ಧಾರವಾಡ 28: ಬಡತನ ಹಾಗೂ ಅನಕ್ಷರತೆಯ ಕಾರಣಗಳಿಂದ ಮಕ್ಕಳನ್ನು ದುಡಿಯಲು ಕಳಿಸಿ ಅವರ ಭವಿಷ್ಯವನ್ನು ಮಂಕಾಗಿಸಬಾರದು. ಪಾಲಕರಿಗೆ ತಿಳುವಳಿಕೆ ನೀಡಿ ಈ ಪದ್ಧತಿ ನಿಮರ್ೂಲನೆ ಮಾಡಿದರೆ ರಾಷ್ಟ್ರ ನಿಮರ್ಾಣಕ್ಕೆ ಬುನಾದಿ ಹಾಕಿದಂತಾಗುತ್ತದೆ ಎಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷ ಹಾಗೂ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಈಶಪ್ಪ ಕೆ. ಭೂತೆ ಹೇಳಿದರು.
ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಕಾಮರ್ಿಕ ಇಲಾಖೆ, ರಾಷ್ಟ್ರೀಯ ಬಾಲಕಾಮರ್ಿಕ ಯೋಜನಾ ಸಂಘ ಹಾಗೂ ವಿವಿಧ ಇಲಾಖೆಗಳ ಸಂಯುಕ್ತ ಆಶ್ರಯದಲ್ಲಿ ದಿ. 28ರಂದು ಇಲ್ಲಿನ ಉಳವಿ ಚನ್ನಬಸವೇಶ್ವರ ದೇವಸ್ಥಾನದ ಸಭಾಭವನದಲ್ಲಿ, ಆಶಾ, ಅಂಗನವಾಡಿ ಕಾರ್ಯಕತರ್ೆಯರು ಹಾಗೂ ಎಸ್.ಡಿ.ಎಂ.ಸಿ. ಅಧ್ಯಕ್ಷರುಗಳಿಗೆ ಏರ್ಪಡಿಸಿದ್ದ, ಬಾಲ ಹಾಗೂ ಕಿಶೋರ ಕಾಮರ್ಿಕ ಪದ್ಧತಿ ನಿಮರ್ೂಲನೆಗಾಗಿ ಪರಿಣಾಮಕಾರಿ, ಕಾರ್ಯಚಟುವಟಿಕೆಗಳ ಅಳವಡಿಕೆ ಕುರಿತ ತರಬೇತಿ ಕಾಯರ್ಾಗಾರ ಉದ್ಘಾಟಿಸಿ ಅವರು ಮಾತನಾಡಿದರು.
ಮಕ್ಕಳು ಮತ್ತು ರಾಷ್ಟ್ರದ ಭವಿಷ್ಯಕ್ಕೆ ಮಾರಕವಾಗಿರುವ ಈ ಪದ್ಧತಿಗಳ ನಿಮರ್ೂಲನಗೆ ಪಾಲಕರಲ್ಲಿ ಜಾಗೃತಿ ಮೂಡಿಸುವದು ಬಹಳ ಅಗತ್ಯವಾಗಿದೆ. ಕಾಮರ್ಿಕರ ಕಲ್ಯಾಣಕ್ಕೆ ಸರಕಾರ ಅನೇಕ ಯೋಜನೆಗಳನ್ನು ರೂಪಿಸಿದೆ ಅವುಗಳ ಪ್ರಯೋಜನ ಪಡೆದು ಸಾಮಾಜಿಕವಾಗಿ, ಆಥರ್ಿಕವಾಗಿ ಅಭಿವೃದ್ಧಿ ಹೊಂದಬೇಕು ಎಂದು ಈಶಪ್ಪ ಕೆ.ಭೂತೆ ಹೇಳಿದರು.
