ಹಾವೇರಿ07: ಬಸ್ಸಿನಲ್ಲಿ ಸೀಟು ಬಿಡುವ ಕ್ಷುಲ್ಲಕ ವಿಚಾರಕ್ಕೆ ಇತ್ತೀಚೆಗೆ ಹಲ್ಲೆಗೊಳಾಗಿ ಗಾಯಗೊಂಡ ಮಾಜಿ ಸೈನಿಕನ ಮನೆಗೆ ಜಿಲ್ಲಾ ಉಸ್ತುವಾರಿ ಸಚಿವರಾದ ಜಮೀರ್ ಅಹ್ಮದ್ ಅವರು ಬುಧವಾರ ಭೇಟಿ ನೀಡಿ ಸಾಂತ್ವಾನ ಹೇಳಿ, ಘಟನೆ ಕುರಿತಂತೆ ತೀವ್ರವಾಗಿ ಖಂಡಿಸಿದರು.
ಕಳೆದ ಫೆಬ್ರುವರಿ ಮಾಹೆಯಲ್ಲಿ ಕುಟುಂಬ ಸಮೇತರಾಗಿ ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದ ಸಂದರ್ಭದಲ್ಲಿ ಸೀಟಿನ ವಿಚಾರಕ್ಕೆ ದುಷಕಮರ್ಿಗಳು ಹಾವೇರಿ ನಗರದಲ್ಲಿ ಮಾಜಿ ಯೋಧ ಕುಮ್ಮೂರ ಗ್ರಾಮದ ಪರಮೇಶ್ವರ ಎಚ್. ಅವರ ಮೇಲೆ ತೀವ್ರ ಹಲ್ಲೆನಡೆಸಿದ್ದರು.
ಹೆಚ್ಚಿನ ಚಿಕಿತ್ಸೆ: ಗಾಯಾಳು ಪರಮೇಶ್ವರ ಅವರ ಆರೋಗ್ಯ ವಿಚಾರಿಸಿದ ಸಚಿವರು ಕೌಟುಂಬಿಕ ವಿವರ ಪಡೆದರು. ಏಟಿನಿಂದ ಹಲ್ಲಿಗೆ ತೀವ್ರ ಪೆಟ್ಟಾಗಿರುವ ಮಾಹಿತಿ ಪಡೆದ ಸಚಿವರು ಹೆಚ್ಚಿನ ಚಿಕಿತ್ಸೆಗೆಗಾಗಿ ಕುಟುಂಬ ಸಮೇತರಾಗಿ ಬೆಂಗಳೂರಿಗೆ ಬನ್ನಿ ನಿಮಗೆ ಪ್ರತಿಷ್ಠಿತ ವಿಕ್ರಂ ಆಸ್ಪತ್ರೆಯಲ್ಲಿ ಹಲ್ಲಿನ ನೋವಿಗೆ ಹೆಚ್ಚಿನ ಚಿಕಿತ್ಸೆ ಕೊಡಿಸುವುದಾಗಿ ಹೇಳಿದರು.
ಉದ್ಯೋಗ ಭರವಸೆ: ತಂದೆಯ ಅನಾರೋಗ್ಯ ಕಾರಣ ಸ್ವಯಂ ನಿವೃತ್ತಿಪಡೆದು ಊರಿಗೆ ಬಂದಿರುವೆ. ನನಗೆ ಕೌಟುಂಬಿಕ ನಿರ್ವಹಣೆಗೆ ಉದ್ಯೋಗದ ಅವಶ್ಯಕತೆ ಇದ್ದು, ಈಗಾಗಲೇ ಪೊಲೀಸ್ ಇಲಾಖೆ ಮೆಟ್ರೋ ಹಾಗೂ ಕಂದಾಯ ಇಲಾಖೆಯಲ್ಲಿ ನೌಕರರಿಗಾಗಿ ಅಜರ್ಿ ಸಲ್ಲಿಸಿರುವೆ. ಉದ್ಯೋಗ ಅವಕಾಶ ಒದಗಿಸಿಕೊಡುವಂತೆ ಪರಮೇಶ್ವರ ಅವರ ಮನವಿಗೆ ಸ್ಪಂದಿಸಿದ ಸಚಿವರು ಯೋಧನ ಶೈಕ್ಷಣಿಕ ದಾಖಲೆಗಳನ್ನು ಪಡೆದು ಉದ್ಯೋಗ ಒದಗಿಸುವ ಭರವಸೆಯನ್ನು ನೀಡಿದರು. ಪೊಲೀಸ್ ಇಲಾಖೆಯಲ್ಲಿ ಉದ್ಯೋಗ ಅವಕಾಶ ಕುರಿತಂತೆ ಸ್ಥಳದಲ್ಲೇ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳೊಂದಿಗೆ ದೂರವಾಣಿ ಮೂಲಕ ಚಚರ್ಿಸಿದರು.
