ಹಿಂದೂ ಸಮ್ಮೇಳನದ ಕಾರ್ಯಕ್ರಮದ ಉದ್ಘಾಟಿನೆ: ಮುಖಂಡರಾದ ಸುಧೀರ್ ಸಿಂಹ

ಹಿಂದೂ ಸಮ್ಮೇಳನದ ಕಾರ್ಯಕ್ರಮದ ಉದ್ಘಾಟಿನೆ: ಮುಖಂಡರಾದ ಸುಧೀರ್ ಸಿಂಹ Hindu Sammelana program inaugurated by leader Sudhir Simha

ಹೂವಿನಹಡಗಲಿ  01 : ಸಾಮರಸ್ಯ, ಪರಿಸರ ಸಂರಕ್ಷಣೆ, ಸ್ವದೇಶಿ ಚಿಂತನೆ’ ಮತ್ತು  ಸಮಾಜದಲ್ಲಿ ನಾವೆಲ್ಲ ಹಿಂದೂ (ಊಟಿಜಣ)ನಾವೆಲ್ಲ ಒಂದು ಎಂಬ ಭಾವನೆ ಮೂಡಿಸಿ. ಸಾಮರಸ್ಯದ ವಾತಾವರಣ ನಿರ್ಮಿಸಲು ಎಲ್ಲರೂ ಶ್ರಮಿಸಬೇಕು ಎಂದು ಸ್ವಯಂ ಸೇವಕ ಸಂಘದ ಮುಖಂಡರಾದ ಸುಧೀರ್ ಸಿಂಹ ಘೋರೆ​‍್ಡ ಹೇಳಿದರು. ಪಟ್ಟಣದ ತಾಲೂಕು ಕ್ರೀಡಾಂಗಣದಲ್ಲಿ  ಮೈದಾನದಲ್ಲಿ ಶನಿವಾರ ಆಯೋಜಿಸಿದ್ದ ಹಿಂದೂ ಸಮ್ಮೇಳನದ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಧರ್ಮ, ಸಂಸ್ಕೃತಿ, ಸಮಾಜ ಇವುಗಳ ಹಿಂದೆ ಪವಿತ್ರ ಹಿಂದೂ ಶಬ್ದವಿದೆ. ’ಓಂ’ ಕಾರದಿಂದ ಬ್ರಹ್ಮಾಂಡ ಸೃಷ್ಠಿಯಾಗಿದೆ.

ವ್ಯಾಪಾರದ ನೆಪ ಮಾಡಿ ಯುರೋಪಿಯನ್ನರು, ಇಸ್ಲಾಮಿಕರು ದೇಶಕ್ಕೆ ಬಂದರು.ಇಲ್ಲಿಯ ದೇವಾಲಯಗಳನ್ನು ಧ್ವಂಸ ಮಾಡಿ, ಸಂಪತ್ತನ್ನು ಲೂಟಿ ಮಾಡಿದರು. ಹಿಂದೂಗಳ ಧರ್ಮ , ಸಂಸ್ಕೃತಿ, ಆಚಾರ, ವಿಚಾರಗಳನ್ನು ಮುಂದಿನ ಪೀಳಿಗೆಗೆ ಕಲಿಸಬೇಕು ಎಂದರು. ಹಿರೇಹಡಗಲಿ ಹಾಲ ವೀರ​‍್ಪಜ್ಜ ಮಾತನಾಡಿ ಸನಾತನ ಹಿಂದೂ ಧರ್ಮದ ಬಗ್ಗೆ ಜಾಗೃತಿ ಮೂಡಿಸುವ ಪ್ರಯತ್ನ ಆಗಬೇಕು ಎಂದರು.

ಅದ್ಯಕ್ಷತೆ ವಹಿಸಿದ್ದ ಹಿಂದು ಸಂಘಟನೆಯ ಅದ್ಯಕ್ಷ ಎಂ.ಪರಮೇಶ್ವರ​‍್ಪ ಮಾತನಾಡಿ ಹಿಂದುತ್ವದ ಪುನಶ್ಚೇತನಕ್ಕೆ ಸಮ್ಮೇಳನ ಗಳು ಅಗತ್ಯ ವಿದೆ ಎಂದರು.ಇದಕ್ಕೂ  ಮುನ್ನ ಪಟ್ಟಣದಲ್ಲಿ  ಹಿಂದೂ ಸಮ್ಮೇಳನ ದ ಶೋಭಾ ಯಾತ್ರೆ ಬೃಹತ್ ಶಕ್ತಿ ಪ್ರದರ್ಶನ ಜತೆಗೆ ಗೊಂಬೆ ಕುಣಿತ, ಸಮಾಳ, ನಂದಿಕೋಲು ಕುಣಿತ ಮಹಿಳೆಯರು ಹೆಜ್ಜೆ ಕುಣಿತ ,ವೀರಗಾಸೆ ಗಮನ ಸೆಳೆಯಿತು.  ಡಾ.ಹಿರಿಶಾಂತವೀರ ಸ್ವಾಮೀಜಿ, ಚನ್ನಬಸವ ಸ್ವಾಮೀಜಿ, ಸೋಮಶೇಖರ್ ಸ್ವಾಮೀಜಿ, ಗಾಡಿ ತಾತಾ ,ಅಂಗೂರು ಶ್ರೀಗಳು ಸಾನಿಧ್ಯ ವಹಿಸಿದ್ದರು.ಶಾಸಕರಾದ ಕೃಷ್ಣನಾಯಕ, ಮಾಜಿ ಶಾಸಕ ನಂದಿಹಳ್ಳಿ ಹಾಲಪ್ಪ, ಬೀರಬ್ಬಿ ಬಸವರಾಜ,ವಾರದ ಗೌಸಮೊಹಿದ್ದೀನ್, ಬಿಜೆಪಿ ಜಿಲ್ಲಾದ್ಯಕ್ಷ ಸಂಜೀವರೆಡ್ಡಿ, ತಾಲೂಕು ಅದ್ಯಕ್ಷ ಮಲ್ಲಿಕಾರ್ಜುನ ಪೂಜಾರ, ಈ .ಟಿ.ಲಿಂಗರಾಜ , ಡಾ.ಲಕ್ಷ್ಮಣ, ಮಂಜುನಾಥ ಜೈನ್ ಸೇರಿದಂತೆ ನಾನಾ ಸಮಾಜದ ಅದ್ಯಕ್ಷರು ಇದ್ದರು.