77 ನೇ ಗಣರಾಜ್ಯೋತ್ಸ ದಿನಾಚರಣೆಯಲ್ಲಿ ಸಾಧಕರಿಗೆ ಸನ್ಮಾನ, ಆಕರ್ಷಕ ಪಥ ಸಂಚಲನ

77 ನೇ ಗಣರಾಜ್ಯೋತ್ಸ ದಿನಾಚರಣೆಯಲ್ಲಿ ಸಾಧಕರಿಗೆ ಸನ್ಮಾನ, ಆಕರ್ಷಕ ಪಥ ಸಂಚಲನ Honoring achievers, attractive procession on the occasion of 77th Republic Day


ಗದಗ 27 : ಗದುಗಿನ ಕೆ.ಎಚ್‌.ಪಾಟೀಲ ಜಿಲ್ಲಾ ಕ್ರೀಡಾಂಗಣದಲ್ಲಿಂದು ಕಾನೂನು, ಸಂಸದೀಯ, ಪ್ರವಾಸೋದ್ಯಮ ಇಲಾಖೆ ಸಚಿವರು ಹಾಗೂ ಗದಗ ಜಿಲ್ಲಾ ಉಸ್ತುವಾರಿ ಸಚಿವರಾದ ಎಚ್‌.ಕೆ.ಪಾಟೀಲ 77ನೇ ಪ್ರಜಾರಾಜ್ಯೋತ್ಸವದ ರಾಷ್ಟ್ರ ಧ್ವಜಾರೋಹಣ ನೆವೇರಿಸಿ ವಿವಿಧ ದಳಗಳ ವೀಕ್ಷಣೆ ಮಾಡಿದರು. ನಂತರ ಜರುಗಿದ ಆಕರ್ಷಕ ಪಥಸಂಚಲನದ ನೇತೃತ್ವವನ್ನು ಜಿಲ್ಲಾ ಸಶಸ್ತ್ರ ಮೀಸಲು ಪಡೆಯ ಶಂಕರಗೌಡ ಚೌದ್ರಿ ಅವರು ವಹಿಸಿದ್ದರು. ಜಿಲ್ಲಾ ಪೋಲಿಸ ಬ್ಯಾಂಡಿನ ಮೇರೆ ದೇಶ ಕಿ ಧರತಿ ಹಾಡಿನ ಹಿಮ್ಮೇಳದಲ್ಲಿ ಶಿಸ್ತಿನ ಹೆಜ್ಜೆ ಹಾಕಿದ ಜಿಲ್ಲಾ ಸಶಸ್ತ್ರ ಮೀಸಲು ಪಡೆ, ಜಿಲ್ಲಾ ನಾಗರೀಕ ಪೋಲಿಸ ಪಡೆ, ಹೋಮಗಾರ್ಡ, ಅಬಕಾರಿ, ಅರಣ್ಯ ರಕ್ಷಕ ಪಡೆ, ಅಗ್ನಿ ಶಾಮಕ ದಳ, ಎನ್‌.ಸಿ.ಸಿ ಬಾಯ್ಸ ಹಾಗೂ ಗರ್ಲ್ಸ, ಮಾಜಿ ಸೈನಿಕರ ಸಂಘ, ಸ್ಕೌಟ್ಸ್‌, ಗೈಡ್ಸ್‌, ಜನರಲ್ ಹಾಗೂ ಸೇವಾ ದಳಗಗಳು ಸಚಿವರಿಗೆ ಗೌರವವಂದನೆ ನೀಡಿದವು. 

