್ನು ತಡೆಯುವ ಶಕ್ತಿ ಯೋಗಕ್ಕಿದೆ ಎಂದು ವೀರಶೈವ ಲಿಂಗಾಯತ ಪಂಚಮಸಾಲಿ ಹರಿಹರ ಪೀಠದ ಜಗದ್ಗುರು ವಚನಾನಂದ ಮಹಾಸ್ವಾಮಿಗಳು ಮಾತನಾಡಿದರು.
ಅವರಿಂದು ಗದಗ ನಗರದ ರಾಚೋಟಿ ವೀರಭದ್ರೇಶ್ವರ ದೇವಸ್ಥಾನದಲ್ಲಿ ನಡೆಯುತ್ತಿರುವ ಶರಣ ಚರಿತಾಮೃತ ಪವಚನವನ್ನು ಉದ್ದೇಶಿಸಿ ಮಾತನಾಡುತ್ತಾ..ಯೋಗವು ಪ್ರತಿಯೊಬ್ಬರಿಗೂ ಬಹಳ ಅವಶ್ಯವಾಗಿದ್ದು, ಅದನ್ನು ಮಾಡುತ್ತಾ ಹೋದರೆ ರೋಗ ರುಜಿನಗಳು ದೂರವಾಗುವವು. ಕಲ್ಯಾಣದಲ್ಲಿ 770 ಜನ ಶರಣರಿದ್ದರು ಜಗತ್ತಿನ ಇತಿಹಾಸದಲ್ಲಿ ಇಷ್ಟೊಂದ ುಜನ ಶರಣರು ಇದ್ದಿದ್ದು ಕಲ್ಯಾಣದಲ್ಲಿ ಮಾತ್ರ. ಎಲ್ಲ ಶರಣರುಕೂಡಾ ಅಂದಿನ ಕಾಲಕ್ಕೆ ತಕ್ಕಹಾಗೆಯೋವನ್ನು ಮಾಡುತ್ತಿದ್ದರು. ಶರಣೆ ಸಜ್ಜಲ ಗುಡ್ಡದ ಶರಣಮ್ಮನವರು ಒಬ್ಬ ಸಾಮಾನ್ಯ ಸ್ತ್ರೀ, ಅವರು ಗುರುಗಳಿಂದ ದೀಕ್ಷೆಯನ್ನು ಪಡೆದುಕೊಂಡು ಒಬ್ಬ ದೊಡ್ಡ ಶರಣೆಆದರು. ಶರಣಮ್ಮನವರು ಬೆಳಿಗ್ಗೆ 2:00ಗಂಟೆಗೆ ಎದ್ದು ಇಷ್ಟಲಿಂಗ ಪೂಜೆ ಮಾಡಿ, ಶಿವಯೋಗ ಪೂಜೆ ಮಾಡುತ್ತಿದ್ದರು. ಶರಣಮ್ಮನವರು ಶ್ರೇಷ್ಠ ಸಾಧನೆಗೈದರು. ಶರಣಮ್ಮನವರು ಕುರುಬ ಜಾತಿಯಲ್ಲಿ ಹುಟ್ಟಿ ಶಿವನೇ ಮೆಚ್ಚುವಂತಹ ಕಾರ್ಯವನ್ನು ಮಾಡಿದ್ದರು. ಶರಣಮ್ಮರೂ ಕೂಡಾ ಯೋಗಕ್ಕೆ ಹೆಚ್ಚಿನ ಪ್ರಾಮುಖ್ಯತೆಯನ್ನು ನೀಡಿದ್ದರು.
ಇಂದಿನ ಕಾಲದಲ್ಲಿ ಸ್ನಾನ ಮಾಡಲು ಗುಳಿಗೆ ಬಂದಿವೆ. ಊಟ ಮಾಡಲು ಗುಳಿಗೆ ಬಂದಿವೆ. ರಕ್ತದೊತ್ತಡ ಹೆಚ್ಚು ಕಡಿಮೆ ಆದರೂ ಗುಳಿಗೆಗಳು ಬಂದಿವೆ. ಪ್ರತಿಯೊಂದು ರೋಗಕ್ಕೂ ಇಂದು ಮನುಷ್ಯ ಗುಳಿಗೆಯ ಮೇಲೆ ಅವಲಂಬಿತನಾಗಿದ್ದಾನೆ. ಯೋಗ ಮಾಡುವುದರಿಂದಎಲ್ಲ ರೋಗಗಳನ್ನು ತಡೆಯಬಹುದು. ಹಸಿವೆಯಾಗದೇ ಊಟ ಮಾಡಬಾರದು. ಹಸಿವೆಯಾದಾಗ ಊಟ ಮಾಡಬೇಕು. ಎಷ್ಟು ಬೇಕು ಅಷ್ಟನ್ನೇ ತಿನ್ನಬೇಕು. ಖಾದ್ಯಪದಾರ್ಥಗಳನ್ನು ಹೆಚ್ಚಿಗೆ ಸೇವಿಸಬಾರದು. ಮಲಗುವಾಗ ಬಲಭುಜ ಮೇಲೆ ಮಾಡಿ ಮಲಗಿಕೊಳ್ಳಬೇಕು. ಊಟ ಆದ ನಂತರಒಂದನೂರು ಹೆಜ್ಜೆಯನ್ನು ನಡೆಯಬೇಕು ಅಂತಾ ಮಾತನಾಡಿದರು.
