ಅವ್ವನ ಬಗ್ಗೆ ಹೇಳಲು ಬರೆಯಲು ಭಾಷೆ ಬಡವಿ ಅನ್ನಿಸುತ್ತೆ: ಸರಸ್ವತಿ ಭೋಸಲೆ

ಲೋಕದರ್ಶನ ವರದಿ

ಧಾರವಾಡ 20: ತನ್ನೊಡಲಲ್ಲಿ ಮುದ್ದು ಮಗುವೊಂದು ಚಿಗುರೊಡೆಯುತ್ತಿದೆ ಎಂಬುದು ತಿಳಿಯುತ್ತಿದ್ದಂತೆಯೇ ಹೆಣ್ಣು ತಾಯ್ತನದ ಜವಾಬ್ದಾರಿಯನ್ನು ಹೆಗಲಿಗೇರಿಸಿಕೊಳ್ಳುತ್ತಾಳೆ. ಒಬ್ಬ ಸಾಮಾನ್ಯ ಹೆಣ್ಣು ದೈವತ್ವಕ್ಕೇರುವ ಪಯಣ ಆರಂಭವಾಗೋದೇ ಆಗ. ತೊದಲು ನುಡಿವ ಕಂದನ ಬಾಯಿಂದ ಮೊದಲ ಬಾರಿಗೆ ಬಂದ 'ಅಮ್ಮ(ಅವ್ವ, ತಾಯಿ) ಎಂಬ ಪದಕ್ಕೆ ಹೆಣ್ಣಿನ ಬದುಕನ್ನೇ ಸಾರ್ಥಕಗೊಳಿಸುವ ಶಕ್ತಿಯಿದೆ. ಪ್ರತಿಯೊಂದು ಶಬ್ದದಲ್ಲಿ ಒಂದು ಧ್ವನಿ ಇದೆ. ಧ್ವನಿಗೆ ಒಂದು ಭಾವವಿದೆ. ಆ ಭಾವನೆಗಳ ನೋವಿಗೆ ಸ್ಪಂದಿಸುವ ಅವ್ವ ಸಹನಾಮಯಿ, ಸಹಜತೆಯ ಕರುಳಿನ ಮಿಡಿತವನ್ನು ಹೊಂದಿರುತ್ತಾಳೆ ಅವ್ವ ಎಂದು ಉತ್ತರ ಕನರ್ಾಟಕ ಲೇಖಕಿಯರ ಸಂಘದ ಕಾರ್ಯದಶರ್ಿ ಸರಸ್ವತಿ ಭೋಸಲೆ ಹೇಳಿದರು.    

ಅವರು ಕನರ್ಾಟಕ ವಿದ್ಯಾವರ್ಧಕ ಸಂಘದ ಮಲ್ಲವ್ವ ಯಲ್ಲಪ್ಪ ಸಿದ್ನಾಳ ದತ್ತಿ ಕಾರ್ಯಕ್ರಮದಲ್ಲಿ "ಜೀವದೊರತೆ-ಅವ್ವ ಎಂಬ ವಿಷಯದ ಕುರಿತು ಉಪನ್ಯಾಸ ನೀಡುತ್ತಾ ಅವರು ಮಾತನಾಡುತ್ತಿದ್ದರು.

