ಬದುಕಿನಲ್ಲಿ ಸದಾಚಾರ, ಸದ್ಧತಿ ಇದ್ದರೆ ಯಾವುದೇ ಕೊರತೆ ಆಗದು : ಡಾ ಚನ್ನ ಸಿದ್ದರಾಮ ಪಂಡಿತಾರಾಧ್ಯ ಶಿವಾಚಾರ್ಯ ಶ್ರೀಗಳು

If there is righteousness and morality in life, there will be no shortage: Dr. Channa Siddarama Pan

ಬದುಕಿನಲ್ಲಿ ಸದಾಚಾರ, ಸದ್ಧತಿ ಇದ್ದರೆ ಯಾವುದೇ ಕೊರತೆ ಆಗದು : ಡಾ ಚನ್ನ ಸಿದ್ದರಾಮ ಪಂಡಿತಾರಾಧ್ಯ ಶಿವಾಚಾರ್ಯ ಶ್ರೀಗಳು 

ಮಾಂಜರಿ, 06 : ಹಸಿದವರಿಗೆ ಅನ್ನ, ನೀರಡಿಕೆಯಾದವರಿಗೆ ನೀರು, ಬಿಸಿಲಿನಲ್ಲಿ ಬಳಲಿದವರಿಗೆ ನೆರಳು ನೀಡುವುದು ನಿಜವಾದ ಧರ್ಮವಾಗಿದೆ. ಇಂತಹ ನಡವಳಿಕೆ ಭವಿಷ್ಯದಲ್ಲಿ ನಮ್ಮನ್ನು ಕಾಯುತ್ತದೆ ಎಂದು ಶ್ರೀಶೈಲ ಪೀಠದ ಜಗದ್ಗುರುಗಳು ಹಾಗೂ ಶ್ರೀ ಕ್ಷೇತ್ರ ಯಡೂರ ವೀರಭದ್ರ ದೇವಸ್ಥಾನ ಮತ್ತು ಕಾಡ ಸಿದ್ದೇಶ್ವರ ಸಂಸ್ಥಾನ ಮಠದ ಧರ್ಮಾಧಿಕಾರಿಗಳಾದ ಡಾ ಚನ್ನ ಸಿದ್ದರಾಮ ಪಂಡಿತಾರಾಧ್ಯ ಶಿವಾಚಾರ್ಯ ಶ್ರೀಗಳು ಹೇಳಿದರು. 

 ಅವರು ಶನಿವಾರರಂದು ಸಾಯಂಕಾಲ ಚಿಕ್ಕೋಡಿ ತಾಲೂಕಿನ ಮಾಂಜರಿ  ಗ್ರಾಮದ ಶ್ರೀ ಕಾಡ ಸಿದ್ದೇಶ್ವರ ಸಂಸ್ಥಾನ ಮಠದಲ್ಲಿ ಅಯೋಜಿಸಲಾದ 'ಜನ ಜಾಗೃತಿ ಹಾಗೂ ಧರ್ಮ ಸಭಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಶ್ರೀಗಳು, ಮಾನವೀಯತೆಯೇ ನಿಜವಾದ ಮಾನವ ಧರ್ಮ ಎಂದರು. 

ಬದುಕಿನಲ್ಲಿ ಸದಾಚಾರ, ಸದ್ಧತಿ ಇದ್ದರೆ ಯಾವುದೇ ಕೊರತೆ ಆಗದು   ಪರಮಾತ್ಮನ ಮೇಲೆ ಶ್ರದ್ದೆ ಇಟ್ಟರೆ ಮನುಷ್ಯ ಜೀವಾತ್ಮನಾಗುತ್ತಾನೆ. ಬದುಕಿನ ಜತೆಗೆ ದೇವರನ್ನು ಸಹ ಪ್ರೀತಿಸಬೇಕು. ಈ ಪ್ರಪಚಂದಲ್ಲಿ ಎಲ್ಲವೂ ಅಸ್ಥಿರ. ಸಾಮಾಜಿಕ ಕಲ್ಯಾಣ ಕಾರ್ಯ ಮಾತ್ರ ಶಾಶ್ವತ. ಸದಾಚಾರದಿಂದ ಬದುಕಬೇಕು. ದುಡಿದು ಊಟಮಾಡಬೇಕು. ಉಳಿದಿದ್ದರಲ್ಲಿ ದಾನ ಮಾಡಬೇಕು. ಇದುವೇಮುಂದಿನ ಜೀವನಕ್ಕೆ ಬುತ್ತಿ. ಭಕ್ತಿ ಶಕ್ತಿಯಿಂದ ದೈವಿಶಕ್ತಿ ಪ್ರಾಪ್ತಿ ಆಗುತ್ತದೆ  

