ರಾಜ್ಯದಲ್ಲೇ ಹಾವೇರಿಗೆ ಅತೀ ಹೆಚ್ಚು ಬೆಳೆ ವಿಮೆ ಹಣ: ಉದಾಸಿ
ಹಾವೇರಿ24: ಕನರ್ಾಟಕ ರಾಜ್ಯದಲ್ಲೇ ಹಾವೇರಿ ಜಿಲ್ಲೆಗೆ ಅತೀ ಹೆಚ್ಚು ಬೆಳೆ ವಿಮೆ ಹಣ ರೈತರಿಗೆ ಬಂದಿದೆ ಎಂದು ಸಂಸದ ಶಿವಕುಮಾರ ಉದಾಸಿ ಅವರು ಹೇಳಿದರು.
ಹಾವೇರಿ ತಾಲ್ಲೂಕಿನ ಕೃಷಿ ಇಲಾಖೆಯಿಂದ ಭಾನುವಾರ ನಗರದ ತಾಲ್ಲೂಕು ಪಂಚಾಯಿತಿ ಸಭಾಭವನದಲ್ಲಿ ಆಯೋಜಿಸಿದ ರೈತ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ದೇಶದಲ್ಲಿ ರೈತರ ಸಾಲ ವಿಭಿನ್ನವಾಗಿರುವುದರಿಂದ ಏಕ ಮಾನದಂಡ ರೂಪಿಸಿ ರೈತರ ಸಾಲ ಮನ್ನಾ ಮಾಡುವುದು ಕೇಂದ್ರ ಸಕರ್ಾರಕ್ಕೆ ಕಷ್ಟಸಾಧ್ಯ ಎಂದು ಹೇಳಿದರು.
ಈಶಾನ್ಯ ರಾಜ್ಯಗಳಲ್ಲಿ ಒಬ್ಬ ರೈತನ ಮೇಲೆ ಸಾಲ ಕಡಿಮೆ ಇರುತ್ತದೆ ಮತ್ತು ಉತ್ತರ ಭಾರತದಲ್ಲಿ ಒಬ್ಬ ರೈತರ ಸಾಲ ಹೆಚ್ಚಿಗೆ ಇರುತ್ತದೆ ಒಟ್ಟಾರೆಯಾಗಿ ದೇಶದ ಎಲ್ಲಾ ರಾಜ್ಯಗಳ ರೈತರ ಸಾಲ ವಿಭಿನ್ನವಾಗಿರುವುದರಿಂದ ಕೇಂದ್ರ ಸಕರ್ಾರದಿಂದ ಸಾಲ ಮನ್ನಾ ಮಾಡಲು ಮಾನದಂಡನೆಗಳನ್ನು ಮಾಡಲು ಕಷ್ಟವಾಗಿರುತ್ತದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಶಾಸಕರಾದ ನೆಹರು ಚ ಓಲೇಕಾರ ಅವರು ಇತ್ತೀಚಿನ ದಿನಗಳಲ್ಲಿ ರೈತರು ಸಾಕಷ್ಟು ಸಮಸ್ಯೆಗಳೊಂದಿಗೆ ಜೀವನ ನಡೆಸುತ್ತಿದ್ದಾರೆ. ಸ್ವಾತಂತ್ರ್ಯ ಪೂರ್ವದಲ್ಲಿದ್ದ ರೈತರ ಪರಿಸ್ಥಿತಿ ಈಗಲೂ ಬದಲಾಗಿಲ್ಲ ಎಂದು ಹೇಳಿದರು.
ರೈತರು ಬೆಳೆದ ಬೆಳೆಗಳಿಗೆ ಸರಿಯಾದ ಬೆಲೆ, ಕೆರೆಗಳಿಗೆ ನೀರು ತುಂಬಿಸುವ ಕೆಲಸ, ರೈತರಿಗೆ ಸಮರ್ಪಕ ವಿದ್ಯುತ್ ಪೂರೈಸುವ ಕೆಲಸವಾದರೆ ರೈತರು ಆಥರ್ಿಕವಾಗಿ ಸದೃಢರಾಗಲು ಸಾಧ್ಯವೆಂದು ಹೇಳಿದರು.
