ಸಾಧನೆಗೆ ಮನಸ್ಸಿದ್ದರೆ ನೂರಾರು ಮಾರ್ಗ : ಅಮೃತ ದೇಸಾಯಿ

ಧಾರವಾಡ 18: ಸಾಧಿಸುವ ಮನಸ್ಸಿದ್ದರೆ ಸಾಧಿಸಲು ನೂರಾರು ಮಾರ್ಗ ಎನ್ನುವಂತೆ ಓಜಲ್ ನಲವಡಿ ಸಾಧನೆ ನಮ್ಮ ಯುವ ಸಮುದಾಯಕ್ಕೆ ಮಾದರಿ ಹಾಗೂ ಪ್ರೇರಣೆಯಾಗಿದೆ. ಓಜಲ್ 51.25 ಸೆಕೆಂಡಿನಲ್ಲಿ 400 ಮೀಟರ್ ಬ್ಲೈಂಡ್ ಪೋಲ್ದ ಸ್ಕೇಟಿಂಗ್ ಮಾಡುವ ಮೂಲಕ ಗಿನ್ನಿಸ್ ದಾಖಲೆ ನಿರ್ಮಿ ಸಿರುವುದು ನಮಗೆಲ್ಲಾ ಹೆಮ್ಮೆಯ ಸಂಗತಿಯಾಗಿದೆ ಎಂದು ಧಾರವಾಡ ಗ್ರಾಮೀಣ ಶಾಸಕ ಅಮೃತ ದೇಸಾಯಿ ಹೇಳಿದರು.

ಅವರು ಧಾರವಾಡ ತಾಲೂಕಿನ ಕೊಟಬಾಗಿಯಲ್ಲಿ ಓಜಲ್ ನಲವಡಿಗೆ ಗ್ರಾಮಸ್ಥರು ಹಮ್ಮಿಕೊಂಡ ಅಭಿನಂದನಾ ಸಮಾರಂಭದಲ್ಲಿ ಸನ್ಮಾನಿಸಿ  ಹಾಗೂ ಸಸಿ ನೆಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು. 

ಓಜಲ್ ನಲವಡಿ ಗಿನ್ನಿಸ್ ದಾಖಲೆ ನಿರ್ಮಿ ಸಿ ನಮ್ಮ ರಾಜ್ಯದ ಹಾಗೂ ಧಾರವಾಡ ಜಿಲ್ಲೆ ಮತ್ತು ವಿಶೇಷವಾಗಿ ಧಾರವಾಡ ತಾಲೂಕಿಗೆ ಕೀರ್ತಿ  ತಂದಿರುವುದು ಸಂತೋಷದ ಸಂಗತಿ ಎಂದು ಹೇಳಿದರು.    

ಓಜಲ್ ನಮ್ಮೆಲ್ಲರ ಮನೆ ಮಗಳು. ಓಜಲ್ ನಲವಡಿ ವಿಶ್ವ ಮಟ್ಟದಲ್ಲಿ ಸಾಧನೆ ಮಾಡುವ ಮೂಲಕ ಇಡೀ ದೇಶದ ಗಮನ ಸೆಳೆದಿದ್ದಾಳೆ. ಇದು ನಮಗೆ ಹಾಗೂ ನಮ್ಮ ಗ್ರಾಮೀಣ ಭಾಗಕ್ಕೆ ತುಂಬಾ ಖುಷಿ ವಿಚಾರ   ಎಂದು ಶುಭ ಹಾರೈಸಿದರು.  

ಅಲ್ಲದೆ, ಅವಳ ಸಾಧನೆಗೆ ಬೆನ್ನೆಲುಬಾಗಿ ನಿಂತ ಅವಳ ತಂದೆ ಸುನಿಲ್ ನಲವಡೆ, ಕೊಟಬಾಗಿ ಗ್ರಾಮದ ಗುರು ಹಿರಿಯರು, ಶಿಕ್ಷಣ ಅಧಿಕಾರಿಗಳಿಗೆ ಧನ್ಯವಾದಗಳನ್ನು ತಿಳಿಸಿ, ಎಲ್ಲರಲ್ಲೂ ತಮ್ಮದೇಯಾದ ಪ್ರತಿಭೆಯನ್ನು ಹೊಂದಿದ್ದು ಅದನ್ನು ಸದುಪಯೋಗ ಮಾಡಿಕೊಂಡು ಸಾಧನೆ ಮಾಡಬೇಕು ಎಂದು ಕಿವಿ ಮಾತು ಹೇಳಿದರು.

ನಿಮ್ಮ ಪ್ರತಿಯೊಂದು ಕೆಲಸ ಕಾರ್ಯಗಳಲ್ಲಿ ಸದಾಕಾಲ ನಾನು ನಿಮ್ಮ ಜೊತೆಗೆ ಇದ್ದೇನೆ ಏನೇ ಸಹಾಯ ಬೇಕಾದರೂ ನನಗೆ  ಮುಕ್ತವಾಗಿ ಕೇಳಿ ಎಂದು ಗ್ರಾಮದ ಮಕ್ಕಳಿಗೆ ಮತ್ತು ವಿದ್ಯಾಥರ್ಿಗಳಿಗೆ  ಹೇಳಿದರು.

ಓಜಲ್ ನಲವಡಿ ಇನ್ನು ಹೆಚ್ಚಿನ ಸಾಧನೆ ಮಾಡಲಿ. ಅವಳಿಗೆ ಗುರು ಮಡಿವಾಳೇಶ್ವರ ಹಾಗೂ ಗುರು ಆತ್ಮಾನಂದರ ಆಶೀರ್ವಾ ದ ಸದಾ ಇರಲಿ ಎಂದರು.

ಈ ಸಂದರ್ಭದಲ್ಲಿ ಜಿಪಂ ಸದಸ್ಯ ಕಲ್ಲಪ್ಪ ಪುಡಕಲಕಟ್ಟಿ, ಧಾರವಾಡ ಎಪಿಎಂಸಿ ಮಾಜಿ ಅಧ್ಯಕ್ಷ ವಿಜಯ ಕುರಕುರೆ, ಧಾರವಾಡ ತಾಪಂ ಮಾಜಿ ಉಪಾಧ್ಯಕ್ಷ ಮಹೇಶ ಯಲಿಗಾರ, ಧಾರವಾಡ ಗ್ರಾಮೀಣ ಬಿಇಒ ವಿದ್ಯಾನಾಡಗೇರ, ಗ್ರಾಮದ ಗುರು ಹಿರಿಯರು, ಕೋಟಬಾಗಿ ಗ್ರಾಮ ಪಂಚಾಯತಿ ಅಧ್ಯಕ್ಷರು ಹಾಗೂ ಸದಸ್ಯ ವೃಂದ, ಶಾಲಾ ಶಿಕ್ಷಕ ವೃಂದ ಮತ್ತು ಗ್ರಾಮಸ್ತರು ಉಪಸ್ಥಿತರಿದ್ದರು.