ಇತಿಹಾಸ, ಪರಂಪರೆ ಅರಿವಿಗೆ ಪಾರಂಪರಿಕ ನಡಿಗೆ ಸಹಕಾರಿ: ಚೋಳನ್
ಧಾರವಾಡ .02: ಶ್ರೀಮಂತವಾಗಿರುವ ನಮ್ಮ ಸಂಸ್ಕೃತಿ, ವಾಸ್ತುಶಿಲ್ಪ, ಸಂಘ, ಸಂಸ್ಥೆ, ಕಲೆ, ಸಂಗೀತ, ಸ್ಮಾರಕಗಳ ಬಗ್ಗೆ ಇರುವ ಇತಿಹಾಸ, ಪರಂಪರೆ ತಿಳಿಯಲು ಪಾರಂಪರಿಕ ನಡಿಗೆ ಸಹಕಾರಿಯಾಗಿದೆ ಎಂದು ಜಿಲ್ಲಾಧಿಕಾರಿ ದೀಪಾ ಚೋಳನ್ ಹೇಳಿದರು.
ಅವರು ಇಂದು ಬೆಳಿಗ್ಗೆ ಕನರ್ಾಟಕ ಕಲಾ ಕಲಾಮಹಾವಿದ್ಯಾಲಯ ಮೈದಾನದಲ್ಲಿ ಅಖಿಲ ಭಾರತ 84ನೇ ಕನ್ನಡ ಸಾಹಿತ್ಯ ಸಮ್ಮೇಳನದ ನಿಮಿತ್ಯ ಆಯೋಜಿಸಿದ್ದ ಪಾರಂಪರಿಕ ನಡಿಗೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ಧಾರವಾಡ ನಗರ ಇತಿಹಾಸದ ಪುಟಗಳಲ್ಲಿ ಅನೇಕ ಮಹತ್ವದ ಘಟನೆಗಳಿಂದ ದಾಖಲಾಗಿದೆ. ಇಲ್ಲಿನ ಪ್ರತಿಯೊಂದು ಕಟ್ಟಡ, ಸಂಘ,ಸಂಸ್ಥೆಗಳ ಹುಟ್ಟು ರೋಚಕ ಇತಿಹಾಸವನ್ನು ಹೇಳುತ್ತದೆ. ವಿದ್ಯಾವರ್ಧಕ ಸಂಘ, ಕೆಸಿಡಿ ಕಾಲೆಜು ಡೈಯಟ್, ಚಚರ್್ ಬುದ್ಧ ರಕ್ಕಿತ ಶಾಲೆ, ಹೀಗೆ ಪ್ರತಿಯೊಂದು ಸ್ಥಳಗಳು ಕನ್ನಡಿಗರಿಗೆ ಪ್ರೇರಕ ಶಕ್ತಿಯಾಗಿ ಕಾಣುತ್ತವೆ.
ಪಾರಂಪರಿಕ ನಡಿಗೆಯಿಂದ ನಮ್ಮ ಇತಿಹಾಸ, ನಾಡಿನ ಸಾಧನೆಗಳನ್ನು ನೆನಪಿಸುವ ಜೊತೆಗೆ ರಕ್ಷಣೆ ಜವಾಬ್ದಾರಿ, ಹೆಮ್ಮೆ ಹೆಚ್ಚುತ್ತದೆ ಎಂದು ಹೇಳಿದರು.
ಕೆಸಿಡಿ ಮೈದಾನದಲ್ಲಿ ಪಾರಂಪರಿಕ ನಡಿಗೆಗೆ ಧಾರವಾಡದ ಪ್ರಸಿದ್ಧ ಜಾನಪದ ಕಲೆ, ಜಗ್ಗಲಿ ಬಾರಿಸುವ ಮೂಲಕ ಚಾಲನೆ ನೀಡಿದರು. ಅಲ್ಲಿಂದ ಆಕಾಶವಾಣಿಗೆ ಸಾರ್ವಜನಿಕರು, ವಿದ್ಯಾಥರ್ಿಗಳೊಂದಿಗೆ ನಡಿಗೆಯಲ್ಲಿ ಆಗಮಿಸಿದ ಅವರು ಆಕಾಶವಾಣಿ ನಿಲಯ ನಿದರ್ೆಶಕ ಸತೀಶ್ ಪರ್ವತಿಕರ್ ಅವರಿಂದ ಆಕಾಶವಾಣಿ ಬೆಳೆದು ಬಂದ ಬಗ್ಗೆ ಮಾಹಿತಿ ಪಡೆದರು. ನಂತರ ಡಾ. ಮಲ್ಲಿಕಾಜರ್ು ಮನ್ಸೂರ ಟ್ರಸ್ಟ್ಗೆ ತೆರಳಿ ಮನ್ಸೂರ ಅವರ ಸಮಾಧಿಗೆ ನಮನ ಸಲ್ಲಿಸಿ ಅವರ ಕುಟುಂಬ ಸದಸ್ಯರಿಂದ ಮಾಹಿತಿ ಪಡೆದರು.
ನಂತರ 1888 ರಲ್ಲಿ ಸ್ಥಾಪಿತವಾದ ಆಲ್ ಸೆಂಟ್ಸ್ ಚಚರ್್ಗೆ ಭೇಟಿ ನೀಡಿದರು. ಅಲ್ಲಿಂದ ಕೆ.ಸಿ. ಪಾಕರ್್ ಮಾರ್ಗವಾಗಿ ಡಾ. ಬಿ.ಆರ್. ಅಂಬೇಡ್ಕರ್ ಸ್ಥಾಪಿಸಿದ್ದ ಬುದ್ಧರಕ್ಕಿತ ವಸತಿ ಶಾಲೆಗೆ ತೆರಳಿ ಮಾಹಿತಿ ಪಡೆದರು. ನಂತರ ಧಾರವಾಡ ಗ್ರಾಮದೇವತೆ ಐತಿಹಾಸಿಕತೆ ಹೊಂದಿರುವ ದುಗರ್ಾದೇವಿ ಗುಡಿಗೆ ಭೇಟಿ ನೀಡಿದರು. ಮಹಾನಗರ ಪಾಲಿಕೆ, ವಸ್ತು ಸಂಗ್ರಹಾಲಯ, ಕನರ್ಾಟಕ ವಿದ್ಯಾವರ್ಧಕ ಸಂಘ, ಟೌನ್ಹಾಲ್ಗೆ ತೆರಳಿ ಇತಿಹಾಸದ ಬಗ್ಗೆ ಮಾಹಿತಿ ಪಡೆದರು.
ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿವರ್ಾಹಕ ಅಧಿಕಾರಿ ಡಾ.ಬಿ.ಸಿ. ಸತೀಶ್, ಉಪವಿಭಾಗಾಧಿಕಾರಿ ಮಹ್ಮದ್ ಜುಬೇರ್, ಡಿಸಿಪಿ ಬಿ.ಎಸ್. ನೇಮಗೌಡ, ಜಿಲ್ಲಾ ಕಸಾಪ ಅಧ್ಯಕ್ಷ ಡಾ. ಲಂಗರಾಜ ಅಂಗಡಿ, ಗೌರವ ಕಾರ್ಯದಶರ್ಿಗಳಾದ ಕೆ.ಎಸ್.ಕೌಜಲಗಿ, ಡಾ. ಜಿನದತ್ತ ಹಡಗಲಿ, ಕೃಷಿ ಇಲಾಖೆ ಜಂಟಿ ನಿದರ್ೆಶಕ ಟಿ.ಎಸ್. ರುದ್ರೇಶಪ್ಪ, ಸಾರ್ವಜನಿಕ ಶಿಕ್ಷಣ ಇಲಾಖೆ ಅಪರ ಆಯುಕ್ತ ಮೇಜರ್ ಸಿದ್ಧಲಿಂಗಯ್ಯ ಹಿರೇಮಠ, ಆಹಾರ ಇಲಾಖೆ ಉಪನಿದರ್ೆಶಕ ಸದಾಶಿವ ಮಜರ್ಿ, ಅಬಕಾರಿ ಇಲಾಖೆ ಜಿಲ್ಲಾ ಅಧಿಕಾರಿ ಬಿ.ಆರ್. ಹಿರೇಮಠ, ಜಿಲ್ಲಾ ಪಂಚಾಯತ್ ಉಪಕಾರ್ಯದಶರ್ಿ ಎಸ್.ಜಿ. ಕೊರವರ್, ಜಿಲ್ಲಾ ತರಬೇತಿ ಸಂಸ್ಥೆ ಪ್ರಾಚಾರ್ಯ ಕವಿತಾ ಯೋಗಪ್ಪನವರ, ಪ್ರವಾಸೋದ್ಯಮ ಇಲಾಖೆ ಸಹಾಯಕ ನಿದರ್ೆಶಕ ಮಲ್ಲಿಕಾಜರ್ುನ ಭಜಂತ್ರಿ, ನೇಚರ್ ಪಸ್ಟ್ ಸಂಸ್ಥೆಯ ಪಂಚಾಕ್ಷರಯ್ಯ ಹಿರೇಮಠ, ವೀಣಾ ಹಿರೇಮಠ, ಓಟಿಲಿ ಅನ್ಬಕುಮಾರ, ರೇಖಾ ಶೆಟ್ಟರ್, ಬಸಲಿಂಗಯ್ಯ ಹಿರೇಮಠ, ತೋಟಗಾರಿಕೆ ಇಲಾಖೆ ಉಪನಿದರ್ೆಶಕ ರಾಮಚಂದ್ರ ಮಡಿವಾಳ, ಆರ್.ಎಲ್.ಎಸ್. ಸಂಸ್ಥೆಯ ಅಧ್ಯಕ್ಷ ಆರ್.ಯು. ಬೆಳ್ಳಕ್ಕಿ, ಕವಿವ ಸಂಘದ ಪ್ರಧಾನ ಕಾರ್ಯದಶರ್ಿ ಪ್ರಕಾಶ ಉಡಕೇರಿ, ಕೃಷ್ಣಜೋಶಿ ಸೇರಿದಂತೆ ವಿವಿಧ ಸಂಘ ಸಂಸ್ಥೆಗಳ ಪ್ರತಿನಿಧಿಗಳು, ಪ್ರಚಾರ ಸಮಿತಿ ಸದಸ್ಯರು, ಸಾರ್ವಜನಿಕರು ಮತ್ತು ಶಾಲಾ ಕಾಲೇಜು ವಿದ್ಯಾಥರ್ಿಗಳು ಪಾರಂಪರಿಕ ನಡಿಗೆ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಅಧಿಕಾರ ದರ್ಪ : ಖಾನಾಪುರ ತಹಸೀಲ್ದಾರ್ ವಿರುದ್ಧ ಶಿಸ್ತುಕ್ರಮಕ್ಕೆ ಪಿಡಿಒಗಳಿಂದ ಡಿಸಿ, ಚು. ಆಯೋಗಕ್ಕೆ ದೂರು
ಗಗನಯಾನ ಮಿಷನ್ಗಾಗಿ ಮಹತ್ವದ ಪ್ಯಾರಾಶೂಟ್ ಏರ್ಡ್ರಾಪ್ ಪರೀಕ್ಷೆಯನ್ನು ಇಸ್ರೋ ಯಶಸ್ವಿಯಾಗಿ ನಡೆಸಿತು
ಗದಗದಲ್ಲಿ ಮಾನಸಿಕ ಅಸ್ವಸ್ಥ ಯುವತಿಯ ಮೇಲೆ ಅತ್ಯಾಚಾರ ಆರೋಪ
ಹಿಡಕಲ್ ಜಲಾಶಯದ ನೀರಿನಲ್ಲಿ ವೃದ್ದೆಯ ಶವ ಪತ್ತೆ : ಹಳೇಗುಡನಟ್ಟಿ ಬಳಿ ಘಟನೆ
ಡ್ರಗ್ ಅವೇರ್ನೆಸ್ ವೀಕ್: ಆಚರಣೆ, ಕಾರ್ಯಾಚರಣೆ 12.38 ಲಕ್ಷ ಮಾಕದ ವಶ, 16 ಪ್ರಕರಣ ದಾಖಲು, 4 ಬಂಧನ
ರಾಜ್ಯ ನೇಕಾರರ ಸಂಘದಿಂದ ನಾಳೆ ಬೆಳಗಾವಿ ಚಲೋ ಕಾರ್ಯಕ್ರಮ : ಸಿಎಂ ಮುಂದೆ ಬೇಡಿಕೆಗಳ ಪಟ್ಟಿ 