ಕೋಮು ಬಣ್ಣ ಬೇಡ: ದೇಶಸೇವೆ ಮಾಡುವ ಆಮರ್ಿ ಹಾಗೂ ನಮ್ಮ ರಕ್ಷಿಸುವ ಪೊಲೀಸರಿಗೆ ನಾವು ಗೌರವ ಕೊಡಬೇಕು. ಗಡಿ ಕಾಯುವ ಸೈನಿಕರಿಂದ ನಾವು ನೆಮ್ಮದಿಯಾಗಿ ಬದುಕುತ್ತಿದ್ದೇವೆ ಎಂಬುದನ್ನು ಮರೆಯಬಾರದು. ಕ್ಷುಲ್ಲಕ ಕಾರಣಕ್ಕಾಗಿ ಅವರ ಮೇಲೆ ಹಲ್ಲೆಮಾಡಿರುವುದು ಖಂಡನೀಯ ಈಗಾಗಲೇ ತಪ್ಪಿತಸ್ಥತರನ್ನು ಬಂಧಿಸಿ ಜೈಲಿಗೆ ಹಾಕಲಾಗಿದೆ.
ಮಾಜಿ ಸೈನಿಕ ಮೇಲಿನ ಹಲ್ಲೆ ಪ್ರಕರಣವನ್ನು ರಾಜಕೀಯ ಹಾಗೂ ಕೋಮು ಬಣ್ಣ ಹಚ್ಚುವುದು ಬೇಡ. ದೇಶದಲ್ಲೇ ಕನರ್ಾಟಕ ರಾಜ್ಯದಲ್ಲಿ ಕೋಮು ಸೌಹಾರ್ಧತೆಯಿಂದ ಎಲ್ಲರೂ ಬಾಳುತ್ತಿದ್ದೇವೆ ಎಂಬುದನ್ನು ಎಲ್ಲರೂ ಅರ್ಥಮಾಡಿಕೊಳ್ಳಬೇಕು ಎಂದು ಹೇಳಿದರು.
ನೆರವು: ಮಾಜಿ ಯೋಧನ ನಿರಾಕರಣೆಯ ನಡುವೆಯೂ ಒಂದು ಲಕ್ಷ ರೂ. ವಯಕ್ತಿಕ ಸಹಾಯಧನವನ್ನು ಸಚಿವರು ನೀಡಿದರು.
ಯೋಧನ ಅಳಲು: ಸಚಿವರೊಂದಿಗೆ ತಮ್ಮನ್ನು ನೋವನ್ನು ತೋಡಿಕೊಂಡ ಮಾಜಿ ಸೈನಿಕ ಪರಮೇಶ್ವರ ಅವರು ನನಗೆ ಎರಡು ಚಿಕ್ಕ ಮಕ್ಕಳಿದ್ದಾರೆ. ತಂದೆ ಅನಾರೋಗ್ಯದಿಂದ ಬಳಲುತ್ತಿದ್ದಾರೆ. ತಂದೆಯ ಆರೋಗ್ಯ ದೃಷ್ಟಿಯಿಂದ 17 ವರ್ಷದ ಮಿಲಟರಿ ಸೇವೆಗೆ ಸ್ವಯಂ ನಿವೃತ್ತಿಪಡೆದು ಸ್ಥಳೀಯವಾಗಿ ಉದ್ಯೋಗ ಸೇರುವ ಇಚ್ಚೆ ಹೊಂದಿದ್ದೇನೆ.
ಸೈನ್ಯದಲ್ಲಿ ಯಾವುದೇ ಜಾತಿ, ಕೋಮು ಭಾವನೆ ಇಲ್ಲದೆ ಎಲ್ಲರೂ ದೇಶಕ್ಕಾಗಿ ಸೇವೆ ಸಲ್ಲಿಸುತ್ತೀದ್ದೇವೆ. ಸೈನ್ಯದಲ್ಲಿ ಸೇವೆ ಸಲ್ಲಿಸಿದವರಿಗೆ ಹಾಗೂ ಸಲ್ಲಿಸುತ್ತಿರುವವರಿಗೆ ಗೌರವ ಕೊಡುವುದನ್ನು ಎಲ್ಲರೂ ಕಲಿಯಬೇಕು. ನಮ್ಮನ್ನು ರಕ್ಷಿಸುವ ಪೊಲೀಸರಿಗೂ ಗೌರವ ಕೊಡಬೇಕು ಎಂದು ಮನವಿ ಮಾಡಿಕೊಂಡರು. ಈಗಾಗಲೇ ಸಕರ್ಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿರುವೆ. ಆದರೆ ಹಲ್ಲುಗಳು ಸಡಿಲಗೊಂಡಿದ್ದು ತೀವ್ರ ನೋವನ್ನು ಅನುಭವಿಸುತ್ತಿರುವುದಾಗಿ ತಿಳಿಸಿದರು.
ಸಲೀಂ ಅಹ್ಮದ್, ಮಾಜಿ ಶಾಸಕ ಬಸವರಾಜ ಶಿವಣ್ಣನವರ ಇತರರು ಉಪಸ್ಥಿತರಿದ್ದರು