ಅಗ್ನಿವೀರರಾಗಿ ಸೈನ್ಯದಲ್ಲಿ ಆಯ್ಕೆಯಾದ ಯುವಕರಿಗೆ ಸನ್ಮಾನ

ಅಗ್ನಿವೀರರಾಗಿ ಸೈನ್ಯದಲ್ಲಿ ಆಯ್ಕೆಯಾದ ಯುವಕರಿಗೆ ಸನ್ಮಾನ Honors to youth selected as fire fighters in the army


ರಾಯಬಾಗ, 07 : ಗುರು ಹಿರಿಯರನ್ನು, ತಂದೆತಾಯಿಯವರನ್ನು ಸ್ಮರಣೆ ಮಾಡುವುದು ನಮ್ಮ ದೇಶದ ಸಂಸ್ಕೃತಿಯಾಗಿದ್ದು, ನಮ್ಮಲ್ಲಿರುವ ಒಳ್ಳೆಯ ಸಂಸ್ಕಾರವನ್ನು ತೋರಿಸುತ್ತದೆ ಎಂದು ಜಿಲ್ಲಾ ಉಸ್ತುವಾರ ಸಚಿವ ಸತೀಶ ಜಾರಕಿಹೊಳಿ ಹೇಳಿದರು.  

ಭಾನುವಾರ ತಾಲೂಕಿನ ಮೊರಬ ಗ್ರಾಮದ ಬಾನೆಸರಕಾರ ತೋಟದಲ್ಲಿ ಎಸ್‌.ಆರ್‌.ಬಾನೆಸರಕಾರ ಮತ್ತು ಗೋದಾವರಿ ಬಾನೆಸರಕಾರ ಅವರ ಪುಣ್ಯ ಸ್ಮರಣೋತ್ಸವ ಪ್ರಯುಕ್ತ ಗ್ರಾಮದಿಂದ ಅಗ್ನಿವೀರರಾಗಿ ಸೈನ್ಯದಲ್ಲಿ ಆಯ್ಕೆಯಾದ ಯುವಕರನ್ನು ಸತ್ಕರಿಸಿ ಮಾತನಾಡಿದ ಅವರು, ದೀನದಲಿತರ, ಬಡವರ ನೆಚ್ಚಿನ ನಾಯಕರಾಗಿದ್ದ ಎಸ್‌.ಆರ್‌.ಬಾನೆಸರಕಾರ ಅವರ ಜೀವನ ಎಲ್ಲರಿಗೆ ಮಾದರಿಯಾಗಿದೆ.

ಅವರ ಸಾಮಾಜಿಕ ಕಾರ್ಯಗಳನ್ನು ಹತ್ತಿರದಿಂದ ನೋಡಿ ಬೆಳೆದವರು ನಾವು ಎಂದು ತಮ್ಮ ಹಳೆಯ ನೆನಪುಗಳನ್ನು ಮೆಲುಕು ಹಾಕಿದರು.ಕೋಳಿಗುಡ್ಡ ಸುಜ್ಞಾನ ಕುಟೀರದ ಸ್ವರೂಪಾನಂದ ಸ್ವಾಮೀಜಿ ಸಾನಿಧ್ಯ ವಹಿಸಿದ್ದರು. ಮುತ್ತೇಶ್ವರ ಸ್ವಾಮೀಜಿ ಅಧ್ಯಕ್ಷತೆಯನ್ನು ವಹಿಸಿದ್ದರು. ನಂತರ ನಡೆದ ಕಾರ್ಯಕ್ರಮದಲ್ಲಿ ಶಾಸಕರಾದ ಡಿ.ಎಮ್‌.ಐಹೊಳೆ, ಮಹೇಂದ್ರ ತಮ್ಮಣ್ಣವರ, ಮಾಜಿ ಶಾಸಕ ಎಸ್‌.ಬಿ.ಘಾಟಗೆ, ಬಿಡಿಸಿಸಿ ಬ್ಯಾಂಕ ನಿರ್ದೇಶಕ ಅಪ್ಪಾಸಾಹೇಬ ಕುಲಗುಡೆ, ಡಿ.ಎಸ್‌.ನಾಯಿಕ,

ಚಿದಾನಂದ ಮಗದುಮ್ಮ, ಸಂಜೀವಕುಮಾರ ಬಾನೆಸರಕಾರ, ಅರವಿಂದ ಬಾನೆಸರಕಾರ, ಡಾ.ಶ್ರೀಮಂತ ಬಾನೆಸರಕಾರ, ಡಾ.ಗಾಯತ್ರಿ ಬಾನೆ, ಪ್ರವೀಣ ಬಾನೆಸರಕಾರ, ದೂಳಗೌಡ ಪಾಟೀಲ, ವಾಮನ ಹಟ್ಟಿಮನಿ, ರೇವಣ್ಣ ಸರವ, ಎಸ್‌.ಕೆ.ರೆಂಟೆ, ಶಿವಗೌಡ ಪಾಟೀಲ, ಅರ್ಜುನ ನಾಯಿಕವಾಡಿ, ಅಬ್ದುಲ್ಲಸತ್ತಾರ ಮುಲ್ಲಾ, ಹಾಜಿ ಮುಲ್ಲಾ, ಸಿ.ಬಿ.ಕುಲಗುಡ ಸೇರಿ ಅನೇಕರು ಇದ್ದರು.