ಹಿಪ್ಪರಗಿ ಬ್ಯಾರೇಜ್ ನೀರಿನ ಪ್ರಮಾಣ ಕಡಿಮೆ: ನೀರೆತ್ತುವುದು ಸ್ಥಗಿತ

Hipparagi Barrage water level low: Irrigation stopped

ಹಿಪ್ಪರಗಿ ಬ್ಯಾರೇಜ್ ನೀರಿನ ಪ್ರಮಾಣ ಕಡಿಮೆ: ನೀರೆತ್ತುವುದು ಸ್ಥಗಿತ 

ಬೆಳಗಾವಿ 24: ಫೆಬ್ರವರಿ 21 ರಂದು ಹಿಪ್ಪರಗಿ ಬ್ಯಾರೇಜಿನಲ್ಲಿ ಸಂಗ್ರಹವಿರುವ ನೀರಿನ ಮಟ್ಟ 523.93 ಮೀ ಹಾಗೂ ನೀರಿನ ಪ್ರಮಾಣ 5.13 ಟಿ.ಎಂ.ಸಿ ಇರುತ್ತದೆ. ಬಳಕೆಗೆ ಲಭ್ಯವಾಗುವ ನೀರಿನ ಪ್ರಮಾಣ 4.33 ಟಿ.ಎಂ.ಸಿ ಮಾತ್ರ ಇರುವುದರಿಂದ,  ಪ್ರಸ್ತುತ ಸಾಲಿನಲ್ಲಿ ಮಳೆಯ ಆಭಾವದಿಂದಾಗಿ ಹಿಪ್ಪರಗಿ ಬ್ಯಾರೇಜಿನ ಹಿನ್ನೀರಿನ ಮೇಲೆ ನಗರ, ಪಟ್ಟಣ, ಗ್ರಾಮಗಳ ಜನ ಜಾನುವಾರುಗಳು ಕುಡಿಯುವ ನೀರಿಗಾಗಿ  ಅವಲಂಬಿತರಾಗಿರುತ್ತಾರೆ. 

ಇಗಿನ ಪರಿಸ್ಥಿತಿಯಂತೆ ಹಿಪ್ಪರಗಿ ಬ್ಯಾರೇಜಿನಲ್ಲಿ ಕುಡಿಯುವ ನೀರಿಗಾಗಿ ಕಾಯ್ದಿರಿಸಿದ ಪ್ರಮಾಣದಲ್ಲಿ ದಿನದಿಂದ ದಿನಕ್ಕೆ ಗಣನೀಯವಾಗಿ ಕಡಿಮೆಯಾಗುತ್ತಿರುವುದರಿಂದ ಪ್ರಾದೇಶಿಕ ಆಯುಕ್ತರು, ಬೆಳಗಾವಿ ಕಛೇರಿ ಇವರು ನೀಡಿರುವ ಸೂಚನೆಯಂತೆ ಮುಂಬರುವ ಜೂನ್ 2025 ರ ವರೆಗೆ ಜನಜಾನುವಾರುಗಳಿಗೆ ಅಗತ್ಯವಿರುವ ಕುಡಿಯುವ ನೀರು ಮತ್ತು ಇತರೆ ವ್ಯವಸ್ಥೆಗಳ ಅವಶ್ಯಕತೆಗೆ ನೀರನ್ನು ಕಾಯ್ದುಕೊಳ್ಳಬೇಕಾಗಿರುವುದು ಪ್ರಥಮ ಆದ್ಯತೆಯಾಗಿರುತ್ತದೆ. 

ಕರ್ನಾಟಕ ಸರ್ಕಾರದ ನೀರಾವರಿ ಕಾಯ್ದೆ 1965 ರಲ್ಲಿ ಪ್ರದತ್ತವಾದ ಅಧಿಕಾರದ ಅನ್ವಯ, ಹಿಪ್ಪರಗಿ ಬ್ಯಾರೇಜಿನ ಹಿನ್ನೀರಿನಿಂದ ನೀರನ್ನು ಪಂಪ್ ಮೂಲಕ ಎತ್ತಿಕೊಂಡು ನೀರಾವರಿ ಬಳಕೆಗೆ ಹಾಗೂ ಕೈಗಾರಿಕಾ ಘಟಕಕ್ಕೆ ನೀಡಿರುವ ಎಲ್ಲ ಪರವಾನಿಗೆಗಳನ್ನು ತಕ್ಷಣದಿಂದ ಜಾರಿಗೆ ಬರುವಂತೆ ಮುಂದಿನ ಆದೇಶದ ವರೆಗೆ ಆಥವಾ ಜೂನ್ 2025 ರ ವರೆಗೆ ನೀರೆತ್ತುವುದನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸಲು ಸೂಚಿಸಿ ಆದೇಶಿಸಲಾಗಿದೆ ಎಂದು ಕನೀನಿನಿ, ಪುವ ಮತ್ತು ಪುನಿ ವೃತ್ತ ಸೂಪರಿಂಟೆಂಡಿಂಗ್ ಇಂಜೀನೀಯರ್ ನಾಗರಾಜ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.