ಧಾರವಾಡ 11: ಮನೆ ದರೋಡೆ ಮಾಡಿ ಅಂದಾಜು 576000 ರೂಪಾಯಿ ಬೆಲೆಯ ಬೆಳ್ಳಿ ಬಂಗಾರದ ಆಭರಣ ಸೇರಿದಂತೆ ಮನೆಯಲ್ಲಿನ ಇತರ ವಸ್ತುಗಳನ್ನು ಕಳತನ ಮಾಡಿದ್ದ ಕಳ್ಳರನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.
ಧಾರವಾಡ ಶ್ರೀರಾಮನಗರ ನಿವಾಸಿ ಮಹ್ಮದಹುಸೇನ್ ಉರ್ಫ ಮಚ್ಚರಹನಿಸಿಂಗ್ ಮಹ್ಮದಗೌಸ್ ಶೇಖ್(26), ಜನ್ನತನಗರ ನಿವಾಸಿ ಬಾಬಾಜಾನ ಉರ್ಫ ಬಾಬಾ ಮೆಹಬೂಬಸಾಬ ಸಂಶಿ(20) ನಗರಕರ ಕಾಲನಿ 01 ನೇ ಕ್ರಾಸ ನಿವಾಸಿಗಳಾದ ಸಾದಿಕ ಉರ್ಫ ಬಾಬಸಾದಿಕ ಹುಸೇನ ಶೇಖ(24), ಪವನಕುಮಾರ ಉರ್ಫ ಪವನ ಶಂಕರ ಮರಕುಂಬಿ(24) ಮತ್ತು ಶ್ರೀರಾಮನಗರ ತುಳುಜಾಭವಾನಿ ಗುಡಿ ಹತ್ತಿರದ ನಿವಾಸಿ ಸಾದಿಕ ಸುಲೇಮಾನ ಹವಾಲಾರ(23) ವರ್ಷ ಬಂಧಿತ ಆರೋಪಿಗಳಾಗಿದ್ದಾರೆ.
ದಿ.21/09/2019ರಂದು ಧಾರವಾಡ ಸಾರಸ್ವತಪೂರ ಕಿವುಡ ಮಕ್ಕಳ ಶಾಲೆ ಟೋಲನಾಕಾ ಹತ್ತಿರ ಮನೆ ನಂ 27/1 ನಿವಾಸಿ ಜಾನ್ ಜೋಷೆಪ್ ಅರೋಜಾ ಇವರು ತಾವು ಮತ್ತು ತಮ್ಮ ಸಹೋದರರು ಪೂನಾ ಮತ್ತು ಬೆಂಗಳೂರಿನಲ್ಲಿ ಕೆಲಸ ಮಾಡುತ್ತಿದ್ದು ತಮ್ಮ ಸ್ವಂತ ಮನೆಯಲ್ಲಿ ಯಾರೂ ವಾಸವಾಗದ್ದರಿಂದ ಮನೆಯನ್ನು ಕಾಯುವ ಸಲುವಾಗಿ ಸುರಕ್ಷಾ ಸವರ್ಿಸಸ್ ಸೆಕ್ಯೂರಿಟಿಗೆ ನೇಮಿಸಿದ್ದು ತಾವು ಪುಣೆಯಲ್ಲಿದ್ದಾಗ ದಿ.16.09.2019 ರಂದು ಸೆಕ್ಯೂರಿಟಿಯವರು ಪೋನ ಮಾಡಿ ಮನೆಯ ಕಿಡಕಿಯ ರಾಡನ್ನು ಕಿತ್ತು ಮನೆಯೊಳಗೆ ಬಂದು ಕಳ್ಳತನ ಮಾಡಿದ್ದಾರೆ ಎಂದು ವಿಷಯ ತಿಳಿಸಿದರು. ನಂತರ ತಾವು ಪುಣೆಯಿಂದ ಬಂದು ಪರಿಶೀಲಿಸಿ ನೋಡಲಾಗಿ ಒಟ್ಟು 576000 ರೂಪಾಯಿ ಬೆಲೆಯ ಬೆಳ್ಳಿ ಬಂಗಾರದ ಆಭರಣಗಳು, ಗಿಟಾರ, ಸೌಂಡ ಸಿಸ್ಟಮ್, ವಾಚಗಳು ಮನೆಬಳಕೆಯ ವಸ್ತುಗಳನ್ನು ಕಳ್ಳತನ ಮಾಡಿದ್ದಾರೆ ಎಂದು ವಿದ್ಯಾಗಿರಿ ಪೊಲೀಸ ಠಾಣೆಯಲ್ಲಿ ದೂರು ದಾಖಲಿಸಿದ್ದರು.