ಸನ್ಮಾನಿತರು: ಸಾರ್ವಜನಿಕ ವಲಯದಲ್ಲಿ ಪ್ರಾಮಾಣಿಕತೆ ಮೆರೆದ ಕು.ಪ್ರಜ್ವಲ್ ರಿತ್ತಿ, ಶ್ರೀಮತಿ ಕಸ್ತೂರೆವ್ವ ರಿತ್ತಿ, ಶ್ರೀಮತಿ ಗಂಗವ್ವ ರಿತ್ತಿ, ರಜೀಯಾಬೇಗಂ ತಹಶೀಲ್ದಾರ, ಕಿಡ್ನಿ ಕಸಿ ಮಾಡುವುದರಲ್ಲಿ ಮಹತ್ವದ ಪಾತ್ರ ನಿರ್ವಹಿಸಿದ ಡಾ.ಪವನ ಕೋಳಿವಾಡ, ಡಾ.ಭೂವನೇಶ ಆರಾದ್ಯ, ಡಾ.ದೀಪಕ ಕುರಹಟ್ಟಿ, ಮುಖ್ಯಮಂತ್ರಿಯವರ ಪದಕ ಪುರಸ್ಕೃತರಾದ ಶಿದ್ದಾರೆಡ್ಡಿ ಕಪ್ಪತ್ತನವರ, ಅಂಗಾಂಗ ದಾನ ಮಾಡಿದ ನಾರಾಯಣ ವನ್ನಾಲ ಕುಟುಂಬಸ್ಥರಿಗೆ, ಸಮಾಜ ಸೇವಾ ಕ್ಷೇತ್ರದಲ್ಲಿ ಪ್ರಶಸ್ತಿ ಪಡೆದ ಡಾ.ಹೇಮರಡ್ಡಿ ಕೀಲಬನವರ, ಎನ್‌.ಸಿ.ಸಿ ವಿಭಾಗದಲ್ಲಿ ಪದನ್ನೋತಿ ಹೊಂದಿದ ಮೇಜರ್ ಡಾ.ಬಿ.ಎಸ್‌.ರಾಠೋಡ, ರಾಜ್ಯ ಮಟ್ಟದ ಕನ್ನಡ ಸೇವಾ ಪ್ರಶಸ್ತಿಗೆ ಭಾಜನರಾದ ರಾಘವೇಂದ್ರ ಗೆಜ್ಜಿ, ಸರ್ಕಾರಿ ಸೇವೆಯಲ್ಲಿ ಉತ್ತಮ ಸೇವೆ ಸಲ್ಲಿಸಿದ ಸುಜಾತಾ ಗೊಬ್ಬರಗುಂಪಿ, ರವಿ.ಎಲ್‌.ಗುಂಜೀಕರ, ಗುರುರಾಜ್ ಚಾವಾಣ್, ಅಕ್ಕಮಹಾದೇವಿ ತಳವಾರ, ಬಿ.ಎಸ್‌.ಚಕಾರಿ, ದಾವಲಸಾಬ ಗುಬ್ಬಿ, ಲಕ್ಕುಂಡಿ ಪಾರಂಪರಿಕ ಪ್ರದೇಶ ಅಭಿವೃದ್ಧಿ ಪ್ರಾಧಿಕಾರಕ್ಕೆ ಜಮೀನು ನೀಡಿದ ಪ್ರೇಮನಗೌಡ ಪವಾಡಿಗೌಡ್ರ, ಶಿವನಗೌಡ್ರ ಪವಾಡಿಗೌಡ್ರ, ರಾಮನಗೌಡ ಬೋಜಪ್ಪಗೌಡ, ಈಶ್ವರ​‍್ಪ ಕುಂಬಾರ, ಪ್ರಕಾಶ ತೋಪಿನ.  

