ಸಕಾಲದಲ್ಲಿ ಸಾಲ ಪಾವತಿಸಿದರೆ ಸಂಘ ಅಭಿವೃದ್ದಿ:ಬಿರಾದಾರ
If loans are paid on time, the association will develop: Biradaar
ಸಕಾಲದಲ್ಲಿ ಸಾಲ ಪಾವತಿಸಿದರೆ ಸಂಘ ಅಭಿವೃದ್ದಿ:ಬಿರಾದಾರ
ತಾಳಿಕೋಟಿ, 15 ; ಸದಸ್ಯರ ನಂಬಿಕೆಯೇ ಸಂಘದ ನಿಜವಾದ ಬಂಡವಾಳ, ಅವರೇ ಇದರ ನೈಜ ಮಾಲೀಕರು ಸಂಘದ ಬೆಳವಣಿಗೆ ಹಾಗೂ ಅಭಿವೃದ್ಧಿಗೆ ಸದಸ್ಯರ ಸಹಕಾರ ಅತ್ಯಗತ್ಯವಾಗಿದೆ ಎಂದು ವಿಡಿಸಿಸಿ ಬ್ಯಾಂಕ್ ಕ್ಷೇತ್ರಾಧಿಕಾರಿ ಎಸ್.ಬಿ.ಬಿರಾದಾರ ಹೇಳಿದರು. ತಾಲೂಕಿನ ಹರನಾಳ ಗ್ರಾಮದ ವಿವಿಧೋದ್ದೇಶ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಸಂಘ ನಿಯಮಿತ ಇದರ 62ನೇ ವಾರ್ಷಿಕ ಮಹಾಸಭೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಸದಸ್ಯರು ಸಂಘದೊಂದಿಗೆ ಉತ್ತಮ ವಹಿವಾಟ ಇಟ್ಟುಕೊಂಡು ಪಡೆದ ಸಾಲವನ್ನು ಸಕಾಲಕ್ಕೆ ಮರುಪಾವತಿ ಮಾಡಬೇಕು. ಕೇವಲ ಸಾಲ ತೆಗೆದುಕೊಳ್ಳುವುದನ್ನು ಯೋಚಿಸದೆ ತಮ್ಮ ಠೇವಣೆಗಳನ್ನು ಸಂಘದಲ್ಲಿಯೇ ಇಡಲು ಪ್ರಯತ್ನಿಸಬೇಕು ಇದು ಸಂಘದ ಸಾಲ ಕೊಡುವ ಶಕ್ತಿಯನ್ನು ಹೆಚ್ಚಿಸುತ್ತದೆ,ಜೊತೆಗೆ ಸಹಕಾರ ಸಂಘಗಳು ನೀವಿಟ್ಟ ಠೇವಣಿಗಳಿಗೆ ರಾಷ್ಟ್ರೀಕೃತ ಬ್ಯಾಂಕುಗಳ ಗಿಂತಲೂ ಹೆಚ್ಚಿಗೆ ಬಡ್ಡಿಯನ್ನು ನೀಡುತ್ತವೆ ಎಂದ ಅವರು ಸಂಘವು ಹಲವಾರು ಯೋಜನೆಗಳಿಗಾಗಿ ರೈತರಿಗೆ ಕಡಿಮೆ ಬಡ್ಡಿ ದರದಲ್ಲಿ ಸಾಲವನ್ನು ನೀಡುತ್ತದೆ ಅವರಿಗಾಗಿಯೇ "ರೈತ ಮಿತ್ರ" ಎಂಬ ಹೊಸ ಯೋಜನೆಯನ್ನು ಜಾರಿಗೆ ತರಲಾಗಿದೆ ಇದರಲ್ಲಿ ರೂ.5 ಲಕ್ಷದವರೆಗೆ ಶೂನ್ಯ ಬಡ್ಡಿ ಮತ್ತು 5 ಲಕ್ಷ ಮೇಲ್ಪಟ್ಟ ಸಾಲಗಳಿಗೆ ಶೇಕಡ 10ರಷ್ಟು ಬಡ್ಡಿಯನ್ನು ವಿಧಿಸುತ್ತದೆ ರೈತರು ಇದರ ಸದುಪಯೋಗ ಮಾಡಿಕೊಳ್ಳಬೇಕು ಎಂದರು.
