ಪರಿಸರ ಉಳಿದರೆ ಮಾತ್ರ ಮನುಷ್ಯ ಕುಲ ಉಳಿಯಲಿದೆ: ನರೇಶಾನಂದ ಸ್ವಾಮಿಜಿ
Humanity will survive only if the environment survives: Nareshananda Swamiji
ಪರಿಸರ ಉಳಿದರೆ ಮಾತ್ರ ಮನುಷ್ಯ ಕುಲ ಉಳಿಯಲಿದೆ: ನರೇಶಾನಂದ ಸ್ವಾಮಿಜಿ
ವಿಜಯಪುರ 16: ಎಲ್ಲರೂ ಆಧುನಿಕ ಜಗತ್ತಿನ ಸುಖ ಸಂಪತ್ತಿಗೆ ಬೆನ್ನು ಹತ್ತಿ ನಿಜವಾದ ಆರೋಗ್ಯಕರ ಬದುಕನ್ನು ನಡೆಸುವುದನ್ನ ಮರೆಯುತ್ತಿದ್ದೆವೆ ಪರಿಸರ ಉಳಿದರೆ ಮಾತ್ರ ಮನುಷ್ಯ ಕುಲ ಉಳಿಯಲಿದೆ ಆದ್ದರಿಂದ ಪ್ರತಿಯೊಬ್ಬರು ತಮ್ಮ ಮನೆಯ ಅಂಗಳದಲ್ಲಿ, ತಮ್ಮ ಓಣಿಯ ಉಧ್ಯಾನವನಗಳಲ್ಲಿ ಹಾಗೂ ತಮ್ಮ ತಮ್ಮ ಜಮೀನುಗಳಲ್ಲಿ ಸಾಧ್ಯವಾದಷ್ಟು ಮರಗಳನ್ನು ಹಚ್ಚಬೇಕು ಎಂದು ನಗರದ ಹೊರ ವಲಯದ ರಾಮಕೃಷ್ಣ ವಿವೇಕಾನಂದ ಆಶ್ರಮದ ಆವರಣದಲ್ಲಿ ಟೆಕ್‌ಸಿರಿ ಹಾಗೂ ನನ್ನ ಗಿಡ ನನ್ನ ಭೂಮಿ ಸಂಘಟನೆಯ ಸಹಯೋಗದಲ್ಲಿ ಆಯೋಜಿಸುವ ಸಸಿ ನೆಡುವ ಕಾರ್ಯಕ್ರಮದಲ್ಲಿ ನರೇಶಾನಂದ ಸ್ವಾಮಿಜಿ ಅವರು ಮಾತನಾಡಿದರು.
ಟೆಕ್‌ಸಿರಿಯ ಸಂಸ್ಥಾಪಕರಾದ ಮುತ್ತು ಸರಶೆಟ್ಟ ಅವರು ಮಾತನಾಡುತ್ತಾ ಯಾವುದೇ ಸಂಸ್ಥೆಯ ಶ್ರೇಯಸ್ಸು ಅದರ ಉದ್ಯೋಗಿಗಳ ಮೇಲೆಯೇ ಅವಲಂಭಿತವಾಗಿದೆ, ಟೆಕ್‌ಸಿರಿ ಕುಟುಂಬದ ಪ್ರತಿಯೊಬ್ಬ ಸದಸ್ಯನಿಗೂ ಕೃತಜ್ಞತೇಯ ಸಂಕೇತವಾಗಿ ಪ್ರತಿಯೊಬ್ಬ ಉದ್ಯೋಗಿಯ ಹೆಸರಲ್ಲಿ ಪ್ರತಿ ತಿಂಗಳು ಒಂದು ಗಿಡದಂತೆ ನೆಡಲು ನಿರ್ಧಸಿದ್ದೆವೆ. ಹೇಗೆ ಮರಗಳು ಪ್ರಕೃತಿಗೆ ಜೀವ ನೆರಳು ಮತ್ತು ಶಕ್ತಿ ನೀಡುತ್ತದೆಯೋ ಹಾಗೆ ನಮ್ಮ ಉದ್ಯೋಗಿಗಳು ನಮ್ಮ ಟೆಕ್‌ಸಿರಿಗೆ ಶಕ್ತಿ ಸಮರೆ್ಣ ಮತ್ತು ಬೆಳವಣಿಗೆ ನೀಡುತ್ತಾರೆ, ನಮ್ಮ ಜನರಿಗೆ ಹಾಗೂ ನಮ್ಮ ಭೂಮಿಗೆ ಹೃದಯಪೂರ್ವಕ ಧನ್ಯವಾದ ಸಲ್ಲಿಸುವ ಪ್ರಯತ್ಮ ನಮ್ಮದು ಎಂದರು.