ಪತ್ರಿಕೋದ್ಯಮ/ಮಾಧ್ಯಮ ವಿಭಾಗದಲ್ಲಿ ರಮೇಶ ಭಜಂತ್ರಿ, ಮಾಲಿಂಗಯ್ಯ ಹಿರೇಮಠ, ರಮೇಶ ನಾಡಿಗೇರ, ಎಂ.ಎಂ.ಸ್ವಾಮಿ, ಸಿ.ಎಸ್‌.ಅರಸನಾಳ, ಪ್ರಾಣೇಶ ಕೊಡಗಾನೂರ, ಮೆಹಬೂಬ ಮೊತೆಖಾನ್, ಶಿದ್ದಲಿಂಗಯ್ಯ ಮಣ್ಣೂರಮಠ, ಲೋಕೇಶ ಮಲ್ಲಿಗವಾಡ, ಚಂದ್ರು ಭಜಂತ್ರಿ, ಸುನೀಲಸಿಂಗ್ ಲದ್ದಿಗೇರಿ,  

ಎಲ್‌.ಎಲ್‌.ಎಂ ಉನ್ನತ ಶಿಕ್ಷಣ ವಿಭಾಗದಲ್ಲಿ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದಕು.ಸಹನಾ ಕಾರ್ಕಳ, ಬಾಲ ಗೌರವ ಪ್ರಶಸ್ತಿ ಪಡೆದ ಕು.ಸುಪ್ರಿಯಾ ಇಟಗಿ, ರಾಜ್ಯಮಟ್ಟದ ಸಂಸತ ಅಣಕು ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದ ಕು.ಪ್ರಿಯಾಂಕಾ ಮಾನೆ, ರಾಜ್ಯಮಟ್ಟದ ಏಕಪಾತ್ರಾಭಿನಯದಲ್ಲಿ ಪ್ರಥಮ ಸ್ಥಾನ ಪಡೆದ ಕು.ನಿಧಿ ತೋಟದ, ಏಕಲವ್ಯ ಪ್ರಶಸ್ತಿ ಪಡೆದ ಕು.ಐಶ್ವರ್ಯ ಕರಿಗಾರ, ಎಸ್‌.ಎಸ್‌.ಎಲ್‌.ಸಿ. ಪರೀಕ್ಷೆಯಲ್ಲಿ ಹೆಚ್ಚಿನ ಅಂಕ ಪಡೆದ ಕು.ಮಲ್ಲಪ್ಪ ಬೋಳನವರ, ಕು. ಲಕ್ಷ್ಮೀ ಹಿರೇಮಠ, ಕು.ಗಾಯತ್ರಿ ಹಳ್ಳಿ, ಕು.ವರ್ಷಾ ಗುಂಜ್ಯಾಳ, ಕು.ಸ್ಪೂರ್ತಿ ಉಡಚಗೊಂಡ, ಕು.ಲಕ್ಷ್ಮೀ ನಲುಡಿ, ಕ್ರೀಡಾ ಕ್ಷೇತ್ರದಲ್ಲಿ ಕು.ಮಾಲತಿ ಇನಾಮದಾರ, ಕು.ವೈಭವ ಸಂಗನಬಶೆಟ್ಟರ್, ಸಿಸಿ ಮಂಜುನಾಥ ಕುರಿ, ಮಂಜುನಾಥ ಹಳೆರಿತ್ತಿ, ಸಾಕ್ಷಿ ಬಾಗಡೆ, ಅಮೃತಾ ಮೇಟಿ, ಪ್ರಿಯಾಂಕಾ ಲಮಾಣಿ, ಸೃಷ್ಠಿ ಪಾಟೀಲ, ಯಶವಂತಗೌಡ ನಾಡಗೌಡ್ರ, ಸಹನಾ ಹರ್ತಿ, ಆನಂದ ಬೇಂದ್ರೆ, ಮಹಾಂತೇಶ ಬೇಂದ್ರೆ, ಮಹಾಂತೇಶ ಬೇವೂರ, ಮೇಘಾ ಮುನವಳ್ಳಿಮಠ ಇವರುಗಳನ್ನು ಸಚಿವ ಎಚ್‌.ಕೆ.ಪಾಟೀಲ ಹಾಗೂ ಗಣ್ಯರು ಸನ್ಮಾನಿಸಿದರು.  

