ಹೋಳಿ ಹಬ್ಬವೂ ಆಧ್ಯಾತ್ಮಿಕ, ವಿಜಯದ ಸಂಕೇತ: ಸುರೇಶ ಯಾದವ
Holi festival is also spiritual, a symbol of victory: Suresh Yadav
ಬೆಳಗಾವಿ 03: ಭಾರತದಾದ್ಯಂತ ಹೋಳಿ ಹಬ್ಬವನ್ನು ಸಂಭ್ರಮ ಸಡಗರದಿಂದ ಎಲ್ಲರೂ ಆಚರಿಸಲಾಗುತ್ತದೆ. ಯಾವುದೇ ಜಾತಿ ಮತಗಳ ಭೇದವಿಲ್ಲದೆ ಒಟ್ಟಾಗಿ ಸೇರಿ ಬಣ್ಣಗಳ ಓಕುಳಿಯಾಟದಲ್ಲಿ ಮಿಂದೇಳುತ್ತಾರೆ. ಯಾವುದೇ ಹಬ್ಬವೂ ತನ್ನದೇ ಆದ ಆಚಾರ ಸಂಪ್ರದಾಯಗಳನ್ನು ಹೊಂದಿರುತ್ತದೆ. ಈ ಹೋಳಿ ಬಣ್ಣವು ಆಧ್ಯಾತ್ಮಿಕ, ವಿಜಯತೇ ಸಾರುವ ಸಂಕೇತವಾಗಿದೆ ಎಂದು ಎಂದು ಆಟೋನಗರದ ಇಂಡಸ್ಟ್ರಿಯಲ್ ಏರಿಯಾ ಅಸೋಶಿಯೇಷನ್ ಅಧ್ಯಕ್ಷರು ಹಾಗೂ ಸುರೇಶ ಯಾದವ ಪೌಂಡೇಶನ್ ಅಧ್ಯಕ್ಷ ಸುರೇಶ ಯಾದವ ಅಭಿಪ್ರಾಯಪಟ್ಟರು.
ನಗರದ ರಾಮತೀರ್ಥ ನಗರದಲ್ಲಿ ಹೋಳಿ ಹಬ್ಬದ ನಿಮಿತ್ಯ ಆಯೋಜಿಸಲಾದ ರಂಗ -ಪಂಚಮಿ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಬಣ್ಣದ ಹಬ್ಬವನ್ನು ದೂರದ ಊರಿನವರು ತಮ್ಮ ತಾಯ್ನಾಡಿಗೆ ಬಂದು ಈ ಹಬ್ಬವನ್ನು ಆಚರಿಸುತ್ತಾರೆ. ಹಬ್ಬವನ್ನು ವಸಂತ ಮಾಸದಲ್ಲಿ ಆಚರಿಸಲಾಗುತ್ತದೆ. ಚಳಿಗಾಲದ ಕೊನೆಯನ್ನು ವಸಂತದ ಆಗಮನವನ್ನು ಸಾರುವ ಹಬ್ಬವಾಗಿದೆ. ಮತ್ತು ಜನರು ಬಣ್ಣಗಳನ್ನು ಪರಸ್ಪರ ಎರಚಿಕೊಳ್ಳುವ ಮೂಲಕ ಈ ಹಬ್ಬವನ್ನು ಆಚರಿಸಿಕೊಳ್ಳಲಾಗುತ್ತಿದೆ ಎಂದರು.
