ನೀರಾವರಿ ಯೋಜನೆ ಜಾರಿಗೆ ತಂದು ಭರವಸೆ ಈಡೇರಿಸಿದ್ದೇನೆ: ಕಾಗೆ
ಸಂಬರಗಿ 22: ದೇಶ ಸ್ವಾತಂತ್ರ್ಯ ಆಗುವುದಕ್ಕಿಂತ ಮೊದಲಿನಿಂದ ಇಲ್ಲಿಯವರೆಗೆ ಗಡಿ ಭಾಗದ ರೈತರು ನೀರು ನೀರು ಎಂದು ಕೂಗಿದರೂ ಯಾವ ರಾಜಕೀಯ ಮುಖಂಡರು ಚುನಾವಣೆಯಲ್ಲಿ ರೈತರ ಉಪಯೋಗ ಮಾಡಿಕೊಂಡು ಆಯ್ಕೆ ಆಗುತ್ತಾರೆ. ಆದರೆ ರೈತರ ಸಮಸ್ಯೆಯನ್ನು ಯಾರೂ ಪರಿಹಾರಗೊಳಿಸಿಲ್ಲ. ನಾನು ನುಡಿದಂತೆ ನಡೆದಿದ್ದೇನೆ. ನೀರಾವರಿ ಯೋಜನೆ ಜಾರಿಗೆ ತಂದಿದ್ದೇನೆ ಎಂದು ಕರ್ನಾಟಕ ವಾಯು ರಸ್ತೆ ಸಾರಿಗೆ ಸಂಸ್ಥೆಯ ಅಧ್ಯಕ್ಷ ಹಾಗೂ ಶಾಸಕ ರಾಜು ಕಾಗೆ ಹೇಳಿದರು. ಗುಂಡೆಗಾಡಿ ಗ್ರಾಮದಲ್ಲಿ ಗಡಿ ಭಾಗದ 11 ಕೆರೆಗಳು ನೀರು ತುಂಬುವ ಯೋಜನೆ 176.30ಕೋಟಿ ರೂಪಾಯಿ ಅನುದಾನ ಮಂಜುರಾತಿ ಮಾಡಿ ಕಾಮಗಾರಿ ಚಾಲನೆ ನೀಡುವ ಕುರಿತು ಪೂರ್ವಭಾವಿ ಸಭೆಯಲ್ಲಿ ಮಾತನಾಡಿ ಅವರು ಗಡಿ ಭಾಗದ ಅನಂತಪೂರ-1, ಅನಂತಪೂರ-2, ಗುಂಡೆವಾಡಿ-1, ಗುಂಡೆವಾಡಿ-2, ಬಳ್ಳಿಗೇರಿ, ಪಾರ್ಥನಹಳ್ಳಿ-1, ಪಾರ್ಥನಹಳ್ಳಿ-2, ಚಮಕೇರಿ, ಮಲಾಬಾದ, ಬೆವನೂರ, ಚಮಕೇರಿ(ಬೇಡರಹಟ್ಟಿ) ಈ ಕೆರೆಗಳ ಕಾಮಗಾರಿ ಶನಿವಾರ ಮಾರ್ಚ 1 ರಂದು ಮುಂ. 10ಘಂಟೆಗೆ ಜಿಲ್ಲೆಯ ಸಚಿವರು, ಸಂಸದರು, ಶಾಸಕರು ಇವರ ಹಸ್ತದಿಂದ ಕಾಮಗಾರಿ ಚಾಲನೆ ನೀಡಲಾಗುವುದು. ಈ ಭಾಗದಲ್ಲಿ ಒಟ್ಟು 27 ಕೆರೆಗಳು ಇದ್ದಾವೆ. ಅದರಲ್ಲಿ ಬಸವೇಶ್ವರ ಯೋಜನೆ ಅಡಿಯಲ್ಲಿ ಇನ್ನುಳಿದ ಕೆರೆಗಳು ಬರುತ್ತವೆ. ಜೂನ ಕೊನೆಯ ವಾರದಲ್ಲಿ ಖಿಳೇಗಾಂವ ಬಸವೇಶ್ವರ ಏತ ನೀರಾವರಿ ಯೋಜನೆ ಕಾಮಗಾರಿ ಪೂರ್ಣಳ್ಳುತ್ತದೆ. ಕರೆ ತುಂಬಿ ರಾಜ್ಯದ ಮುಖ್ಯಮಂತ್ರಿ, ಉಪ-ಮುಖ್ಯಮಂತ್ರಿ, ಜಿಲ್ಲಾ ಉಸ್ತುವಾರಿ ಸಚಿವರು, ಸಂಸದರು ಇವರ ಹಸ್ತದಿಂದ, ಉದ್ಘಾಟಿಸಲಾಗುವುದು. ಈ ಭಾಗವನ್ನು ಹಸಿರು ಕ್ರಾಂತಿ ಮಾಡಿ ತೀರುತ್ತೇನೆ ಎಂದು ಭರವಸೆ ನೀಡಿದರು. ಮುಂದಿನ ಚುನಾವಣೆಯಲ್ಲಿ ಯಾರು ಆಯ್ಕೆ ಆಗುತ್ತಾರೆ, ಹೋಗುತ್ತಾರೆ ಎಂಬ ವಿಷಯ ಮಹತ್ವದ್ದಲ್ಲ. ರೈತ ನೀರಾವರಿ ಯೋಜನೆ ಮಹತ್ವದ್ದಾಗಿದ್ದು, ಪಕ್ಷಾತೀತವಾಗಿ ನಾನು ಅಭಿವೃದ್ಧಿ ಕೆಲಸ ಮಾಡಿದ್ದೇನೆ ಎಂದು ಹೇಳಿದರು. ಅನಂತಪೂರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಓಂಪ್ರಕಾಶ ಪಾಟೀಲ, ಓಂಪ್ರಕಾಶ ಡೊಳ್ಳಿ, ಪಿ.ಕೆ.ಪಿ.ಎಸ್ ಅಧ್ಯಕ್ಷ ಸಿದರಾಯ ತೇಲಿ, ಬಸವರಾಜ ಅಂಗಡಿ, ಶಿವಾನಂದ ಗೊಲಬಾವಿ, ಗುಂಜಿಗಾಂವಿ, ಚಂದ್ರಕಾಂತ ಇಮ್ಮಡಿ, ಶಿವಾಜಿ ಯಮಗಾರ, ಸುರೇಶ ಮೆಂಡಿಗೇರಿ, ನೀರಾವರಿ ಇಲಾಖೆಯ ಮುಖ್ಯ ಅಭಿಯಂತರರು ಪ್ರವೀಣ ಹುಣಸಿಕಟ್ಟಿ, ರವಿ ಕಾಂಬಳೆ, ಗುತ್ತಿಗೆದಾರ ಇಮಾಮಸಾಬ ಬಿರಾದಾರ, ಡಾ. ಚನ್ನಪ್ಪ ಶಂಕ್ರಟ್ಟಿ, ಅಶೋಕ ಕಪ್ಪಲಗುದ್ದಿ, ತಾಲೂಕಾ ಪಂಚಾಯತ ಮಾಜಿ ಸದಸ್ಯರು ಮಹಾಂತೇಶ ಸಾಲಿಮಠ ಸೇರಿಂದತಹ ರೈತರು ಕಾರ್ಯಕರ್ತರು ಉಪಸ್ಥಿತರಿದ್ದರು. ಕೃಷ್ಣಾ ಸಹಕಾರಿ ಸಕ್ಕರೆ ಕಾರ್ಖಾನೆ ನಿರ್ದೇಶಕ ಗುಳಪ್ಪ ಜತ್ತಿ ಸ್ವಾಗತಿಸಿ, ವಂದಿಸಿದರು.