ಸಾಧಕರಿಗೆ ಹೊಂಬೆಳಕು ಸಾಂಸ್ಕೃತಿಕ ಸಂಘದ ಸನ್ಮಾನ
ಬೆಳಗಾವಿ 07: ಸುಮಾರು 25 ವರ್ಷಗಳ ಹಿಂದೆ ಸ್ಥಾಪಿಸಲ್ಪಟ್ಟ "ಹೊಂಬೆಳಕು ಸಾಂಸ್ಕೃತಿಕ ಸಂಘ" ಬೆಳಗಾವಿ ಸಾಹಿತ್ಯ ಮತ್ತು ಸಾಂಸ್ಕೃತಿಕ ಕ್ಷೇತ್ರದಲ್ಲಿ ತನ್ನದೇ ಆದ ಛಾಪು ಮೂಡಿಸಿದೆ. ಬರಹಗಾರರಿಗೆ ಹಾಗೂ ಕಲಾವಿದರಿಗೆ ಪ್ರೋತ್ಸಾಹ ನೀಡುತ್ತ ಬಂದಿದೆ.
ಪ್ರತಿ ವರ್ಷ ಆಯ್ದ ಅತ್ಯುತ್ತಮ ಪುಸ್ತಕಗಳ ಲೇಖಕರಿಗೆ "ರಾಷ್ಟ್ರಕೂಟ ಸಾಹಿತ್ಯಶ್ರೀ" ಪ್ರಶಸ್ತಿ ನೀಡುತ್ತಾ ಹಲುವಾರು ಹಿರಿ ಕಿರಿಯ ಸಾಹಿತಿಗಳು, ಕಲಾವಿದರು ಹಾಗೂ ಸಾಹಿತ್ಯ ಕ್ಷೇತ್ರದಲ್ಲಿ ಗಣನೀಯ ಸೇವೆ ಸಲ್ಲಿಸಿದ ಹಿರಿಯ ನಾಗರಿಕರನ್ನು ಗುರುತಿಸಿ, ಪ್ರಶಸ್ತಿ ಗೌರವಗಳೊಂದಿಗೆ ಸನ್ಮಾನಿಸಿದೆ. ಪ್ರತಿ ವರ್ಷ ವಿಚಾರ ಸಂಕಿರಣ, ಕವಿಗೋಷ್ಠಿ ಹಾಗೂ ಸಾಹಿತ್ಯ ಸ್ಪರ್ಧೆಗಳನ್ನು ಏರಿ್ಡಸುತ್ತ, ಸಾಹಿತ್ಯ, ಸಾಂಸ್ಕೃತಿಕ ಮತ್ತು ಸಾಮಾಜಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡು, ಸುಂದರ ಸಮಾಜ ನಿರ್ಮಾಣಕ್ಕೆ ಶ್ರಮಿಸುತ್ತಿದೆ. ಅದರಂತೆ ಇತ್ತೀಚೆಗೆ 2024 ನೇ ಸಾಲಿನ 69 ನೇ ಕರ್ನಾಟಕ ರಾಜ್ಯೋತ್ಸವ ಪ್ರಯುಕ್ತ
ಬಿ.ಎ.ಸನದಿ ಸಾಂಸ್ಕೃತಿಕ ಪ್ರತಿಷ್ಠಾನ, ಬೆಳಗಾವಿ ಅವರು ಕೊಡಮಾಡುವ " ಕನ್ನಡ ಗಡಿ ತಿಲಕ್" ಪ್ರಶಸ್ತಿಗೆ ಭಾಜನರಾದ ಸಂಕೇಶ್ವರದ ಹಿರಿಯ ಸಾಹಿತಿ ನಿವೃತ್ತ ಪ್ರಾಧ್ಯಾಪಕರಾದ ಪ್ರೊ ಎಲ್.ವ್ಹಿ. ಪಾಟೀಲ್ ಹಾಗೂ ಜನ್ನಾ ಸನದಿ ಸಾಹಿತ್ಯ ಪ್ರಶಸ್ತಿ ಗೌರವಕ್ಕೆ ಪಾತ್ರರಾದ ಕೊಪ್ಪಳ ಜಿಲ್ಲೆಯ ಕುಕನೂರು ತಾಲೂಕಿನ ಸೋಮಂಪೂರ ಗ್ರಾಮದ ಯುವ ಸಾಹಿತಿ ಹಾಗೂ ಶಿಕ್ಷಕರಾದ ವಿರೇಶ ಕುರಿ ಅವರನ್ನು ಹೊಂಬೆಳಕು ಸಾಂಸ್ಕೃತಿಕ ಸಂಘದಿಂದ ಗಂದಿಗವಾಡದ ಶರಣರು, ವಿಶ್ರಾಂತ ಶಿಕ್ಷಕರು ಹಾಗೂ ಪ್ರವಚನಕಾರರಾದ ಮೃತ್ಯುಂಜಯಸ್ವಾಮಿ ಹಿರೇಮಠ ಅವರು ಹೊಂಬೆಳಕು ಸಾಂಸ್ಕೃತಿಕ ಸಂಘ ಅಧ್ಯಕ್ಷರಾದ ಸ.ರಾ. ಸುಳಕೂಡೆ ಹಾಗೂ ಕಾರ್ಯದರ್ಶಿಗಳಾದ ಆರ್. ಬಿ. ಬನಶಂಕರಿ ಅವರು ಸನ್ಯಾಸಿ ಗೌರವಿಸಿದರು. ಸನ್ಮಾನಿತರೀರ್ವರು ಸಂಘದ ಕಾರ್ಯವನ್ನು ಪ್ರಶಂಸಿಸಿ ಕೃತಜ್ಞತೆ ಸಲ್ಲಿಸಿದರು.