ನಷ್ಟಗೊಂಡ ಈರುಳ್ಳಿ ಬೆಳೆ ವಿಕ್ಷಣೆ ಮಾಡಿದ ತೋಟಗಾರಿಕೆ ಅಧಿಕಾರಿಗಳು
Horticulture officials inspect the damaged onion crop
ನಷ್ಟಗೊಂಡ ಈರುಳ್ಳಿ ಬೆಳೆ ವಿಕ್ಷಣೆ ಮಾಡಿದ ತೋಟಗಾರಿಕೆ ಅಧಿಕಾರಿಗಳು
ವಿಜಯಪುರ, 29 : ಕಳಪೆ ಮಟ್ಟದ ಈರುಳ್ಳಿ ಬೀಜದಿಂದಾಗಿ ನಷ್ಟಗೊಂಡ ರೈತರ ಜಮೀನಿಗೆ ತೋಟಗಾರಿಕಾ ಅಧಿಕಾರಿಗಳು ಬೇಟಿ ನೀಡಿ ಪರಿಹಾರ ಒದಗಿಸುವಂತೆ ಮನವಿ ಸಲ್ಲಿಸಿರುವ ಹಿನ್ನಲೆಯಲ್ಲಿ ಸ್ಥಳಕ್ಕೆ ಆಗಮಿಸಿದ ಅಧಿಕಾರಿಗಳು ಶಾಂಪಲ್ ಸಂಗ್ರಹಿಸಿ ಮುಂದಿನ ಕ್ರಮ ಕೈಗೊಳ್ಳುವುದಾಗಿ ರೈತ ಕುಟುಂಬಕ್ಕೆ ಧೈರ್ಯ ತುಂಬಿದ ಬಸನಗೌಡ ಪಾಟೀಲ,
ವಿಜಯಪುರ ತಾಲೂಕಿನ ಅಂಕಲಗಿ ಗ್ರಾಮದ ಶ್ರೀಮತಿ ಶಾರವ್ವ ಗುರ್ಪ ತಳವಾರ ಸರ್ವೇ ನಂ 75/5 ಒಟ್ಟು 4 ಎಕರೆ ಪ್ರದೇಶದಲ್ಲಿ ಕಳಶ ಸಿಡ್ಸ್ ಕಂಪನಿಯ ಸಂಗಮ ಸೆಲೆಕ್ಷನ ಈರುಳ್ಳಿ ಬೀಜವನ್ನು ಬಿತ್ತನೆ ಮಾಡಿ ಇನ್ನೆನು 15 ದಿನಗಳಲ್ಲಿ ಬೆಳೆ ಫಸಲಿಗೆ ಬರುವ ವೇಳೆ ಈರುಳ್ಳಿ ಬೇರು ಕೆಳಗೆ ಹೋಗಿ ಉಳಿದಿರುವ ಗಡ್ಡಿ ಮೇಲೆ ಬಂದು ಸಂಪೂರ್ಣ ನಷ್ಟಗೊಂಡಿದೆ ಇದರಿಂದಾಗಿ ರೈತ ಸುಮಾರು 5-6 ಲಕ್ಷ ನಷ್ಟ ಅನುಭವಿಸುವಂತಾಗಿದೆ ಕೂಡಲೇ ಆ ಈರುಳ್ಳಿ ಬೀಜದ ಕಂಪನಿಯವರ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಂಡು ನಷ್ಟ ಪರಿಹಾರ ನೀಡಬೇಕು ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಾಸಿರು ಸೇನೆ ಮನವಿ ಸಲ್ಲಿಸಿರುವ ಮೇರೆಗೆ ಅಧಿಕಾರಿಗಳು ಜಮೀನಿಗೆ ಬೇಟಿ ನೀಡಿದರು.