ಸೌಲಭ್ಯ ವಿತರಣೆ: 77ನೇ ಗಣರಾಜ್ಯೋತ್ಸವ ಕಾರ್ಯಕ್ರಮದ ನಂತರ ಸಚಿವರಾದ ಎಚ್‌.ಕೆ.ಪಾಟೀಲ ಅವರು ಅಕ್ಕ ಪಡೆ ಯೋಜನೆಗೆ ಚಾಲನೆ ನೀಡಿದರು. ಮುಖ್ಯಮಂತ್ರಿಗಳ ಕೌಶಲ್ಯ ಕರ್ನಾಟಕ ಯೋಜನೆಯಡಿ ಹೊಲಿಗೆಯಂತ್ರ ಕಿಟ್, ಇಲೆಕ್ಟ್ರಿಷಿಯನ್ ಕಿಟ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಕಲಾವಿದರಿಗೆ, ಸಾಹಿತಿಗಳಿಗೆ ಮಾಸಾಶನ ಮಂಜೂರಾತಿ ಪತ್ರ, ಕಾರ್ಮಿಕ ಇಲಾಖೆ ವತಿಯಿಂದ ಸೇಪ್ಟಿ ಕಿಟ್, ಗೌಂಡಿ ಕಿಟ್, ಫ್ಲಂಬರ ಕಿಟ್, ಕಾರಪೇಂಟರ್, ವೆಲ್ಡರ್ ಕಿಟ್, ಕೃಷಿ ಇಲಾಖೆಯ ವತಿಯಿಂದ ಫಲಾನುಭವಿಗಳಿಗೆ ವಿವಿಧ ಯಂತ್ರೋಪಕರಣಗಳನ್ನು ವಿತರಿಸಿದರು. 

ಉಪಸ್ಥಿತಿ: ಸಮಾರಂಭದಲ್ಲಿ ವಿಧಾನ ಪರಿಷತ್ ಸದಸ್ಯ ಎಸ್‌.ವಿ.ಸಂಕನೂರ, ರಾಜ್ಯ ವಿಕೇಂದ್ರಿಕರಣ ಯೋಜನೆ ಮತ್ತು ಅಭಿವೃದ್ಧಿ ಸಮಿತಿ ಉಪಾಧ್ಯಕ್ಷರಾದ ಡಿ.ಆರ್‌.ಪಾಟೀಲ, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಅಕಬರಸಾಬ ಬಬರ್ಚಿ, ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ತಾಲೂಕು ಅಧ್ಯಕ್ಷ ಅಶೋಕ ಮಂದಾಲಿ, ಸಿದ್ದು ಪಾಟೀಲ, ಜಿಲ್ಲಾಧಿಕಾರಿ ಸಿ.ಎನ್‌.ಶ್ರೀಧರ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರೋಹನ ಜಗದೀಶ,ಅಪರ ಜಿಲ್ಲಾಧಿಕಾರಿ ಡಾ.ದುರಗೇಶ ಕೆ.ಆರ್, ಉಪವಿಭಾಗಾಧಿಕಾರಿ, ಗಂಗಪ್ಪ ಎಂ, ತಹಶೀಲ್ದಾರ ಶ್ರೀನಿವಾಸಮೂರ್ತಿ ಕುಲಕರ್ಣಿ, ಜಿಲ್ಲಾ ಪಂಚಾಯತ ಉಪಕಾರ್ಯದರ್ಶಿ ಸಿ.ಆರ್‌.ಮುಂಡರಗಿ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು, ಜನಪ್ರತಿನಿಧಿಗಳು, ಗಣ್ಯರುಗಳು, ಸಾರ್ವಜನಿಕರು, ಅಪಾರ ಸಂಖ್ಯೆಯಲ್ಲಿ ಶಾಲಾ ವಿಧ್ಯಾರ್ಥಿಗಳು ಉಪಸ್ಥಿತರಿದ್ದರು.