ಸಾರಿಗೆ ಬಸ್ ಬೈಕ್ ನಡುವೆ ಭೀಕರ ಅಪಘಾತ ಬೆಂಕಿ ಹತ್ತಿ ಬೈಕ್ ಸಹಿತ ಯುವಕ, ಬಸ್ ಸುಟ್ಟು ಕರಕಲು
Horrific accident between transport bus and bike, young man with bike caught fire, bus burnt to ash
ಲೋಕದರ್ಶನ ವರದಿ
ಸಿಂದಗಿ 01: ರಾಷ್ಟ್ರೀಯ ಹೆದ್ದಾರಿ 50ರಲ್ಲಿರುವ ತಾಲೂಕಿನ ಕನ್ನೋಳ್ಳಿ ಟೋಲ್‌ಗೇಟ್ ಸಮೀಪ ಸಾರಿಗೆ ಬಸ್ ಹಾಗೂ ಬೈಕ್ ನಡುವೆ ಭೀಕರ ಅಪಘಾತ ಸಂಭವಿಸಿ ಬೈಕ್ ಸವಾರ ಸುಟ್ಟು ಕರಕಲಾಗಿ ಸ್ಥಳದಲ್ಲಿಯೇ ಮೃತಪಟ್ಟಿದ್ದಾನೆ. ಅಲ್ಲದೆ ಬಸ್ಸು ಕೂಡಾ ಸುಟ್ಟು ಹೋಗಿದೆ. ನಗರದ ಅಭಿಷೇಕ್ ಸಾಯಬಗೌಡ ನಾಗರಾಳ (ಅಲ್ಲಾಪುರ) ಮೃತ ದುರ್ದೈವಿ ಯುವಕ ಎಂದು ಗುರುತಿಸಲಾಗಿದೆ.
ವಿಜಯಪುರ ಬಸ್ ಡಿಪೋಗೆ ಸಂಬಂಧಿಸಿದ ಕೆ.ಎ 28 ಎಫ್2095 ನಂಬರಿನ ಬಸ್ಸು ಇದಾಗಿದ್ದು, ಕೆಎ28 ಎಚ್ ಕೆ 2551 ನಂಬರಿನ ಪಲ್ಸರ್ ಎನ್‌ಎಸ್ ಬೈಕ್ ಮಧ್ಯ ಸುಮಾರು 12.20 ಗಂಟೆಯ ಸಮಯದಲ್ಲಿ ನಡೆದಿದೆ. ಅಪಘಾತದ ತೀವ್ರತೆಗೆ ಬಸ್ ಬೈಕ್ ಯುವಕ ಸಹ ಸುಟ್ಟು ಹೋಗಿದ್ದಾನೆ ಘಟನಾ ಸ್ಥಳಕ್ಕೆ ನಗರದ ಪೊಲೀಸ್ ಠಾಣೆಯ ಪಿಎಸೈ ಕಾಂಬಳೆ ಹಾಗೂ ಸಿಬ್ಬಂದಿ ಭೆೇಟಿ ನೀಡಿ, ಸಿಂದಗಿ ಪೊಲೀಸ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.
ಸುಟ್ಟು ಹೋಗುತ್ತಿರುವ ಬಸ್ಸ್‌ನ್ನು ನಂದಿಸಲು ಅಗ್ನಿಶಾಮಕ ದಳದ ಸಿಬ್ಬಂದಿ ಹರ ಸಾಹಸ ಪಟ್ಟರು ಕೂಡಾ ಬೆಂಕಿಯ ತೀವ್ರತೆಗೆ ಸಂಪೂರ್ಣ ಸುಟ್ಟು ಹೋಯಿತು. ಮಗನನ್ನು ಕಳೆದುಕೊಂಡ ತಾಯಿ ರಾಜೇಶ್ವರಿ ನಾಗರಾಳ ಹಾಗೂ ಕುಟುಂಬಸ್ಥರ ಅಕ್ರಂದನ ಮುಗಿಲು ಮುಟ್ಟಿದೆ.
ಪ್ರಕರಣಕ್ಕೂ ಮುನ್ನ; ನಾನು ಪ್ರೇಮಿಸಿದ ಸಂಜುಳನ್ನು ಬಿಟ್ಟು ನಾನು ಬದುಕುಲಾರೆ ನನ್ನಿಂದ ಅವಳನ್ನು ದೂರ ಮಾಡಿದ ಸಂಜುಳ ಅಣ್ಣ ವಿರೇಶ ನಂದೂರ, ಅವಳ ತಾಯಿ ಚೈತ್ರಾ ನಂದೂರ, ಕೂಡಲಸಂಗಮದ ನವೀನಕುಮಾರ ಪಾಟೀಲರ 31 ಮಾರ್ಚ 26 ಇಂದು ಇನ್ಸಾ-್ಟಗ್ರಾಮ್‌ನಲ್ಲಿ 2 ಪೋಟೋಗಳನ್ನು ರವಾನೆ ಮಾಡಿದ್ದು ಇವರೇ ನನ್ನ ಸಾವಿಗೆ ಕಾರಣರು ಎಂದು ಪೋಸ್ಟ ಮಾಡಿ ಬೈಕ್ ಮೇಲೆ ಕುಳಿತು ತೀವ್ರವಾಗಿ ವಾಹನ್ ಚಲಾಯಿಸಿದ್ದು ವಿಜಯಪುರ ಕಡೆಯಿಂದ ಬರುತ್ತಿರುವ ಬಸ್ಸು ಮುಂದೆ ಬರುವ ಬೇರೆ ವಾಹನವನ್ನು ಲೆಕ್ಕಿಸದೆ ಓವರ್ ಟೆಕ್ ಮಾಡಲು ಹೋಗಿ ಬೈಕ್ ಸವಾರನು ಪ್ರೇಮಿಯ ಅಮಲಿನಲ್ಲಿ ಹೊರಟು ಅಂಧ ಪ್ರೇಮಿ ಬಸ್ಸಿಗೆ ನೇರವಾಗಿ ಡಿಕ್ಕಿ ಹೊಡೆದ ಪರಿಣಾಮ ಈ ಘಟನೆ ನಡೆದಿದೆ ಎಂದು ಹೇಳಲಾಗಿದೆ.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 