ಹುಬ್ಬಳ್ಳಿ 29: ಡಿಇಟಿ ಟೋಸ್ಟ ಮಾಸ್ಟರ್ ಕ್ಲಬ ಹುಬ್ಬಳ್ಳಿ ಪದಗ್ರಹಣ ಸಮಾರಂಭ ದಿ. 28ರಂದು ವಿದ್ಯಾನಗರ ಹುಬ್ಬಳ್ಳಿಯ ಬಿವಿಬಿ ಕ್ಯಾಂಪಸ್ನ ಕೆಎಲ್ಇ ಐಎಂಎಸ್ಆರ್ ಕಾಲೇಜು ಸಭಾಂಗಣದಲ್ಲಿ ನಡೆಯಿತು.
ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಡಿಟಿಎಂ ಆಲಾಪ್ ಮೆಹ್ತಾ ಸಾರ್ವಜನಿಕ ಭಾಷಣದ "ಟ್ರಾಜಿಕ್ ಟು ಮ್ಯಾಜಿಕ್ ವಿಷಯದ ಕುರಿತು ಭಾಷಣ ಮಾಡಿದರು.
ವೀಪುಲ್ ಬಹುತಾದ (ಅಧ್ಯಕ್ಷರು), ನಿಮಿಶಾ ಹೊನ್ನಳ್ಳಿ (ಉಪಾಧ್ಯಕ್ಷರು ಶಿಕ್ಷಣ), ಸಮೀರ್ ಹೇಮಾದ್ರಿ (ಉಪಾಧ್ಯಕ್ಷರು, ಸದಸ್ಯತ್ವ), ವಿನಾಯಕ ಸವಣೂರ್ (ಉಪಾಧ್ಯಕ್ಷರು, ಸಾರ್ವಜನಿಕ ಸಂಪರ್ಕ), ಸರವಾಣಿ (ಕಾರ್ಯದರ್ಶಿ), ರವಿ ಪತ್ತಾರ್ (ಖಜಾಂಚಿ), ಶಿವಪ್ರಸಾದ ಬಿಕೆ (ಸಾರ್ಜಂಟ್-ಆಟ್- ಆರ್ಮ್ಸ್) 2019-20ನೇ ಸಾಲಿನ ಆಯಾ ಸ್ಥಾನಗಳಿಗೆ ಪ್ರಮಾಣ ವಚನ ಸ್ವಿಕರಿಸಿದರು.
ಹಿಂದಿನ ಅಧಿಕಾರಿಗಳನ್ನು ಅವರ ಹಿಂದಿನ ಸಾಧನೆಗಳಿಗಾಗಿ ಗೌರವಿಸಲಾಯಿತು. ಅವರ ಎಲ್ಲಾ ಜವಾಬ್ದಾರಿಗಳನ್ನು ಹಸ್ತಾಂತರಿಸಲಾಯಿತು. ಕಾರ್ಯಕ್ರಮದಲ್ಲಿ ಪ್ರಾದೇಶಿಕ ನಿರ್ದೇಶಕ ಡಾ.ಕಮಲ್ಕಾರ್ ಅಚ್ರೆಕರ್ ಮತ್ತು ಹಲವಾರು ಅತಿಥಿಗಳು ಉಪಸ್ಥಿತರಿದ್ದರು.