ತೋಟಗಾರಿಕೆಯ ಹಿರಿಯ ಸಹಾಯಕ ನಿರ್ದೇಶಕರಾದ ಬಸನಗೌಡ ಬಿರಾದಾರ, ಸಹಾಯಕ ನಿರ್ದೇಶಕರಾದ ಅನುಸೂಯಾ ಸೋಮಣ್ಣವರ ಹಾಗೂ ಸಹಾಯಕ ಅಧಿಕಾರಿಗಳಾದ ರಮೇಶ ಮಿರ್ಜಿ ತಂಡದೊಂದಿಗೆ ಜಮೀನಿಗೆ ಆಗಮಿಸಿ ವಿಕ್ಷಣೆ ಮಾಡಿ ಶಾಂಪಲ್ ಸಂಗ್ರಹಿಸಿಕೊಂಡು ಬಾಗಲಕೋಟ ತೋಟಗಾರಿಕಾ ಇಲಾಖೆಯ ವಿಜ್ಞಾನಿಗಳನ್ನು ಕರೆಸಿ ಪ್ರಯೋಗಾಲಯದಲ್ಲಿ ಪರೀಕ್ಷಿಸಿ ಎತಕ್ಕಾಗಿ ಇದಾಗಿದೆ ಎಂದು ಕುಲಂಕುಷವಾಗಿ ನೋಡಿ ಒಂದು ನಿರ್ಣಯಕ್ಕೆ ಬರಬೇಕಾಗುತ್ತದೆ ಎಂದರು.
ರೈತ ಸಂಘದ ಜಿಲ್ಲಾಧ್ಯಕ್ಷರಾದ ಸಂಗಮೇಶ ಸಗರ ಹಾಗೂ ತಾಲೂಕಾ ಸಂಚಾಲಕರಾದ ರಾಜೇಸಾ ಅಂಕಲಗಿ ಮಾತನಾಡುತ್ತಾ ಒಟ್ಟಾರೆಯಾಗಿ 5-6 ಲಕ್ಷ ನಷ್ಟಗೊಂಡ ರೈತ ಕುಟುಂಬಕ್ಕೆ ಬೀಜದ ಕಂಪನಿಯಿಂದ ಪರಿಹಾರ ನೀಡುವಂತೆ ಆಗ್ರಹ ಮಾಡಬೇಕು ಜೊತೆಗೆ ಈ ರೀತಿ ಘಟನೆಗಳು ಮರುಕಳಿಸದಂತೆ ಎಚ್ಚರ ವಹಿಸಿ ಇಲ್ಲವಾದಲ್ಲಿ ಅಂತಹ ಕಂಪನಿಗಳನ್ನು ಕಪ್ಪು ಪಟ್ಟಿಗೆ ಸೇರಿಸಬೇಕು ಅಥವಾ ಸರಕಾರದಿಂದ ಆದರೂ ಆ ಕುಟುಂಬಕ್ಕೆ ಪರಿಹಾರ ನೀಡಬೇಕೆಂದು ಈ ಮೂಲಕ ಆಗ್ರಹಿಸುತ್ತಿದ್ದೆವೆ ಇಲ್ಲವಾದಲ್ಲಿ ಆ ಕುಟುಂಬದೊಂದಿಗೆ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ವತಿಯಿಂದ ಹೋರಾಟ ಮಾಡಲಾಗುವುದು ಎಂದು ತಿಳಿಸುತ್ತೆವೆ ಎಂದರು.
ಈ ವೇಳೆ ಜಿಲ್ಲಾ ಸಂಚಾಲಕರಾದ ಜಕರಾಯ ಪೂಜಾರಿ, ಅಂಕಲಗಿ ಗ್ರಾಮ ಘಟಕದ ಅಧ್ಯಕ್ಷರಾದ ಅಮೋಗಿ ಉಕ್ಕಲಿ, ಗುರ್ಪ ತಳವಾರ, ಕಲ್ಲಪ್ಪ ಇಂಡಿ, ಬಸಪ್ಪ ಮೋಪಗಾರ, ಸಾಬು ಪೂಜಾರಿ, ಅಜೀಜಪಟೇಲ ಪಾಟೀಲ, ತೌಸೀಪ್ ಮುಲ್ಲಾ, ಬೀರ್ಪ ದಿಂಡವಾರ, ಚಂದ್ರಯ್ಯ ಹಿರೇಮಠ, ನಬಿಪಟೇಲ ಬಿರಾದಾರ, ಮಹಿಬೂಬ ನದಾಫ, ಸಿದ್ದಪ್ಪ ದಿಂಡವಾರ, ಗಪೂರ ಪಟೇಲ್, ಬಸವರಾಜ ತಳವಾರ, ಶರಣಪ್ಪ ಪಡನೂರ, ಸೇರಿದಂತೆ ಇತರರು ಇದ್ದರು.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 