ಯರಗಟ್ಟಿ ಕ್ಲಸ್ಟರ್ ಕಲಿಕಾ ಹಬ್ಬಕ್ಕೆ :ಹೇಮಾವತಿ ಧರ್ಮಣ್ಣವರ ಚಾಲನೆ
ಯರಗಟ್ಟಿ 13 : ತಾಲೂಕಿನ ರೈನಾಪೂರ ಗ್ರಾಮದಲ್ಲಿ ಯರಗಟ್ಟಿ ಕ್ಲಸ್ಟರ್ ಮಟ್ಟದ ಎಫ್.ಎಲ್.ಎನ್. ಕಲಿಕಾ ಹಬ್ಬ ಕಾರ್ಯಕ್ರಮಕ್ಕೆ ಡಯಟ್ ಉಪನ್ಯಾಸರಾದ ಶ್ರೀಮತಿ ಹೇಮಾವತಿ ಧರ್ಮಣ್ಣವರ ಅವರು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ ಕರ್ನಾಟಕ ಸರ್ಕಾರದ ಶೈಕ್ಷಣಿಕ ಪ್ರಗತಿಯಲ್ಲಿ ಹಿಂದುಳಿದ ಮಕ್ಕಳಿಗೆ ಎಫ್.ಎಲ್.ಎನ್. ಯೋಜನೆಯ ಕಾರ್ಯಕ್ರಮದ ಮೂಲಕ ಶೈಕ್ಷಣಿಕ ಪ್ರಗತಿಯಲ್ಲಿ ಹಿಂದುಳಿದ ಮಕ್ಕಳಿಗೆ ಶಿಕ್ಷಕರು ವಿಶೇಷ ತರಗತಿಗಳನ್ನು ನಡೆಸಿ ಮಕ್ಕಳ ಪ್ರತಿಭೆಯನ್ನು ಹೆಚ್ಚಿಸುವ ಕಲಿಕಾ ಹಬ್ಬ ಕಾರ್ಯಕ್ರಮ ಇದೊಂದು ವಿನೂತನ ಹಾಗೂ ಉತ್ತಮ ಕಾರ್ಯಕ್ರಮವಾಗಿದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ. ಸಿ.ಅರ್.ಪಿ. ವಸಂತ ಬಡಿಗೇರ ಮಾತನಾಡಿ ಯರಗಟ್ಟಿ ಕ್ಲಸ್ಟರ್ ವ್ಯಾಪ್ತಿಯ ಸುಮಾರು 6 ಸರ್ಕಾರಿ ಶಾಲೆಗಳಲ್ಲಿ ನೂರಕ್ಕೂ ಹೆಚ್ಚು ಮಕ್ಕಳು ಕಲಿಕೆಯಲ್ಲಿ ಹಿಂದೆ ಉಳಿದಿದ್ದು. ಇಂತಹ ಮಕ್ಕಳಿಗೆ ಎಫ್.ಎಲ್.ಎನ್. ಯೋಜನೆಯ ಮುಖಾಂತರ ಕಲಿಕೆಯಲ್ಲಿ ಹಿಂದುಳಿದ ಮಕ್ಕಳು ಶೈಕ್ಷಣಿಕ ಪ್ರಗತಿ ಸಾಧಿಸಿರುವುದರಿಂದ ಈ ಮಕ್ಕಳ ಶೈಕ್ಷಣಿಕ ಪ್ರಗತಿಯ ಪ್ರತಿಭೆಯನ್ನು ಗುರುತಿಸಲು ಕಲಿಕಾ ಹಬ್ಬ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದ್ದಾರೆ.ಕಾರ್ಯಕ್ರಮದಲ್ಲಿ ಪಿಕೆಪಿಎಸ್ ಅಧ್ಯಕ್ಷ ವಿಠ್ಠಲ ಬಂಟನೂರ, ಪ್ರದಾನಗುರುಮಾತೆ ಬಿ. ಕೆ. ಪಾಟೀಲ, ಎ. ಎ. ಮಕ್ತುಮನವರ, ಎಂ. ಎಂ. ಚಿಲದ, ಶಿವಾನಂದ ಮಿಕಲಿ, ಎಂ. ಎಫ್. ನರಗುಂದ, ಎಂ. ಎಲ್. ದಿಲಾವರನಾಯ್ಕ, ಎಚ್. ಎ. ಮುಗಜೋಳ, ಎಸ್ ಡಿ ಎಂ ಸಿ ಅಧ್ಯಕ್ಷ ಮಹೇಶ ಪೂಜೇರ, ಎಸ್ ಡಿ ಎಂ ಸಿ ಉಪಾಧ್ಯಕ್ಷ ವಿಜಯಾ ಮಾಸರಡ್ಡಿ, ಬಸಪ್ಪ ತಳವಾರ, ಯರಗಟ್ಟಿ ಕ್ಲಸ್ಟರ್ ವ್ಯಾಪ್ತಿಯ ಶಾಲೆಗಳ ಮುಖ್ಯ ಶಿಕ್ಷಕರು ಸಹ ಶಿಕ್ಷಕರು ಗ್ರಾಮದ ಮುಖಂಡರು ಹಾಜರಿದ್ದರು.