ಉತ್ತರ ಕನ್ನಡ ಜಿಲ್ಲೆಯಲ್ಲಿ ಕುಂಟುತ್ತಾ ಸಾಗಿರುವ ವಸತಿ ಯೋಜನೆಗಳು , ಅನುದಾನವೇ ಇಲ್ಲ: ನಾಗರಾಜ್ ಹರಪನಹಳ್ಳಿ
Housing projects in Uttara Kannada district are progressing at a slow pace, there is no funding: Na
ಕಾರವಾರ 14: ಉತ್ತರ ಕನ್ನಡ ಜಿಲ್ಲೆಯಲ್ಲಿ ವಸತಿ ಯೋಜನೆಗಳು ಕುಂಟುತ್ತಾ ಸಾಗಿವೆ. ಅರಣ್ಯ ಅತಿಕ್ರಮಣ ಭೂಮಿಯಲ್ಲಿ ಮನೆ ಕಟ್ಟಲು ಅವಕಾಶ ಇಲ್ಲದ ಕಾರಣ ಮಂಜೂರಿಯಾದ ಅರ್ದದಷ್ಟು ಮನೆಗಳ ಕೆಲಸವೇ ಪ್ರಾರಂಭವಾಗಿಲ್ಲ. 2021-22 ರಲ್ಲಿ ಪ್ರಾರಂಭವಾದ ಮನೆಗಳು 2025 ಬಂದರೂ ಪೂರ್ಣವಾಗಿಲ್ಲ. ಕಾಲಕಾಲಕ್ಕೆ ಅನುದಾನ ಬಿಡುಗಡೆಯಾಗದ ಕಾರಣ ಬಡವರು ಸಹ ಗುಡಿಸಲು ,ಮಣ್ಣಿನ ಗೋಡೆ, ಹೆಂಚು ಬಳಸಿ ಕಟ್ಟಿದ ಮನೆಗಳನ್ನು ವಿವಿಧ ವಸತಿ ಯೋಜನೆಗಳ ಅನುದಾನ ನಂಬಿ , ಕೆಡವಿ ಕಟ್ಟಲು ಹೋಗಿ, ನಿರಾಶೆ ಅನುಭವಿಸಿದವರೇ ಹೆಚ್ಚು . ಸ್ವಲ್ಪ ಆರ್ಥಿಕವಾಗಿ ಶಕ್ತಿ ಉಳ್ಳವರು ಕೂಡಿಟ್ಟ ಹಣ ದಿಂದ ಹೇಗೋ ಮನೆಗಳನ್ನು ಪೂರ್ಣಗೊಳಿಸಿಕೊಂಡವರು ಸಹ ಇದ್ದಾರೆ. ತೀರಾ ಬಡವರು ಮನೆಗಳನ್ನು ಪೂರ್ಣ ಮಾಡಲಾಗದೆ ಬುನಾದಿ ಹಂತ, ಲಿಂಟಲ್ ಹಂತಕ್ಕೆ ತಂದು ನಿಲ್ಲಿಸಿದ ಉದಾಹರಣೆಗಳು ಸಹ ಇವೆ . ಕೋವಿಡ್ ಕಾಲದಲ್ಲಿ ಮಂಜೂರಿಯಾದ ಮನೆಗಳು ಅನುದಾನ ಇಲ್ಲದೆ ನಿಂತು ಹೋಗಿವೆ. 2025ರ ಜೂನ್ ನಿಂದ ಕೇಂದ್ರ ಸರ್ಕಾರದಿಂದ ಆಗಲಿ ಅಥವಾ ರಾಜ್ಯ ಸರ್ಕಾರದಿಂದ ವಸತಿ ಯೋಜನೆಗಳಿಗೆ ಅನುದಾನವೇ ಬಂದಿಲ್ಲ.
ತಾಂತ್ರಿಕ ಕಾರಣ ಮತ್ತು ಹೊಸ ಸಿಸ್ಟಮ್ ಅಳವಡಿಕೆ ಕೆಲಸ ಆಗಬೇಕಿದೆ ಎಂದು ಕೇಂದ್ರದಿಂದ ಹಾಗೂ ರಾಜ್ಯ ಸರ್ಕಾರದ ರಾಜೀವ್ ಗಾಂಧಿ ವಸತಿ ಕಾರ್ೊರೇಷನ್ ನಿಂದ ಉತ್ತರ ಬರುತ್ತಿದೆ. ಹಾಗಾಗಿ ಅಧಿಕಾರಿಗಳು ಮತ್ತು ಸೂರು ನಿರ್ಮಿಸಿಕೊಳ್ಳಲು ಮುಂದಾಗಿರುವ ಕೆಳ ಮಧ್ಯಮ ಮತ್ತು ಬಿಪಿಎಲ್ ಕಾರ್ಡದಾರರು ವಸತಿ ಯೋಜನೆಗಳ ಅನುದಾನಕ್ಕೆ ಕಾಯುತ್ತಿದ್ದಾರೆ. ಪ್ರಧಾನಮಂತ್ರಿ ಅವಾಸ್ ಯೋಜನೆ ಹಾಗೂ ಅಂಬೇಡ್ಕರ್ ವಸತಿ, ಬಸವ ವಸತಿ ಯೋಜನೆಗಳಲ್ಲಿ ನಿಗದಿತ ಗುರಿಯಲ್ಲಿ ಶೇಕಡಾ 20 ರಿಂದ 25 ರಷ್ಟು ಪ್ರಗತಿ ಕಾಣುತ್ತಿದೆ. ಇದಕ್ಕೆ ವಸತಿ ಯೋಜನೆ ಅಡಿ ಅರ್ಜಿ ಹಾಕಿದವರಲ್ಲಿ ಅರ್ಹ ಫಲಾನುಭವಿಗಳೇ ಸಿಗದೆ ಶೇ.50 ರಷ್ಟು ನಿಗದಿತ ಗುರಿ ಬಿದ್ದು ಹೋಗುತ್ತದೆ. ಇನ್ನು ಶೇ.25 ತಾಂತ್ರಿಕ ಸಮಸ್ಯೆಗಳು, ಭೂಮಿ ಇಲ್ಲದೇ ಇರುವ ಕಾರಣಕ್ಕಾಗಿ ಫಲಾನುಭವಿಗಳ ಅರ್ಜಿಗಳು ವಜಾ ಆಗುತ್ತಿವೆ . ಇನ್ನು ಶೇ.20 ರಿಂದ 25 ರಷ್ಟು ಜನ ಅನುದಾನಕ್ಕಾಗಿ ಕಾಯುತ್ತಾ, ಮನೆ ಪೂರ್ಣಗೊಳಿಸಲು ಕನಿಷ್ಠ ಮೂರು ವರ್ಷ ತೆಗೆದುಕೊಳ್ಳುತ್ತಿರುವ ಉದಾಹರಣೆಗಳಿವೆ. ಒಟ್ಟಿನಲ್ಲಿ ಕುಂಟುತ್ತಾ, ತೆವಳುತ್ತಾ ವಸತಿ ಯೋಜನೆಗಳು ಸಾಗಿವೆ. ಬಸವ ವಸತಿ, ಅಂಬೇಡ್ಕರ್ ವಸತಿ ಯೋಜನೆಗಳ ಅಡಿ ಉತ್ತರ ಕನ್ನಡ ಜಿಲ್ಲೆಯಲ್ಲಿ 2021 ರಿಂದ 2025ರ ತನಕ 23,142 ಫಲಾನುಭವಿಗಳಿಗೆ ಮನೆ ಮಂಜೂರಾದರೂ, ಇದರಲ್ಲಿ ಶೇ. 75 ರಷ್ಟು ಅರ್ಜಿಗಳು ನಾನಾ ಕಾರಣಕ್ಕೆ ವಜಾ ಆಗಿವೆ. 7767 ಫಲಾನುಭವಿಗಳ ಮನೆ ಮುಕ್ತಾಯ ಹಂತದಲ್ಲಿವೆ.
8009 ಮನೆಗಳು ಬುನಾದಿ, ಪ್ಲಿಂತ್ ಹಾಗೂ ವ ಲಿಂಟಲ್ ಹಂತದಲ್ಲಿವೆ. 4892 ಮನೆಗಳು ಫೌಂಡೇಶನ್ , 4164 ಲಿಂಟಲ್, 2034 ರೂಫ್ ಹಂತದಲ್ಲಿವೆ. ಪ್ರಧಾನ ಮಂತ್ರಿ ಅವಾಸ್ ಯೋಜನೆಯಲ್ಲಿ 2022-24 ,ಅವಧಿಯಲ್ಲಿ ಉತ್ತರ ಕನ್ನಡ ಜಿಲ್ಲೆಗೆ 12594 ಮನೆ ನಿರ್ಮಿಸಲು ಗುರಿ ನೀಡಲಾಗಿತ್ತು. ತಾಂತ್ರಿಕ ಕಾರಣ ದಿಂದ ಬಹುತೇಕ ಅರ್ಜಿಗಳು ತಿರಸ್ಕೃತವಾದವು. ಅರ್ಹ 3211 ಅರ್ಜಿಗೆ ಮಂಜೂರಾತಿ ನೀಡಲಾಯಿತು . ಆದರೆ 2584 ಮನೆಗಳ ಫಲಾನುಭವಿಗಳಿಗೆ ಈತನಕ ಮೊದಲ ಕಂತಿನ ಹಣ ಮಾತ್ರ ಬಂದಿದೆ. ಎರಡನೇ ಕಂತಿನ ಹಣ ಬರಬೇಕಿದೆ. ತಾಂತ್ರಿಕ ಸಮಸ್ಯೆ ಯಿಂದ ಹಣ ಬಂದಿಲ್ಲ ಎಂದು ಅಧಿಕಾರಿಗಳು ಹೇಳುತ್ತಿದ್ದಾರೆ. ಇನ್ನು 2025 ರಲ್ಲಿ 5600 ಮನೆ ನಿರ್ಮಿಸಲು ಗುರಿ ನೀಡಲಾಗಿದೆ. 3753 ಮನೆ ಮಂಜೂರಾತಿ ಆಗಿವೆ. ಅನುದಾನ ಬರಬೇಕಿದೆ. ಮೊದಲ ಕಂತಿನ 30 ಸಾವಿರ ಹಣಕ್ಕೆ 3753 ಜನ ಬಡವರು ಕಾಯುತ್ತಿದ್ದಾರೆ. ವಸತಿ ಯೋಜನೆಗಳ ಅನುಷ್ಠಾನಕ್ಕೆ ಅನುದಾನ ಜೂನ್ ನಿಂದ ಬಂದಿಲ್ಲ. ಅನುದಾನ ಬಿಡುಗಡೆಗೆ ಹೊಸ ಪದ್ಧತಿ ಅಳವಡಿಸಲಾಗುತ್ತದೆ. ಕೇಂದ್ರ ಕಚೇರಿಯಿಂದ ಅನುದಾನ ಬಿಡುಗಡೆ ಆಗಲಿದೆ ಎಂದಿದ್ದಾರೆ. -ಸೋಮಶೇಖರ್. ಡಿಎಸ್ ಓ. ವಸತಿ ಯೋಜನೆಗಳು . ಉತ್ತರ ಕನ್ನಡ ಜಿಲ್ಲೆ
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 