ಕೃಷಿ ವಿಜ್ಞಾನಿ ಡಾ. ಜಗದೀಶ ಅವರು ಮಾತನಾಡಿ, ಸಮಗ್ರ ಕೃಷಿ, ಮಣ್ಣು ಮತ್ತು ನೀರಿನ ಸಂರಕ್ಷಣೆ, ಬೆಳೆ ವೈವಿಧ್ಯತೆ, ಹಾಗೂ ಸಮಗ್ರ ಪೋಷಕಾಂಶಗಳ ಕುರಿತು ಸಂಕ್ಷೀಪ್ತವಾಗಿ ಮಾಹಿತಿ ನೀಡಿದರು.
ತಾಲೂಕಾ ಕೃಷಿಕ ಸಮಾಜದ ಪ್ರಧಾನ ಕಾರ್ಯದಶರ್ಿ ವಕೀಲರಾದ ಬಸವರಾಜ ಹಾದಿಮನಿ ಹಾಗೂ ಜಿಲ್ಲಾ ರೈತ ಸಂಘದ ಮಹಿಳಾ ಘಟಕದ ಅಧ್ಯಕ್ಷೆ ಮಂಜುಳಾ ಹಕ್ಕಿ ಅವರು ಸಮಾರಂಭದಲ್ಲಿ ಮಾತನಾಡಿದರು. ಸಹಾಯಕ ಕೃಷಿ ನಿದರ್ೇಶಕ ಕರಿಯಲ್ಲಪ್ಪ ಡಿ ಕೊರಚರ ಅವರು ಪ್ರಾಸ್ತಾವಿಕವಾಗಿ ಮಾತನಾಡಿದರು.
ಕಾರ್ಯಕ್ರಮದಲ್ಲಿ ಜಿ.ಪಂ.ಸದಸ್ಯರಾದ ಸಿದ್ದರಾಜು ಕಲಕೋಟಿ, ವಿರುಪಾಕ್ಷಪ್ಪ ಕಡ್ಲಿ, ತಾ.ಪಂ.ಉಪಾಧ್ಯಕ್ಷೆ ಸಾವಿತ್ರಮ್ಮ ಮರಡೂರ, ಕೃಷಿಕ ಸಮಾಜದ ಅಧ್ಯಕ್ಷರಾದ ಶಿವಪುತ್ರಪ್ಪ ನೀ ಶಿವಣ್ಣನವರ, ಉಪಾಧ್ಯಕ್ಷ ರುದ್ರಗೌಡ ಹಾಗೂ ನಾಗಪ್ಪ ವಿಭೂತಿ, ಮಲ್ಲೇಶಪ್ಪ ಮತ್ತಿಹಳ್ಳಿ, ಬಸವರಾಜ ಡೊಂಕಣ್ಣನವರ , ಪ್ರಕಾಶ ಹಂದ್ರಾಳ, ಫಕ್ಕೀರಪ್ಪ ಜಂಗಣ್ಣನವರ, ವೀರಣ್ಣಾ ಕಳ್ಳಿಹಾಳ , ಶಿವಬಸಪ್ಪ ಗೋವಿ, ಜಿ.ಎಹಿರೇಮಠ, ದಿಳ್ಳೆಪ್ಪ ಮಣ್ಣೂರ, ಮಂಜುನಾಥ ಕದಂ, ರಾಜೇಸಾಬ ತರ್ಲಗಟ್ಟ, ಗುಡ್ಡಪ್ಪ ಇಟಗಿ, ನಾಗಪ್ಪ ಗೊರವರ, ಶ್ರೀಮತಿ ಎಸ್.ಎಸ್.ಕರ್ಜಗಿ, ನಿಜಲಿಂಗಪ್ಪ ಬಸೇಗಣ್ಣಿ, ಕೊಟ್ರೇಶ ಗೆಜ್ಲಿ, ಮಹ್ಮದರಿಜ್ವಾನ್ ಹ್ಯಾರಿಸ್, ಮಲ್ಲಿಕಾಜರ್ುನ ಗುಮಡಿ ಹಾಗೂ ವಿಶ್ವನಾಥ ರೆಡ್ಡೇರ ಭಾಗವಹಿಸಿದ್ದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 