 ಅವ್ವನ ಬಗ್ಗೆ ಹೇಳುವದಕ್ಕೆ, ಬರೆಯುವುದಕ್ಕೆ ಹೋದರೆ ಭಾಷೆ ಬಡವಿ ಅನ್ನಿಸುತ್ತೆ. ಹಡೆದವಳು ಎಂಬ ಮಾತ್ರಕ್ಕೆ ಅವ್ವವಾಗುವುದಿಲ್ಲ, ಮಾತೃವಾತ್ಸಲ್ಯದ ಭಾವನಾತ್ಮಕ ಸಂಬಂದವುಳ್ಳವಳು ಅವ್ವಳಾಗುತ್ತಾಳೆ. ಅವ್ವನನ್ನು ಯಾವುದೇ ಪದದಲ್ಲಿ ವಣರ್ಿಸುವುದಕ್ಕೆ ಹೋದರೂ, ಆಕೆಯ ಪಾತ್ರದೆದುರು ಆ ಪದವೇ ಸೋತುಬಿಡುತ್ತದೆ! ಒಂದು ಪದದಲ್ಲಿ, ಒಂದು ವಾಕ್ಯದಲ್ಲಿ, ಒಂದು ಕತೆಯಲ್ಲಿ, ಒಂದು ಹೊತ್ತಿಗೆಯಲ್ಲಿ ಹಿಡಿದಿಡಲು ಸಾಧ್ಯವಾಗದ ಮಹೋನ್ನತ ವ್ಯಕ್ತಿತ್ವ ಅಮ್ಮನದು. ಭೂಮಿಯಲ್ಲಿರುವ ಅತ್ಯುನ್ನತ ವಸ್ತುಗಳಲ್ಲಿ ತಾಯಿಗೆ ಬೆಲೆ ಕಟ್ಟಲೂ ಸಾಧ್ಯವಿಲ್ಲ. ಆಕೆಯ ಋಣವನ್ನು ತೀರಿಸಲೂ ಆಗುವುದಿಲ್ಲ. ಹಿಂದಿನಿಂದಲೂ ಮಾತೃ ವಾತ್ಸಲ್ಯ, ಮಾತೃ ಪ್ರೇಮಕ್ಕೆ ಬೆಲೆ ಕಟ್ಟಲೂ ಸಾಧ್ಯವಿಲ್ಲದಂತಿದ್ದು ಅದನ್ನು ಇತಿಹಾಸ ಪುರಾಣ ಪುಸ್ತಕಗಳಲ್ಲೂ ನಿಮಗೆ ಕಂಡುಕೊಳ್ಳಬಹುದಾಗಿದೆ ಎಂದು ಹೇಳಿದರು.    

ಅಧ್ಯಕ್ಷತೆ ವಹಿಸಿದ್ದ ಸಮಾಜ ಸೇವಕರು, ಹೋಮಿಯೋಪತಿ ವೈದ್ಯರಾದ ಡಾ.ಪಾರ್ವತಿ ಹಾಲಭಾವಿ ಮಾತನಾಡುತ್ತಾ ತಾಯಿ ಎಂಬ ಶಿಲ್ಪಿಗೆ ಆಕಾರವಿಲ್ಲದ ಕಲ್ಲನ್ನೂ ಸಂಸ್ಕಾರದ ಉಳಿಪೆಟ್ಟಿನಿಂದ ಪೂಜನೀಯ ಮೂತರ್ಿಯನ್ನಾಗಿಸುವ ತಾಕತ್ತಿದೆ. ಗರ್ಭದಿಂದ ಬೆಳೆದು ಮಾದರಿ ಮಕ್ಕಳನ್ನಾಗಿಸುವ ಮಹತ್ವದ ಪಾತ್ರ ತಾಯಿದಾಗಿರುತ್ತದೆ. ಇಂದು ಮಹೋನ್ನತವಾದದ್ದನ್ನು ಸಾಧಿಸಿದ ಜನರ ಸಾಧನೆಯಲ್ಲಿ ನಿಸ್ಸಂದೇಹವಾಗಿ ಅವರಮ್ಮನ ಬೆವರಿದೆ, ಆಕೆಯ ನಿದ್ದೆಯಿಲ್ಲದ ರಾತ್ರಿಯಿದೆ, ಹಸಿದ ಹೊಟ್ಟೆಯ ತ್ಯಾಗವಿದೆ. ಸ್ವಂತ ಮಗನಿಂದ ಪರಿತ್ಯಕ್ತಳಾಗಿ ವೃದ್ಧಾಶ್ರಮದ ಮೂಲೆಯೊಂದರಲ್ಲಿ ಕೂತರೂ ಅದೇ ಮಗನ ಬಾಲ್ಯವನ್ನು ನೆನಪಿಸಿಕೊಂಡು ನಸುನಗೆ ಬೀರುವ, ಆತನ ಭವಿಷ್ಯ ಚೆನ್ನಾಗಿರಲೆಂದು ಎರಡೂ ಕೈಯೆತ್ತಿ ಹಾರೈಸುವ ಆ ದೈವತ್ವದ ಸಾಕಾರ ಮೂತರ್ಿಯೇ ಅವ್ವಳಾಗಿ ನಿಲ್ಲುತ್ತಾಳೆ ಎಂದು ಹೇಳಿದರು.    

