ಅಂಗನವಾಡಿ ನೌಕರರ ವಿವಿಧ ಬೇಡಿಕೆಗಳ ಆಗ್ರಹಿಸಿ ಅಹೋರಾತ್ರಿ ಧರಣಿ ಮುಷ್ಕರ
ವಿಜಯಪುರ 17 : ಕರ್ನಾಟಕ ಅಂಗನವಾಡಿ ನೌಕರರ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಕರ್ನಾಟಕ ಅಂಗನವಾಡಿ ನೌಕರರ ಸಂಘ (ಸಿಐಟಿಯು) ಸಂಯೋಜಿತ ಜಿಲ್ಲಾ ಸಮಿತಿ ವಿಜಯಪುರ ಪದಾಧಿಕಾರಿಗಳು ಜಿಲ್ಲಾಧಿಕಾರಿಗಳ ಕಚೇರಿ ಆವರಣದ ಮುಂಭಾಗ ಮಂಗಳವಾರ ಅಹೋರಾತ್ರಿ ಧರಣಿ ಮುಷ್ಕರ ಹಮ್ಮಿಕೊಂಡಿದ್ದರು.
ಜಿಲ್ಲಾಧಿಕಾರಿಗಳ ಮೂಲಕ ಮಾನ್ಯ ಮುಖ್ಯಮಂತ್ರಿಗಳಿಗೆ ಬರೆದ ಪತ್ರವನ್ನು ಮುಷ್ಕರ ನಿರತ ಸ್ಥಳಕ್ಕೆ ಅಪರ ಜಿಲ್ಲಾಧಿಕಾರಿ ಸೋಮಲಿಂಗ ಗೆಣ್ಣೂರ ಆಗಮಿಸಿ ಮನವಿ ಪತ್ರ ಸ್ವೀಕರಿಸಿದರು.
ಮುಷ್ಕರ ಬೆಂಬಲಿಸಿ ಸಿಐಟಿಯು ಅಧ್ಯಕ್ಷ ಅಣ್ಣಾರಾಯ ಈಳಗೇರ ಮಾತನಾಡಿ, ಈ ಸಂದರ್ಭದಲ್ಲಿ ಸಮಗ್ರ ಶಿಶು ಅಭಿವೃದ್ಧಿ ಯೋಜನೆ ಪ್ರಾರಂಭವಾಗಿ 50 ವರ್ಷಗಳು ಸಮೀಪಿಸುತ್ತಿದೆ. ಪಾಲನೆ, ಪೋಷಣೆ, ಶಿಕ್ಷಣ ಸಂವಿಧಾನ ಬದ್ಧ ಕರ್ತವ್ಯಗಳಿವೆ. ಮತ್ತು 2013ರ ಆಹಾರ ಭದ್ರತಾ ಕಾಯ್ದೆ, 2009ರ ಕಡ್ಡಾಯ ಶಿಕ್ಷಣ ಕಾಯ್ದೆಯ ಕರ್ತವ್ಯಗಳನ್ನು ಶಾಸನಬದ್ಧವಾಗಿ ಸ್ಥಾಪಿಸಲ್ಪಟ್ಟ ಅಂಗನವಾಡಿ ಕೇಂದ್ರಗಳ ಮುಖಾಂತರ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರು ಜಾರಿ ಮಾಡುತ್ತಿದ್ದಾರೆ. ಸುಪ್ರೀಂಕೋರ್ಟ್ ಮತ್ತು ಗುಜರಾತ್ ಹೈಕೋರ್ಟ್‌ಗಳು ಇವರನ್ನು 3 ಮತ್ತು 4 ಗ್ರೇಡ್‌ನ ನೌಕರರನ್ನಾಗಿ ಪರಿಗಣಿಸಲು ಜಂಟೀ ನಿಯಮಗಳನ್ನು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ರೂಪಿಸಬೇಕೆಂದೂ ತೀರ್ು ನೀಡಿದೆ ಮತ್ತು ಸುಪ್ರೀಂ ಕೋರ್ಟ್ 1972 ಗ್ರಾಜ್ಯುಟಿ ಪಾವತಿ ಕಾಯ್ದೆಯಡಿ ಅರ್ಹರೆಂದೂ ತೀರ್ು ನೀಡಿದೆ. ದೇಶದ ಅಭಿವೃದ್ಧಿಗೆ ಪೂರಕವಾದ ಮಾನವ ಸಂಪನ್ಮೂಲಗಳನ್ನು