ಲೋಕದರ್ಶನ ವರದಿ
ದಾಂಡೇಲಿ, 29: ಕುಡಿಯುವ ನೀರಿನ ಕರವನ್ನು ಕಡಿಮೆಗೊಳಿಸಿ ಶುದ್ಧವಾದ ನೀರನ್ನು ಪೂರೈಸುವುದರ ಜೋತೆಗೆ ದಾಂಡೇಲಿ ಅಭಿವೃದ್ಧಿಯ ನಿಲ ನಕ್ಷೆ ಮಹೇಂದ್ರ ಜೈನ ವರದಿಯಲ್ಲಿನ ಎಲ್ಲ ಪ್ರಮುಖ ಅಂಶಗಳನ್ನು ಅನುಷ್ಟಾನಕ್ಕೆ ತರುವುದು ಹಾಗೂ ವೆಸ್ಟ್ ಕೊಸ್ಟ್ ಪೇಪರ್ ಮಿಲ್ ಇವರು ಸಾಮಾಜಿಕ ಹೋಣೆಗಾರಿಕೆ ಅಡಿಯಲ್ಲಿ ನಗರವನ್ನು ಅಭಿವೃದ್ಧಿ ಪಡಿಸಬೇಕು ಇಲ್ಲದಿದ್ದರೆ ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಮತದಾನ ಬಹಿಷ್ಕಾರದ ಕರೆ ನೀಡುವುದಾಗಿ ದಾಂಡೇಲಿ ಸಮಗ್ರ ಅಭಿವೃದ್ಧಿ ಹೋರಾಟ ಸಮಿತಿ ಪದಾಧಿಕಾರಿಗಳು ಹಳಿಯಾಳ ತಹಶಿಲ್ದಾರ ಮುಖಾಂತರ ಜಿಲ್ಲಾಧಿಕಾರಿಗಳಿಗೆ ಸಲ್ಲಿಸಿದ ಮನವಿಯಲ್ಲಿ ಉಗ್ರ ಎಚ್ಚರಿಕೆ ನೀಡಿದ್ದಾರೆ.
ನಗರದಲ್ಲಿನ ಅನೇಕ ಸಮಸ್ಯೆಗಳ ಬಗ್ಗೆ ಸಂಬಂಧ ಪಟ್ಟ ಅಧಿಕಾರಿಗಳಿಗೆ ಹಲವಾರು ಬಾರಿ ಗಮನಕ್ಕೆ ತಂದರು ಯಾವುದೇ ರೀತಿಯ ಕ್ರಮ ವಹಿಸಿಲ್ಲ. ಹಿಗಿರುವಾಗ ಕಾಳಿನದಿ ದಾಂಡೇಲಿ ನಗರದಲ್ಲಿ ಹರಿತ್ತಿರುವುದರಿಂದ ಕಾಳಿನದಿಯ ನೀರನ್ನು ಹಳಿಯಾಳದ ಕಬ್ಬಿನ ಕಾಖರ್ಾನೆಗೆ ಸಾಗಿಸಲು ಪ್ರಾರಂಭಿಸಿದಾಗ ದಾಂಡೇಲಿ ಬಚಾವೋ ಆಂದೋಲನ ಸಮಿತಿಯವರು ನಡೆಸಿದ ಅಂದಿನ ಹೋರಾಟದ ಫಲವಾಗಿ ಅಂದಿನ ಮುಖ್ಯಮಂತ್ರಿಗಳಾದ ಸನ್ಮಾನ್ಯ ಕುಮಾರಸ್ವಾಮಿ ಇವರು ವಿಧಾನ ಸೌಧದಲ್ಲಿ ಸಭೆಯನ್ನು ಕರೆದು ಸಮಸ್ಯೆಯನ್ನು ಆಲಿಸಿ ನೀರಿಗೆ ಬದಲಾಗಿ ದಾಂಡೇಲಿ ನಗರವನ್ನು ಸಮಗ್ರವಾಗಿ ಅಭಿವೃದ್ಧಿ ಪಡಿಸಲು ಮಹೇಂದ್ರ ಜೈನ ಆಯೋಗವನ್ನು ರಚಿಸಿದರು.
ಸರಕಾರದ ಆದೇಶದಂತೆ ದಾಂಡೇಲಿಗೆ ಆಗಮಿಸಿದ ಆಯ್.ಎ.ಎಸ್ ಅಧಿಕಾರಿ ಮಹೇಂದ್ರ ಜೈನ ನೇತೃತ್ವದ ತಂಡವು ದಾಂಡೇಲಿ ನಗರವನ್ನು ಕೂಲಂಕುಶವಾಗಿ ಅಧ್ಯಯನ ನಡೆಸಿ ದಾಂಡೇಲಿ ನಗರವನ್ನು ಅಭಿವೃದ್ಧಿ ಪಡಿಸಲು 180 ಪುಟಗಳ ಸವಿಸ್ತಾರ ವರದಿಯನ್ನು ಅಂದಿನ ರಾಜ್ಯ ಸಕರ್ಾರಕ್ಕೆ ಸಲ್ಲಿಸಿತು. ವರದಿ ಸಲ್ಲಿಸಿ 12 ವರ್ಷ ಕಳೆದರು ರಾಜ್ಯ ಸಕರ್ಾರವು ಜೈನ ವರದಿಯಲ್ಲಿನ ಯಾವುದೇ ಪ್ರಮುಖ ಅಂಶವನ್ನು ಅನುಷ್ಟಾನಕ್ಕೆ ತರಲಿಲ್ಲ. ಆದರೆ ಹಳಿಯಾಳಕ್ಕೆ ದಾಂಡೇಲಿಯಿಂದ ಕಾಳಿನದಿ ನೀರನ್ನು ಕಬ್ಬಿನ ಕಾಖರ್ಾನೆಗೆ ಹಾಗೂ ಕುಡಿಯುವ ನೀರಿನ ಯೋಜನೆಗೆ ಸಾಗಿಸುತ್ತಲೆ ಇದೆ. ಅಷ್ಟು ಸಾಲದೆ ಗಾಯದ ಮೇಲೆ ಬರೆ ಎಳೆದಂತೆ ದಾಂಡೇಲಿ ನಗರವನ್ನು ಅಭಿವೃದ್ಧಿ ಪಡೆಸದೆ ಕುಡಿಯುವ ನೀರಿನ ಕರ 120 ಇದ್ದದನ್ನು ಸರಕಾರದ ಆದೇಶದ ನೇಪವೊಡ್ಡಿ ಎಕಾಎಕಿ 180 ಕ್ಕೆ ಹಿಚ್ಚಿಸಿ ಬಡವ ಬಲ್ಲಿದ ಎಂಬ ಬೇದಭಾವ ವಿಲ್ಲದೆ ಎಲ್ಲರಿಂದ ಒತ್ತಾಯ ಪೂರ್ವಕವಾಗಿ ನೀರಿನ ಕರವನ್ನು ಆಕರಣೆ ಮಾಡುತ್ತಿದ್ದಾರೆ ಇದ್ದನ್ನು ವಿರೋದಿಸಿ ವಿವಿಧ ಸಂಘ ಸಂಸ್ಥೆಗಳು ಸರಕಾರಕ್ಕೆ, ಜಿಲ್ಲಾಧಿಕಾರಿಗಳಿಗೆ, ಜಿಲ್ಲಾ ಉಸ್ತುವಾರಿ ಮಂತ್ರಿಗಳಿಗೆ ಮನವಿ ಸಲ್ಲಿಸುತ್ತಾ ಬಂದರು ಪ್ರಯೋಜನವಾಗಿಲ್ಲ. ಅಷ್ಟು ಸಾಲದೆ ಮತ್ತೋಮ್ಮೆ ಕಾಳಿ ಏತ ನೀರಾವರಿ ಯೋಜನೆಯ ಅಡಿಯಲ್ಲಿ ದಾಂಡೇಲಿಯ ಕಾಳಿನದಿಯಿಂದ ಹಳಿಯಾಳದ 48 ಕೆರೆಗಳು ಹಾಗೂ 18 ಬಾಂದಾರುಗಳು ತುಂಬಿಸುವ ಬೃಹತ್ ಯೋಜನೆಯನ್ನು ಇನ್ನು ಕೆಲವೆ ತಿಂಗಳುಗಳಲ್ಲಿ ಆರಂಭಿಸಲು ತರಾತುರಿಯಲ್ಲಿ ಕಾಮಗಾರಿ ನಡೆಸುತ್ತಿದ್ದಾರೆ. ಆದರೆ ಈ ವಿಷಯಗಳ ಬಗ್ಗೆ ದಾಂಡೇಲಿ ಸಮಗ್ರ ಅಭಿವೃದ್ಧಿ ಹೋರಾಟ ಸಮಿತಿ ವಿರೋದಿಸುವದಿಲ್ಲ ಆದರೆ ಜೈನ ವರದಿಯಲ್ಲಿನ ಪ್ರಮುಖ ಅಂಶಗಳ ಅನುಷ್ಟಾನ, ಶುದ್ಧವಾದ ಕುಡಿಯುವ ನೀರನ್ನು ಪೂರೈಸಿ ಕರ ಕಡಿಮೆಗೊಳಿಸುವದು ಹಾಗೂ ಕಾಗದ ಕಾಖರ್ಾನೆ ಅವರು ಸಾಮಾಜಿಕ ಹೋಣೆಗಾರಿಕೆಯಲ್ಲಿ ನಗರವನ್ನು ಅಭಿವೃದ್ಧಿ ಪಡಿಸಬೇಕೆಂದು ಮನವಿಯಲ್ಲಿ ತಿಳಿಸಲಾಗಿದೆ.
ಈ ಬೇಡಿಕೆಗಳನ್ನು ಇಡೆರಿಸದಿದ್ದರೆ ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಮತದಾನ ಬಹಿಷ್ಕಾರದ ಕರೆ ನೀಡುವುದಾಗಿ ದಾಂಡೇಲಿ ಸಮಗ್ರ ಹೋರಾಟ ಸಮಿತಿ ಪದಾಧಿಕಾರಿಗಳು ಎಚ್ಚರಿಕೆ ನೀಡಿದರು ಈ ಸಂದರ್ಭದಲ್ಲಿ ಸಮಿತಿಯ ಅಧ್ಯಕ್ಷ ಅಕ್ರಮ್ ಖಾನ್, ಮಾಜಿ ಟೌನ್ ಪ್ಲಾನೀಂಗ್ ಅಧ್ಯಕ್ಷ ಅಶೋಕ ಪಾಟೀಲ, ಹೀರಿಯ ನಾಗರಿಕ ಸಮಿತಿಯ ಅಧ್ಯಕ್ಷ ಕೊನಾಪುರಿ, ಸಮಿತಿಯ ಉಪಾಧ್ಯಕ್ಷ ಫಿರೋಜ ಫಿರಜಾದೆ, ನ್ಯಾಯವಾದಿ ರಾಘವೇಂದ್ರ ಗಡಪ್ಪನವರ, ಅಬ್ದುಲ ವಹಾಬ ಬಾನ್ಸರಿ, ಹಾದಿಮನಿ, ಚಂದ್ರಕಾಂತ ನಡಿಗೇರ, ಡಿ.ಎಸ್ ಕಲ್ಗೂಟಕರ್, ರಿಕ್ಷಾ ಚಾಲಕ ಸಂಘದ ಅಧ್ಯಕ್ಷ ಬಾಬಾಸಾಬ, ಸಲೀಮ್ ಕಾಕರ, ಎಸ್.ಎಸ್. ಕೂರಡೇಕರ, ಸಬಾಸ್ಟೀನ್ ಡಿಮೆಲ್ಲೊ, ಎಸ್.ಎಕೊನಾಪುರಿ, ವಸಂತ ಮನ್ನಾರಿ,ಗವಿಸಿದ್ದಪ್ಪ, ಸಿ.ಎಸ್. ಲೋಬೊ, ರವಿಕುಮಾರ ಚೌವ್ಹಾಣ, ಮೀನಾಕ್ಷಿ ಬಡಗೇರ, ನೀಲಾ ,ದಾನಮ ಮುಂತಾದವರು ಉಪಸ್ಥಿತರಿದ್ದರು.