ನನ್ನ ಗಿಡ ನನ್ನ ಭೂಮಿಯ ಸಂಚಾಲಕರಾದ ಬಸವರಾಜ ಭೈಚಬಾಳ ಅವರು ಮಾತನಾಡುತ್ತ ಈ ದೇಶದ ಎಲ್ಲಾ ಕಂಪನಿಗಳ ಆಡಳಿತ ಮಂಡಳಿಗಳು ಇದೇ ತರಹ ಉದ್ಯೋಗಿಗಳು ಹಾಗೂ ಭೂಮಂಡಲವನ್ನು ಮುಂದಿಟ್ಟುಕೊಂಡು ಸಸಿ ನೆಡುವ ಕೆಲಸವನ್ನು ಮಾಡಬೇಕು ನಮ್ಮ ಜಿಲ್ಲೆಯಲ್ಲಿ ಟೆಕ್‌ಸಿರಿ ಕಂಪನಿ ಉಳಿದೆಲ್ಲ ಕಂಪನಿಗಳಿಗೆ ಮಾದರಿ ಕೆಲಸ ಮಾಡುತ್ತಿದೆ, ನಾವೆಲ್ಲರೂ ಬದುಕಬೇಕಾದರೆ ಶುದ್ಧ ಗಾಳಿ, ಅತೀ ಅವಶ್ಯಕ ಆ ನಿಟ್ಟಿನಲ್ಲಿ ಇಂತಹ ಕೆಲಸಗಳು ಎಲ್ಲರಿಂದಲೂ ಆಗಬೇಕು ಇದು ನಮ್ಮೆಲ್ಲರ ಜವಾಬ್ದಾರಿ ಎಂದರು.
ಈ ವೇಳೆ ಟೆಕ್‌ಸಿರಿಯ ಕಂಪನಿಯ ಉದ್ಯೋಗಿಗಳಾದ ವಿಜಯ ಕುಮಾರ ಅರಳಿಮಠ, ವಿಶ್ವನಾಥ ಶಿದ್ಗಿಂಪ್ಪನವರ್, ಸಂಗಮೆಶ ತಳವಾಡೆ, ವಾಸವಿ ಘೋರೆ್ಡ, ಚಂದನ್ ಮಾರಪುರ, ಸೌರಭ ಬಿರಾದಾರ, ಬಸವರಾಜ ಹಲ್ಯಾಳ, ವಿರೇಶ ಬಿರಾದಾರ, ಗಂಗಾಬಾಯಿ ಕೊಕಟನೂರಮ ವೀನಾ ಮೂಲಿಮನಿ, ಶ್ರೀಲತಾ ಇದ್ದರು.
ಈ ಸಂದರ್ಭದಲ್ಲಿ ಅರಣ್ಯ ಅಧಿಕಾರಿಗಳಾದ ಸಂತೋಷ ಅಜೂರ, ಮಂಜೂನಾಥ ಆಸಂಗಿ, ವಾರ್ಢ ನಂಬರ 35 ರ ಮಹಾನಗರ ಪಾಲಿಕೆ ಸದಸ್ಯರಾದ ರಾಜು ಕುರಿ, ಚಿದಾನಂದ ಓರಂಗಬಾದ, ವಿರೇಶ ಮುದಕಾಮಠ, ರಾಜಕುಮಾರ ಸಗಾಯಿ, ಗುಮಟೆ ಸರ್, ಆನಂದ ಅಥಣಿ, ಸಂಜು ಗುನ್ನಾಪುರ, ಶಿವಯೋಗಿ ವಾಲಿಕಾರ, ವಿಶಾಲ ಹಿರಾಸ್ಕರ್, ಅಮೀತ ಕ್ಷೀರಸಾಗರ, ದಿನೇಶ ಅಡಕಿ, ವಿಶಾಲ ಹೊರಾಸ್ಕರ್, ಅಮೀತ ಕ್ಷೀರಸಾಗರ ಸೇರಿದಂತೆ ಅನೇಕರು ಇದ್ದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 