ಲೋಕದರ್ಶನ ವರದಿ
ದಾಂಡೇಲಿ: ಸಮಯ ಸಂದರ್ಭ ಉಪಯೋಗಿಸಿಕೊಂಡು ಸಂಕಷ್ಟದಲ್ಲಿದ್ದವರಿಗೆ ಸ್ಪಂದಿಸುವ ಕೆಲಸ ಆಗಬೇಕಾಗಿದೆ. ನಮಗಾಗಿ ಇರುವ ಕಾನೂನನ್ನು ಉಪಯೋಗಿಸಿಕೊಂಡು ದುರ್ಬಲರನ್ನು ಸಶಕ್ತರನ್ನಾಗಿಸಲು ಮಹತ್ವದ ಕೆಲಸ ಸಮಾಜಮುಖಿ ವ್ಯಕ್ತಿತ್ವಗಳಿಂದ ಆಗಬೇಕಾಗಿದೆ. ಸಂಕಷ್ಟದಲ್ಲಿದ್ದವರಿಗೆ ಸ್ಪಂದಿಸುವುದೆ ನಿಜವಾದ ಸೇವೆ. ಈ ನಿಟ್ಟಿನಲ್ಲಿ ಮಾನವ ಹಕ್ಕುಗಳ ಸಂರಕ್ಷಣೆಗಾಗಿ ನಮ್ಮನ್ನು ನಾವು ತೊಡಗಿಸಿಕೊಂಡಾಗ ಸಮೃದ್ದ ಮತ್ತು ಶಕ್ತಿಶಾಲಿ ರಾಷ್ಟ್ರ ನಿಮರ್ಾಣ ಸಾಧ್ಯ ಎಂದು ಉಡುಪಿಯ ಖ್ಯಾತ ವಾಗ್ಮಿ ಮಾನವ ಹಕ್ಕುಗಳ ಸಂರಕ್ಷನಾ ವೇದಿಕೆ ಅದ್ಯಕ್ಷ ಡಾ. ರವೀಂದ್ರನಾಥ ಶಾನಭಾಗ ಅವರು ಹೇಳಿದರು.
ಅವರು ನಗರದ ಸರಕಾರಿ ಪ್ರಥಮ ದಜರ್ೆ ಕಾಲೇಜಿನಲ್ಲಿ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ ನವ ದೆಹಲಿ ಇವರ ಸಹಯೋಗದೊಂದಿಗೆ ಮಹಾ ವಿದ್ಯಾಲಯದ ರಾಜ್ಯಶಾಸ್ತ್ರ ವಿಭಾಗದ ಆಶ್ರಯದಲ್ಲಿ ಮಾನವ ಹಕ್ಕುಗಳ ಕುರಿತು ಮಂಗಳವಾರ ನಡೆದ ಒಂದು ದಿನದ ಕಾಯರ್ಾಗಾರವನ್ನು ಉದ್ಘಾಟಿಸಿ ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿ ಮಾತನಾಡುತ್ತಿದ್ದರು. ಇವತ್ತು ನಾವು ಆದಿವಾಸಿಗಳ ಬಗ್ಗೆ, ಮಹಿಳಾ ಮಿಸಲಾತಿಯ ಬಗ್ಗೆ, ಹಿರಿಯ ನಾಗರಿಕರ ಬಗ್ಗೆ ಹೋರಾಟಗಳನ್ನು ಮಾಡುತ್ತಿದ್ದರು ಅದರ ಜೋತೆಗೆ ಹೆತ್ತವರನ್ನು ಬೀದಿಗೆ ತಳ್ಳುತ್ತೀರುವ ಮನ ಕಲಕುವ ಘಟನೆಯ ವಿರುದ್ಧವು ನಾವು ಜಾಗ್ರತರಾಗಬೇಕಾಗಿದೆ. ಕಳೇದ 40 ವರ್ಷಗಳಿಂದ ಮಾನವ ಹಕ್ಕುಗಳ ಬಗ್ಗೆ ವಿವಿಧ ರೀತಿಗಳಲ್ಲಿ ಹೋರಾಟ ಮಾಡುತ್ತಾ ಬರಲಾಗಿದ್ದು ವಿದೇಶಗಳಿಗೆ ಮಾರಾಟವಾಗಿದ್ದ ಮಹಿಳೆಯರನ್ನು ಸಂರಕ್ಷಿಸಿ ಮರಳಿ ದೇಶಕ್ಕೆ ಕರೆದುಕೊಂಡು ಬಂದಂತಹ ಕೆಲಸ ಮಾಡಲಾಗಿದೆ.
