ಹಿಂದೂ-ಮುಸ್ಲಿಂ ಭಾಂಧವರು ಶಾಂತಿ ಸೌಹಾರ್ದತೆಯಿಂದ ಹಬ್ಬಗಳನ್ನು ಆಚರಿಸಿ: ಬೆಂಡೆಗುಂಬಳ
Hindu-Muslim brothers celebrate festivals in peace and harmony: Bendegumbala
ಸವದತ್ತಿ, 26 : ನಗರದಲ್ಲಿ ಮೊದಲಿಂದಲೂ ಹಿಂದೂ-ಮುಸ್ಲಿಂ ಭಾಂಧವರಲ್ಲಿ ಶಾಂತಿ ಸೌಹಾರ್ದತೆ ನೆಲೆಸಿದ್ದು ಸಂತಸದ ವಿಷಯವಾಗಿದೆ ಮುಂದೆಯೂ ಇದೇ ರೀತಿ ಹಬ್ಬಗಳನ್ನು ಆಚರಿಸಿ ಎಂದು ಪಿಐ ಸುರೇಶ ಬೆಂಡೆಗುಂಬಳ ಹೇಳಿದರು. ಇಲ್ಲಿನ ಮಾಮನಿ ಕಲ್ಯಾಣ ಮಂಟಪದಲ್ಲಿ ಹೋಳಿ, ರಂಜಾನ್ ಹಬ್ಬದ ಪ್ರಯುಕ್ತ ಬುಧವಾರ ನಡೆದ ಶಾಂತಿ ಸಭೆಯಲ್ಲಿ ಮಾತನಾಡಿದ ಅವರು, ನಾವು ಆಚರಿಸುವ ಹಬ್ಬ ಇತರರಿಗೆ ತೊಂದರೆ ಆಗಬಾರದು. ಯಾರ ಮೇಲೆಯೂ ಒತ್ತಾಯಪೂರ್ವಕವಾಗಿ ಬಣ್ಣ ಎರಚಬೇಡಿ. ವಾಟ್ಸಾಪ್, ಫೇಸ್ ಬುಕ್ ಮೂಲಕ ಅನ್ಯರಿಗೆ ನೋವಾಗುವಂತೆ ಫೋಟೋ, ವಿಡಿಯೋ ಹರಿ ಬಿಡಬಾರದು. ಪಾಲಕರು ತಮ್ಮ ಅಪ್ರಾಪ್ತ ಮಕ್ಕಳಿಗೆ ವಾಹನ ಚಾಲನೆಗೆ ಅವಕಾಶ ನೀಡಬಾರದು. ಕಾಮಣ್ಣನ ದಹನದ ವೇಳೆ ಮಕ್ಕಳ ಬಗ್ಗೆ ಜಾಗ್ರತೆ ಇರಲಿ. ಯಾವುದೇ ಸಂಶಯದ ನಡವಳಿಕೆ, ಎಲ್ಲಿ ಯಾವ ರೀತಿಯ ತೊಂದರೆ ಆದರೂ ತಕ್ಷಣ 112 ಗೆ ಕರೆ ಮಾಡಿ.
ಸಭೆಯಲ್ಲಿ ನಡೆದ ಎಲ್ಲ ವಿಷಯಗಳ ಬಗ್ಗೆ ಹಾಗೂ ಯಾವುದೇ ಅಹಿತಕರ ಘಟನೆ ನಡೆಯದಂತೆ ಎಚ್ಚರಿಕೆ ವಹಿಸುವಂತೆ ಯುವಕರಿಗೂ ಸಹ ಮುಖಂಡರು ತಿಳಿಸಬೇಕು. ಕಾನೂನು ಸುವ್ಯವಸ್ಥೆಯನ್ನು ಕಾಪಾಡುವಲ್ಲಿ ಎಲ್ಲರೂ ಸಹಕರಿಸಬೇಕು ಎಂದರು. ಸಭೆಯಲ್ಲಿ ಭಾಗವಹಿಸಿದ್ದ ಸಮಾಜದ ಮುಖಂಡರಾದ ಕೆ.ಕೆ.ಪುಣೆದ, ಲಕ್ಷ್ಮಣ ಕುಲಕರ್ಣಿ, ಭರಮಪ್ಪ ಅಣ್ಣಿಗೇರಿ, ಫಕ್ರುಸಾಬ ದೊಡಮನಿ, ಮಲ್ಲು ಬೀಳಗಿ ಮಾತನಾಡಿದರು. ಈ ವೇಳೆ ಅಮೀರ ಗೊರಿನಾಯಕ, ರಾಘವೇಂದ್ರ ಪೂಜೇರ, ಬಾಬುಸಾಬ ನಾಶಿಪುಡಿ, ಹುಸೇನ ಗೊರವನಕೊಳ್ಳ, ಮೌಲಾಸಾಬ ತಬ್ಬಲಜ್ಜಿ, ದಿಲಾವರ ಸನದಿ, ದಿಲಾವರ ಮುಲ್ಲಾ, ಅರ್ಜುನ ಅಮೂಗಿ, ಯಲ್ಲಪ್ಪ ಬಡ್ಲಿ, ರಾಜು ಹಳಕಟ್ಟಿ, ಭೀಮಶಿ ಇಳಿಗೆರ, ಹಾಗೂ ಪ್ರಮುಖರು ಇದ್ದರು.
ಬೆಳಗಾವಿಯಲ್ಲಿ ರಾಜ್ಯಸಭೆ ಸ್ಥಾನಕ್ಕೆ ಜೋರಾದ ಲಾಬಿ : ಕಡಾಡಿ ಅಧಿಕಾರವಧಿ ಅಂತ್ಯ : ಹಲವು ಮುಖಂಡರು ಮುಂಚೂನೆಯಲ್ಲಿ
ಬೆಳಗಾವಿಯ ಹಾರ್ಡ್ ವೇರ್ ಅಂಗಡಿಯಲ್ಲಿ ಬೆಂಕಿ ಅವಘಡ : ಲಕ್ಷಾಂತರ ಹಾನಿ
ಅಕ್ರಮ ಚಟುವಟಿಕೆ ಎಸಗಿದರೆ ಗಡಿಪಾರದ ಎಚ್ಚರಿಕೆ: ಪೊಲೀಸ ಠಾಣೆಯಲ್ಲಿ ರೌಡಿಶೀಟರ್ ಗಳ ಪರೇಡ್
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು 