ಮೈಲಾರ ಜಾತ್ರೆಗೆ ಬರುವ ಭಕ್ತರ ಭಾವನೆಗೆ ಧಕ್ಕೆ ತಂದರೆ ಕ್ರಮ- ಡಿಸಿ ಎಚ್ಚರಿಕೆ
ಹೂವಿನಹಡಗಲಿ 08: ಐತಿಹಾಸಿಕ ಸುಕ್ಷೇತ್ರ ಮೈಲಾರದಲ್ಲಿ ಫೆ.4ರಿಂದ 16 ರವರೆಗೆ ನಡೆಯುವ ವಾರ್ಷಿಕ ಜಾತ್ರೆಗೆ ಬರುವ ಲಕ್ಷಾಂತರ ಭಕ್ತರ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರುವಂತೆ ನಡೆದುಕೊಂಡರೆ ಕ್ರಿಮಿನಲ್ ಮೊಕದ್ದಮೆ ದಾಖಲಿಸಬೇಕಾಗುತ್ತದೆ ಎಂದು ಜಿಲ್ಲಾಧಿಕಾರಿ ಎಂ.ಸ್ ದಿವಾಕರ ಎಚ್ಚರಿಕೆ ನೀಡಿದರು. ಹೂವಿನಹಡಗಲಿ ತಾಲ್ಲೂಕು ಮೈಲಾರ ಸುಕ್ಷೇತ್ರದಲ್ಲಿ ಸಮುದಾಯ ಭವನದಲ್ಲಿ ಮಂಗಳವಾರ ಜಾತ್ರಾ ಸಿದ್ಧತಾ ಸಭೆಯಲ್ಲಿ ಮಾತನಾಡಿದ ಅವರು ಧಾರ್ಮಿಕಸಂಪ್ರದಾಯಗಳನ್ನು ತಪ್ಪದಂತೆ ಪಾಲಿಸಿ, ಆದರೆ, ಭಕ್ತರ ನಂಬಿಕೆಗೆ ಧಕ್ಕೆ ತರುವ ಸಣ್ಣ ತೊಂದರೆಯನ್ನೂ ಸಹಿಸುವುದಿಲ್ಲ. ತಪ್ಪಿತಸ್ಥರ ವಿರುದ್ಧ ಎಫ್‌ಐಆರ್ ದಾಖಲಿಸಬೇಕಾಗುತ್ತದೆ’ ಹೇಳಿದರು. ಮೈಲಾರಲಿಂಗೇಶ್ವರ ಕಾರಣಿಕ ಮಹೋತ್ಸವಕ್ಕೆ ಬರುವ ಲಕ್ಷಾಂತರಭಕ್ತರಿಗೆ ಶುದ್ಧ ಕುಡಿಯುವ ನೀರು, ರಸ್ತೆ, ಸಾರಿಗೆ, ನೈರ್ಮಲ್ಯ, ಬೀದೀದೀಪ ವ್ಯವಸ್ಥೆಯನ್ನು ಸಮರ್ಕ ರೀತಿಯಲ್ಲಿ ಕಲ್ಪಿಸಬೇಕು. ಜನ, ಜಾನುವಾರುಗಳ ಆರೋಗ್ಯದ ದೃಷ್ಟಿಯಿಂದ ಓಷಧ, ಸಿಬ್ಬಂದಿಯೊಂದಿಗೆ ತಾತ್ಕಾಲಿಕ ಆಸ್ಪತ್ರೆ ಪಶು ಚಿಕಿತ್ಸಾಲಯಗಳು 24/7 ತೆರೆದಿರಬೇಕು’ ಎಂದು ಅಧಿಕಾರಿಗಳಿಗೆ ಸೂಚಿಸಿದರು.ಎಲ್.ಕೃಷ್ಣನಾಯ್ಕಮಾತನಾಡಿ, ’ಮೈಲಾರ ಸುಕ್ಷೇತ್ರ ಸಂಪರ್ಕಿಸುವ ಎಲ್ಲ ರಸ್ತೆಯನ್ನು ಜಾತ್ರೆ ಒಳಗಾಗಿ ರಿಪೇರಿ ಮಾಡಬೇಕು. ಜಾತ್ರೆಯ ಒಂದು ವಾರ ಮುಂಚಿತ ವಾಗಿಎಲ್ಲರೀತಿಯಸಿದ್ಧತೆಗಳನ್ನು ಪೂರ್ಣ ಗೊಳಿಸಬೇಕು. ಭಕ್ತರಿಗೆ ಯಾವುದೇ ರೀತಿಯಲ್ಲಿ ತೊಂದರೆಯಾಗದಂತೆ ನಿಗಾ ವಹಿಸಬೇಕು’ ಎಂದು ತಿಳಿಸಿದರು.ದೇವಸ್ಥಾನ ಧರ್ಮಕರ್ತ ವೆಂಕಪ್ಪಯ್ಯ ಒಡೆಯರ್, ಜಿಲ್ಲಾ ಪಂಚಾಯಿತಿ ಸಿಇಒ ಮಹ್ಮದ್ ಅಲಿ ಅಕ್ರಂ ಪಾಷಾ, ಡಿವೈಎಸ್ಪಿ ವೆಂಕಟರಮಣಪ್ಪ, ಗ್ರಾಮ ಪಂಚಾಯಿತಿ ಅಧ್ಯಕ್ಷೆ ಜಾನಕಮ್ಮ ತಳವಾರ, ಉಪಾಧ್ಯಕ್ಷೆ ನೀಲಮ್ಮ ತಹಶೀಲ್ದಾರ್ ’ಜಿ. ಸಂತೋಷಕುಮಾರ್. ತಾಲ್ಲೂಕು ಇಒ ಎಂ.ಉಮೇಶ, ಧಾರ್ಮಿಕ ದತ್ತಿ ಇಲಾಖೆ ಸಹಾಯಕ ಆಯುಕ್ತ ಗಂಗಾಧರ, ದೇವಸ್ಥಾನ ಕಾರ್ಯನಿರ್ವಾಹಕ ಅಧಿಕಾರಿ ಹನುಮಂತಪ್ಪ ಇದ್ದರು.