ಶಿಕ್ಷಣಕ್ಕಾಗಿ ಸಾಲಮಾಡಿ ತಂದೆಯನ್ನು ಕಳೇದುಕೊಂಡಂತಹ ಸಂದರ್ಭದಲ್ಲಿ ಸಾಲಕ್ಕೆ ಪ್ರತಿಯಾಗಿ ತುಂಬಿದ ವಿಮೆ ಹಣವನ್ನು ತುಂಬದೆ ಸತಾಯಿಸಿ ಮೇಲಿಂದ ಮೇಲೆ ಪತ್ರದ ಮುಖಾಂತರ ಕಿರುಕುಳ ನೀಡಿದ ಬ್ಯಾಂಕ ವ್ಯವಸ್ಥಾಪಕರ ವಿರುದ್ಧ ಪ್ರಜಾಧ್ವನಿ ಅಡಿ ಹೋರಾಟ ಮಾಡಿ ಮಹಿಳೆಯೊಬ್ಬರಿಗೆ ನೇರವಾಗಿರುವುದನ್ನು ವಿವರಿಸಿದ ಶಾನಭಾಗ ಅವರು ಎಂಟು ಮಕ್ಕಳಿದ್ದರು ಮನೆಯಿಂದ ಹೋರ ದಬ್ಬಿದ ವಯೋವೃದ್ಧ ತಾಯಿಯ ಬಗ್ಗೆ ಪತ್ರದ ಮೂಲಕ ಹೋರಾಟ ಮಾಡಿದ ಫಲಶುೃತಿಯಾಗಿ ಹೆತ್ತವರ ಬಗ್ಗೆಯೆ ಹೋಸದಾದ ಕಾನೂನನ್ನು ರೂಪಿಸಲು ಪ್ರೇರಣಾದಾಯಿಯಾದ ಹೆಮ್ಮೆ ನಮ್ಮ ಸಂಘಟನೆಗೆ ಮತ್ತು ಹೋರಾಟಕ್ಕಿದೆ. ಇದರಿಂದ ಹೋರ ದಬ್ಬಲ್ಪಟ್ಟ ವಯೊವೃದ್ಧೆ ತಾಯಿಯನ್ನು ಮರಳಿ ಮನೆಗೆ ಸೇರಿಸಲಾಗಿದೆ. ಮನೆಯಿಂದ ಹೋರ ದುಡಲ್ಪಟ್ಟ ಹೆತ್ತವರಿಂದ ಒಟ್ಟು 292 ಅಜರ್ಿಗಳು ಬಂದು ಅವೆಲ್ಲವುಗಳನ್ನು ಪರಿಹರೀಸಿದ ಧನ್ಯತಾಭಾವ ನಮಗಿದೆ ಅಲ್ಲದೆ ಬಾಲ ಕಾಮರ್ಿಕ ಪದ್ದತಿಯ ವಿರುದ್ದ ಹೋರಾಟ ಹೀಗೆ ಮಾನವ ಹಕ್ಕುಗಳ ನಿರಂತರವಾಗಿ ಅಷ್ಟೆ ಫಲಶುೃತಿಯಾಗಿ ಹೋರಾಟವನ್ನು ಕೈಗೊಂಡು ರಾಷ್ಟ್ರವ್ಯಾಪ್ತಿ ಗಮನ ಸೇಳೆಯಲಾಗಿದೆ ಎಂದರು. ನಮ್ಮದು ಸ್ವಾರ್ಥರಹಿತವಾದ ಸೇವೆಯಾಗಿರಬೇಕು ಆ ರೀತಿಯ ಸೇವೆ ಮಾನಸಿಕವಾದ ನೆಮ್ಮದಿಯನ್ನು ನೀಡುತ್ತದೆ. ಹೋಸತನಗಳನ್ನು