ಶರಣೆ ನೀಲಮ್ಮತಾಯಿಯವರು ಮಾತನಾಡುತ್ತಾ 12ನೇ ಶನಮಾನದಲ್ಲಿ ಶರಣರು ಸ್ತ್ರೀಯರಿಗೆ ಸಮಾನ ಅವಕಾಶ ಕೊಟ್ಟಿದ್ದರು. ಕಲ್ಯಾಣಅಂದರೆ ಸದ್ಗುಣ. ಪರಮಾತ್ಮನಲ್ಲಿಎರಡು ಶಕ್ತಿಗಳು ಇರುವವು. ಶರಣರ ಮುಖಾಂತರ ಬರುವ ಹಿತನುಡಿಗಳು ಕಾಲಕ್ಕೆ ತಕ್ಕಂತೆಗಿಡ ಹೇಗೆ ಹೂವು, ಕಾಯಿ, ಹಣ್ಣಿನ ಫಲವನ್ನುಕೊಡುವವೋ, ಅದೇರೀತಿಯಾಗಿ ಪರಮಾತ್ಮನ ವಿಷೇಶ ಶಕ್ತಿಯಾಗಿ ಶರಣ ಮುಖಾಂತರ ಬರುವರುಎಂದು ಉಪದೇಶಿಸಿದರು.
ಸಭೆಯಅಧ್ಯಕ್ಷತೆಯನ್ನುಟ್ರಸ್ಟಕಮೀಟಿಯ ಹಿರಿಯ ಸದಸ್ಯರಾದಕೊಟ್ರ್ಪಕಮತರಇವರು ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ರಾಜುಕುರುಡಗಿ, ಬಿಜೆಪಿ ಜಿಲ್ಲಾಧ್ಯಕ್ಷರಾದರಾಜ್ಯ ಪಂಚಮಸಾಲಿ ಸಮಾಜದಅಧ್ಯಕ್ಷರಾದ ಸೋಮನಗೌಡ ಮಾಲಿಪಾಟೀಲ, ಜಿಲ್ಲಾ ಪಂಚಮಸಾಲಿ ಸಮಾಜದಅಧ್ಯಕ್ಷರಾದಈರಣ್ಣಕರಬಿಷ್ಠಿ, ಭಾಗವಹಿಸದ್ದರು. ಇದೇ ಸಂದರ್ಭದಲ್ಲಿಚೇಂಬರ್‌ಆಫ್‌ಕಾಮರ್ಸ ಹುಬ್ಬಳ್ಳಿ ಇವರಿಂದ ವಾಣಿಜ್ಯರತ್ನ ಪ್ರಶಸ್ತಿ ಪಡೆದರಾಜುಗುಡಿಮನಿ ಇವರನ್ನು ಸತ್ಕರಿಸಲಾಯಿತು.
ಈ ಸಂದರ್ಭದಲ್ಲಿ ಹಿರಿಯರಾದ ಎಂ.ಎಂ. ಹಿರೇಮಠ ವಕೀಲರು,ಶಿವಣ್ಣ ಕತ್ತಿ, ವಿರುಪಾಕ್ಷಪ್ಪ ಅಕ್ಕಿ, ಬಸವರಾಜಜಂತ್ಲಿ, ಶಿವಣ್ಣ ಇಟ್ನಳ್ಳಿ, ಪುರಾಣ ಪ್ರವಚನ ಸಮಿತಿಅಧ್ಯಕ್ಷರಾದ ಶೇಖಪ್ಪ ಹೊಂಬಳ, ಸಿದ್ದಣ್ಣ ಅರಳಿ, ಗಂಗಾಧರ ಮೇಲಗಿರಿ, ಗಂಗಾಧರ ನಂದಿಕೋಲಮಠ, ಶ್ರಿಶೈಲಪ್ಪ ಪಟ್ಟಣಶೆಟ್ಟಿ, ವಿರುಪಾಕ್ಷಪ್ಪಅಂಗಡಿ, ಮಲ್ಲಿಕಾರ್ಜುನ ಹಿರೇಮಠ,ಶಂಕರ ನೀರಲಕೇರಿ, ಪಂಚಾಕ್ಷರಅಂಗಡಿ, ನವೀನ ನಾಲ್ವಾಡ, ಸುರೇಶ ಹೆಬಸೂರ, ಪ್ರಕಾಶಜಂತ್ಲಿ, ಸತ್ಸಂಗದ ಸದಸ್ಯರಾದ ಸುನಂದಾ ಜೋಬಾಳೆ, ಬೀನಾ ಮಾನ್ವಿ, ಉಮಾ ಪಟ್ಟಣಶೆಟ್ಟಿ, ಜಯಶ್ರೀ ನಿಲೂಗಲ್, ಕಸ್ತೂರಕ್ಕ ಮಾನ್ವಿ, ಶರಣಮ್ಮ ಶಿರೂರ, ಸುಶೀಲಾ ನಿಲೂಗಲ್ಲ, ನೀಲಕ್ಕ ಕಗನಳ್ಳಿ, ಅನಸಕ್ಕ ಮೇಲಗಿರಿ, ಕಲ್ಪನಾ ಹಿರೇಮಠ, ಸರಸ್ವತಿ ನಂದಿಕೋಲಮಠ, ಶೈಲಾ ಮಾನ್ವಿ ಮುತಾದವರು ಭಾಗವಹಿಸಿದ್ದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 