ಸನ್ಮನ್ಯ ಬಸವರಾಜ ಎಸ್‌. ಹೊರಟ್ಟಿ ಅವರಿಗೆ ಗೌರವ ಸನ್ಮಾನ

ಸನ್ಮನ್ಯ ಬಸವರಾಜ ಎಸ್‌. ಹೊರಟ್ಟಿ ಅವರಿಗೆ ಗೌರವ ಸನ್ಮಾನ Honorary Tribute to Basavaraja S. Horatti

                   ಹುಬ್ಬಳ್ಳಿ 20 : ಸರ್ವ ಶಿಕ್ಷಣಕ್ಕಾಗಿ ಶ್ರಮಿಸಿದ ಶಿಕ್ಷಣ ಪ್ರೇಮಿ, ಶಿಕ್ಷಕರ ಆಪತ್ಭಾಂಧವ, ಸರಳ ಸ್ವಭಾವದ ಸ್ನೇಹ ಜೀವಿ, ನಮಗೆಲ್ಲ ಮಾರ್ಗದರ್ಶಕರು, ಹಾಗೂ ಸತತವಾಗಿ 8 ಬಾರಿ ಪಶ್ಚಿಮ ಶಿಕ್ಷಕರ ಮತಕ್ಷೇತ್ರದಿಂದ ಆಯ್ಕೆಯಾಗಿ ವಿಧಾನ ಪರಿಷತ್ ಸದಸ್ಯರಾಗಿ ವಿಶ್ವದಾಖಲೆ ನಿರ್ಮಿಸಿ 45 ವರ್ಷ ಪೂರೈಸಿದ ಸಭಾಪತಿಗಳಾದ ಸನ್ಮನ್ಯ ಬಸವರಾಜ ಎಸ್‌. ಹೊರಟ್ಟಿ ಅವರಿಗೆ ಗೌರವ ಸನ್ಮಾನ ಕಾರ್ಯಕ್ರಮ ನೆಹರು ಮೈದಾನದಲ್ಲಿ ರಾಜ್ಯದ ಮುಖ್ಯಮಂತ್ರಿ, ಸಚಿವರು, ಶಾಸಕರು, ಅಪಾರ ಗಣ್ಯರ ಸಮ್ಮುಖದಲ್ಲಿ ಆಯೋಜಿಸಿದ್ದ ಶುಭ ಸಂದರ್ಭದಲ್ಲಿ ಬಸವರಾಜ ಹೊರಟ್ಟಿ ಅವರು ತಮ್ಮ ಅವಿರತ ಸಮಾಜ ಸೇವೆ ಹಾಗೂ ನಿಷ್ಕಳಂಕ ವ್ಯಕ್ತಿತ್ವದಿಂದ ಶಾಸಕರಾಗಿ, ಸಚಿವರಾಗಿ, ಪ್ರಸ್ತುತ ವಿಧಾನ ಪರಿಷತ್ ಸಭಾಪತಿಗಳಾಗಿ ಕಾರ್ಯನಿರ್ವಹಿಸುತ್ತಿರುವ, ಅಪ್ರತಿಮ ಸಾಧನೆಯೊಂದಿಗೆ ಲಿಮ್ಕಾ ಬುಕ್ ಆಫ್ ರೆಕಾರ್ಡನಲ್ಲಿ ತಮ್ಮ ಹೆಸರನ್ನು ದಾಖಲಿಸಿದ, ನಮಗೆಲ್ಲ ಆದರ್ಶಪ್ರಾಯರಾದ, ಹಿತೈಸಿಗಳು, ಸದಾ ಪ್ರೊತ್ಸಾಹಿಸುತ್ತಿರುವ ಹಿರಿಯರಾದ ಗೌರವಾನ್ವಿತ ಬಸವರಾಜ ಎಸ್ ಹೊರಟ್ಟಿ ಅವರನ್ನು ಹೊರಕೇರಿ ಮಾಸ್ತರ ಶಿಕ್ಷಣ ಪ್ರತಿಷ್ಠಾನ, ರಾಣಿಚನ್ನಮ್ಮ ಪರಿಸರ ಸೇವಾ ಸಮಿತಿಯ, ಬಸವ ಪರಿಸರ ಸಂರಕ್ಷಣಾ ಸಮಿತಿಯ ಸದಸ್ಯರು ಭೇಟಿ ಮಾಡಿ ಹೊರಕೇರಿ ಮಾಸ್ತರ ಶಿಕ್ಷಣ ಪ್ರತಿಷ್ಠಾನ, ರಾಣಿಚನ್ನಮ್ಮ ಪರಿಸರ ಸೇವಾ ಸಮಿತಿಯ, ಬಸವ ಪರಿಸರ ಸಂರಕ್ಷಣಾ ಸಮಿತಿಯ ವತಿಯಿಂದ ಗೌರವ ಪೂರ್ವಕವಾಗಿ ಶ್ರದ್ಧಾ ಭಕ್ತಿಯಿಂದ ನಮನಗಳನ್ನು ಸಲ್ಲಿಸಲಾಯಿತು.