ಸಿಡಾಕ್ ಸಂಸ್ಥೆಯ ಪ್ರಾದೇಶಿಕ ನಿದರ್ೇಶಕ ಚಂದ್ರಶೇಖರ ಹೆಚ್. ಅಂಗಡಿ ಮಾತನಾಡಿ, ಸರಕಾರವು ನಿರುದ್ಯೋಗ ಹೋಗಲಾಡಿಸಲು ಯುವಜನರು, ಮಹಿಳೆಯರಲ್ಲಿ ವೃತ್ತಿ ಕೌಶಲ್ಯ ಬೆಳೆಸಲು ಹೆಚ್ಚು ಒತ್ತು ನೀಡುತ್ತಿದೆ. ದಿಶಾ ಕಾರ್ಯಕ್ರಮದ ಮೂಲಕ ತರಬೇತಿ, ವ್ಯಕ್ತಿತ್ವ ವಿಕಸನ ಚಟುವಟಿಕೆಗಳನ್ನು ದೊಡ್ಡ ಪ್ರಮಾಣದಲ್ಲಿ ಆಯೋಜಿಸಲಾಗುತ್ತಿದೆ. ಮಕ್ಕಳಿಗೆ ಶಿಕ್ಷಣ ದೊರೆತರೆ ಕುಟುಂಬ, ಊರು, ರಾಜ್ಯ,ದೇಶ ಎಲ್ಲವೂ ಅಭಿವೃದ್ಧಿ ಹೊಂದಲು ಸಾಧ್ಯ. ರಾಜ್ಯ ಸರಕಾರವು ಬೀದಿ ಬದಿ ವ್ಯಾಪಾರಗಳಿಗೆ ಆಥರ್ಿಕ ನೆರವು ನೀಡುತ್ತಿದೆ. ಸ್ವಸಹಾಯ ಸಂಘಗಳ ಸದಸ್ಯರಿಗೆ ಕಾಯಕ ಯೋಜನೆಯಡಿ ಬಡ್ಡಿ ರಹಿತ ಸಾಲ ನೀಡುತ್ತಿದೆ. ಸ್ವ ಉದ್ಯೋಗ, ಕೃಷಿ,ಶಿಕ್ಷಣ ಮಾರುಕಟ್ಟೆಯ ಮಾರ್ಗದರ್ಶನ ಸಿಗುತ್ತಿವೆ ಅವುಗಳ ಪ್ರಯೋಜನ ಪಡೆದು ಅಭಿವೃದ್ಧಿ ಹೊಂದಬೇಕು ಎಂದರು.
ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದಶರ್ಿ ಹಾಗೂ ಹಿರಿಯ ಸಿವಿಲ್ ನ್ಯಾಯಾಧೀಶ ಆರ್.ಎಸ್.ಚಿಣ್ಣನ್ನವರ್ ಮಾತನಾಡಿ, ಬಾಲ ಕಾಮರ್ಿಕ ಪದ್ಧತಿಯಿಂದ ದೇಶ ಮುಕ್ತವಾಗಬೇಕು. 14 ವರ್ಷದೊಳಗಿನ ಮಕ್ಕಳನ್ನು ದುಡಿಮೆಗೆ ತೊಡಗಿಸಿದ್ದರೆ ಅವರನ್ನು ಬಾಲ ಕಾಮರ್ಿಕರೆಂದು, 14 ರಿಂದ 18 ವರ್ಷದೊಳಗಿನ ಮಕ್ಕಳನ್ನು ಕಿಶೋರ ಕಾಮರ್ಿಕರೆಂದು ಪರಿಗಣಿಸಲಾಗುತ್ತದೆ. ಇವರನ್ನು ದುಡಿಸಿಕೊಳ್ಳುವವರಿಗೆ ಕಾನೂನಿನ ಪ್ರಕಾರ ಶಿಕ್ಷೆ ವಿಧಿಸಲಾಗುತ್ತದೆ. ಹೊಟೇಲು, ಇಟ್ಟಿಗೆ ಭಟ್ಟಿ, ಬೀಡಿ ಕಟ್ಟುವದು, ಪಟಾಕಿ ತಯಾರಿಕೆ, ರಸಗೊಬ್ಬರ, ರಸಾಯನಿಕಗಳ ತಯಾರಿಕೆಯಂತಹ ಅಪಾಯಕಾರಿ ಉದ್ಯಮಗಳಲ್ಲಿ ಮಕ್ಕಳನ್ನು ದುಡಿಸಿಕೊಳ್ಳುವದು ಶಿಕ್ಷಾರ್ಹ ಅಪರಾಧವಾಗಿದೆ. ಬೃಹತ್ ಬಂಗಲೆ, ವಿಶಾಲ ರಸ್ತೆಗಳ ನಿಮರ್ಾಣದಿಂದ ರಾಷ್ಟ್ರದ ಅಭಿವೃದ್ಧಿ ಮಾಪನ ಮಾಡಲಾಗುವದಿಲ್ಲ, ಅದು ದೇಶದ ಮಕ್ಕಳಿಗೆ ಸಿಗುವ ಶಿಕ್ಷಣ ಮತ್ತು ಆರೋಗ್ಯವನ್ನು ಆಧರಿಸಿದೆ. ಜಿಲ್ಲಾ ಹಾಗೂ ತಾಲ್ಲೂಕು ಕಾನೂನು ಸೇವಾ ಪ್ರಾಧಿಕಾರಗಳು ಅಸಹಾಯಕರು, ದುರ್ಬಲರು, ಬಡವರು, ಮಹಿಳೆಯರಿಗೆ ಉಚಿತ ಕಾನೂನು ನೆರವು ನೀಡುತ್ತಿವೆ. ಸಾರ್ವಜನಿಕರು ಕಾನೂನು ಸೇವಾ ಪ್ರಾಧಿಕಾರಗಳಿಗೆ ಮುಕ್ತವಾಗಿ ಬಂದು ನೆರವು ಪಡೆಯಬಹುದು ಎಂದರು.
ಜಿಲ್ಲಾ ಕಾಮರ್ಿಕ ಅಧಿಕಾರಿ ತರನ್ನುಮ್ ಬೆಂಗಾಲಿ, ವಾತರ್ಾ ಇಲಾಖೆ ಹಿರಿಯ ಸಹಾಯಕ ನಿದರ್ೇಶಕ ಮಂಜುನಾಥ ಡಿ.ಡೊಳ್ಳಿನ, ಉಳವಿ ಬಸವೇಶ್ವರ ಧರ್ಮ ಫಂಡ್ ಟ್ರಸ್ಟ್ ಕಾಯರ್ಾಧ್ಯಕ್ಷ ಶಂಕರಲಿಂಗ ಶಿವಳ್ಳಿ, ಪ್ರೊಬೆಷನರಿ ಸಿವಿಲ್ ನ್ಯಾಯಾಧೀಶರುಗಳಾದ ಆಕರ್ಷ, ಲತಾಶ್ರೀ ಹಾಗೂ ಪಾರ್ವತಿ, ಕಾಮರ್ಿಕ ನಿರೀಕ್ಷಕರಾದ ಪಿ.ಎಸ್. ಜಾಧವ, ಭುವನೇಶ್ವರಿ ಕೋಟಿಮಠ, ರಾಷ್ಟ್ರೀಯ ಬಾಲಕಾಮರ್ಿಕ ಯೋಜನಾ ಸಂಘದ ಯೋಜನಾ ನಿದರ್ೇಶಕ ಬಾಳಗೌಡ ಪಾಟೀಲ ಮತ್ತಿತತರು ವೇದಿಕೆಯಲ್ಲಿದ್ದರು.
ಸುಜಾತಾ ತಡಕೋಡ ಪ್ರಾಥರ್ಿಸಿದರು, ಪ್ರದೀಪ ಮೇಲ್ಗಡೆ ನಿರೂಪಿಸಿದರು.