ಪ್ರಕೃತಿ ಧರ್ಮ ಮರೆತು ಮನುಷ್ಯ ದುಃ ಖಿತನಾಗಿದ್ದಾನೆ. ಈ ಪ್ರಕೃತಿಯ 84 ಲಕ್ಷ ಜೀವರಾಶಿಯಲ್ಲಿ ಮನುಷ್ಯನೂ ಒಂದು ಜೀವಿಯಷ್ಟೇ. ಅದನ್ನು ಮರೆತು ಜಾತೀಯ ಕಟ್ಟಳೆ, ಧರ್ಮದ ಅಮಲಿಗೆ ಒಳಗಾಗಿ ತನ್ನತನವನ್ನೇ ಕಳೆದುಕೊಂಡು ನೆಮ್ಮದಿ ಅರಸುತ್ತ ಯಾತ್ರೆ, ಜಾತ್ರೆ, ಮೇಳಗಳ ಬೆನ್ನುಹತ್ತಿ ಹತಾಶನಾಗಿದ್ದಾನೆ ಎಹಾವು, ಕಾಗೆ, ಕೋಳಿ, ಇರುವೆಗಳಿಂದ ಮನುಷ್ಯ ನೆಮ್ಮದಿಯಾಗಿ ಬದುಕುವುದನ್ನು ಕಲಿಯಬೇಕಿದೆ ಎಂದರು. 

ಈ ಭೂಮಿಗೆ ಏಕೆ ಬಂದಿದ್ದೇವೆ ಎಂದು ಅರಿತು ಬಾಳುವುದೇ ನಿಜವಾದ ಸುಖ ಜೀವನ. ಪ್ರತಿಯೊಂದು ಜೀವಿಯೂ ಸುಖವಾಗಿರಲೆಂದು ಈ ಪೃಕೃತಿ ಸೃಷ್ಟಿಯಾಗಿದೆ. ಪ್ರಕೃತಿ ಸಹಜವಾದ ಬದುಕು ನಮ್ಮದಾಗಬೇಕು. ಅದು ಬಿಟ್ಟು ರಾಗ, ದ್ವೇಷ, ಅಸೂಯೆ, ಅತಿಯಾದ ಆಸೆ, ಲೋಭದಿಂದ ಬದುಕು ಹಾಳು ಮಾಡಿಕೊಂಡು ಪ್ರಾಣಿ-ಪಕ್ಷಿಗಳಿಗಿಂತ ಮನುಷ್ಯ ಕಡೆಯಾಗಿದ್ದಾನೆ ಎಂದು ಹೇಳಿದರು. ಬುದ್ಧ, ಬಸವ, ಶರಣರು, ಸಂತರು, ತತ್ವಜ್ಞಾನಿಗಳು ಈ ಪ್ರಕೃತಿ ತತ್ವ ತಿಳಿ ಹೇಳಿದರೂ ಯತಾರ್ಥ ಜ್ಞಾನ ಅರಿಯುವಲ್ಲಿ ವಿಫಲನಾಗಿ ತನ್ನತನವಿದವನಂತೆ ಪರಿತಪಿಸುತ್ತಿದ್ದಾನೆ. ಧಾರ್ಮಿಕ ಮುಖಂಡರು ಧರ್ಮದ ಚೌಕಟ್ಟಿಗೆ, ರಾಜಕೀಯ ಮುಖಂಡರು ಮುಲಾಜಿನಲ್ಲಿ ಕಟ್ಟಿ ಹಾಕುತ್ತ ಬಂದಿದ್ದರಿಂದ ಸರಿಯಾದ ದಾರಿ ಯಾವುದು ಎನ್ನುವುದನ್ನೇ ಮರೆತಿದ್ದಾನೆ. ಜಾತಿ, ಧರ್ಮ, ಆಸ್ತಿ, ಅಂತಸ್ತು, ಪ್ರತಿಷ್ಠೆಯೇ ಜೀವನ ದು ಭಾವಿಸಿದ್ದರಿಂದ ಅತೃಪ್ತಜೀವಿಯಾಗಿದ್ದಾನೆ ಎಂದು ಎಂದು ಶ್ರೀಗಳು ವಿಶ್ಲೇಷಿಸಿದರು. 