                 ಭಕ್ತಿಯಿಂದ ಹುತ್ಪೂರ್ವಕವಾಗಿ  ಅಭಿನಂದನೆಗಳನ್ನು ಸಲ್ಲಿಸಿದರು. ಪರಮಾತ್ಮ ಬಸವರಾಜ ಎಸ್‌. ಹೊರಟ್ಟಿ ಅವರಿಗೆ ಉತ್ತಮ ಆರೋಗ್ಯ ಭಾಗ್ಯ ನೀಡಿ ಕರುಣಿಸಲಿ, ಶಿಕ್ಷಕರ, ಸಮಾಜದ ಹಾಗೂ ಮುಂತಾದ ಸೇವಾಕಾರ್ಯಗಳು ನಿರಂತರವಾಗಿ ಮುಂದುವರೆಯಲಿ ಎಂದು ಶುಭಾಶಯಗಳನ್ನು ಕೋರಿದರು.  ಸುಜಯ ಸುರೇಶ  ಹೊರಕೇರಿ, ಸೋಹನ ಸುರೇಶ  ಹೊರಕೇರಿ, ರಾಣಿಚನ್ನಮ್ಮ ಪರಿಸರ ಸೇವಾ ಸಮಿತಿಯ ಕಾರ್ಯದರ್ಶಿ, ಬಸವ ಪರಿಸರ ಸಂರಕ್ಷಣಾ ಸಮಿತಿಯ ಕಾರ್ಯದರ್ಶಿ, ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿಯ ಜಿಲ್ಲಾ ಘಟಕದ ಉಪಾಧ್ಯಕ್ಷ, ಕರ್ನಾಟಕ ವಚನ ಸಾಹಿತ್ಯ ಪರಿಷತ್ನ ಜಿಲ್ಲಾ ಘಟಕದ ಕಾರ್ಯಾಧ್ಯಕ್ಷ, ಹೊರಕೇರಿ ಮಾಸ್ತರ ಶಿಕ್ಷಣ ಪ್ರತಿಷ್ಠಾನ ಟ್ರಸ್ಟಿ,  ಗ್ರಂಥಪಾಲಕ ಡಾ. ಸುರೇಶ ಡಿ. ಹೊರಕೇರಿ,  ಬಸವರಾಜ ಹೊರಟ್ಟಿ ಅಭಿನಂದನಾ ಸಮಿತಿಯ ಅಧ್ಯಕ್ಷರು, ಬೆಳಗಾವಿಯ ಕೆ.ಎಲ್‌.ಇ ಸಂಸ್ಥೆಯ ನಿರ್ಧೇಶಕರು, ಹಿರಿಯರು, ಮಾರ್ಗದರ್ಶಕರಾದ  ಶಂಕರಣ್ಣ ಈ. ಮುನವಳ್ಳಿ, ಅಭಿನಂದನಾ ಸಮಿತಿಯ ಕಾರ್ಯದರ್ಶಿ, ಪಾಲಿಕೆ ಸದಸ್ಯರು, ಆತ್ಮೀಯರಾದ ರಾಜಣ್ಣ ಮೂ. ಕೊರವಿ, ಯುವ ದುರೀಣ ವಸಂತ ಹೊರಟ್ಟಿ,   ಮೃತ್ಯುಂಜಯ ಮಟ್ಟಿ, ಶಾಂತಪ್ಪ ವಿ. ಹೂಗಾರ, ಶಕುಂತಲಾ ಶಾಂತಪ್ಪ ಹೂಗಾರ, ಡಾ. ಲಿಂಗರಾಜ ಡಿ. ಹೊರಕೇರಿ,  ಡಾ. ಮಹೇಶ್ ಡಿ. ಹೊರಕೇರಿ,     ಪ್ರೊ ಎಸ್‌.ವಿ.ಪಟ್ಟಣಶೆಟ್ಟಿ ಡಾ. ಲಿಂಗರಾಜ ಅಂಗಡಿ, ಡಾ. ಎಚ್‌.ವಿ.ಬೆಳಗಲಿ, ಪ್ರೊ ಸಂದೀಪ  ಬೂದಿಹಾಳ,  ತಾರಾದೇವಿ ವಾಲಿ, ಅನಸುಯಾ ಅರಕೇರಿ,  ಪ್ರೊ ಜಂಬುಲಿಂಗಪ್ಪ ಚಂದುನವರ,, ಪ್ರೊ ಮೋತಿಲಾಲ ರಾಥೋಡ, ರವಿ ಕೊಣ್ಣೂರ, ಎಸ್‌.ಐ.ನೇಕಾರ, ಡಾ. ಸರ್ವಮಂಗಳಾ ಕುದರಿ, ಚನಬಸಪ್ಪ ಧಾರವಾಡಶೆಟ್ಟರ, ಸೇರಿದಂತೆ ಈ ಅಭೂತಪೂರ್ವ ಐತಿಹಾಸಿಕ  ಕಾರ್ಯಕ್ರಮದಲ್ಲಿ ಸಾವಿರಾರು ಶಿಕ್ಷಕರು, ಗಣ್ಯರು ಪಾಲ್ಗೊಂಡಿದ್ದರು.