ಯಲ್ಲಮ್ಮನಗುಡ್ಡದ ಅಭಿವೃದ್ಧಿಗೆ ಪ್ರಾಮಾಣಿಕವಾಗಿ ಶ್ರಮಿಸುತ್ತೇನೆ: ಪ್ರಭಾವತಿ ಫಕ್ಕೀರಪುರ
I will work sincerely for the development of Yallammanagar: Prabhavathi Fakirpura
ಉಗರಗೋಳ 06: ಎಲ್ಲ ಅಧಿಕಾರಿಗಳು, ಸಿಬ್ಬಂದಿ ಸಮನ್ವಯ ಹಾಗೂ ಶಾಸಕರು, ಜಿಲ್ಲಾಧಿಕಾರಿ ಮಾರ್ಗದರ್ಶನದಲ್ಲಿ ಯಲ್ಲಮ್ಮನಗುಡ್ಡದ ಅಭಿವೃದ್ಧಿಗೆ ಪ್ರಾಮಾಣಿಕವಾಗಿ ಶ್ರಮಿಸುತ್ತೇನೆ ಎಂದು ಕೆಎಎಸ್ ಅಧಿಕಾರಿ ಪ್ರಭಾವತಿ ಫಕ್ಕೀರಪುರ ಹೇಳಿದರು.
ಯಲ್ಲಮ್ಮ ದೇವಸ್ಥಾನ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿಯಾಗಿ ಶುಕ್ರವಾರ ಅಧಿಕಾರ ಸ್ವೀಕರಿಸಿದ ನಂತರ ಸುದ್ದಿಗಾರರ ಜತೆಗೆ ಮಾತನಾಡಿದರು. ದೇವಸ್ಥಾನದಲ್ಲಿನ ಅಧಿಕಾರಿಗಳು, ಸಿಬ್ಬಂದಿ ಹಾಗೂ ದೇವಸ್ಥಾನ ಸಮಿತಿಯವರೊಂದಿಗೆ ಎರಡು ದಿನಗಳಲ್ಲಿ ಸಭೆ ನಡೆಸಿ, ಗುಡ್ಡದ ಅಭಿವೃದ್ಧಿ, ನನ್ನ ಕಾರ್ಯವ್ಯಾಪ್ತಿ ಕುರಿತು ಚರ್ಚಿಸಲಾಗುವುದು ಎಂದರು. ಉತ್ತರ ಕರ್ನಾಟಕದ ಪ್ರಸಿದ್ಧವಾದ ದೇವಸ್ಥಾನ. ಇಲ್ಲಿಗೆ ಬರುವ ಭಕ್ತರು ಹಾಗೂ ಗಣ್ಯರಿಗೆ ದರ್ಶನ ಮಾಡಿಸುವ ವಿಚಾರವಾಗಿ ಶಿಷ್ಟಾಚಾರ ಕಟ್ಟುನಿಟ್ಟಾಗಿ ಪಾಲಿಸಲಾಗುವುದು. ಭಕ್ತರ ಭಾವನೆಗೆ ಧಕ್ಕೆ ಬಾರದ ರೀತಿಯಲ್ಲಿ ದೇವಸ್ಥಾನದಲ್ಲಿ ಇರುವ ಹಳೇ ಧಾರ್ಮಿಕ ಪದ್ಧತಿಗಳನ್ನೇ ಎಂದಿನಂತೆ ಮುಂದುವರಿಸಲಾಗುವುದು ಎಂದು ಸ್ಪಷ್ಟಪಡಿಸಿದರು.
ವಸತಿ, ಶುದ್ಧ ಕುಡಿಯುವ ನೀರು, ಭಕ್ತರಿಗೆ ಸರತಿ ಸಾಲು, ಎಣ್ಣೆಹೊಂಡ, ದೇವಸ್ಥಾನ ಪ್ರಾಂಗಣ ಸೇರಿದಂತೆ ಇಡೀ ಗುಡ್ಡದಲ್ಲಿ ಶುಚಿತ್ವಕ್ಕೆ ಒತ್ತು ಕೊಡಲಾಗುವುದು. ಭಕ್ತರಿಗೆ ಅಗತ್ಯ ಮೂಲಸೌಕರ್ಯ ಕಲ್ಪಿಸಲಾಗುತ್ತದೆ ಎಂದು ಹೇಳಿದರು. ನನಗೆ ವಹಿಸಿದ ಜವಾಬ್ದಾರಿ ಅಚ್ಚುಕಟ್ಟಾಗಿ ನಿರ್ವಹಿಸುತ್ತೇನೆ. ಗುಡ್ಡದ ಅಭಿವೃದ್ಧಿಗೆ ಶ್ರಮಿಸುತ್ತೇನೆ ಎಂದು ಹೇಳಿದರು
ಉಪಕಾರ್ಯದರ್ಶಿ ನಾಗರತ್ನಾ ಚೋಳಿನ, ಮಂಜುನಾಥ ಅಂಗಡಿ, ತಹಶೀಲ್ದಾರ ಮಲ್ಲಿಕಾರ್ಜುನ ಹೆಗ್ಗನ್ನವರ, ಮಲ್ಲು ಜಕಾತಿ, ಶೀತಲ ಕಡಟ್ಟಿ, ಡಿ ಕೆ ನಿಂಭಾಳ, ವಿರೇಶ ಬ್ಯಾಹಟ್ಟಿ, ಅಲ್ಲಮಪ್ರಭು ಪ್ರಭುನವರ, ಎಸ್ ಎಮ್ ಮುದಗಲ್, ತವನಪ್ಪ ಅಷ್ಟಗಿ, ಅಮೀನ ಗೋರಿನಾಯ್ಕ, ಪವನ ಅಂಗಡಿ, ಪ್ರಜ್ವಲ್ ತೊಂಡಿಕಟ್ಟಿ, ಪ್ರಕಾಶ ಲಮಾಣಿ, ಅಶ್ವಿನಿ ಬೆಳ್ಳೆರಿಮಠ, ಸಂಗಮೇಶ ಮೀರಕೊರ, ಸುಭಾಸ ಪಾಟೀಲ, ತಾಪೀಪ್ ಪೀರಜಾದೆ, ಆರ್ ಎಸ್ ಸವದತ್ತಿ, ಸಿ ಎನ್ ಕುಲಕರ್ಣಿ, ಪ್ರಭು ಹಂಜಗಿ, ಎನ್ ಎಮ್ ಮುದಗೌಡರ್, ಡಿ ಆರ್ ಚವ್ಹಾಣ, ವಿಶ್ವನಾಥಗೌಡ ರೇಣ್ಕೀಗೌಡ್ರ, ಪಂಡಿತ ಯಡೂರಯ್ಯ, ಪರಸನಗೌಡ ರೇಣ್ಖೀಗೌಡ, ಬಸನಗೌಡ ಪರಷರುಷಿ ಹಾಗೂ ದೇವಸ್ಥಾನ ಸಿಬ್ಬಂದಿ ಇದ್ದರು.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 