ಸಂಘದ ಕಾಯರ್ಾಧ್ಯಕ್ಷ ಶಿವಣ್ಣ ಬೆಲ್ಲದ, ದತ್ತಿದಾನಿಗಳಾದ ಸುಲೋಚನಾ ಮಹಾದೇವ ಸಿದ್ನಾಳ ವೇದಿಕೆಯಲ್ಲಿ ಉಪಸ್ಥಿತರಿದ್ದರು. ದತ್ತಿದಾನಿಗಳ ಪರವಾಗಿ ಮಹದೇವ ಯಲ್ಲಪ್ಪ ಸಿದ್ನಾಳ ಮಾತನಾಡಿದರು. ಮಲ್ಲವ್ವ ಯಲ್ಲಪ್ಪ ಸಿದ್ನಾಳ ಅವರ ಭಾವಚಿತ್ರಕ್ಕೆ ಪುಷ್ಪಾರ್ಪಣೆ ಮೂಲಕ ಗೌರವ ಸಲ್ಲಿಸಲಾಯಿತು.     

ಶಿವಾನಂದ ಅಮರಶೆಟ್ಟಿ ಪ್ರಾಥರ್ಿಸಿದರು. ಸಂಘದ ಉಪಾಧ್ಯಕ್ಷ ನಿಂಗಣ್ಣ ಕುಂಟಿ ಸ್ವಾಗತಿಸಿದರು. ಸಂಘದ ಪ್ರಧಾನ ಕಾರ್ಯದಶರ್ಿ ಪ್ರಕಾಶ ಎಸ್. ಉಡಿಕೇರಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಾಹಿತಿಗಳಾದ ಮಾತರ್ಾಂಡಪ್ಪ ಎಮ್. ಕತ್ತಿ ಕಾರ್ಯಕ್ರಮ ನಿರೂಪಿಸಿದರು. ಅಕ್ಟೋಬರ ತಿಂಗಳ ದತ್ತಿ ಕಾರ್ಯಕ್ರಮದ ಸಂಯೋಜಕರು ಮತ್ತು ಸಂಘದ ಸಹ ಕಾರ್ಯದಶರ್ಿ ಸದಾನಂದ ಶಿವಳ್ಳಿ ವಂದಿಸಿದರು.    

ಕಾರ್ಯಕ್ರಮದಲ್ಲಿ ಕಾರ್ಯಕಾರಿ ಸಮಿತಿ ಸದಸ್ಯರಾದ ಎಸ್. ಬಿ. ಗಾಮನಗಟ್ಟಿ, ಬಸವಪ್ರಭು ಹೊಸಕೇರಿ, ಗೌರವ ಉಪಾಧ್ಯಕ್ಷರಾದ ಎಂ.ಬಿ. ಕಟ್ಟಿ, ಹಾಗೂ ಡಾ. ಶಾಂತಾ ಇಮ್ರಾಪೂರ, ಸುರೇಶ ಹಾಲಭಾವಿ, ವೀರಣ್ಣ ಒಡ್ಡೀನ, ಪ್ರಭು ಕುಂದರಗಿ, ಶೈಲಾ ಕರಗುದರಿ, ಪ್ರೇಮಾನಂದ ಶಿಂಧೆ, ಮಹಾಂತೇಶ ನರೆಗಲ್ಲ, ಎಸ್.ಎಮ್. ದಾನಪ್ಪಗೌಡರ ಮುಂತಾದವರು ಹಾಜರಿದ್ದರು.