ಉಪನ್ಯಾಸಕ ಬಸನಗೌಡ ಗಬಸಾವಳಗಿ ಮಾತನಾಡಿ ಸಹಕಾರ ಸಂಘಗಳು ದೇಶದ ಅಭಿವೃದ್ಧಿಯಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ ಈ ಕ್ಷೇತ್ರಕ್ಕೆ ಹೆಚ್ಚಿನ ಯುವಕರು ಬರಬೇಕಾಗಿದೆ ಎಂದರು. ಸಾಮಾಜಿಕ ಹೋರಾಟಗಾರ ಶಿವರಾಜ ಗುಂಡಕನಾಳ ಮಾತನಾಡಿ ಸಂಘವು ಹೊರತಂದ ಯೋಜನೆಗಳ ಸರಿಯಾದ ಮಾಹಿತಿಯನ್ನು ರೈತರಿಗೆ ತಿಳಿಸಬೇಕಾಗಿದೆ ಸಂಪರ್ಕ ಹಾಗೂ ಮಾಹಿತಿಯ ಕೊರತೆಯಿಂದಾಗಿ ಅವರಿಗೆ ಯೋಜನೆಗಳ ಸದುಪಯೋಗ ಮಾಡಿಕೊಳ್ಳಲು ಸಾಧ್ಯವಾಗುತ್ತಿಲ್ಲ ಎಂದರು.
ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಕೆ.ಡಿ.ಅಂಗಡಿ ವಾರ್ಷಿಕ ವರದಿ ವಾಚಿಸಿದರು.ಸಂಘದ ಅಧ್ಯಕ್ಷ ಎಸ್.ಎಚ್.ಬಿರಾದಾರ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷ ಡಿ.ಕೆ. ಗತ್ತರಗಿ, ನಿರ್ದೇಶಕರಾದ ಬಿ.ಎಂ. ಗುಡ್ನಾಳ, ಎನ್.ಎಸ್.ನಾಗೂರ, ಎಸ್. ಎಚ್.ಪೂಜಾರಿ, ಎಂ.ಎಸ್. ಮಕಾಶಿ, ಎನ್.ಎಸ್.ಚಳ್ಳಗಿ, ಎಂ.ಜೆ. ಬಿರಾದಾರ, ಬಿ.ಎನ್.ಬಿರಾದಾರ, ಎಸ್.ಬಿ.ಬೂದಿಹಾಳ, ಎಂ.ಸಿ.ಮೂಕೀಹಾಳ, ಗಣ್ಯರಾದ ಸಾಹೇಬಗೌಡ ಮಕಾಶಿ,ಎ.ಎಸ್.ಪಾಟೀಲ, ಗ್ರಾ.ಪಂ. ಮಾಜಿ ಅಧ್ಯಕ್ಷ ಮಹಮ್ಮದ್ ಪಟೇಲ ಬಿರಾದಾರ, ಎಂ.ಎಸ್.ದೇಸಾಯಿ, ಹುಲಗಪ್ಪ ಶಿವಪೂರ, ದೇವಪ್ಪ ಗುಡಗುಂಟಿ, ಸಿಬ್ಬಂದಿಗಳಾದ ಎನ್.ಎಸ್.ದೇಸಾಯಿ, ಎಸ್.ಎನ್. ನದಾಫ ಹಾಗೂ ಸಂಘದ ಸದಸ್ಯರು ಇದ್ದರು.
ಅಕ್ರಮ ಚಟುವಟಿಕೆ ಎಸಗಿದರೆ ಗಡಿಪಾರದ ಎಚ್ಚರಿಕೆ: ಪೊಲೀಸ ಠಾಣೆಯಲ್ಲಿ ರೌಡಿಶೀಟರ್ ಗಳ ಪರೇಡ್
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ 