25 ರಂದು ಹೊಳಲಮ್ಮದೇವಿಗೆ ಪ್ರಾಣಪ್ರತಿಷ್ಠಾಪನೆ
Holalammadevi to be dedicated on the 25th
ಶಿರಹಟ್ಟಿ 22 : ಶಿರಹಟ್ಟಿ ತಾಲೂಕಿನ ಶ್ರೀಮಂತಗಡದ ಹೊಳಲಮ್ಮದೇವಿಯ ದೇವಸ್ಥಾನನ ಅಭಿವೃದ್ದಿ ಕಾರ್ಯಕ್ರಮಗಳು ಜರುಗುತ್ತಿವೆ. ಕಳೆದ ಒಂದು ವರ್ಷದಿಂದ ಹೊಳಲಮ್ಮದೇವಿಯ ಮೂರ್ತಿದರ್ಶನ ಇಲ್ಲದೇ ಭಕ್ತರೆಲ್ಲ ದೇವಿಯ ಮೂರ್ತಿಯ ದರ್ಶನಕ್ಕಾಗಿ ಕಾತುರದಿಂದ ಕಾಯುತ್ತಿದ್ದು ಭಕ್ತರಿಗೆ ದರ್ಶನ ಭಾಗ್ಯ ಪ್ರಾರಂಭವಾಗಲಿದೆ. ಹೊಳಲಮ್ಮದೇವಿಯ ಪ್ರಾಣ ಪ್ರತಿಷ್ಠಪನಾ ಕಾರ್ಯಕ್ರಮವು ದಿ. 23 ಶುಕ್ರವಾರ ರಂದು ಸಾಯಂಕಾಲ ಗೋಧೋಳಿಸಮಯದಿಂದ ಪೂಜಾ ಕಾರ್ಯಕ್ರಮ ಆರಂಭವಾಗುತ್ತದೆ. ಸಾಯಂಕಾಲ 5-30ಕ್ಕೆ ಗೋಮಾತಾ ಪೂಜೆ, ಮುತ್ತೈದರಿಂದ ಕುಂಭ ಪೂಜಾ ಪ್ರವೇಶ ಕಾರ್ಯಕ್ರಮ ನೆರವೇರುವುದು. ದಿ. 24 ರಂದು ಶನಿವಾರ ದೇವತಾಶಾಂತಿ ಪೂಜಾ ಕಾರ್ಯಕ್ರಮ ಜರಗುವುದು.
ದಿ. 25 ರಂದು ರವಿವಾರ ಬ್ರಹ್ಮಿ ಮೊಹೋರ್ತದಲ್ಲಿ ಹೊಳಲಮ್ಮ ತಾಯಿಯ ಮೂರ್ತಿ ಪ್ರಣ ಪ್ರತಿಷ್ಠಾಪನೆಹಾಗೂ ದೇವತಾ ಶಾಂತಿಹೋಮ, ಗೋಹೋಮ, ಪೂರ್ಣಾಹುತಿ ಪೂಜಾ ಕಾರ್ಯಕ್ರಮ ಸಮಸ್ರ ಭಕ್ತರ ಸಮ್ಮುಖದಲ್ಲಿ ನೆರವೇರುವುದು. ಈ ಎಲ್ಲಾ ಕಾರ್ಯಕ್ರಮಗಳ ದಿವ್ಯ ಸಾನಿಧ್ಯವನ್ನು ಷ.ಬ್ರ.ಶ್ರೀಸುಜ್ಞಾನ ದೇವ ಶಿವಾಚಾರ್ಯ ಮಹಾಸ್ವಾಮಿಜಿಗಳು ಬನ್ನಿಕೊಪ್ಪ ಮತ್ತು ಶ್ರೀಮ.ನಿ.ಪ ಶ್ರೀ ಬಸವರಾಜ ಮಹಾಸ್ವಾಮಿಜಿಗಳು ರಾಮಲಿಂಗೇಶ್ವರ ದಾಸೋಹಮಠ ಬೆಳ್ಳಟ್ಟಿ ಇವರ ಅಮೃತ ಹಸ್ತದಿಂದ ನೆರವೇರುವುದು. ವೀರಯ್ಯಶಾಸ್ತ್ರೀ ಹಿರೇಮಠ, ಬನ್ನಿಕೊಪ್ಪ, ಮತ್ತು ಸದಾನಂದಯ್ಯ ಶಾಸ್ತ್ರೀ ಮರಡೂರಮಠ ರಣತೂರ ಪೌರೋಹಿತ್ಯದಲ್ಲಿ ಜರುವುದು ಹೊಳಲಮ್ಮದೇವಿಯ ದರ್ಶನ ಆರ್ಶಿವಾದ ಪಡೆದು ಪುನಿತರಾಗಬೇಕೆಂದು ಎಂದು ಹೊಳಲಮ್ಮದೇವಿಯ ದೇವಸ್ಥಾನದ ಕಮೀಟಿಯ ಟ್ರಸ್ಟ ಅಧ್ಯಕ್ಷ ಖೇಮಣ್ಣ ಪವಾರ ಹಾಗೂ ದಾಮೋಜಿ ತೆಗ್ಗಿಹಳ್ಳಿ ಹಾಗೂ ಸದಸ್ಯರು ತಿಳಿಸಿದ್ದಾರೆ.
11 ವರ್ಷಗಳಲ್ಲಿ ಡಿಜಿಟಲ್ ಇಂಡಿಯಾ ಆಡಳಿತವನ್ನು ಪರಿವರ್ತಿಸಿ, ನಾಗರಿಕರನ್ನು ಸಬಲಗೊಳಿಸಿದೆ: ಪ್ರಧಾನಿ ಮೋದಿ
ಮುಂಬೈನ ಚೆಂಬೂರಿನಲ್ಲಿ ಶಾಲಾ ಬಸ್ ಮೇಲೆ ಮರ ಉರುಳಿ ಬಿದ್ದು ವಿದ್ಯಾರ್ಥಿ ಸಾವು; ನಾಲ್ವರಿಗೆ ಗಾಯ
ಹುಡುಗಿಯ ಮನೆ ದರೋಡೆ, ಅಂತರಜಾತಿ ಪ್ರೇಮಿಗಳು ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆ, ಮರ್ಯಾದಾ ಹತ್ಯೆಗಳ ಅನುಮಾನ
ಡಿಸಿಸಿ ಬ್ಯಾಂಕಿನ 10 ವರ್ಷ ಮೇಲ್ಪಟ್ಟ ನಿರ್ದೇಶಕರ ಅನರ್ಹತೆ: ಆರ್ಬಿಐ ನಿಯಮ ಜಾರಿಗೆ ನಬಾರ್ಡ್ ಒತ್ತಾಯ, ಸರ್ಕಾರಕ್ಕೆ ಎಚ್ಚರಿಕೆ
ಮಹಾ ಸಿಎಂ ಜೊತೆ ಎಮ್ ಇಎಸ್ ಉನ್ನತಾಧಿಕಾರ ಸಭೆ ರದ್ದು: ಝಾಪಾ ಮುಖಂಡರು ಬರಿಗೈಯಿಂದ ವಾಪಸ್
ವಿವಾಹಿತೆಯ ಜೊತೆ ಪಲಾಯನ ಮಾಡಿದ ಯುವಕನ ಮನೆ ಧ್ವಂಸ : ಮಾರಕಾಸ್ತ್ರ ಹಿಡಿದು 50ಕ್ಕು ಹೆಚ್ಚು ಜನರಿಂದ ಕೃತ್ಯ 