ಈ ಪ್ರಕರಣವನ್ನು ಪತ್ತೆ ಮಾಡಲು ಹುಬ್ಬಳ್ಳಿ-ಧಾರವಾಡ ಪೊಲೀಸ್ ಆಯುಕ್ತ ಆರ್.ದಿಲೀಪ, ಉಪ ಪೊಲೀಸ್ ಆಯುಕ್ತರಾದ ಎಲ್.ನಾಗೇಶ, ಶಿವಕುಮಾರ ಗುನಾರೆ, ಸಹಾಯಕ ಪೊಲೀಸ್ ಆಯುಕ್ತ ಎಮ್ .ಎನ್ ರುದ್ರಪ್ಪ ಇವರ ಮಾರ್ಗದರ್ಶನದಲ್ಲಿ ಧಾರವಾಡ ವಿದ್ಯಾಗಿರಿ ಪೊಲೀಸ್ ಠಾಣೆಯ ಇನ್ಸಪೆಕ್ಟರ್ ಅಲ್ತಾಪಹುಸೇನ ಮುಲ್ಲಾ ಅವರು ವಿಶೇಷ ತಂಡ ರಚಿಸಿದ್ದರು.
ಪಿಎಸ್ಐ ಶಿವಾನಂದ ಬನ್ನಿಕೊಪ, ಎ.ಎಸ್.ಐ ಬಿ.ಎಮ್.ಅಂಗಡಿ ಹಾಗೂ ಎ.ಬಿ. ನರೇಂದ್ರ, ಎಮ್.ಎಫ್. ನದಾಫ, ಐ.ಪಿ ಬುಜರ್ಿ, ಆರ್.ಕೆ. ಅತ್ತಾರ ಬಿ.ಎಮ್.ಪಟಾತ, ಪಿ.ಎ. ಮಾನೆ, ಎಮ್.ಸಿ. ಮಂಕಣಿ, ಎಮ್.ಜಿ. ಪಾಟೀಲ, ಡಿ.ಎಸ್. ಸಾಂಗ್ಲೀಕರ, ಎ.ಎಮ್.ಹುಯಿಲಗೋಳ ಇವರ ತಂಡ ಆರೋಪಿಗಳನ್ನು ಪತ್ತೆ ಮಾಡುವಲ್ಲಿ ಯಶಸ್ವಿಯಾಗಿದೆ.
ಕಳ್ಳತನ ಮಾಡಿದ್ದ ಒಟ್ಟು 121 ಗ್ರಾಂ ಬಂಗಾರದ ಆಭರಣಗಳು ಅ.ಮೌ. 3,62,850 ರೂಪಾಯಿಗಳು, 477 ಗ್ರಾಂ ಬೆಳ್ಳಿಯ ಆಭರಣಗಳು ಅ.ಮೌ. 17,000ರೂಪಾಯಿಗಳು, ಆರು ಕ್ಯಾಮರಾಗಳು, ಬೈನಾಕುಲರ, ಸೌಂಡ ಸಿಸ್ಟಮ್, ಸ್ಟೀರಿಯೋ, ಸಿಡಿ ಪ್ಲೇಯರ್, ಗಿಟಾರ, 03 ವಾಚಗಳು, ಎಲ್.ಇ.ಡಿ ಟಿ.ವ್ಹಿ, ಗ್ಯಾಸಸಿಲಿಂಡರಗಳು, ಗ್ಯಾಸ ಸ್ಟೋ, ಓವೆನ್ ಹಿತ್ತಾಲಿ ಹಂಡೆ ಹಾಗೂ ಮತ್ತು ಒಂದು ಕಪ್ಪು ಬಣ್ಣದ ಬಜಾಜ ಪಲ್ಸರ 220 ಸಿಸಿ ಬೈಕ, ಕೃತ್ಯಕ್ಕೆ ಬಳಸಿದ ಒಂದು ಕಟ್ಟಿಗೆಯ ಮುಂಡಾ, ಒಟ್ಟು ಅಂದಾಜು ಬೆಲೆ: 5,51000 ರೂಪಾಯಿ ಮತ್ತು ಕೃತ್ಯಕ್ಕೆ ಬಳಸಿದ ಕಬ್ಬಿಣದ ರಾಡನ್ನು ವಶಪಡಿಸಿಕೊಂಡಿದ್ದಾರೆ.