ಮೈಗೂಡಿಸಿಕೊಂಡು ಪ್ರಸಕ್ತ ಪರಿಸ್ಥಿತಿಯನ್ನು ಅರಿತು ಹೋಸ ಚಿಂತನೆಗಳೊಂದಿಗೆ ದಮನಿತರ ಅನ್ಯಾಯಕ್ಕೊಳಗಾದವರ ಅಶಕ್ತರ ದುರ್ಬಲರ ನೋವಿಗೆ ಸ್ಪಂದಿಸುವ ಕಾರ್ಯವನ್ನು ನಾವು ಮಾಡಿದಾಗ ನಾವು ಹುಟ್ಟಿದಕ್ಕು ಮತ್ತು ಬದುಕಿದಕ್ಕು ಸಾರ್ಥಕವಾಗುತ್ತದೆ ಎಂದು ಡಾ. ರವೀಂದ್ರನಾಥ ಶಾನಭಾಗ ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಪ್ರಾಂಶುಪಾಲ ಡಾ. ಎಂ.ಡಿ. ಒಕ್ಕುಂದ ವಿಧ್ಯಾಥರ್ಿಗಳ ಮುಂದಿನ ಭವಿಷ್ಯಕ್ಕಾಗಿ ಉನ್ನತವಾದ ಅತ್ಯಗತ್ಯವಾದ ಮತ್ತು ಸಾಮಾಜಿಕ ಕಳಕಳಿ ಇರಬೇಕೆಂದು ಇಂತಹ ಕಾರ್ಯಗಾರವನ್ನು ಹಮ್ಮಿಕೊಳ್ಳಲಾಗಿದೆ. ಈ ಕಾರ್ಯಕ್ರಮದಿಂದ ಪ್ರಭಾವಿತರಾಗಿ ವಿಧ್ಯಾಥರ್ಿಗಳು ಮಾನವ ಹಕ್ಕುಗಳನ್ನು ಸಂರಕ್ಷೀಸುವ ಮತ್ತು ಆರಾಧಿಸುವ ಮಹತ್ವದ ಹೆಜ್ಜೆ ಇಡಬೇಕೆಂದು ಕರೆ ನೀಡಿದರು.
ವೇದಿಕೆಯಲ್ಲಿ ಧಾರವಾಡದ ವಕೀಲ ಬಸವಪ್ರಭು ಹೋಸಕೇರಿ ಹಂಪಿ ವಿಶ್ವವಿಧ್ಯಾಲಯದ ಪ್ರಾಧ್ಯಾಪಕ ಡಾ. ಎಚ್.ಡಿ ಪ್ರಶಾಂತ ಉಪನ್ಯಾಸಕರುಗಳಾದ ಡಾ. ಬಸವರಾಜ ಅಕ್ಕಿ ಡಾ. ನಾಸೀರಹ್ಮದ ಎಂ. ಜಂಗುಬಾಯಿ, ಇಫರ್ಾನ ಜಕಾತಿ, ಸಂಗಮೇಷ ಬಸರಕೊಡ ಮೋದಲಾದರು ಉಪಸ್ಥಿಸರಿದ್ದರು. ಡಾ. ನಾಸೀರಹ್ಮದ ಎಂ. ಜಂಗುಬಾಯಿ ಸ್ವಾಗತಿಸಿದರು. ನೀಶಾತ ಷರೀಪ ವಂದಿಸಿದರು ಡಾ. ಸುಜಾತಾ ಮಗದುಮ್ ಕಾರ್ಯಕ್ರಮ ನಿರೂಪಿಸಿದರು.