ಮೈಲಾರ ದೇಗುಲದ 12 ಬಾಬುದಾರರ ಬೇಡಿಕೆ ಈಡೇರಿಸ-ದಿದ್ದರೆ ಸಾಮೂಹಿಕ ಬಹಿಷ್ಕಾರ

ಮೈಲಾರ ದೇಗುಲದ 12 ಬಾಬುದಾರರ ಬೇಡಿಕೆ ಈಡೇರಿಸ-ದಿದ್ದರೆ ಸಾಮೂಹಿಕ ಬಹಿಷ್ಕಾರ  If the demands of the 12 babudars of the Mailara temple are not met, a mass boycott will be launche

ಹೂವಿನಹಡಗಲಿ  21:  ತಾಲ್ಲೂಕಿನ ಮೈಲಾರಸುಕ್ಷೇತ್ರದಲ್ಲಿ  ವಂಶಪರಂಪರಿಕ ಧಾರ್ಮಿಕ ಕಾರ್ಯ ಕ್ರಮ ವರ್ಷ ಪೂರ್ಣ ನಡೆಸಿಕೊಂಡು ಬರುವ ಬಾಬುದಾರರ ಕುಂದು ಕೊರತೆಗಳಿಗೆ ದೇವಸ್ಥಾನ ಸಮಿತಿ ಸ್ಪಂದಿಸುತ್ತಿಲ್ಲ. ಜಿಲ್ಲಾಧಿಕಾರಿಗಳು ಮಧ್ಯೆ ಪ್ರವೇಶಿಸಿ ಬೇಡಿಕೆ ಈಡೇರಿಸ-ದಿದ್ದರೆ ಮೈಲಾರಲಿಂಗೇಶ್ವರ ಕಾರಣಿಕ ಮಹೋತ್ಸವದ ಎಲ್ಲಾ ಧಾರ್ಮಿಕ  ಪರಂಪರೆಗಳ ಸೇವೆಗಳನ್ನು ಬಹಿಷ್ಕರಿಸುತ್ತೇವೆ’ ಎಂದು ಗೊರವ ಬಾಬುದಾರರು ಎಚ್ಚರಿಸಿದ್ದಾರೆ.ಪಟ್ಟಣದ ಪ್ರವಾಸಿಮಂದಿರದಲ್ಲಿ ಶನಿವಾರ ಸುದ್ದಿ ಗೋಷ್ಠಿ ಯಲ್ಲಿ ಕಾರ್ಣಿಕ ನುಡಿಯುವ ಗೊರವಪ್ಪ ರಾಮಣ್ಣ ಸೇರಿ ಇತರೆ  ಮೈಲಾರಲಿಂಗೇಶ್ವರ ದೇವಸ್ಥಾನದ 12 ಜನ ಬಾಬುದಾರರ  ಧರ್ಮಕರ್ತ ವೆಂಕಪ್ಪಯ್ಯ ಒಡೆಯರ್ ವಿರುದ್ಧ ದೂರುಗಳನ್ನು ಹೇಳಿದರು.  

ದೇವಸ್ಥಾನ ಸಂಪ್ರದಾಯ ಉಲ್ಲಂಘನೆ ;-  ಧರ್ಮ ಕರ್ತ ವೆಂಕಪ್ಪಯ್ಯ ಒಡೆಯರ್ ಸಾಲಿಗ್ರಾಮ ಪೂಜೆ ಅವರ ಮನೆಯ ಆಚಾರ. ಅದನ್ನು ದೇವಸ್ಥಾನದೊಳಗೆತಂದು ಪೂಜೆ ಮಾಡುತ್ತಿರುವುದು ಸಂಪ್ರದಾಯದ ಉಲ್ಲಂಘನೆ ಎಂದು ದೇವಸ್ಥಾನ ಅರ್ಚಕ ಪ್ರಮೋದ್ ಭಟ್ ಆರೋಪಿಸಿದ ಅವರು ಧರ್ಮಕರ್ತರಿಗೆ ಗುರುಪೀಠ ಇದೆ. ಅವರದೇ ಆದ ಹಕ್ಕುಬಾದ್ಯತೆ-ಗಳಿವೆ. ದೇವಸ್ಥಾನ ಒಳಾಂಗಣದಲ್ಲಿ ಅರ್ಚಕರು ಹೊರತುಪಡಿಸಿ ಬೇರೆಯವರು ಹೋಗಬಾರದು ಎಂದು ಜಿಲ್ಲಾಧಿಕಾರಿ ಆದೇಶಿಸಿದ್ದರೂ ಧರ್ಮಕರ್ತರು ಮತ್ತು ವಂಶಸ್ಥರು ಗರ್ಭಗುಡಿಗೆ ಬಂದು ನಮ್ಮ ಸೇವೆಗೆ ಅಡ್ಡಿಪಡಿಸುತ್ತಾರೆ. ಜಿಲ್ಲಾಧಿಕಾರಿ-ಗಳು ಮಧ್ಯಪ್ರವೇಶಿಸಿ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ಭಂಡಾರ ಷಷ್ಠಿಯಂದು ಕಾರಣಿಕ ಮಹೋತ್ಸವ ಪ್ರಚಾರ ಸಾಮಗ್ರಿ ಬಿಡುಗಡೆ ಮಾಡುವ ಸಂಪ್ರದಾಯ. ಆದರೆ, ಧರ್ಮಕರ್ತರು ಮುಂಚಿತವಾಗಿ ಭಕ್ತರಿಗೆ ವಾಟ್ಸ್‌ ಆ್ಯಪ್ ನಲ್ಲಿ  ದಿನಾಂಕ ಮಾರ್ಚ್‌ 3 ರಂದು ಕಾರ್ಣಿಕ ಎಂದು ತಪ್ಪು  ಮಾಹಿತಿ  ರವಾನಿಸಿದ್ದಾರೆ ಎಂದರು. ಅನಿಲ್  ದಳವಾಯಿ  ಮಾತನಾಡಿ  ಮುಜರಾಯಿ ಇಲಾಖೆ ಆಯುಕ್ತರ ಆದೇಶದಂತೆ ಬಾಬುದಾರರ ನೇಮಕ, ಸೇವಾ ಕಾರ್ಯಗಳ ಮೇಲ್ವಿಚಾರಣೆ-ಯನ್ನು ದೇವಸ್ಥಾನ ಸಮಿತಿ ಕಾರ್ಯನಿ-ರ್ವಾಹಕ ಅಧಿಕಾರಿ ನಿರ್ವಹಿಸಬೇಕು ಆದರೆ ಈಚೆಗೆ ಇಒ ಬಾಬುದಾರರ ಕುಂದು ಕೊರತೆ ಸಭೆಯನ್ನು ರದ್ದು ಪಡಿಸಲಿಕ್ಕೆ ಧರ್ಮಕರ್ತ ವೆಂಕಪ್ಪಯ್ಯ ಒಡೆಯರ್ ಅನಗತ್ಯ ಹಸ್ತಕ್ಷೇಪ ಕಾರಣ ಎಂದು ಆರೋಪಿಸಿದರು.ದೇವಸ್ಥಾನ ದ ಆದಾಯದಲ್ಲಿ ಶೇ 35ರಷ್ಟು ಬಾಬುದಾರರಿಗೆ ನೀಡಲು ಅವಕಾಶ ಇದೆ.  

ಕನಿಷ್ಠ ವಾರ್ಷಿಕ ? 1.70 ಲಕ್ಷ. ರೂ. ವೇತನ ನೀಡಬೇಕು ಎಂದರು.  ಛತ್ರಿ, ‘ಮೈಲಾರಲಿಂಗಸ್ವಾಮಿಗೆ ಚಾಮರ ಸೇವೆ ಮಾಡಲು ಸಿದ್ಧರಿದ್ದೇವೆ. ಆದರೆ ಧರ್ಮಕರ್ತರು, ಸಂಪ್ರದಾಯದ ಹೆಸರಲ್ಲಿ ವ್ಯಕ್ತಿ ಸೇವೆ ಬಯಸುತ್ತಾರೆ. ನಿರಾಕರಿಸಿದರೆ ಬಾಬುದಾರಿಕೆಯಿಂದ ತೆಗೆಯುವುದಾಗಿ ಹೆದರಿಸುತ್ತಾರೆ ಎಂದರು.ನಮ್ಮ ಬೇಡಿಕೆ ಈಡೇರಿಸದಿದ್ದರೆ  ಸಾಮೂಹಿಕವಾಗಿ  ಎಲ್ಲಾ ಸೇವೆಗಳನ್ನು ನಾವು ಬಹಿಷ್ಕರಿಸು-ತ್ತೇವೆ. ಕಾರಣಿಕ ನುಡಿಯುವುದು, ಬಗಣಿ ಗೂಟ ಬಡಿದುಕೊಳ್ಳುವುದು. ಸರಪಳಿ ಪವಾಡ, ಛತ್ರಿ ಚಾಮರ ಸೇಬೆ ಸೇರಿದಂತೆ ಎಲ್ಲವನ್ನೂ ಧರ್ಮಕರ್ತರೇ ಮಾಡಿಕೊಳ್ಳಲಿ ಎಂದು ತಿಳಿಸಿದರು.ಕಾರಣಿಕದ ರಾಮಣ್ಣ, ಗ್ರಾ.ಪಂ. ಮಾಜಿ ಅಧ್ಯಕ್ಷ ಭರಮಲಿಂಗಪ್ಪ, ಮಾಲ್ದಾರ್ ರವೀಂದ್ರ, ಕಂಚಾವೀರ ಮಾಲತೇಶ, ಈಟಿ ಹೆಗ್ಗಪ್ಪ, ನಾಗರಾಜ ಕಂಬಳಿ, ಭರಮಪ್ಪ ಆರೇರ, ಪ್ರಭಾನಂದ ಇಟಗಿ ಇದ್ದರು.