ಹೋಳಿ ಹಬ್ಬದ ದಿನದಂದು ಮಕ್ಕಳಿಂದ ದೊಡ್ಡವರ ತನಕ ಸಂಭ್ರಮ ಸಡಗರದಿಂದ ಆಚರಿಸುತ್ತಾರೆ. ಈ ಹಬ್ಬದ ಆಚರಣೆಯಲ್ಲಿ ಕಾಮನ ಸುಂದರ ಪ್ರತಿಮೆ ಮಾಡಿ ಶೃಂಗರಿಸಿ ಊರಿನ ಕಾಮನ ಕಟ್ಟೆಯ ಮೇಲೆ ಚಪ್ಪರ ಕಟ್ಟಿ ಇಡುತ್ತಾರೆ. ಕಾಮನ ಮುಂದೆ ಮಂಗಳ ವಾದ್ಯಗಳನ್ನು ಊದುತ್ತಾರೆ ಅದಲ್ಲದೆ ಪರಸ್ಪರ ಬಣ್ಣದ ನೀರು ಎರಚುತ್ತಾರೆ ಎಂದು ಏಒಆಅ ಮಾಜಿ ಅಧ್ಯಕ್ಷ ಮುಕ್ತರ್ ಪಠಾಣ ಅವರು ಅಭಿಪ್ರಾಯ ಪಟ್ಟರು. ಈ ಹಬ್ಬ ಮನೆಯ ಪ್ರತಿಯೊಬ್ಬ ಸದಸ್ಯರನ್ನು ಒಂದುಗೂಡಿಸುತ್ತದೆ ಮತ್ತು ಹಬ್ಬದ ಸಡಗರವನ್ನು ಉಂಟುಮಾಡುತ್ತದೆ. ಆಯೋಜನೆ ಮಾಡಿದ ಸುರೇಶ ಯಾದವ ಫೌಂಡೇಶನ್ ಅಧ್ಯಕ್ಷ ಸುರೇಶ ಯಾದವ ಅಭಿನಂದನಾರ್ಹರು. ಇದು ಹೀಗೆಯೇ ಮುಂದುವರೆಯಲಿ ಎಂದು ಗುರುಪುತ್ರ್ಪ ತೋರಗಲ್ ಅಭಿಪ್ರಾಯ ಪಟ್ಟರು.
ಆಯೋಜಕರು ಹೆಣ್ಣುಮಕ್ಕಳು ಮತ್ತು ಗಂಡಸರಿಗೆ ಬಣ್ಣ ಆಡಲು ಪ್ರತ್ಯೇಕ ವ್ಯವಸ್ಥೆ ಮಾಡಲಾಗಿತ್ತು. ಅಶೋಕ ಧರಿಗೌಡರ, ನಾನಗೌಡ ಬಿರಾದಾರ, ಮಾರುತಿ ಭಾಸ್ಕರ ರಾಜೀವ ಪಾಟೀಲ್, ರಾಜೇಶ್ ಶಿಂದ್ರೆ, ಶಂಕರ ಜಿಂದ್ರಾಳ, ಸಂಗೀತಾ ಗುಣಕಿ, ಪೂರ್ಣಿಮಾ ಯಾದವ, ರಾಜೇಶ್ವರಿ ಬೆಣ್ಣೆ, ಶಶಿಕಲಾ ತೋರ್ಗಲ್,ಸುನೀತಾ ಕೋಲ್ಕಾರ, ಛಾಯಾ ಬೆಳ್ಳಿ, ಬಿದ್ದಾಳ, ಎಂ.ಎ.ಕೊರಿಶೆಟ್ಟಿ, ಬಿಚ್ಚಗತ್ತಿ, ಆನಂದ ಪಾಟೀಲ, ಮಹಾದೇವ ಟೋಣಿ, ಅಪ್ಪಯ್ಯ ಕೋಲ್ಕಾರ, ರಾಚಯ್ಯ ಹಿರೇಮಠ, ಅಭಿಷೇಕ, ಸಂತೋಷ ಮೇರಾಕಾರ, ಕೆಂಪಣ್ಣ ಜಿನರಾಳ ಅಪ್ಪಯ್ಯ ಕೋಲ್ಕರ, ತುಕಾರಾಮ, ಕುಮಟಕರ, ಅಕ್ಷಯ ಹಂಬದಗಟ್ಟಿ, ಶಿವು ಕಬಾದಾಗಿ, ನಾನಗೌಡ ಬಿರಾದಾರ್, ರಮೇಶ ಮಗದುಮ್, ನಾಗರಿಕರು ಪಾಲ್ಗೊಂಡಿದ್ದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 