ಅಪೌಷ್ಠಿಕತೆ, ಅಂಗವೈಕಲ್ಯತೆಗಳಿಂದ ಕಾಪಾಡಿ ಮಾನಸಿಕ ಮತ್ತು ದೈಹಿಕವಾಗಿ ಬೆಳಿಸಿ ಮಾನವ ಸಮಾಜದ ಪುನರುತ್ಪಾದನೆಗೆ ಕೊಡುಗೆ ಕೊಡುತ್ತಿರುವ ಋಆಖನ್ನು ಯೋಜನೆಯನ್ನಾಗಿಯೇ 49 ವರ್ಷಗಳ ನಂತರವೂ ಉಳಿಸಿಕೊಳ್ಳಲಾಗಿದೆ. ಮಾತ್ರವಲ್ಲದೇ 2014ರ ನಂತರ ಸರ್ಕಾರದ ಕಲ್ಯಾಣ ಕಾರ್ಯಕ್ರಮಗಳ ಪರಿಕಲ್ಪನೆ ಬದಲಾಗಿ ನೀತಿ ಆಯೋಗದ ಶಿಫಾರಸ್ಸುಗಳಂತೆ 60:40ರ ಅನುಪಾತದ ಆಧಾರದಲ್ಲಿ ಕೇಂದ್ರ ಸರ್ಕಾರ ತನ್ನ ಮೂಲ ಜವಾಬ್ದಾರಿಯಿಂದ ನುಣಿಚಿಕೊಂಡು ಬಜೆಟ್ ಅನುದಾನಗಳನ್ನು ನಿರಂತರವಾಗಿ ಕಡಿಮೆ ಮಾಡುತ್ತಿದೆ. ಅಂಗನವಾಡಿ ಮಕ್ಕಳಿಗೆ ಕೊಡುವ ಪೌಷ್ಠಿಕ ಆಹಾರದ ಘಟಕವೆಚ್ಚ 2018ರಿಂದ ಹೆಚ್ಚಳ ಮಾಡದೇ ಉಖಖಿಯನ್ನು ಹಾಕಿದ್ದರಿಂದ ಗುಣಮಟ್ಟದ ಆಹಾರ ಪದಾರ್ಥಗಳನ್ನು ಕೊಡುವುದರಲ್ಲಿ ವೈಫಲ್ಯತೆ ಎದ್ದು ಕಾಣುತ್ತಿದೆ. ಮತ್ತು ಅಂಗನವಾಡಿ ನೌಕರರ ವೇತನವನ್ನು ಕೂಡಾ ಹೆಚ್ಚಳ ಮಾಡದೇ ಹೊಸ ಆಕರ್ಷಕ ಘೋಷಣೆಗಳಿಗೆ ಮಾತ್ರವೇ ಸೀಮಿತವಾಗುತ್ತಿದೆ ಎಂದರು.
ಸಿಐಟಿಯು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಲಕ್ಷ್ಮಣ ಹಂದ್ರಾಳ, ರಾಜ್ಯದಲ್ಲಿ ಅಂಗನವಾಡಿ ಕೇಂದ್ರಗಳನ್ನು ಬಲಹೀನಗೊಳಿಸಲು ಶಿಕ್ಷಣ ಇಲಾಖೆ 4 ವರ್ಷದ ಮೇಲ್ಪಟ್ಟ ಮಕ್ಕಳನ್ನು ಸ್ಥಳಾಂತರಿಸಲು ಬೇರೆ ಬೇರೆ ಸ್ವರೂಪಗಳಲ್ಲಿ ಪ್ರಯತ್ನಿಸುತ್ತಿದೆ. ಇದಕ್ಕೆ ಮ.ಮ.ಅ. ಇಲಾಖೆ ತಡೆಹಾಕಿ ಅಂಗನವಾಡಿ ಕೇಂದ್ರಗಳನ್ನು ಪೂರ್ವಪ್ರಾರ್ಥಮಿಕ ಶಿಕ್ಷಣ ಕೇಂದ್ರಗಳಾಗಿ ಪರಿವರ್ತಿಸಲು ತೀರ್ಮಾನಿಸಿದೆ. ಇದೊಂದು ಐತಿಹಾಸಿಕ ತೀರ್ಮಾನವಾಗಿದೆ. ಆದರೆ ಇದಕ್ಕೆ ಬೇಕಾದಂತಹ ಹಣಕಾಸನ್ನು ಬಿಡುಗಡೆಗೊಳಿಸಿ, ಇದರ ಮೇಲ್ವಿಚಾರಣೆಗೆ ಋಆಖ ಪ್ರತ್ಯೇಕ ನಿರ್ದೆಶನಾಲಯ ಮಾಡಿದರೆ ಮಾತ್ರವೇ ಈ ತೀರ್ಮಾನಗಳನ್ನು ಪುಷ್ಟೀಕರಿಸಿದಂತಾಗುತ್ತದೆ ಎಂದರು.
