ಯುದ್ಧಗಳಿಂದ ಮಾನವೀಯತೆ ಕಣ್ಮರೆಯಾಗುತ್ತಿದೆ: ಲಾಲ್ ಹುಸೇನ್ ಕಂದಗಲ

ಯುದ್ಧಗಳಿಂದ ಮಾನವೀಯತೆ ಕಣ್ಮರೆಯಾಗುತ್ತಿದೆ: ಲಾಲ್ ಹುಸೇನ್ ಕಂದಗಲ Humanity is disappearing due to wars: Lal Hussain Kandagala

ಹನುಮಸಾಗರ 08:  ಯುದ್ಧಗಳು ಮನುಷನನ್ನು ಕ್ರೂರವಾಗಿ ನೆಡೆಸಿಕೊಳ್ಳುವಂಥ ಇಂತಹ ಕಾಲಘಟ್ಟದಲ್ಲಿ ಮಾನುಷ್ಯತ್ವ ಕಾಣೆ ಯಾಗಿದೆ ಎಂದು ಲಾಲ್ ಹುಸೇನ್ ಕಂದಗಲ ಹೇಳಿದರು. ಜಮಾಅತೆ ಇಸ್ಲಾಮಿ ಹಿಂದ ಹನುಮಸಾಗರವತಿಯಿಂದ ಮದೀನಾ ಜಾಮಿಯಾ ಮಜೀದ್ನಲ್ಲಿ ಶನಿವಾರ ಇಫ್ತಾರ್ ಸೌಹಾರ್ದ ಕೂಟ ಕಾರ್ಯಕ್ರಮವನ್ನು ಉದ್ದೇಶಿಸಿ ಲಾಲ್ ಹುಸೇನ್ ಕಂದಗಲ ಮಾತನಾಡಿದರು.

ಅಮೆರಿಕ ಹಾಗೂ ಇಸ್ರೇಲ್ ನಡೆಸಿದ ಇರಾನ್ ಮೇಲಿನ ಯುದ್ಧವನ್ನು ಖಂಡಿಸಿದರು. "ಸಮಾಜದಲ್ಲಿ ಬಾಂಧವ್ಯ ಮತ್ತು ಶಾಂತಿ ಕಾಪಾಡುವುದು ಎಲ್ಲರ ಕರ್ತವ್ಯ. ಇಂತಹ ಸೌಹಾರ್ದ ಕೂಟಗಳು ಸಹನಶೀಲತೆ ಮತ್ತು ಪರಸ್ಪರ ಗೌರವವನ್ನು ಉಂಟುಮಾಡಲು ಮಹತ್ವದ್ದಾಗಿದೆ ಎಂದು ಅಭಿಪ್ರಾಯಪಟ್ಟರು. "ರಂಜಾನ್ ಉಪವಾಸವು ಶಿಷ್ಟಾಚಾರ ಮತ್ತು ಸಹಾನುಭೂತಿಯ ಸಂಕೇತವಾಗಿದೆ. ಹಸಿವಿನ ಅನುಭವದ ಮೂಲಕ ಬಡವರ ಸಂಕಟವನ್ನು ಅರಿಯಲು ಇದು ಒಂದು ಅಮೂಲ್ಯ ಅವಕಾಶ" ಎಂದು ವಿವರಿಸಿದರು.

ಒಬ್ಬನೇ ದೇವರು ಎಂಬ ಸತ್ಯ ಮಾನವನಿಗೆ ಏಕತೆ ಮತ್ತು ಶರಣಾಗತಿಯ ಪಾಠ ಕಲಿಸುತ್ತದೆ. ಮಾನವನ ಸಮಾನತೆ ಎಲ್ಲರೂ ಸಮಾನರು ಎಂಬ ಭಾವನೆ ಮೂಡಿಸಿ ಭೇದಭಾವವಿಲ್ಲದ ಸಮಾಜ ನಿರ್ಮಾಣಕ್ಕೆ ಉತ್ತೇಜನ ನೀಡುತ್ತದೆ. ಮನುಷ್ಯನು ಜ್ಞಾನ, ನೈತಿಕತೆ ಮತ್ತು ಕರ್ತವ್ಯಬೋಧೆಯಿಂದ ಇತರ ಜೀವಿಗಳಿಗಿಂತ ಶ್ರೇಷ್ಠನಾಗಿದ್ದರೂ, ಅವನು ಪ್ರಕೃತಿಯ ಭಾಗವೆಂಬ ಅಳವಡಿಕೆಯನ್ನು ಮರೆಯಬಾರದು ಎಂದು ಲಾಲ್ ಹುಸೇನ್ ಕಂದಗಲ ಅವರು ಹೇಳಿದರು.

ನಾಗನಗೌಡ ಪೊಲೀಸ್ ಪಾಟೀಲ್ ಅವರು "ಧರ್ಮಗಳ ಮೂಲ ಉದ್ದೇಶ ಮಾನವ ಸೇವೆ. ಈ ರೀತಿಯ ಸಮಾವೇಶಗಳು ವಿವಿಧ ಧರ್ಮೀಯರ ನಡುವಿನ ಅಂತರವನ್ನು ಕಡಿಮೆಗೊಳಿಸಿ, ಸಹಭಾವನೆ ಮೂಡಿಸುತ್ತದೆ" ಎಂದು ನುಡಿದರು.ಕಾರ್ಯಕ್ರಮದಲ್ಲಿ ನಜೀರ್ ಸಾಬ್ ಮೇನೆದಾಳ, ನಾರಾಯಣಪ್ಪ ನಾಗೋರ್, ಚಂದ್ರು ಹಿರೇಮನಿ, ಪ್ರಶಾಂತ ಗಡಾದ, ವಿಶ್ವನಾಥ ನಾಗೋರ್,ರಾಜೆಸಾಬ್ ಕುಷ್ಟಗಿ, ಸೂಚಪ್ಪ ದೇವರಮನಿ, ಮಂಜುನಾಥ ಹುಲ್ಲೂರು, ಗೇಸುದರಾಜ್ ಮೂಲಿಮನಿ, ಅಬ್ದುಲ್ ರಜಾಕ್, ಮೆಹಬೂಬ್ ಮೆನೆದಾಳ, ಖಾಜಾ ಹುಸೇನ್ ಹುಲಿಹೈದರ, ರಜಾಕ್ ಚಳಗೇರಿ, ಖಲೀಲ್ ಅಹ್ಮದ್ ಚೌಧರಿ, ಮತ್ತಿತರ ಗಣ್ಯರು ಪಾಲ್ಗೊಂಡಿದ್ದರು.