ಪ್ರಾಣಿ, ಪಕ್ಷಿ ಸಂಕುಲ ತನ್ನ ಸ್ವಾಭಿಮಾನ ಕಳೆದುಕೊಳ್ಳದೇ ಬದುಕಿವೆ. ಆದರೆ ಮನುಷ್ಯ ಸ್ವಾಭಿಮಾನ ಮರೆತು ಪರಾವಲಂಬಿಯಾಗಿದ್ದಾನೆ. ಎಂದು ಸ್ವಾಮೀಜಿಗಳು ಹೇಳಿದರು ಈ ವೇಳೆ ಮಾಂಜರಿ ಗ್ರಾಮದ ಪ್ರಖ್ಯಾತ ವೈದ್ಯರಾದ ಡಾ. ಶಾಮ್ ಪಾಟೀಲ್ ಡಾಕ್ಟರ್ ಜ್ಯೋತಿ ರಾಮ ಮನೆ ಡಾಕ್ಟರ್ ಲಕ್ಷ್ಮಣ್ ಪವಾರ್ ಈ ದಾಂಪತ್ಯಗಳನ್ನು ಶ್ರೀ ಶೈಲ್ ಜಗದ್ಗುರುಗಳ ಹಸ್ತದಿಂದ ಸನ್ಮಾನಿಸಲಾಯಿತು ಈ 

ಸಮಾರಂಭಕ್ಕೆ ಮಾಹಾಂತೇಶ ಹಿರೇಮಠ ,ಸಂತೋಷ ಹಿರೇಮಠ ,ಅಶೋಕ ಕೊಠಿವಾಲೆ , ರವಿಂದ್ರ ಕೊಕಣೇ ,ಅಶೋಕ ಕುಂಬಾರ, ರಾಜಕುಮಾರ್ .ಬ .ನರವಾಡೆ ,ಶ್ರೀಧರ ನರವಾಡೆ ,ಅಪ್ಪಾಸಾಬ ಡೂನೆವಾಡೆ,ಬಾಬು ಮಿಜೆ9,ಅಮಿತ ಪಾಟೀಲ,ಪ್ರಕಾಶ ಪಾಟೀಲ,ಮುಕೇಶ ಕೋರೆ 

ತಿಮ್ಮೂ ದೇಸಾಯಿ ,ಶಿವಕುಮಾರ್ ಮಗದುಮ್ಮ ,ವೀನಸ್ ನರವಾಡೆ  ,ಮಲ್ಲು ಮಿಜೆ9 ,ಬಸವರಾಜ ಪಾಟೀಲ ,ಸುರೇಶ ಮಿಜೆ9 ನಾವು ಇನ್ನಿತರ ಸಮಾಜ ಬಾಂಧವರು ಗ್ರಾಮಸ್ಥರು ಮತ್ತು ಭಕ್ತಾದಿಗಳು ಹಾಜರಿದ್ದರು ಸಂತೋಷ್ ಶಾಸ್ತ್ರಿ ಹಿರೇಮಠ ಸ್ವಾಗತಿಸಿ ನಿರೂಪಿಸಿ ವಂದಿಸಿದರು