ಅಂಗನವಾಡಿ ನೌಕರರೆ ಸಂಘದ ಜಿಲ್ಲಾ ಅಧ್ಯಕ್ಷರಾದ ಸುನಂದಾ ನಾಯಕ, 1948 ರ ಕನಿಷ್ಟ ವೇತನ ಕಾಯ್ದೆಯಡಿಯಲ್ಲಿ ತಿಳಿಸಿದಂತೆ 4 ಗಂಟೆಗಿಂತ ಹೆಚ್ಚು ಕೆಲಸ ಮಾಡುವವರಿಗೆ ಕನಿಷ್ಠ ವೇತನ ನೀಡಬೇಕು ಎಂದೂ ತಿಳಿಸಿದೆ. ಆದರೆ ಯಾವುದೇ ಸರ್ಕಾರಗಳು ಇದನ್ನು ಜಾರಿ ಮಾಡಲು ಮುಂದಾಗಲಿಲ್ಲ. ರಾಜ್ಯದಲ್ಲಿರುವ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬರುವಾಗ ತನ್ನ ಪ್ರಚಾರದಲ್ಲಿ ಹೇಳಿದಂತೆ 3500 ರೂ ಮತ್ತು 1750 ರೂ. ವೇತನ ಹೆಚ್ಚಿಸಲು ಕೂಡಲೇ ಕ್ರಮಕೈಗೊಳ್ಳಬೇಕು ಎಂದರು.
ಜಿಲ್ಲಾ ಗೌರವಾಧ್ಯಕ್ಷರು ಭಾರತಿ ವಾಲಿ ಮಾತನಾಡಿ, ಬಾಡಿಗೆ ಕಟ್ಟಡದಲ್ಲಿ ನಡೆಯುತ್ತಿರುವ ಕೇಂದ್ರಗಳ ಬಾಡಿಗೆ ಹಣ ಪ್ರತಿ ತಿಂಗಳ ತೆಗೆಯಬೇಕು. ಗ್ಯಾಸ್ ಸಿಲಿಂಡರ್ ಹಣ ಖಾತೆಗೆ ಹಾಕುವ ಬದಲು ನೇರವಾಗಿ ಸಿಲಿಂಡರ್ ಗಳು ಅಂಗನವಾಡಿ ಕೇಂದ್ರಗಳಿಗೆ ಕಳುಹಿಸಬೇಕು. ಮೊಟ್ಟೆ ಹಣ ಬೆಲೆ ಏರಿಕೆ ಅನುಸಾರವಾಗಿ ಬಿಲ್ ಜಮಾ ಮಾಡಬೇಕು. ಅಂಗನವಾಡಿ ಕೇಂದ್ರಗಳಿಗೆ ಪ್ರತಿ ತಿಂಗಳ ಸರಿಯಾಗಿ ಹಾಲಿನ ಪೌಡರ್ ಬರುವಂತೆ ಮಾಡಬೇಕು. ಅಂಗನವಾಡಿ ಕಾರ್ಯಕರ್ತರಿಗೆ ಬಿ ಎಲ್ ಓ ಕೆಲಸದಿಂದ ಕೈಬಿಡಬೇಕು ಶಾಲಾ ಪೂರ್ವ ಶಿಕ್ಷಣ ನೆಡೆಸಲು ತೊಂದರೆ ಆಗುತ್ತದೆ. ಮಿನಿ ಅಂಗನವಾಡಿ ಕಾರ್ಯಕರ್ತರಿಗೆ ಅಪ್ಗ್ರೇಡೆಶನ್ ಆದೇಶ ಕೊಡಬೇಕು. ಅಂಗನವಾಡಿ ನೌಕರ ಗೌರವಧನ ಪ್ರತಿ ತಿಂಗಳಾಗಬೇಕು ಹಾಗೂ ಗೌರವಧನ ಪಡೆಯುವ ಬ್ಯಾಂಕುಗಳಲ್ಲಿ ಸಾಲ ಪಡೆಯುವ ಅನುವು ಮಾಡಬೇಕು. ಅಂಗನವಾಡಿ ಕಾರ್ಯಕರ್ತೆಯರ ಟಿಎ ಮತ್ತು ಡಿಎ ಬೆಲೆ ಏರಿಕೆ ಅನುಸಾರವಾಗಿ ಹೆಚ್ಚಳ ಮಾಡಬೇಕು.
ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅಶ್ವಿನಿ ತಳವಾರ ಮಾತನಾಡಿ, ವಿಜಯಪುರ ಜಿಲ್ಲೆಯಲ್ಲಿ ಕೆಲವು ಮೇಲ್ವಿಚಾರಿಕೆಯರು ಎಂಟು,ಹತ್ತು ವರ್ಷ ಗಳಿಂದ ಒಂದೇ ವಲಯಗಳಲ್ಲಿ ಕೆಲಸ ನಿರ್ವಹಿಸುತ್ತಿದ್ದಾರೆ ಹಾಗೂ ವರ್ಗಾವಣೆ ಆದರೂ ಕೂಡಾ ಮತ್ತೆ ಅದೇ ವಲಯಕ್ಕೆ ಬಂದು ಕೆಲಸ ಮಾಡುತ್ತಾರೆ.ಸರಕಾರದ ಆದೇಶದ ಪ್ರಕಾರ ಮೆಲ್ವಿಚಾರಿಕೆಯರು ಒಂದು ವಲಯದಲ್ಲಿ ಎರಡೇ ವರ್ಷ ಕೆಲಸ ಮಾಡಬೇಕೆಂದು ಇರುತ್ತದೆ. ಮತ್ತೆ ಈ ವಿಷಯದ ಬಗ್ಗೆ ಇಲಾಖೆ ಅಧಿಕಾರಿಗಳಿಗೆ ಮನವಿ ಪತ್ರ ಕೊಟ್ಟರು ಕೂಡಾ ಏನು ಉತ್ತರ ಇರುವದಿಲ್ಲ. ವಂದೇ ವಲಯದಲ್ಲಿ ನಾಲ್ಕರಿಂದ ಹತ್ತು ವರ್ಷಗಳ ಕಾಲ ಕೆಲಸ ಮಾಡುವ ಮೇಲ್ವಿಚಾರಿಕೆಯರನ್ನು ಬೇರೆ ವಲಯಗಳಿಗೆ ವರ್ಗಾವಣೆ ಮಾಡಬೇಕು. ಎಲ್ಲಾ ತಾಲೂಕಾ ಗಳಲ್ಲಿ ಮೊಟ್ಟೆ ಹಣ ಬಾಲ ವಿಕಾಸ ಸಮಿತಿ ಖಾತೆಗೆ ಜಮಾ ಮಾಡಬೇಕು.ಮೊಟ್ಟೆ ಸರಬರಾಜು ಮಾಡುವ ಟೆಂಡರ ನ್ನೂ ತೆಗೆದು ಹಾಕಬೇಕು. ಕೆಲವು ತಾಲೂಕಾ ಗಳಲ್ಲಿ ಕೆಲವು ತಾಲ್ಲೂಕುಗಳಲ್ಲಿ ಅಂಗನವಾಡಿ ಕಟ್ಟಡದ ಬಾಡಿಗೆ ಹತ್ತು ತಿಂಗಳಿಂದ ಆಗಿರುವುದಿಲ್ಲ. ಕಾರ್ಯಕರ್ತೆಯರು ತಮ್ಮ ಕೈ ಇಂದ ಭರಿಸುತ್ತಾರೆ ಈ ಸಮಸ್ಯೆಯನ್ನು ಬಗೆ ಹರಿಸಬೇಕೆಂದು ಮನವಿ ಪತ್ರದಲ್ಲಿ ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಸುರೇಶ ಜೀಬಿ, ರೈತ ಮುಖಂಡರಾದ ಭೀಮರಾಯ ಪೂಜಾರಿ, ಜಿಲ್ಲಾ ಖಜಾಂಚಿ ಪ್ರತಿಭಾ ಕುರಡೆ, ಸಿಂದಗಿ ತಾಲೂಕಾಧ್ಯಕ್ಷರಾದ ಸರಸ್ವತಿ ಮಠ, ವಿಜಯಪು ತಾಲೂಕಾ ಕಾರ್ಯದರ್ಶಿ ಸುವರ್ಣಾ ಹಲಗಲಿ, ಇಂಡಿ ತಾಲೂಕಾ ಕಾರ್ಯದರ್ಶಿ ಗೀರೀಜಾ ಸಕ್ರಿ, ಚಡಚಣ ತಾಲೂಕಾ ಕಾರ್ಯದರ್ಶಿ ಶೋಭಾ ಕಬಾಡೆ, ಬ.ಬಾಗೇವಾಡಿ ತಾಲೂಕಾ ಅಧ್ಯಕ್ಷರಾದ ವಿಜಯಲಕ್ಷ್ಮೀ ಹಿಪ್ಪರಗಿ, ಬ.ಬಾಗೇವಾಡಿ ಕಾರ್ಯದರ್ಶಿ ಚೌಡಮ್ಮ ಕಡಕೋಳಕರ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.